ದೀಪಾವಳಿ ಪ್ರಯುಕ್ತ ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್'ನಲ್ಲಿ ಈ ಆಫರ್‌ಗಳು ಲಭ್ಯ!
ಹಬ್ಬಗಳು ಬಂದರೇ ಇ-ಕಾಮರ್ಸ್ ತಾಣ ಗ್ರಾಹಕರನ್ನು ಸೆಳೆಯಲು ಬೆಸ್ಟ್ ಡೀಲ್‌ಗಳನ್ನು ಘೋಷಿಸುತ್ತವೆ ಹಾಗೂ ಹಬ್ಬದ ಸೇಲ್ ಮೇಳದಲ್ಲಿ ಗ್ಯಾಜೆಟ್ಸ್ ಉತ್ಪನ್ನಗಳಿಗೆ ವಿಶೇಷ ರಿಯಾಯತಿ ನೀಡುತ್ತವೆ. ಹೀಗಾಗಿಯೇ ಗ್ಯಾಜೆಟ್ ಖರೀದಿಸುವ ಬಹುತೇಕ ಗ್ರಾಹಕರು ಇ-ಕಾಮರ್ಸ್‌ಗಳ ಆಫರ್ ದಿನಗಳನ್ನು ಕಾಯುತ್ತಿರುತ್ತಾರೆ. ಹಾಗೇನಾದರೂ ನೀವು ಆಫರ್ ಬಯಸುತ್ತಿದ್ದರೇ ಇದುವೇ ಸರಿಯಾದ ಸಮಯ. ಏಕೆಂದರೇ ಅಮೆಜಾನ್‌ನಲ್ಲಿಯೂ ಆಫರ್ ಇದೆ ಮತ್ತು ಫ್ಲಿಪ್‌ಕಾರ್ಟ್‌ನಲ್ಲಿಯೂ ಆಫರ್ ಇದೆ.

ಹೌದು, ದೀಪಾವಳಿ ಹಬ್ಬದ ಪ್ರಯುಕ್ತ ಇ-ಕಾಮರ್ಸ್ ದಿಗ್ಗಜ ಸಂಸ್ಥೆಗಳಾದ 'ಅಮೆಜಾನ್' ಮತ್ತು 'ಫ್ಲಿಪ್‌ಕಾರ್ಟ್' ತಾಣಗಳು ಸೇಲ್ ಮೇಳವನ್ನು ಆಯೋಜಿಸಿವೆ. ಅಮೆಜಾನ್ 'ಗ್ರೇಟ್ ಇಂಡಿಯನ್ ಫೆಸ್ಟಿವಲ್' ಸೇಲ್ ಆಯೋಜಿಸಿದ್ದು, ಫ್ಲಿಪ್‌ಕಾರ್ಟ್ 'ಬಿಗ್ ದೀಪಾವಳಿ' ಸೇಲ್ ಮೇಳವನ್ನು ಆರಂಭಿಸಿದೆ. ಈ ಎರಡು ಸೇಲ್ ಮೇಳಗಳು ಇದೇ ಅಕ್ಟೋಬರ್ 21ರಿಂದ ಶುರುವಾಗಿದ್ದು, ಇದೇ ಅಕ್ಟೋಬರ್ 25ರ ವರೆಗೂ ನಡೆಯಲಿವೆ.

ಈಗಾಗಲೇ ಚಾಲ್ತಿಯಲ್ಲಿರುವ ಈ ಹಬ್ಬದ ಸೇಲ್ ಮೇಳಗಳಲ್ಲಿ ಸ್ಮಾರ್ಟ್‌ಫೋನ್, ಆಡಿಯೊ ಡಿವೈಸ್ ಮತ್ತು ಸ್ಮಾರ್ಟ್ ಪ್ರೊಡೆಕ್ಟ್ಸ್‌ಗಳಿಗೆ ಬೆಸ್ಟ್ ಡೀಲ್ ಲಭ್ಯ ಇವೆ. ಮೇಳದಲ್ಲಿ ಇತ್ತೀಚಿಗೆ ಬಿಡುಗಡೆ ಆಗಿರುವ ಹೊಸ ಸ್ಮಾರ್ಟ್‌ಫೋನ್‌ಗಳು ಆಫರ್‌ನಲ್ಲಿ ಖರೀದಿಗೆ ಸಿಗಲಿವೆ. ಹೀಗಾಗಿ ಇಂದಿನ ಈ ಲೇಖನದಲ್ಲಿ ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್ ಆಯೋಜಿಸಿರುವ ಸೇಲ್ ಮೇಳಗಳಲ್ಲಿ ಯಾವೆಲ್ಲಾ ಸ್ಮಾರ್ಟ್ ಉತ್ಪನ್ನಗಳು ಬೆಸ್ಟ್ ಡೀಲ್‌ನಲ್ಲಿ ಸಿಗಲಿವೆ ಎನ್ನುವ ಕುರಿತು ತಿಳಿಸಲಾಗಿದೆ. ಮುಂದೆ ಓದಿರಿ.

ಒನ್‌ಪ್ಲಸ್ ಫೋನ್‌ಗಳು
ಒನ್‌ಪ್ಲಸ್ ಸಂಸ್ಥೆಯ ಒನ್‌ಪ್ಲಸ್ 7T, ಒನ್‌ಪ್ಲಸ್ 7T-(8GB + 128GB) ವೇರಿಯಂಟ್ 37,999ರೂ. ಬೆಲೆಯನ್ನು ಹೊಂದಿದೆ. ಒನ್‌ಪ್ಲಸ್ 7T-(8GB + 256GB) ವೇರಿಯಂಟ್ 39,999ರೂ.ಗಳ ಪ್ರೈಸ್‌ಟ್ಯಾಗ್‌ನಲ್ಲಿದೆ. ಹಾಗೆಯೇ ಒನ್‌ಪ್ಲಸ್ 7T ಪ್ರೊ-(8GB + 256GB) ವೇರಿಯಂಟ್ 53,999ರೂ.ಗಳ ಬೆಲೆಯಲ್ಲಿದೆ. ಆದರೆ ಅಮೆಜಾನ್ ಸೇಲ್ ಮೇಳದಲ್ಲಿ ಆಕ್ಸಿಸ್ ಮತ್ತು ಸಿಟಿ ಬ್ಯಾಂಕ್‌ಗಳ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಬಳಸಿ ಖರೀದಿಸಿದರೇ 2,000ರೂ ಇನ್‌ಸ್ಟಂಟ್ ಡಿಸ್ಕೌಂಟ್ ಸಿಗಲಿದೆ.

ರೆಡ್ಮಿ ನೋಟ್ 8 ಪ್ರೊ
ಶಿಯೋಮಿಯ ಹೊಸ 'ರೆಡ್ಮಿ ನೋಟ್ 8 ಪ್ರೊ-(6GB + 64GB) ವೇರಿಯಂಟ್ ಬೆಲೆ 14,999ರೂ.ಗಳಾಗಿದೆ. ಹಾಗೂ ರೆಡ್ಮಿ ನೋಟ್ 8 ಪ್ರೊ-(8GB + 128GB) ವೇರಿಯಂಟ್ ಬೆಲೆಯು 17,999ರೂ.ಗಳ ಪ್ರೈಸ್‌ಟ್ಯಾಗ್ ಹೊಂದಿದೆ. ಆದರೆ ಅಮೆಜಾನ್ ಸೇಲ್ ಮೇಳದಲ್ಲಿ ಆಕ್ಸಿಸ್ ಮತ್ತು ಸಿಟಿ ಬ್ಯಾಂಕ್‌ಗಳ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಬಳಸಿ ಖರೀದಿಸಿದರೇ ಶೇ.10 ಪರ್ಸೆಂಟ್ ಇನ್‌ಸ್ಟಂಟ್ ಡಿಸ್ಕೌಂಟ್ ಲಭ್ಯವಾಗಲಿದೆ.

ಸ್ಯಾಮ್‌ಸಂಗ್ ಗ್ಯಾಲ್ಯಾಕ್ಸಿ ಫೋನ್‌ಗಳು
ಸ್ಯಾಮ್‌ಸಂಗ್ ಗ್ಯಾಲ್ಯಾಕ್ಸಿ M30s-(4GB + 64GB) ವೇರಿಯಂಟ್ 13,999ರೂ. ಪ್ರೈಸ್ ಹೊಂದಿದ್ದು, ಗ್ಯಾಲ್ಯಾಕ್ಸಿ M30s-(6GB + 128GB) ವೇರಿಯಂಟ್ 16,999ರೂ.ಗಳ ಬೆಲೆಯಲ್ಲಿದೆ. ಆದರೆ ಅಮೆಜಾನ್ ಸೇಲ್ ಮೇಳದಲ್ಲಿ ಆಕ್ಸಿಸ್ ಮತ್ತು ಸಿಟಿ ಬ್ಯಾಂಕ್‌ಗಳ ಕಾರ್ಡ್ ಬಳಸಿ ಖರೀದಿಸಿದರೇ ಶೇ.10% ಇನ್‌ಸ್ಟಂಟ್ ಡಿಸ್ಕೌಂಟ್ ಲಭ್ಯ. ಹಾಗೆಯೇ ಗ್ಯಾಲ್ಯಾಕ್ಸಿ A70s-(8GB + 128GB) ವೇರಿಯಂಟ್ ಸ್ಮಾರ್ಟ್‌ಫೋನ್ 30,999ರೂ.ಗಳ ಬೆಲೆಯಲ್ಲಿದೆ. ಆದರೆ ಫ್ಲಿಪ್‌ಕಾರ್ಟ್ ಸೇಲ್‌ನಲ್ಲಿ ಗ್ರಾಹಕರು ಎಸ್‌ಬಿಐ ಬ್ಯಾಂಕ್ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಬಳಸಿ ಖರೀದಿಸಿದರೇ 2,000ರೂ ಇನ್‌ಸ್ಟಂಟ್ ಡಿಸ್ಕೌಂಟ್ ದೊರೆಯುತ್ತದೆ.

ಸ್ಮಾರ್ಟ್‌ವಾಚ್ ಆಫರ್
ಹುವಾವೆ ಬ್ಯಾಂಡ್ 5 ಡಿವೈಸ್ ಬೆಲೆಯು 2,299ರೂ.ಆಗಿದೆ ಹಾಗೆಯೇ ಶಿಯೋಮಿ ಮಿ ಬ್ಯಾಂಡ್ 4 ಡಿವೈಸ್ ಸಹ 2,299ರೂ.ಬೆಲೆಯಲ್ಲಿದೆ. ಆದರೆ ಅಮೆಜಾನ್ ಸೇಲ್ ಮೇಳದಲ್ಲಿ ಆಕ್ಸಿಸ್ ಮತ್ತು ಸಿಟಿ ಬ್ಯಾಂಕ್‌ಗಳ ಕಾರ್ಡ್ ಬಳಸಿದರೇ ಶೇ.10 ಇನ್‌ಸ್ಟಂಟ್ ಡಿಸ್ಕೌಂಟ್ ಸಿಗಲಿದೆ. ಹಾಗೆಯೇ 10,999ರೂ.ಬೆಲೆಯ ಹುವಾಮಿ ಅಮಾಜಿಫಿಟ್ ಜಿಟಿಆರ್ ಡಿವೈಸ್ (Huami Amazfit GTR 47mm) ಫ್ಲಿಪ್‌ಕಾರ್ಟ್‌ನಲ್ಲಿ ಎಸ್‌ಬಿಐ ಬ್ಯಾಂಕ್ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಬಳಸಿ 2,000ರೂ ಇನ್‌ಸ್ಟಂಟ್ ಡಿಸ್ಕೌಂಟ್ ಪಡೆಯಬಹುದು.


Click it and Unblock the Notifications








