ಸದ್ಯ ಮಾರುಕಟ್ಟೆಯಲ್ಲಿ ಈ ಸ್ಮಾರ್ಟ್‌ಫೋನ್‌ಗಳಿಗೆ ಫುಲ್ ಡಿಮ್ಯಾಂಡ್!
ಪ್ರಸ್ತುತ ಮಾರುಕಟ್ಟೆಯಲ್ಲಿ ಹಲವು ಹೊಸ ಫೋನ್‌ಗಳು ಲಗ್ಗೆ ಇಡುತ್ತಲೇ ಸಾಗಿವೆ. ಅಗ್ಗದ ಫೋನ್‌ಗಳು ಎಂಟ್ರಿ ನೀಡುತ್ತವೆ, ಬಜೆಟ್ ಮೊಬೈಲ್‌ಗಳು ಲಾಂಚ್ ಆಗುತ್ತವೆ ಹಾಗೆಯೇ ಹೈ ಎಂಡ್ ಮಾದರಿಯ ಸ್ಮಾರ್ಟ್‌ಫೋನ್‌ಗಳು ಸಹ ಬಿಡುಗಡೆ ಆಗುತ್ತವೆ. ಅದಾಗ್ಯೂ, ಮಾರುಕಟ್ಟೆಗೆ ಬಿಡುಗಡೆ ಆಗುವ ಎಲ್ಲ ಫೋನ್‌ಗಳು ಡಿಮ್ಯಾಂಡ್ ಪಡೆದುಕೊಳ್ಳುವುದಿಲ್ಲ. ಅವುಗಳ ಪೈಕಿ ಕೆಲವೇ ಕೆಲವು ಫೋನ್‌ಗಳು ಗ್ರಾಹಕರ ಮನ ಗೆಲ್ಲುವಲ್ಲಿ ಯಶಸ್ವಿ ಆಗುತ್ತವೆ. ಹೀಗೆ ಜನಪ್ರಿಯತೆ ಪಡೆಯುವ ಮೊಬೈಲ್‌ಗಳು ಮೊಬೈಲ್ ಮಾರುಕಟ್ಟೆಯಲ್ಲಿ ಸಖತ್ ಸದ್ದು (Trending) ಮಾಡುತ್ತವೆ.
ಹೌದು, ಲೀಡಿಂಗ್ ಮೊಬೈಲ್ ಕಂಪನಿಗಳು ಸೇರಿದಂತೆ ಇತರೆ ಸಂಸ್ಥೆಗಳು ಕೂಡಾ ತಮ್ಮ ನೂತನ ಮೊಬೈಲ್ ಅನ್ನು ಮಾರುಕಟ್ಟೆಗೆ ಪರಿಚಯಿಸುತ್ತವೆ. ಕೆಲವು ಫೋನ್‌ಗಳು ಹೊಸ ಅಪ್‌ಗ್ರೇಡ್ ಫೀಚರ್ಸ್, ಸ್ಟೈಲಿಶ್ ಲುಕ್ ಹಾಗೂ ಇತರೆ ಆಯ್ಕೆಗಳಿಂದ ಗುರುತಿಸಿಕೊಂಡರೆ, ಮತ್ತೆ ಕೆಲವು ಫೋನ್‌ಗಳು ಅಗ್ಗದ ಬೆಲೆ ಅಲ್ಲವೇ ಬಜೆಟ್ ಬೆಲೆಯಲ್ಲಿ ಕಾಣಿಸಿಕೊಳ್ಳುತ್ತವೆ. ಅಂದಹಾಗೆ ಮಾರುಕಟ್ಟೆಯಲ್ಲಿ ಮೊಬೈಲ್‌ಗಳ ಡಿಮ್ಯಾಂಡ್ ಬದಲಾಗುತ್ತಾ ಹೋಗುತ್ತವೆ. ಹಾಗಾದರೆ ಸದ್ಯ ಈ ಜೂನ ಮೊದಲ ವಾರದ ಆರಂಭದಲ್ಲಿ ಭಾರೀ ಗಮನ ಸೆಳೆದಿರುವ ಫೋನ್‌ಗಳ ಲಿಸ್ಟ್ ಇಲ್ಲಿದೆ ಮುಂದೆ ಓದಿರಿ.

ಸ್ಯಾಮ್‌ಸಂಗ್ ಗ್ಯಾಲಕ್ಸಿ A55 5G
ಈ ಗ್ಯಾಲಕ್ಸಿ A55 5G ಸ್ಮಾರ್ಟ್‌ಫೋನ್ 6.6 ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್ ಸೂಪರ್ ಅಮೊಲೆಡ್ ಡಿಸ್‌ಪ್ಲೇ ಅನ್ನು ಹೊಂದಿದೆ. ಈ ಫೋನ್ ಎಕ್ಸಿನೋಸ್ 1480 SoC ಪ್ರೊಸೆಸರ್ ಜೊತೆಗೆ ಆಂಡ್ರಾಯ್ಡ್ 14 ಓಎಸ್‌ನಲ್ಲಿ ರನ್ ಮಾಡಲಿದೆ. ಹಾಗೆಯೇ ಈ ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಆಯ್ಕೆ ಪಡೆದುಕೊಂಡಿದೆ.
ಇದರ ಪ್ರಾಥಮಿಕ ಕ್ಯಾಮೆರಾವು 50 ಮೆಗಾಪಿಕ್ಸೆಲ್ ಸೆನ್ಸಾರ್ ಪಡೆದಿದೆ. ಸೆಲ್ಫಿ ಕ್ಯಾಮೆರಾವು 32 ಮೆಗಾ ಪಿಕ್ಸಲ್ ಸೆನ್ಸಾರ್ ಆಗಿದೆ. ಅಲ್ಲದೇ ಈ ಸ್ಯಾಮ್‌ಸಂಗ್ ಗ್ಯಾಲಕ್ಸಿ A55 5G ಮೊಬೈಲ್ 5000 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಅನ್ನು ಹೊಂದಿದೆ. ಇದಕ್ಕೆ ಪೂರಕವಾಗಿ 25W ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಸಹ ಒಳಗೊಂಡಿದೆ.
ಪೊಕೊ F6 ಮೊಬೈಲ್
ಪೊಕೊ F6 ಮೊಬೈಲ್ 6.67 ಇಂಚಿನ ಅಮೋಲೆಡ್ ಡಿಸ್‌ಪ್ಲೇ ಅನ್ನು ಪಡೆದಿದ್ದು, ಡಿಸ್‌ಪ್ಲೇಯು 2712 x 1220 ಪಿಕ್ಸಲ್ ರೆಸಲ್ಯೂಶನ್ ಸೌಲಭ್ಯ ಪಡೆದುಕೊಂಡಿದೆ. ಸ್ನಾಪ್‌ಡ್ರಾಗನ್ 8s ಜನ್ 3 ಪ್ರೊಸೆಸರ್ ಸಾಮರ್ಥ್ಯದಲ್ಲಿ ಕೆಲಸ ಮಾಡಲಿದ್ದು, ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್ 14 OS ಸಪೋರ್ಟ್ ಸಹ ಇದೆ.
ಡ್ಯುಯಲ್ ಕ್ಯಾಮೆರಾ ರಚನೆ ಅನ್ನು ಒಳಗೊಂಡಿದ್ದು, ಇದರ ಪ್ರಾಥಮಿಕ ಕ್ಯಾಮೆರಾವು 50 ಮೆಗಾ ಪಿಕ್ಸೆಲ್ ಕ್ಯಾಮೆರಾ ಸಾಮರ್ಥ್ಯದಲ್ಲಿ ಇದೆ. ಇದರೊಂದಿಗೆ ಮುಂಭಾಗದಲ್ಲಿ ಸೆಲ್ಫಿಗಾಗಿ 20 ಮೆಗಾ ಪಿಕ್ಸಲ್ ಸೆನ್ಸಾರ್ ಕ್ಯಾಮೆರಾ ನೀಡಲಾಗಿದೆ. 5,000 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಸೌಲಭ್ಯ ಹೊಂದಿದ್ದು, ಇದರೊಂದಿಗೆ 90W ಫಾಸ್ಟ್ ಚಾರ್ಜಿಂಗ್ ಅನ್ನು ಸಪೋರ್ಟ್ ಮಾಡುತ್ತದೆ.
ವಿವೋ V30e ಫೋನ್
ವಿವೋ V30e ಫೋನ್ 6.78 ಇಂಚಿನ ಫುಲ್ ಹೆಚ್‌ಡಿ + ಕರ್ವ್ ಅಮೋಲೆಡ್ ಡಿಸ್‌ಪ್ಲೇ ಆಯ್ಕೆ ಹೊಂದಿದ್ದು, 2400 × 1080 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯ ಪಡೆದಿದೆ. ಹಾಗೆಯೇ ಸ್ನಾಪ್‌ಡ್ರಾಗನ್ 6 ಜನ್ 1 ಪ್ರೊಸೆಸರ್ ಬಲದಲ್ಲಿ ಕೆಲಸ ನಿರ್ವಹಿಸಲಿದ್ದು, ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್ 14 ಓಎಸ್ ಸಪೋರ್ಟ್ ಸಹ ಪಡೆದಿದೆ.
ಡ್ಯುಯಲ್ ಕ್ಯಾಮೆರಾ ರಚನೆ ಅನ್ನು ಪಡೆದಿದ್ದು, ಇದರ ಪ್ರಾಥಮಿಕ ಕ್ಯಾಮೆರಾವು 50 ಮೆಗಾ ಪಿಕ್ಸಲ್ ಸೆನ್ಸಾರ್ ನಲ್ಲಿ ಇದೆ. ಇನ್ನು ಮುಂಭಾಗದಲ್ಲಿ ಸೆಲ್ಫಿಗಾಗಿ 50 ಮೆಗಾ ಪಿಕ್ಸಲ್ ಕ್ಯಾಮೆರಾ ಒದಗಿಸಲಾಗಿದೆ. 5500mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಸೌಲಭ್ಯ ಹೊಂದಿದ್ದು, ಇದಕ್ಕೆ ಪೂರಕವಾಗಿ 44W ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ನೀಡಲಾಗಿದೆ.
ರೆಡ್ಮಿ ನೋಟ್ 13 ಪ್ರೊ ಫೋನ್
ರೆಡ್ಮಿ ನೋಟ್ 13 ಪ್ರೊ ಸ್ಮಾರ್ಟ್‌ಫೋನ್ 6.67 ಇಂಚಿನ 1.5K 120Hz ಡಿಸ್‌ಪ್ಲೇ ಹೊಂದಿದ್ದು, ಇದರೊಂದಿಗೆ ಸ್ನಾಪ್‌ಡ್ರಾಗನ್ 7s ಜನ್ 2 ಪ್ರೊಸೆಸರ್ ಜೊತೆಗೆ MIUI 14 ಆಧಾರಿತ ಆಂಡ್ರಾಯ್ಡ್ 13 ಓಎಸ್ ಪಡೆದಿದೆ. ಅಲ್ಲದೇ 200ಎಂಪಿ ಕ್ಯಾಮೆರಾ ಪಡೆದಿದ್ದು, ಮುಂಭಾಗದಲ್ಲಿ 16ಎಂಪಿ ಸೆಲ್ಫಿ ಕ್ಯಾಮೆರಾ ರಚನೆ ಇದೆ. ಇದಲ್ಲದೇ 5000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಪಡೆದುಕೊಂಡಿದೆ.
ಇನ್ಫಿನಿಕ್ಸ್ GT 20 ಪ್ರೊ ಫೋನ್
ಇನ್ಫಿನಿಕ್ಸ್ GT 20 ಪ್ರೊ ಮೊಬೈಲ್ 6.78 ಇಂಚಿನ FHD+ ಅಮೋಲೆಡ್ ಡಿಸ್‌ಪ್ಲೇ ಹೊಂದಿದ್ದು, ಇದರೊಂದಿಗೆ ಡೈಮೆನ್ಸಿಟಿ 8200 ಅಲ್ಟಿಮೇಟ್ ಪ್ರೊಸೆಸರ್ ಸಾಮರ್ಥ್ಯ ಪಡೆದಿದೆ. ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್ 14 ಓಎಸ್ ಸಪೋರ್ಟ್ ಇದೆ. ಇದರ ಪ್ರಾಥಮಿಕ ಕ್ಯಾಮೆರಾವು 108 ಮೆಗಾ ಪಿಕ್ಸಲ್ ಸೆನ್ಸಾರ್ ಸಾಮರ್ಥ್ಯದಲ್ಲಿ ಇದೆ. 5,000 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಸಪೋರ್ಟ್ ಹೊಂದಿದೆ.


Click it and Unblock the Notifications








