Subscribe to Gizbot

ನೀವು ಅರಿಯಲೇಬೇಕಾದ ಟಾಪ್ ಗ್ಯಾಜೆಟ್ಸ್

Written By:

ಟೆಕ್ ಪ್ರಪಂಚ ಎಂಬುದು ಒಂದು ಕಾತರಮಯ ಕ್ಷಣವನ್ನುಂಟು ಮಾಡುವ ತಾಣವಾಗಿದೆ. ಇನ್ನು ಹೊಸ ಹೊಸ ಅನ್ವೇಷಣೆಗಳನ್ನು ಕಂಡುಕೊಳ್ಳುತ್ತಾ ಸ್ಮಾರ್ಟ್‌ಫೋನ್ ಕ್ಷೇತ್ರ ವೇರಿಯೇಬಲ್ ತಂತ್ರಜ್ಞಾನವನ್ನು ತಲುಪಿದೆ. ಈ ವರ್ಷ ವೇರಿಯೇಬಲ್ ಘೋಷಣೆಗಳೊಂದಿಗೆ ಸ್ಮಾರ್ಟ್‌ವಾಚ್‌ನಿಂದ ಹಿಡಿದು ವರ್ಚುವಲ್ ರಿಯಾಲಿಟಿ ಹೆಡ್‌ಸೆಟ್‌ಗಳನ್ನು ನಮಗೆ ಕಂಡುಕೊಳ್ಳಬಹುದಾಗಿದೆ.

ಓದಿರಿ: ಹ್ಯಾಕಿಂಗ್ ತಪ್ಪಿಸಲು 'ಹ್ಯಾಕಿಂಗ್ ವಿತ್‌ ಸ್ಮಾರ್ಟ್‌ಫೋನ್ಸ್' ಬುಕ್‌

ಇಂದಿನ ಲೇಖನದಲ್ಲಿ ಗಿಜ್‌ಬಾಟ್ ಅತ್ಯುತ್ತಮವಾಗಿರುವ ಗ್ಯಾಜೆಟ್‌ಗಳೊಂದಿಗೆ ನಾವು ಬಂದಿದ್ದು ನೀವು ಇದನ್ನು ಕುರಿತು ತಿಳಿದಿರುವುದು ಅತ್ಯವಶ್ಯಕವಾಗಿದೆ. ಕೆಳಗಿನ ಸ್ಲೈಡರ್‌ಗಳಲ್ಲಿ ಮಾಹಿತಿ ನೋಡಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸೆಲ್ಫಿ ಡ್ರೋನ್

ನಿಕ್ಸಿ ಸೆಲ್ಫಿ

ಕ್ರಿಸ್ಟೋಫ್ ಕೋಸ್ಟಲ್ ಸೆಲ್ಫಿ ಡ್ರೋನ್ ಆದ ನಿಕ್ಸಿಯನ್ನು ಕಂಡುಹಿಡಿದಿದ್ದಾರೆ. ಇದನ್ನು ವಾಚ್ ಅಥವಾ ಬ್ರಾಸ್‌ಲೆಟ್‌ನಂತೆ ಧರಿಸಬಹುದು. ಇದನ್ನು ಗಾಳಿಯಲ್ಲಿ ಹಾರಿಸಿದಾಗ ಇದನ್ನು ಫೋಟೋ ಅಥವಾ ವೀಡಿಯೊಗಳನ್ನು ತೆಗೆಯುತ್ತದೆ. ಇನ್ನು ಅಭಿವೃದ್ಧಿಯ ಹಂತದಲ್ಲಿ ಈ ಗ್ಯಾಜೆಟ್ ಇದ್ದು ಕೆಲವೇ ದಿನಗಳಲ್ಲಿ ಮಾರುಕಟ್ಟೆಗೆ ಆಗಮಿಸಲಿದೆ.

ಮೊಬೈಲ್ ಫೋಟೋಗಳನ್ನು ಪ್ರಿಂಟ್ ಮಾಡುವ ವಿಧಾನ

ಪ್ರಿಂಟ್ ಸ್ಮಾರ್ಟ್‌ಫೋನ್ ಕೇಸ್

ನಿಮ್ಮ ಮೊಬೈಲ್ ಫೋಟೋಗಳನ್ನು ಪ್ರಿಂಟ್ ಮಾಡುವ ವಿಧಾನವನ್ನು ಎದುರು ನೋಡುತ್ತಿದ್ದೀರಾ? ಫ್ರೆಂಚ್ ಕಂಪೆನಿ ಪ್ರಿಂಟ್ ಇತ್ತೀಚೆಗೆ ತಮ್ಮ ಸ್ಮಾರ್ಟ್‌ಫೋನ್ ಕವರ್ ಅನ್ನು ಬಿಡುಗಡೆ ಮಾಡಿದ್ದು ಬಿಲ್ಟ್ ಇನ್ ಪ್ರಿಂಟರ್ ಅನ್ನು ಇದು ಒಳಗೊಂಡಿದೆ. ಬ್ಲ್ಯೂಟೂತ್ ಮೂಲಕ ಫೋನ್‌ಗೆ ಸಂಪರ್ಕವನ್ನು ಪಡೆದುಕೊಂಡು ಬರೇ 50 ಸೆಕೆಂಡ್‌ಗಳಲ್ಲಿ ಇದು ಫೋಟೋಗಳನ್ನು ತೆಗೆಯುತ್ತದೆ. ಈ ಕೇಸ್ ಬೆಲೆ ರೂ 6,400 ಆಗಿದೆ.

ಸ್ಚಚ್ಛಮಾಡಬೇಕಾದ ಅಗತ್ಯ ಕೂಡ ಇಲ್ಲ

ಸ್ಕಾರ್ಪ್ ಲೇಜರ್ ರೇಜರ್

ಅಲ್ಯುಮಿನಿಯಮ್‌ನಿಂದ ತಯಾರಿಸಲಾದ ರೇಜರ್ ಇದಾಗಿದ್ದು ತೊಂದರೆಯಿಲ್ಲದ ಮತ್ತು ನಿರಾತಂಕ ಶೇವ್ ಅನ್ನು ನಿಮಗೆ ಒದಗಿಸುತ್ತದೆ. ಇದನ್ನು ಸ್ಚಚ್ಛಮಾಡಬೇಕಾದ ಅಗತ್ಯ ಕೂಡ ಇಲ್ಲ.

ಸಿಂಗಲ್ ವೀಲ್ ಹೋವರ್ ಬೋರ್ಡ್

ಹೋವರ್ ಬೋರ್ಡ್

ಸಿಂಗಲ್ ವೀಲ್ ಹೋವರ್ ಬೋರ್ಡ್ ಇದಾಗಿದ್ದು, ಇದು ಎಲ್‌ಇಡಿ ಲೈಟ್‌ನೊಂದಿಗೆ ಬಂದಿದೆ ಮತ್ತು ಬಿಲ್ಟ್ ಇನ್ ಸ್ಪೀಕರ್‌ಗಳನ್ನು ಇದು ಒಳಗೊಂಡಿದೆ.

ಸ್ಕಲ್ಲಿ

ಸ್ಕಲ್ಲಿ AR-1

ಗೂಗಲ್ ಗ್ಲಾಸ್ ಮತ್ತು ಸ್ಕಲ್ಲಿ AR-1 ಅನ್ನು ಮಿಶ್ರ ಮಾಡಿದರೆ ನಿಮಗೆ ಏನು ಸಿಗುತ್ತದೆ? ನೀವು ಬೈಕರ್ ಆಗಿದ್ದಲ್ಲಿ ನಾವು ಇದನ್ನೇ ನಿಮಗೆ ಶಿಫಾರಸು ಮಾಡುತ್ತೇವೆ. ವಾತಾವರಣ ಪ್ರತಿರೋಧಕ ಹೆಡ್ ಪ್ರೊಟೆಕ್ಟರ್ ಇದಾಗಿದ್ದು, ಜಿಪಿಎಸ್, ಮ್ಯೂಸಿಕ್ ಮತ್ತು ರಿಯರ್ ಕ್ಯಾಮೆರಾ ಫೀಡ್ ಅನ್ನು ಇದು ಒಳಗೊಂಡಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Today, GizBot presents you the top 8 best and most exciting gadgets that you should know about. Do check out in the below sliders.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot