Home
ಸುದ್ದಿಜಾಲ

ಸದ್ಯ ಸಿಕ್ಕಾಪಟ್ಟೆ ಟ್ರೆಂಡ್‌ ಹುಟ್ಟುಹಾಕಿರುವ ಟಾಪ್‌ 5 ಸ್ಮಾರ್ಟ್‌ಫೋನ್‌ಗಳು!

ಭಾರತೀಯ ಮಾರುಕಟ್ಟೆಯಲ್ಲಿ ಸ್ಮಾರ್ಟ್‌ಫೋನ್‌ಗಳಿಗೆ ಉತ್ತಮ ಮಾರುಕಟ್ಟೆಯಿದ್ದು, ಪ್ರಮುಖ ಮೊಬೈಲ್ ಕಂಪನಿಗಳು ಇಲ್ಲಿಯ ಮಾರುಕಟ್ಟೆಯ ಮೇಲೆ ಅವಲಂಭಿತವಾಗಿದೆ. ಈ ದಿಸೆಯಲ್ಲಿ ಗ್ರಾಹಕರನ್ನು ಸೆಳೆಯಲು ಕಂಪನಿಗಳು ನೂತನ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸುತ್ತಲೇ ಇದ್ದು, ಮೊಬೈಲ್‌ ಕಂಪನಿಗಳ ನಡುವೆ ತೀವ್ರ ಪೈಪೋಟಿ ಸಹ ಸೃಷ್ಠಿಯಾಗಿದೆ. ಆದರೆ ಬಿಡುಗಡೆಯಾದ ಎಲ್ಲಾ ಸ್ಮಾರ್ಟ್‌ಫೋನ್‌ಗಳು ಟ್ರೆಂಡ್ ಹುಟ್ಟುಹಾಕುವುದಿಲ್ಲ.

ಸದ್ಯ ಸಿಕ್ಕಾಪಟ್ಟೆ ಟ್ರೆಂಡ್‌ ಹುಟ್ಟುಹಾಕಿರುವ ಟಾಪ್‌ 5 ಸ್ಮಾರ್ಟ್‌ಫೋನ್‌ಗಳು!

ಹೌದು, ಪ್ರತಿ ತಿಂಗಳು ವಿವಿಧ ಕಂಪನಿಗಳ ನೂತನ ಸ್ಮಾರ್ಟ್‌ಫೋನ್‌ಗಳು ಬಿಡುಗಡೆ ಆಗುತ್ತಲೆ ಇರುತ್ತವೆ. ಅವುಗಳಲ್ಲಿ ಕೆಲವು ಸ್ಮಾರ್ಟ್‌ಫೋನ್‌ಗಳು ಬಿಡುಗಡೆಗೆ ಮೊದಲೆ ಮಾರುಕ್ಟಟೆಯಲ್ಲಿ ಭಾರಿ ಸೌಂಡ್‌ ಮಾಡಿ ಕ್ರಿಯೆಟ್‌ ಮಾಡಿಬಿಟ್ಟಿರುತ್ತವೆ. ಆದರೆ ಫೋನ್‌ ಖರೀದಿಸುವ ಗ್ರಾಹಕರು ಮಾತ್ರ ಈ ಎಲ್ಲ ಅಂಶಗಳನ್ನು ಗಮನಿಸಿದರೂ, ತನ್ನ ಬಜೆಟ್‌ನಲ್ಲಿ ಲಭ್ಯವಿರುವ ಅತ್ಯುತ್ತಮ ಸ್ಮಾರ್ಟ್‌ಪೋನ್‌ ಖರೀದಿಸಲು ಮುಂದಾಗುತ್ತಾರೆ.

ಸದ್ಯ ಸಿಕ್ಕಾಪಟ್ಟೆ ಟ್ರೆಂಡ್‌ ಹುಟ್ಟುಹಾಕಿರುವ ಟಾಪ್‌ 5 ಸ್ಮಾರ್ಟ್‌ಫೋನ್‌ಗಳು!

ಈಗಂತೂ ಬಜೆಟ್‌ ಬೆಲೆಯಲ್ಲಿ ಬೆಸ್ಟ್‌ ಫೀಚರ್ಸ್‌ಗಳಿರುವ ಸ್ಮಾರ್ಟ್‌ಫೋನ್‌ಗಳು ಗ್ರಾಹಕರಿಗೆ ಲಭ್ಯವಾಗುತ್ತಿದ್ದು, ಅಲ್ಲದೇ ಪ್ರತಿ ತಿಂಗಳು ನೂತನ ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತಿವೆ.ಫೋನ್‌ ಖರೀದಿಸುವ ಗ್ರಾಹಕರಿಗೆ ಸಿಕ್ಕಾಪಟ್ಟೆ ಆಯ್ಕೆಗಳು ಲಭ್ಯ. ಹಾಗಾದರೇ ಸದ್ಯ ಮೊಬೈಲ್ ಮಾರುಕಟ್ಟೆಯಲ್ಲಿ ಭಾರಿ ಸದ್ದು ಮಾಡುತ್ತಿರುವ ಸ್ಮಾರ್ಟ್‌ಫೋನ್‌ಗಳು ಯಾವುವು ಎಂಬುದನ್ನು ತಿಳಿಯಲು ಮುಂದೆ ಓದಿರಿ.

ನೋಕಿಯಾ 2.2

ನೋಕಿಯಾ 2.2

ಇತ್ತೀಚಿಗೆ ಬಿಡುಗಡೆ ಆಗಿರುವ ನೋಕಿಯಾ 2.2 ಎಂಟ್ರಿ ಲೆವೆಲ್ ಸ್ಮಾರ್ಟ್‌ಫೋನ್ ಆಗಿದ್ದು, 720 x 1520 ಪಿಕ್ಸಲ್ ರೆಸಲ್ಯೂಶನ್‌ನೊಂದಿಗೆ 5.71 ಇಂಚಿನ ಹೆಚ್‌ಡಿ ಡಿಸ್‌ಪ್ಲೇಯನ್ನು ಹೊಂದಿದೆ. ಮೀಡಿಯಾ ಟೆಕ್‌ MT6761 ಹಿಲಿಯೊ A22 ಪ್ರೊಸೆಸರ್‌ ಶಕ್ತಿಯನ್ನು ಪಡೆದಿದ್ದು, 3000 mAh ಬ್ಯಾಟರಿ ಸಾಮರ್ಥ್ಯವನ್ನು ಒಳಗೊಂಡಿದೆ. 3GB RAM/32 GB ಮತ್ತು 2GB RAM/16 GB ವೇರಿಯಂಟ್ ಆಯ್ಕೆಗಳನ್ನು ಹೊಂದಿದೆ.

ಶಿಯೋಮಿ ರೆಡ್ಮಿ K20 ಪ್ರೊ

ಶಿಯೋಮಿ ರೆಡ್ಮಿ K20 ಪ್ರೊ

ಈಗಾಗಲೇ ಮಾರುಕಟ್ಟೆಯಲ್ಲಿ ಸಖತ ಮಿಂಚುತ್ತಿರುವ ಈ ಸ್ಮಾರ್ಟ್‌ಫೋನ್ 6.39 ಇಂಚಿನ ಡಿಸ್‌ಪ್ಲೇಯನ್ನು ಹೊಂದಿದ್ದು, ಡಿಸ್‌ಪ್ಲೇಯು 1080 x 2340 ಪಿಕ್ಸಲ್ ರೆಸಲ್ಯೂಶನ್‌ ಅನ್ನು ಒಳಗೊಂಡಿದೆ. ಕ್ವಾಲ್ಕಮ್ SDM855 ಸ್ನ್ಯಾಪ್‌ಡ್ರಾಗನ್ 855 ಶಕ್ತಿಯುತ ಪ್ರೊಸೆಸರ್ ಅನ್ನು ಒಳಗೊಂಡಿದ್ದು, ತ್ರಿವಳಿ ಕ್ಯಾಮೆರಾ ಹೊಂದಿದೆ. ಅದರಲ್ಲಿ 48 ಎಂಪಿ ಕ್ಯಾಮೆರಾವು ಹೈಲೈಟ್‌ ಆಗಿದ್ದು, ಇದರೊಂದಿಗೆ 4000 mAh ಬ್ಯಾಟರಿಯನ್ನು ಪಡೆದಿದೆ.

ಸ್ಯಾಮ್‌ಸಂಗ್ ಗ್ಯಾಲ್ಯಾಕ್ಸಿ A50

ಸ್ಯಾಮ್‌ಸಂಗ್ ಗ್ಯಾಲ್ಯಾಕ್ಸಿ A50

ಗ್ಯಾಲ್ಯಾಕ್ಸಿ ಎ50 ಸ್ಮಾರ್ಟ್‌ಫೋನ್‌ Exynos 9610 ಚಿಪ್‌ಸೇಟ್‌ ಜೊತೆಗೆ ಆಂಡ್ರಾಯ್ಡ್‌ 9.0 ಓಎಸ್‌ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸಲಿದ್ದು, 1080 x 2340 ಪಿಕ್ಸಲ್ ರೆಸಲ್ಯೂಶನ್ ನೊಂದಿಗೆ 6.4 ಇಂಚಿನ ಪೂರ್ಣ ಹೆಚ್‌ಡಿ AMOLED ಡಿಸ್‌ಪ್ಲೇಯನ್ನು ಒಳಗೊಂಡಿದೆ. ಮೂರು ಕ್ಯಾಮೆರಾ ಆಯ್ಕೆಯನ್ನು ಹೊಂದಿದ್ದು, ಪ್ರಮುಖ ರೇರ್‌ ಕ್ಯಾಮೆರಾವು 25ಎಂಪಿ ಸಾಮರ್ಥ್ಯದಲ್ಲಿದೆ. ಹಾಗೆಯೇ 4000 mAh ಬ್ಯಾಟರಿ ಬಲ ಹೊಂದಿದೆ.

ಸ್ಯಾಮ್‌ಸಂಗ್ ಗ್ಯಾಲ್ಯಾಕ್ಸಿ A70

ಸ್ಯಾಮ್‌ಸಂಗ್ ಗ್ಯಾಲ್ಯಾಕ್ಸಿ A70

ಜನಪ್ರಿಯ ಗ್ಯಾಲ್ಯಾಕ್ಸಿ ಸರಣಿಯ A70 ಸ್ಮಾರ್ಟ್‌ಫೋನ್‌ ಕ್ವಾಲ್ಕಮ್ SDM675 ಸ್ನ್ಯಾಪ್‌ಡ್ರಾಗನ್ 675 ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸಲಿದ್ದು, 1080 x 2400 ಪಿಕ್ಸಲ್ ರೆಸಲ್ಯೂಶನ್ ನೊಂದಿಗೆ 6.7 ಇಂಚಿನ ಪೂರ್ಣ ಹೆಚ್‌ಡಿ AMOLED ಡಿಸ್‌ಪ್ಲೇಯನ್ನು ಒಳಗೊಂಡಿದೆ. ಮೂರು ಕ್ಯಾಮೆರಾ ಆಯ್ಕೆಯನ್ನು ಹೊಂದಿದ್ದು, ಪ್ರಮುಖ ರೇರ್‌ ಕ್ಯಾಮೆರಾವು ಮತ್ತು ಸೆಲ್ಫಿ ಕ್ಯಾಮೆರಾಗಳು 32 ಎಂಪಿ ಸಾಮರ್ಥ್ಯದಲ್ಲಿದೆ. ಹಾಗೆಯೇ 4500 mAh ಬ್ಯಾಟರಿ ನೀಡಲಾಗಿದೆ.

ಒನ್‌ಪ್ಲಸ್‌ 7 ಪ್ರೊ

ಒನ್‌ಪ್ಲಸ್‌ 7 ಪ್ರೊ

ವಿಶ್ವ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿರುವ ಒನ್‌ಪ್ಲಸ್‌ 7 ಪ್ರೊ ಸ್ಮಾರ್ಟ್‌ಫೋನ್‌ 1440 x 3120 ಪಿಕ್ಸಲ್ ಸಾಮರ್ಥ್ಯದೊಂದಿಗೆ 6.67 ಇಂಚಿನ ಫ್ಯೂಡ್ AMOLED ಪೂರ್ಣ ಹೆಚ್‌ಡಿ ಡಿಸ್‌ಪ್ಲೇಯನ್ನು ಹೊಂದಿದ್ದು, ಕ್ವಾಲ್ಕಮ್ SDM855 ಸ್ನ್ಯಾಪ್‌ಡ್ರಾಗನ್ 855 ಪವರ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಹಿಂಬದಿಯ ಮೂರು ಕ್ಯಾಮೆರಾಗಳಲ್ಲಿ ಪ್ರಮುಖ ಕ್ಯಾಮೆರಾವು 48ಎಂಪಿ ಸಾಮರ್ಥ್ಯವನ್ನು ಹೊಂದಿದ್ದು, ಹಾಗೆಯೇ 4000 mAh ಬ್ಯಾಟರಿ ಶಕ್ತಿಯನ್ನು ಪಡೆದುಕೊಂಡಿದೆ.

Best Mobiles in India

English summary
top 5 trending phones in india. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+