ಭಾರತದಲ್ಲಿ ಲಭ್ಯವಿರುವ ಚೀನಾ ಬ್ರ್ಯಾಂಡ್ ಅಲ್ಲದ ಸ್ಮಾರ್ಟ್‌ಫೋನ್ ಕಂಪನಿಗಳು!
ಭಾರತ ಮತ್ತು ಚೀನಾ ನಡುವೆ ನಡೆಯುತ್ತಿರುವ ಉದ್ವಿಗ್ನತೆ ಗ್ಯಾಡ್ಜೆಟ್ಸ್ ಹಾಗೂ ಎಲೆಕ್ಟ್ರಾನಿಕ್ಸ್ ಮಾರುಕಟ್ಟೆಯ ಮೇಲೆ ಭಾರಿ ಪರಿಣಾಮ ಬೀರಿದೆ. ದೇಶದಲ್ಲಿ ಬಾಯ್ಕಟ್ ಚೀನಾ ಅಭಿಯಾನ ಜೋರಾಗಿದ್ದು, ಈ ಅಭಿಯಾನಕ್ಕೆ ಬೆಂಬಲ ಸೂಚಿಸಿ ಜನರು ಚೀನಾದ ಉತ್ಪನ್ನಗಳು ಮತ್ತು ಸೇವೆಗಳನ್ನು ಬಹಿಷ್ಕರಿಸುತ್ತಿದ್ದಾರೆ. ಮುಖ್ಯವಾಗಿ ಚೀನೀ ಬ್ರ್ಯಾಂಡ್ ಸ್ಮಾರ್ಟ್‌ಫೋನ್‌ಗಳು, ಚೀನಾ ಆಪ್ಸ್‌ಗಳು ಹಾಗೂ ಇತರೆ ಚೀನಾ ಗ್ಯಾಡ್ಜೆಟ್ಸ್‌ಗಳ ಬಳಕೆ ಕಡಿಮೆ ಮಾಡಿದ್ದಾರೆ.

ಶಿಯೋಮಿ, ರಿಯಲ್ ಮಿ, ಒಪ್ಪೋ, ಹಾನರ್ ಚೀನಾ ಮೂಲದ ಮೊಬೈಲ್ ಸಂಸ್ಥೆಗಳಾಗಿದ್ದು, ಜನರು ಈ ಚೀನೀ ಬ್ರ್ಯಾಂಡ್‌ಗಳನ್ನು ದೂರ ಇಡುತ್ತಿದ್ದಾರೆ. ಚೀನೀ ಬ್ರ್ಯಾಂಡ್ ಅಲ್ಲದ ಸ್ಮಾರ್ಟ್‌ಫೋನ್‌ಗಳ ಬಳಕೆಯತ್ತ ಮನಸ್ಸು ಮಾಡಿದ್ದಾರೆ. ಹಾಗಾದರೇ ಚೀನೀ ಬ್ರ್ಯಾಂಡ್ ಅಲ್ಲದ ಪ್ರಮುಖ ಸ್ಮಾರ್ಟ್‌ಫೋನ್ ಕಂಪನಿಗಳು ಯಾವುವು ಎಂಬುದನ್ನು ಈ ಲೇಖನದಲ್ಲಿ ತಿಳಿಸಲಾಗಿದೆ ಮುಂದೆ ಓದಿರಿ.

ಸ್ಯಾಮ್‌ಸಂಗ್
ಸ್ಯಾಮ್‌ಸಂಗ್ ದಕ್ಷಿಣ ಕೊರಿಯಾದ ಟೆಕ್ ದೈತ್ಯವಾಗಿದ್ದು, ಇದು ಸ್ಮಾರ್ಟ್‌ಫೋನ್‌ಗಳನ್ನು ತಯಾರಿಸುವುದಲ್ಲದೆ ದೊಡ್ಡ ಬಂಡವಾಳವನ್ನು ಹೊಂದಿದೆ. ವಾಶಿಂಗ್ ಮಿಶನ್, ಟೆಲಿವಿಷನ್‌ಗಳಿಂದ ಹಿಡಿದು ಹವಾನಿಯಂತ್ರಣಗಳವರೆಗೆ ಕಂಪನಿಯು ಬೃಹತ್ ಶ್ರೇಣಿಯ ಸಾಧನಗಳನ್ನು ಹೊಂದಿದೆ. ಹಾಗೆಯೇ ಕಡಿಮೆ ಬೆಲೆಯಿಂದ ದುಬಾರಿ ಪ್ರೈಸ್‌ಟ್ಯಾಗ್‌ನ ಭಿನ್ನ ಸ್ಮಾರ್ಟ್‌ಫೋನ್‌ಗಳ ಆಯ್ಕೆ ಹೊಂದಿದೆ. ಬಹುತೇಕ ಎಲ್ಲ ಸ್ಮಾರ್ಟ್‌ಫೋನ್‌ಗಳು ಇತ್ತೀಚಿನ ಅಪ್‌ಡೇಟ್ ಫೀಚರ್ಸ್‌ಗಳನ್ನು ಒಳಗೊಂಡಿವೆ.

ನೋಕಿಯಾ
ಎವರ್‌ಗ್ರೀನ್ ಮೊಬೈಲ್ ಸಂಸ್ಥೆಯಾಗಿ ಗುರುತಿಸಿಕೊಂಡಿರುವ ನೋಕಿಯಾ ಮೂಲತ ಫಿನ್ಲ್ಯಾಂಡ್ ಕಂಪನಿಯಾಗಿದೆ. ಆದ್ರೆ ಇತ್ತೀಚೆಗೆ ಎಚ್‌ಎಂಡಿ ಗ್ಲೋಬಲ್ ವಹಿಸಿಕೊಂಡಿದೆ. ಕಂಪನಿಯು ಇತ್ತೀಚೆಗೆ ಹಲವು ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡುತ್ತಿದೆ. ಅತ್ಯುತ್ತಮ ಕ್ಯಾಮೆರಾ ಫೀಚರ್ ಹಾಗೂ ಬ್ಯಾಟರಿ ಫೀಚರ್ಸ್‌ಗಳನ್ನು ಹೊಂದಿವೆ. ಅಷ್ಟೇ ಅಲ್ಲದೇ ಸ್ಮಾರ್ಟ್ ಟಿವಿ ಸರಣಿಯನ್ನು ಬಿಡುಗಡೆ ಮಾಡಿದೆ. ಫೀಚರ್ ಫೋನ್‌ಗಳನ್ನು ಸಹ ಬಿಡುಗಡೆ ಮಾಡಿದೆ.

ಆಸೂಸ್
ಆಸೂಸ್ ಸಂಸ್ಥೆಯು ತೈವಾನ್ ಮೂಲದ ದೈತ್ಯ ಟೆಕ್ ಕಂಪನಿಯಾಗಿದೆ. ಆಸೂಸ್ ಹಲವು ಶ್ರೇಣಿಯ ಲ್ಯಾಪ್‌ಟಾಪ್‌ಗಳಿಗೆ ಜನಪ್ರಿಯವಾಗಿದೆ. ಈ ಕಂಪನಿಯು ಸ್ಮಾರ್ಟ್‌ಫೋನ್ ಸರಣಿಯನ್ನು ಪರಿಚಯಿಸಿದ್ದು, ಹೈ ಎಂಡ್ ಗೇಮಿಂಗ್ ಲ್ಯಾಪ್‌ಟಾಪ್‌ಗಳನ್ನು ಪರಿಚಯಿಸಿದೆ. ಭಾರತದ ಮಾರುಕಟ್ಟೆಯಲ್ಲಿ ಈ ಸಂಸ್ಥೆಯ ಫೋನ್‌ಗಳು ಪರಿಚಿತ ಇವೆ. ಇತ್ತೀಚಿಗೆ ROG ಸ್ಮಾರ್ಟ್‌ಫೋನ್ ಸರಣಿಯಲ್ಲಿ ಹೊಸ ಫೋನ್ ಲಾಂಚ್ ಮಾಡಿದೆ.

ಎಲ್‌ಜಿ
ಎಲ್‌ಜಿ ಕಂಪನಿಯ ವಿವಿಧ ಉತ್ಪನ್ನಗಳ ಬಗ್ಗೆ ಈಗಾಗಲೇ ಬಹುತೇಕರಿಗೆ ಗೊತ್ತೆ ಇದೆ. ಎಲ್‌ಜಿ ಸಂಸ್ಥೆಯು ಮೂಲತ ದಕ್ಷಿಣ ಕೊರಿಯಾದ ದೈತ್ಯ ಟೆಕ್ ಕಂಪನಿಯಾಗಿದೆ. ಎಲ್‌ಜಿ ಕಂಪನಿಯು ಟೆಲಿವಿಷನ್‌ಗಳು, ಮಾನಿಟರ್‌ಗಳು, ರೆಫ್ರಿಜರೇಟರ್‌ಗಳು ಸೇರಿದಂತೆ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಿ ಸೈ ಎನಿಸಿಕೊಂಡಿದೆ. ಎಲ್‌ಜಿ ಸಂಸ್ಥೆಯ ಎಲ್‌ಜಿ ವಿ 40 + ಥಿಂಕ್ ಕ್ಯೂ, ಎಲ್‌ಜಿ ಕ್ಯೂ 6 + ಮತ್ತು ಇತರೆ ಅಗ್ಗದ ಫೋನ್‌ಗಳು ಗ್ರಾಹಕರ ಗಮನ ಸೆಳೆದಿವೆ.

ಆಪಲ್
ಭಾರತದಲ್ಲಿ ಲಭ್ಯವಿರುವ ಹೆಚ್ಚು ಪ್ರೀಮಿಯಂ ಬ್ರಾಂಡ್‌ಗಳಲ್ಲಿ ಯುಎಸ್‌ನ ಆಪಲ್ ಕೂಡ ಒಂದು. ಆಪಲ್ ಐಫೋನ್‌ಗಳು IOS ಓಎಸ್‌ನಲ್ಲಿ ಕಾರ್ಯನಿರ್ವಹಿಸುತ್ತವೆ. ಆಪಲ್ ಸಂಸ್ಥೆಯ ಹೊಸ ಐಫೋನ್ 11 ಸರಣಿ ಸೇರಿದಂತೆ ಹಲವು ಐಫೋನ್‌ಗಳು ಜನಪ್ರಿಯತೆ ಪಡೆದಿವೆ. ಕಡಿಮೆ ಬೆಲೆಗೆ ಆಪಲ್ ಐಫೋನ್ SE ಅನ್ನು ಪರಿಚಯಿಸಿದೆ.


Click it and Unblock the Notifications








