ಸದ್ಯ ಹೊಸ ಸ್ಮಾರ್ಟ್‌ಫೋನ್ ಖರೀದಿಸುವ ಪ್ಲ್ಯಾನ್ ಮಾಡಿದ್ದಿರಾ?..ಹಾಗಿದ್ರೆ ಸ್ವಲ್ಪ ಕಾಯಿರಿ!
ಮೊಬೈಲ್ ಮಾರುಕಟ್ಟೆಗೆ ಹಲವು ಹೊಸ ಸ್ಮಾರ್ಟ್‌ಫೋನ್‌ಗಳು ಎಂಟ್ರಿ ಕೊಡುತ್ತಲೇ ಸಾಗಿದ್ದು, ಅವುಗಳಲ್ಲಿ ಬಜೆಟ್ ಬೆಲೆಯ ಸ್ಮಾರ್ಟ್‌ಫೋನ್‌ಗಳು ಹೆಚ್ಚು ಆಕರ್ಷಕ ಎನಿಸುತ್ತಿವೆ. ಇತ್ತೀಚಿನ ಹೊಸ ಸ್ಮಾರ್ಟ್‌ಫೋನ್‌ಗಳಲ್ಲಿ ತ್ರಿವಳಿ ಕ್ಯಾಮೆರಾ, ಕ್ವಾಡ್ ಕ್ಯಾಮೆರಾ, ಅಧಿಕ ಪ್ರೊಸೆಸರ್, ಬಿಗ್ ಬ್ಯಾಟರಿ ಫೀಚರ್ಸ್‌ಗಳು ಸೇರಿದಂತೆ ಫೋನ್ ವಿನ್ಯಾಸ್‌ಕ್ಕೂ ವಿಶೇಷ ಗಮನ ನೀಡಲಾಗುತ್ತಿದೆ. ನೀವೇನಾದರೂ ಸದ್ಯ ಹೊಸ ಸ್ಮಾರ್ಟ್‌ಫೋನ್ ಖರೀದಿ ಮಾಡುವ ಆಲೋಚನೆ ಇದ್ರೆ ಸ್ವಲ್ಪ ಕಾಯಿರಿ.

ಹೌದು, ಬಹುತೇಕ ಗ್ರಾಹಕರು ಬಜೆಟ್ ದರದಲ್ಲಿ ಅತ್ಯುತ್ತಮ ಫೀಚರ್ಸ್‌ಗಳಿರುವ ಸ್ಮಾರ್ಟ್‌ಫೋನ್ ಖರೀದಿಗೆ ಮುಂದಾಗುತ್ತಾರೆ. ಸದ್ಯ ಈ ಸೆಪ್ಟೆಂಬರ್ ತಿಂಗಳಿನಲ್ಲಿ ಮಾರುಕಟ್ಟೆಗೆ ಬಜೆಟ್ ದರದಲ್ಲಿ ಕೆಲವು ಬೆಸ್ಟ್ ಸ್ಮಾರ್ಟ್‌ಫೋನ್‌ಗಳು ಲಗ್ಗೆ ಇಡಲಿವೆ. ಹಾಗಾದರೇ ಈ ತಿಂಗಳು ಲಾಂಚ್ ಆಗಲಿರುವ ಪ್ರಮುಖ 5 ಸ್ಮಾರ್ಟ್‌ಫೋನ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಶಿಯೋಮಿ ರೆಡ್ಮಿ 10 ಪ್ರೈಮ್
ಶಿಯೋಮಿ ರೆಡ್ಮಿ 10 ಪ್ರೈಮ್ ಫೋನ್ 6.5 ಇಂಚಿನ ಡಿಸ್‌ಪ್ಲೇಯನ್ನು ಒಳಗೊಂಡಿರಲಿದ್ದು, ಡಿಸ್‌ಪ್ಲೇಯು ಎಲ್‌ಸಿಡಿ ಮಾದರಿಯಲ್ಲಿರಲಿದೆ. ಹಾಗೆಯೇ ಈ ಫೋನ್ ಮೀಡಿಯಾ ಟೆಕ್ ಹಿಲಿಯೋ G88 ಪ್ರೊಸೆಸರ್ ಅನ್ನು ಹೊಂದಿರಲಿದ್ದು, ಅದಕ್ಕೆ ಪೂರಕವಾಗಿ ಆಂಡ್ರಾಯ್ಡ್ 11 ಓಎಸ್ ಸಪೋರ್ಟ್ ಇರಲಿದೆ. ಆರಂಭಿಕ 4GB RAM ವೇರಿಯಂಟ್‌ನ ಆಯ್ಕೆ ಪಡೆದಿರಲಿದೆ. ಇದರೊಂದಿಗೆ ಕ್ವಾಡ್ ಕ್ಯಾಮೆರಾ ರಚನೆಯನ್ನು ಒಳಗೊಂಡಿರಲಿದ್ದು, ಅವು ಕ್ರಮವಾಗಿ 50+8+2+2 ಮೆಗಾ ಪಿಕ್ಸಲ್ ಸೆನ್ಸಾರ್ ಬಲವನ್ನು ಪಡೆದಿರಲಿವೆ. ಸೆಲ್ಫಿಗಾಗಿ 8 ಮೆಗಾ ಪಿಕ್ಸಲ್ ಕ್ಯಾಮೆರಾ ಇರಲಿದೆ. ಹಾಗೆಯೇ 5,000mAh ಬ್ಯಾಟರಿ ಸಪೋರ್ಟ್ ಸಹ ಪಡೆದಿರಲಿದೆ.

ರಿಯಲ್‌ಮಿ Q3i
ರಿಯಲ್‌ಮಿ Q3i ಫೋನ್ 6.5 ಇಂಚಿನ ಡಿಸ್‌ಪ್ಲೇಯನ್ನು ಒಳಗೊಂಡಿರಲಿದ್ದು, ಡಿಸ್‌ಪ್ಲೇಯು LCD ಮಾದರಿಯಲ್ಲಿರಲಿದೆ. ಹಾಗೆಯೇ ಈ ಫೋನ್ ಮೀಡಿಯಾ ಟೆಕ್ Dimensity 700 ಪ್ರೊಸೆಸರ್ ಅನ್ನು ಹೊಂದಿರಲಿದ್ದು, ಅದಕ್ಕೆ ಪೂರಕವಾಗಿ ಆಂಡ್ರಾಯ್ಡ್ 11 ಓಎಸ್ ಸಪೋರ್ಟ್ ಇರಲಿದೆ. ಈ ಫೋನ್ 4GB RAM ಸಾಮರ್ಥ್ಯದ ಬೇಸ್ ವೇರಿಯಂಟ್‌ನ ಆಯ್ಕೆ ಪಡೆದಿರಲಿದೆ. ಇದರೊಂದಿಗೆ ತ್ರಿವಳಿ ಕ್ಯಾಮೆರಾ ರಚನೆಯನ್ನು ಒಳಗೊಂಡಿರಲಿದ್ದು, ಅವು ಕ್ರಮವಾಗಿ 48+2+2 ಮೆಗಾ ಪಿಕ್ಸಲ್ ಸೆನ್ಸಾರ್ ಬಲವನ್ನು ಪಡೆದಿರಲಿವೆ. ಸೆಲ್ಫಿಗಾಗಿ 16 ಮೆಗಾ ಪಿಕ್ಸಲ್ ಕ್ಯಾಮೆರಾ ಇರಲಿದೆ. ಹಾಗೆಯೇ 5,000mAh ಬ್ಯಾಟರಿ ಸಪೋರ್ಟ್ ಸಹ ಪಡೆದಿರಲಿದೆ.

ಶಿಯೋಮಿ ರೆಡ್ಮಿ ನೋಟ್ 11
ಶಿಯೋಮಿ ರೆಡ್ಮಿ ನೋಟ್ 11 ಫೋನ್ 6.5 ಇಂಚಿನ ಡಿಸ್‌ಪ್ಲೇಯನ್ನು ಒಳಗೊಂಡಿರಲಿದ್ದು, ಡಿಸ್‌ಪ್ಲೇಯು ಎಲ್‌ಇಡಿ ಮಾದರಿಯಲ್ಲಿರಲಿದೆ. ಹಾಗೆಯೇ ಈ ಫೋನ್ ಮೀಡಿಯಾ ಟೆಕ್ ಹಿಲಿಯೋ G85 ಪ್ರೊಸೆಸರ್ ಅನ್ನು ಹೊಂದಿರಲಿದ್ದು, ಅದಕ್ಕೆ ಪೂರಕವಾಗಿ ಆಂಡ್ರಾಯ್ಡ್ 11 ಓಎಸ್ ಸಪೋರ್ಟ್ ಇರಲಿದೆ. ಆರಂಭಿಕ 4GB RAM ವೇರಿಯಂಟ್‌ನ ಆಯ್ಕೆ ಪಡೆದಿರಲಿದೆ. ಇದರೊಂದಿಗೆ ಕ್ವಾಡ್ ಕ್ಯಾಮೆರಾ ರಚನೆಯನ್ನು ಒಳಗೊಂಡಿರಲಿದ್ದು, ಅವು ಕ್ರಮವಾಗಿ 48+8+5+2 ಮೆಗಾ ಪಿಕ್ಸಲ್ ಸೆನ್ಸಾರ್ ಬಲವನ್ನು ಪಡೆದಿರಲಿವೆ. ಸೆಲ್ಫಿಗಾಗಿ 16 ಮೆಗಾ ಪಿಕ್ಸಲ್ ಕ್ಯಾಮೆರಾ ಇರಲಿದೆ. ಹಾಗೆಯೇ 5,000mAh ಬ್ಯಾಟರಿ ಸಪೋರ್ಟ್ ಸಹ ಪಡೆದಿರಲಿದೆ.

ಜಿಯೋ ಫೋನ್ ನೆಕ್ಸ್ಟ್
ಲೀಕ್ ಮಾಹಿತಿ ಪ್ರಕಾರ, ಜಿಯೋಫೋನ್ ನೆಕ್ಸ್ಟ್ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 11 ಒಎಸ್‌ನಿಂದ ರನ್ ಆಗಲಿದೆ. ಸ್ಮಾರ್ಟ್‌ಫೋನ್ ಹಿಂಬದಿಯಲ್ಲಿ ಸಿಂಗಲ್ ಕ್ಯಾಮೆರಾ ಇರಬಹುದು. ಎಚ್‌ಡಿ ಡಿಸ್‌ಪ್ಲೇ ಇರುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.ಈ ಫೋನ್ ಮಾಡೆಲ್ LS-5701-J ನಂಬರ್ ಹೊಂದಿದೆ. ಗೂಗಲ್‌ನ ಗೋ ಎಡಿಷನ್ ಆಂಡ್ರಾಯ್ಡ್ 11 ಒಎಸ್, 720x1,440 ಪಿಕ್ಸೆಲ್ ಪ್ರದರ್ಶಕ, ಕ್ವಾಲಕಾಂ QM215 ಎಸ್ಒಸಿ ಅನ್ನು ಈ ಸ್ಮಾರ್ಟ್‌ಫೋನ್ ಒಳಗೊಂಡಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಕ್ವಾಡ್ ಕೋರ್ ಕ್ವಾಲ್ಕಮ್ ಪ್ರೊಸೆಸರ್ ಜೊತೆಗೆ ಕ್ವಾಲಕಾಮ್ ಅಡ್ರಿನೊ 308 ಜಿಪಿಯು ಹೊಂದಿದೆ. ಬ್ಲೂಟೂತ್ v4.2, GPS, 1080ಪಿ ವಿಡಿಯೋ ರೆಕಾರ್ಡಿಂಗ್, ಎಲ್‌ಡಿಪಿಆರ್ 3 ರ್ಯಾಮ್, ಮತ್ತು ಇಎಂಎಂಸಿ 4.5 ಸ್ಟೋರೇಜ್ ಹೊಂದಿರುವ ಸಾಧ್ಯತೆ ಇದೆ.

ಶಿಯೋಮಿ ರೆಡ್ಮಿ ನೋಟ್ 10 5G
ಶಿಯೋಮಿ ರೆಡ್ಮಿ ನೋಟ್ 10 5G ಫೋನ್ 6.5 ಇಂಚಿನ ಡಿಸ್‌ಪ್ಲೇಯನ್ನು ಒಳಗೊಂಡಿರಲಿದ್ದು, ಡಿಸ್‌ಪ್ಲೇಯು ಎಲ್‌ಇಡಿ ಮಾದರಿಯಲ್ಲಿರಲಿದೆ. ಹಾಗೆಯೇ ಈ ಫೋನ್ ಮೀಡಿಯಾ ಟೆಕ್ Dimensity 700 ಪ್ರೊಸೆಸರ್ ಅನ್ನು ಹೊಂದಿರಲಿದ್ದು, ಅದಕ್ಕೆ ಬೆಂಬಲವಾಗಿ ಆಂಡ್ರಾಯ್ಡ್ 11 ಓಎಸ್ ಕೆಲಸ ಮಾಡಲಿದೆ. ಆರಂಭಿಕ 4GB RAM ವೇರಿಯಂಟ್‌ನ ಆಯ್ಕೆ ಪಡೆದಿರಲಿದೆ. ಇದರೊಂದಿಗೆ ತ್ರಿವಳಿ ಕ್ಯಾಮೆರಾ ರಚನೆಯನ್ನು ಒಳಗೊಂಡಿರಲಿದ್ದು, ಅವು ಕ್ರಮವಾಗಿ 48+2+2 ಮೆಗಾ ಪಿಕ್ಸಲ್ ಸೆನ್ಸಾರ್ ಸಾಮರ್ಥ್ಯವನ್ನು ಪಡೆದಿರಲಿವೆ. ಸೆಲ್ಫಿಗಾಗಿ 8 ಮೆಗಾ ಪಿಕ್ಸಲ್ ಕ್ಯಾಮೆರಾ ಇರಲಿದೆ. ಹಾಗೆಯೇ 5,000mAh ಬ್ಯಾಟರಿ ಸಪೋರ್ಟ್ ಸಹ ಪಡೆದಿರಲಿದ್ದು, ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಸಹ ಒಳಗೊಂಡಿರಲಿದೆ.


Click it and Unblock the Notifications








