Home
ಸುದ್ದಿಜಾಲ

ಸದ್ಯ ಟ್ರೆಂಡಿಂಗ್‌ನಲ್ಲಿರುವ ಕಾಣಿಸಿಕೊಂಡಿರುವ ಸ್ಮಾರ್ಟ್‌ಫೋನ್‌ಗಳು!

ಪ್ರಸ್ತುತ ಸ್ಮಾರ್ಟ್‌ಫೋನ್‌ಗಳು ಪ್ರತಿಯೊಬ್ಬರ ಅವಶ್ಯ ಡಿವೈಸ್ ಆಗಿದ್ದು, ಈ ನಿಟ್ಟಿನಲ್ಲಿ ಮೊಬೈಲ್‌ ಕಂಪನಿಗಳು ಮಾರುಕಟ್ಟೆಗೆ ಹೊಸ ಮಾಡೆಲ್‌ ಸ್ಮಾರ್ಟ್‌ಫೋನ್‌ಗಳು ಪರಿಚಯಿಸುತ್ತ ಸಾಗಿವೆ. ಹಾಗೆಯೇ ಪ್ರಮುಖ ಕಂಪನಿಗಳು ಸಹ ಹೈ ಎಂಡ್ ಮಾದರಿಯ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡುತ್ತಿವೆ. ಈ ವರ್ಷದಲ್ಲಿ ಹಲವು ಸ್ಮಾರ್ಟ್‌ಫೋನ್‌ಗಳು ಬಿಡುಗಡೆ ಆಗಿದ್ದು, ಕೆಲವು ಫೋನ್‌ಗಳು ಟ್ರೆಂಡಿಂಗ್ ಕಾಣಿಸಿಕೊಂಡಿವೆ.

ಮಾರುಕಟ್ಟೆಗೆ

ಹೌದು, ಮಾರುಕಟ್ಟೆಗೆ ಲಾಂಚ್ ಆಗುವ ಎಲ್ಲ ಸ್ಮಾರ್ಟ್‌ಫೋನ್‌ಗಳು ಕ್ಲಿಕ್ ಆಗುವುದಿಲ್ಲ. ಕೆಲವು ಗ್ರಾಹಕರನ್ನು ಸೆಳೆಯುತ್ತವೆ ಮತ್ತೆ ಇನ್ನು ಕೆಲವು ಹೇಳ ಹೆಸರಿಲ್ಲದೇ ಮಾರುಕಟ್ಟೆಯಿಂದ ಮಾಯವಾಗುತ್ತವೆ. ಆದರೆ ಸದ್ಯ ಮಾರುಕಟ್ಟೆಯಲ್ಲಿ ಆಪಲ್‌, ಒನ್‌ಪ್ಲಸ್, ಶಿಯೋಮಿ, ಸೇರಿದಂತೆ ಬಜೆಟ್ ಬೆಲೆಯ ಫೋನ್‌ಗಳು ಟ್ರೆಂಡಿಂಗ್‌ನಲ್ಲಿವೆ. ಹಾಗಾದರೇ ಟ್ರೆಂಡಿಂಗ್‌ನಲ್ಲಿರುವ ಟಾಪ್ ಸ್ಮಾರ್ಟ್‌ಫೋನ್‌ಗಳು ಯಾವುವು ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ಐಫೋನ್ 12 ಪ್ರೊ ಮ್ಯಾಕ್ಸ್‌

ಐಫೋನ್ 12 ಪ್ರೊ ಮ್ಯಾಕ್ಸ್‌

ಐಫೋನ್ 12 ಪ್ರೊ ಮ್ಯಾಕ್ಸ್‌ 6.7 ಇಂಚಿನ ಡಿಸ್‌ಪ್ಲೇ ಹೊಂದಿದೆ. ಹಾಗೆಯೇ ಐಫೋನ್ 12 ಪ್ರೊ ಮ್ಯಾಕ್ಸ್ ಟೆಲಿಫೋಟೋ ಕ್ಯಾಮೆರಾದೊಂದಿಗೆ ಉತ್ತಮವಾದ ಕ್ಯಾಮೆರಾ ಸೆಟ್ ಹೊಂದಿದ್ದು, ಇದು 65 ಎಂಎಂ ಫೋಕಲ್ ಉದ್ದವನ್ನು ಹೊಂದಿದ್ದು ಅದು ನಿಮಗೆ 2.5x ಆಪ್ಟಿಕಲ್ ಜೂಮ್ ಮತ್ತು 5x ಜೂಮ್ ಶ್ರೇಣಿಯನ್ನು ಅನುಮತಿಸುತ್ತದೆ. ಸುಧಾರಿತ ಅಲ್ಟ್ರಾ-ವೈಡ್-ಆಂಗಲ್ ಕ್ಯಾಮೆರಾ ಕೂಡ ಹೊಂದಿದೆ. ಡಾಲ್ಬಿ ಸಪೋರ್ಟ್‌ ಸಹ ಪಡೆದಿದೆ.

ಐಫೋನ್ 12

ಐಫೋನ್ 12

ಐಫೋನ್ 12 OLED ಡಿಸ್‌ಪ್ಲೇ ಹೊಂದಿದ್ದು, A14 ಬಯೋನಿಕ್ ಸೋಕ್ ಕ್ವಾಡ್‌ ಕೋರ್ ಪ್ರೊಸೆಸರ್‌ ಅನ್ನು ಹೊಂದಿದೆ. 5G ಅನ್ನು ಬೆಂಬಲಿಸುತ್ತದೆ. ಐಫೋನ್ 12 ಫೋನ್ ಎರಡು ಕ್ಯಾಮೆರಾ ಹೊಂದಿದ್ದು, ಅವುಗಳು ಕ್ರಮವಾಗಿ 12 ಮೆಗಾಪಿಕ್ಸೆಲ್ ವೈಡ್-ಆಂಗಲ್ ಸಂವೇದಕಗಳನ್ನು ಹೊಂದಿವೆ. ನೈಟ್‌ ಮೋಡ್‌ ಆಯ್ಕೆ ಇದ್ದು ಕಡಿಮೆ ಬೆಳಕಿನಲ್ಲಿಯೂ ಅತ್ಯುತ್ತಮ ಫೋಟೊ ಸೆರೆಹಿಡಿಯಲು ನೆರವಾಗಲಿದೆ.

ಐಫೋನ್ 12 ಮಿನಿ

ಐಫೋನ್ 12 ಮಿನಿ

ಐಫೋನ್ 12 ಮಿನಿ 5.4-ಇಂಚಿನ ಡಿಸ್‌ಪ್ಲೇಯನ್ನು ಹೊಂದಿದ್ದು, ಡಿಸ್‌ಪ್ಲೇಯು ಸೂಪರ್ ರೆಟಿನಾ XRD ಡಿಸ್‌ಪ್ಲೇ ಮಾದರಿಯಲ್ಲಿದೆ. ಇದು ಸಹ A14 ಬಯೋನಿಕ್ ಎಸ್‌ಒಸಿ ಹಾಗೂ, 5G ಸಪೋರ್ಟ್ ಪಡೆದಿದೆ. ಐಫೋನ್ 12 ಮಿನಿ ಬಹುತೇಕ ಐಫೋನ್ 12 ಫೀಚರ್ಸ್‌ಗಳನ್ನು ಹೊಂದಿದ್ದು, ಗಾತ್ರದಲ್ಲಿ ಮಾತ್ರ ವ್ಯತ್ಯಾಸವಿದೆ.

ಐಫೋನ್ 12 ಪ್ರೊ

ಐಫೋನ್ 12 ಪ್ರೊ

ಐಫೋನ್ 12 ಪ್ರೊ 6.1-ಇಂಚಿನ ಡಿಸ್‌ಪ್ಲೇ ಹೊಂದಿದೆ. ಇದರೊಂದಿಗೆ ಮುಖ್ಯವಾಗಿ ಐಫೋನ್ 12 ಪ್ರೊ ಕ್ಯಾಮೆರಾ ವಿಭಾಗದಲ್ಲಿ ಸಾಕಷ್ಟು ಅಪ್‌ಗ್ರೇಡ್‌ ಫೀಚರ್ಸ್‌ಗಳನ್ನು ಅಳವಡಿಸಿಕೊಂಡಿದೆ. ಈ ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟ್‌ಅಪ್‌ ಹೊಂದಿದ್ದು, ಎರಡು ವೈಡ್-ಆಂಗಲ್ ಸೆನ್ಸರ್‌ಗಳು ಮತ್ತು ಟೆಲಿಫೋಟೋ ಸಂವೇದಕವನ್ನು ಒಳಗೊಂಡಿದೆ.

ಒನ್‌ಪ್ಲಸ್‌ 8T

ಒನ್‌ಪ್ಲಸ್‌ 8T

ಒನ್‌ಪ್ಲಸ್‌ ಸಂಸ್ಥೆಯು ಹೊಸದಾಗಿ ಬಿಡುಗಡೆ ಮಾಡಿರುವ ಒನ್‌ಪ್ಲಸ್‌ 8T ಸ್ಮಾರ್ಟ್‌ಫೋನ್‌ ಸಹ ಟ್ರೆಂಡಿಂಗ್‌ನಲ್ಲಿ ಕಾಣಿಸಿಕೊಂಡಿದೆ. ಕ್ವಾಡ್‌ ಕ್ಯಾಮೆರಾ ರಚನೆಯನ್ನು ಹೊಂದಿದ್ದು, ಮುಖ್ಯ ಕ್ಯಾಮೆರಾವು 48ಎಂಪಿ ಸೆನ್ಸಾರ್‌ ಸಾಮರ್ಥ್ಯ ಪಡೆದಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ F41

ಸ್ಯಾಮ್‌ಸಂಗ್ ಗ್ಯಾಲಕ್ಸಿ F41

ಜನಪ್ರಿಯ ಸ್ಯಾಮ್‌ಸಂಗ್ ಸಂಸ್ಥೆಯ ಇತ್ತೀಚಿಗಿನ ಗ್ಯಾಲಕ್ಸಿ F41 ಸ್ಮಾರ್ಟ್‌ಫೋನ್ ಆಕರ್ಷಕ ಫೀಚರ್ಸ್‌ಗಳಿಂದ ಗ್ರಾಹಕರ ಗಮನ ಸೆಳೆದಿದೆ. ಈ ಮೂಲಕ ಈ ಫೋನ್ ಸಹ ಟ್ರೆಂಡಿಂಗ್‌ ಪಟ್ಟಿ ಸೇರಿದೆ. ಇನ್ನು ಈ ಫೋನ್ 6000mAh ಬ್ಯಾಟರಿ ಹೊಂದಿದ್ದು, 64ಎಂಪಿ ಸೆನ್ಸಾರ್‌ ಮುಖ್ಯ ಕ್ಯಾಮೆರಾ ಹೊಂದಿದೆ.

Best Mobiles in India

English summary
iPhone 12 Pro Max sits in first. The 12 mini slides in second with the middle children of 12 Pro and 12 following in that order.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+