Home
ಸುದ್ದಿಜಾಲ

ಬಜೆಟ್‌ ಬೆಲೆಯಲ್ಲಿ ಬಿಗ್ ಸ್ಕ್ರೀನ್‌ ಸ್ಮಾರ್ಟ್‌ಟಿವಿಗಳ ಬೆಸ್ಟ್‌ ಆಯ್ಕೆ ಇಲ್ಲಿವೆ!

ಟಿವಿ ವಲಯದಲ್ಲಿ ಸಾಕಷ್ಟು ಬದಲಾವಣೆ ಆಗಿದ್ದು, ಪ್ರಸ್ತುತ ಸ್ಮಾರ್ಟ್‌ಟಿವಿಗಳು ಚಾಲ್ತಿಯಲ್ಲಿವೆ. ಇಂದಿನ ದಿನಗಳಲ್ಲಿ ಪ್ರತಿಯೊಬ್ಬರ ಮನೆಯಲ್ಲಿಯೂ ಸ್ಮಾರ್ಟ್‌ಟಿವಿ ಸಾಮಾನ್ಯ ಡಿವೈಸ್‌ ಆಗಿ ಗುರುತಿಸಿಕೊಂಡಿದೆ. ಗ್ರಾಹಕರ ಅಗತ್ಯತೆಗೆ ಅನುಗುಣವಾಗಿ ಭಿನ್ನ ಗಾತ್ರಗಳ ಆಯ್ಕೆಗಳಲ್ಲಿ ಸ್ಮಾರ್ಟ್‌ಟಿವಿಗಳು ಲಭ್ಯ ಇವೆ. ಆದರೆ ಬಹುತೇಕರು ಟಿವಿ ಖರೀದಿಸುವಾಗ ಸ್ವಲ್ಪ ಬಿಗ್ ಸ್ಕ್ರೀನ್‌ನತ್ತ ಮನಸು ಮಾಡುತ್ತಾರೆ. ಈ ನಿಟ್ಟಿನಲ್ಲಿ 50 ಇಂಚಿನ ಸ್ಮಾರ್ಟ್‌ಟಿವಿಗಳ ಅಬ್ಬರ ಜೋರಾಗಿದೆ ಎಂದು ಹೇಳಬಹುದು.

ಪ್ರಮುಖ ಕಂಪನಿ

ಹೌದು, ಸದ್ಯ ಮಾರುಕಟ್ಟೆಯಲ್ಲಿ ಪ್ರಮುಖ ಕಂಪನಿಗಳ ಜೊತೆಗೆ ನೂತನ ಕಂಪನಿಗಳ ಸ್ಮಾರ್ಟ್‌ ಟಿವಿಗಳು ಲಭ್ಯ ಇವೆ. ಸ್ಮಾರ್ಟ್‌ ಟಿವಿಗಳು ಭಿನ್ನ ಗಾತ್ರಗಳ ಆಯ್ಕೆಯೊಂದಿಗೆ ಭಿನ್ನ ಸೌಲಭ್ಯಗಳನ್ನು ಒಳಗೊಂಡಿವೆ. ಹಾಗೆಯೇ ವೈಫೈ, ಬ್ಲೂಟೂತ್, ಯುಎಸ್‌ಬಿ ಪೂರ್ಟ್‌, ಹೆಚ್‌ಡಿಎಮ್‌ಐ, ಡಾಲ್ಬಿ ಸೌಂಡ್, ಹೆಚ್‌ಡಿ ಸೌಲಭ್ಯಗಳು ಸ್ಮಾರ್ಟ್‌ಟಿವಿಯಲ್ಲಿ ಕಾಮನ್ ಆಗಿವೆ. ಇನ್ನು ಬಜೆಟ್‌ ಬೆಲೆಯಲ್ಲಿ ಬಿಗ್ ಸ್ಕ್ರೀನ್ ಸೌಲಭ್ಯದ ಸ್ಮಾರ್ಟ್‌ಟಿವಿಗಳಿಗೆ ಬೇಡಿಕೆ ಅಧಿಕವಾಗಿವೆ. ಹೀಗಾಗಿ ಈ ಲೇಖನದಲ್ಲಿ ಬಜೆಟ್‌ ಬೆಲೆಯಲ್ಲಿ (26000ರೂ. ಒಳಗೆ) ಲಭ್ಯ ಇರುವ 50 ಇಂಚು ಸ್ಕ್ರೀನಿನ ಐದು ಸ್ಮಾರ್ಟ್‌ಟಿವಿಗಳ ಬಗ್ಗೆ ತಿಳಿಸಲಾಗಿದೆ ಮುಂದೆ ಓದಿರಿ.

ಕೊಡಾಕ್ 50 ಇಂಚಿನ LED 4K TV

ಕೊಡಾಕ್ 50 ಇಂಚಿನ LED 4K TV

ಕೊಡಾಕ್ ಕಂಪನಿಯ (50UHDXSMARDT) 50-ಇಂಚಿನ ಎಲ್ಇಡಿ 4k ಟಿವಿಯು 3840 Xx 2160p ಸಾಮರ್ಥ್ಯದ ಅಲ್ಟ್ರಾ ಹೆಚ್‌ಡಿ ವೈಲ್ಡ್‌ ಸ್ಕ್ರೀನ್‌ ರಚನೆಯನ್ನು ಪಡೆದಿದೆ. ಈ ಟಿವಿಯು ಬಿಲ್ಟ್‌ ಇನ್ ವೈ-ಫೈ ಸೌಲಭ್ಯ ಪಡೆದಿದ್ದು, ಆನ್‌ಲೈನ್‌ನಲ್ಲಿ ಚಲನಚಿತ್ರಗಳನ್ನು ಬ್ರೌಸ್ ಮಾಡಲು, ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡಲು ಬಳಕೆದಾರರಿಗೆ ಅನುವು ಮಾಡಿಕೊಡುತ್ತದೆ.

Cooaa 50 ಇಂಚಿನ LED 4K TV

Cooaa 50 ಇಂಚಿನ LED 4K TV

Cooaa 50S3N (ಕೂವಾ) 50 ಇಂಚಿನ ಎಲ್ಇಡಿ 4k ಟಿವಿ ರೂ. ಭಾರತದಲ್ಲಿ 26,000 ರೂ. ಬೆಲೆಯನ್ನು ಹೊಂದಿದೆ. ಈ ಟಿವಿಯು ಲಿನಕ್ಸ್ ಆಧಾರಿತ ಸ್ಮಾರ್ಟ್ ಟಿವಿ ಬ್ರಾಂಡ್‌ನ ಕಸ್ಟಮ್ ಇಂಟರ್ಫೇಸ್ ಮತ್ತು ಅಪ್ಲಿಕೇಶನ್‌ಗಳೊಂದಿಗೆ ಆವರಿಸಿದೆ. ಇದರ ಸುಧಾರಿತ ಆಡಿಯೊ ಫಾರ್ಮ್ಯಾಟಿಂಗ್ ಮತ್ತು ಸಿಗ್ನಲ್ ಪ್ರಕ್ರಿಯೆಗೆ ಡಾಲ್ಬಿ ಆಡಿಯೊದೊಂದಿಗೆ ಸಕ್ರಿಯಗೊಳಿಸಲಾದ 20W ಸ್ಪೀಕರ್‌ಗಳೊಂದಿಗೆ ಇದು ರವಾನಿಸುತ್ತದೆ.

Adsun 50 ಇಂಚಿನ LED 4K TV

Adsun 50 ಇಂಚಿನ LED 4K TV

Adsun 50AESL1 (ಆಡ್ಸನ್) 50 ಇಂಚಿನ ಎಲ್ಇಡಿ 4k ಟಿವಿಯು ಸೆಟ್-ಟಾಪ್ ಬಾಕ್ಸ್ ಅನ್ನು ಸಂಪರ್ಕಿಸಲು ಎರಡು ಹೆಚ್‌ಡಿಎಮ್‌ಐ ಪೋರ್ಟ್‌ಗಳನ್ನು ಒಳಗೊಂಡಿದೆ. ಬ್ಲೂ ರೇ ಪ್ಲೇಯರ್‌ಗಳು, ಗೇಮಿಂಗ್ ಕನ್ಸೋಲ್, ಹಾರ್ಡ್ ಡ್ರೈವ್‌ಗಳು ಮತ್ತು ಇತರ ಯುಎಸ್‌ಬಿ ಸಾಧನಗಳನ್ನು ಸಂಪರ್ಕಿಸಲು ಎರಡು ಯುಎಸ್‌ಬಿ ಪೋರ್ಟ್‌ಗಳು ಮತ್ತು ಲ್ಯಾಪ್‌ಟಾಪ್ ಅನ್ನು ಸಂಪರ್ಕಿಸಲು ಒಂದು ವಿಜಿಎ ಪೋರ್ಟ್ ಅನ್ನು ಹೊಂದಿದೆ. ಈ ಸ್ಮಾರ್ಟ್ ಟಿವಿಯ ಬೆಲೆಯು 26,000ರೂ. ಆಗಿದೆ.

ಥಾಮ್ಸನ್ 50 ಇಂಚಿನ LED 4K TV

ಥಾಮ್ಸನ್ 50 ಇಂಚಿನ LED 4K TV

ಜನಪ್ರಿಯ ಥಾಮ್ಸನ್ ಸಂಸ್ಥೆಯ 50 ಇಂಚಿನ ಡಿಸ್‌ಪ್ಲೇ ಹೊಂದಿರುವ ಅತ್ಯುತ್ತಮ ಸ್ಮಾರ್ಟ್ ಟಿವಿಯ ಲಿಸ್ಟ್‌ನಲ್ಲಿ ಥಾಮ್ಸನ್ 50TH1000 50-ಇಂಚಿನ ಎಲ್ಇಡಿ 4k ಗುರುತಿಸಿಕೊಂಡಿದೆ. ಈ ಟಿವಿಯು 4k ಸಾಮರ್ಥ್ಯವನ್ನು ಪಡೆದಿದ್ದು, ಬಳಕೆದಾರರಿಗೆ ಹೆಚ್ಚು ನೈಜ್ಯ ದೃಶ್ಯಗಳ ವೀಕ್ಷಣೆಗೆ ಅನುವು ಮಾಡಿಕೊಡುತ್ತದೆ. ಇನ್ನು ಈ ಸ್ಮಾರ್ಟ್‌ಟಿವಿಯ ಬೆಲೆಯು 26,000ರೂ. ಆಗಿದೆ.

ಕೊಡಾಕ್ 50 ಇಂಚಿನ ಟಿವಿ

ಕೊಡಾಕ್ 50 ಇಂಚಿನ ಟಿವಿ

50 ಇಂಚಿನ ರಚನೆಯಲ್ಲಿ ಕೊಡಾಕ್ ಕಂಪನಿ ಮತ್ತೊಂದು ಟಿವಿಯು ಇದಾಗಿದ್ದು (ಮಾಡೆಲ್ ನಂಬರ್- ಕೊಡಾಕ್ 50FHDXSMART) ಈ ಟಿವಿಯು 50 ಇಂಚಿನ ಎಲ್‌ಇಡಿ ಫುಲ್ ಹೆಚ್‌ಡಿ ಸ್ಕ್ರೀನ್ ಹೊಂದಿದೆ. ಸ್ಮಾರ್ಟ್‌ಫೋನ್‌ನಿಂದ ವಾಯರ್‌ಲೆಸ್‌ ಮೀಡಿಯಾ ಪ್ಲೇಬ್ಯಾಕ್, ಬಿಲ್ಟ್‌ ಇನ್ ವೈ-ಫೈ ಮತ್ತು ಇನ್ನಿತರ ಸ್ಮಾರ್ಟ್ ಫೀಚರ್ಸ್‌ಗಳನ್ನು ಈ ಟಿವಿಯು ಒಳಗೊಂಡಿದೆ. ಇದರ ಬೆಲೆಯು 26,000ರೂ.ಗಳು ಆಗಿದೆ.

Best Mobiles in India

English summary
Best 50-inch screen smart TVs to buy in India under Rs. 26,000.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+