AI Camera: ಎಐ ಕ್ಯಾಮೆರಾ ಆಯ್ಕೆ ಇರುವ ಅತ್ಯುತ್ತಮ ಸ್ಮಾರ್ಟ್‌ಫೋನ್‌ಗಳಿವು! ಬೆಲೆ ಎಷ್ಟು ?
ಈಗಂತೂ ಎಲ್ಲಾ ಕಡೆ ಎಐ (AI) ವ್ಯಾಪಿಸಿಕೊಂಡಿದೆ. ಈ ನಡುವೆ ಸ್ಮಾರ್ಟ್‌ಫೋನ್‌ಗಳಲ್ಲೂ ಸಹ ಈ ಸೌಲಭ್ಯ ಸಿಗುತ್ತಿದ್ದು, ಈ ಮೂಲಕ ಬಳಕೆದಾರರು ವಿಶೇಷವಾದ ಅನುಭವ ಪಡೆದುಕೊಳ್ಳುತ್ತಿದ್ದಾರೆ. ಈ ನಡುವೆ ಎಐ ಆಧಾರಿತ ಕ್ಯಾಮೆರಾ ಆಯ್ಕೆ ಇರುವ ಫೋನ್‌ಗಳಿಗೆ ಬಹಳ ಬೇಡಿಕೆ ಇದೆ.
ಹೌದು, ಭಾರತದಲ್ಲಿ ಸಾಕಷ್ಟು ಸ್ಮಾರ್ಟ್‌ಫೋನ್‌ಗಳನ್ನು (Smartphones) ಕಾಣಬಹುದು. ಆದರೆ ಕೆಲವು ಫೋನ್‌ಗಳು ಮಾತ್ರ ಭಿನ್ನ ಫೀಚರ್ಸ್ ಆಯ್ಕೆಯ ಮೂಲಕ ಜನರನ್ನು ಸೆಳೆಯುತ್ತಿವೆ ಅವುಗಳಲ್ಲಿ ಪ್ರಮುಖವಾದವು ಎಂದರೆ ಎಐ ಆಧಾರಿತ ಕ್ಯಾಮೆರಾ ಸೆನ್ಸರ್ ಇರುವ ಫೋನ್‌ಗಳು, ಈ ವಿಭಾಗದಲ್ಲಿ ಶಿಯೋಮಿ, ರಿಯಲ್‌ಮಿ ಹಾಗೂ ಲಾವಾ ಸೇರಿದಂತೆ ಅನೇಕ ಕಂಪೆನಿಯ ಫೋನ್‌ಗಳನ್ನು ಕಾಣಬಹುದಾಗಿದೆ. ಹಾಗಿದ್ರೆ, ತಡಯಾಕೆ ಬನ್ನಿ ಯಾವೆಲ್ಲಾ ಫೋನ್‌ಗಳು ಎಐ ಕ್ಯಾಮೆರಾ ಫೀಚರ್ಸ್ ಹೊಂದಿವೆ ನೋಡೋಣ.

ಶಿಯೋಮಿ 14 : ಈ ಸ್ಮಾರ್ಟ್‌ಫೋನ್ (Xiaomi 14) ಅನ್ನು ಇತ್ತೀಚೆಗಷ್ಟೇ ಅನಾವರಣ ಮಾಡಲಾಗಿದೆ. ಈ ಫೋನ್ ನಿಮಗೆ 69,999 ರೂ.ಗಳ ಬೆಲೆಗೆ ಲಭ್ಯ ಇದೆ. ಇನ್ನು ಆಕ್ಟಾ ಕೋರ್ (3.3 GHz, ಸಿಂಗಲ್ ಕೋರ್ + 3.2 GHz, ಪೆಂಟಾ ಕೋರ್ + 2.3 GHz, ಡ್ಯುಯಲ್ ಕೋರ್) ಸ್ನಾಪ್‌ಡ್ರಾಗನ್ 8 ಜನ್ 3 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, 50 MP + 50 MP + 50 MP ಟ್ರಿಪಲ್ ರಿಯರ್ ಪ್ರಾಥಮಿಕ ಕ್ಯಾಮೆರಾ ಹಾಗೂ 32 MP ಸೆಲ್ಫಿ ಕ್ಯಾಮರಾ ಆಯ್ಕೆ ಪಡೆದುಕೊಂಡಿದೆ.
ರಿಯಲ್‌ಮಿ 12 ಪ್ಲಸ್: ಈ ಫೋನ್ (Realme 12 Plus) ಅನ್ನು ನೀವು 19,599ರೂ.ಗಳಿಗೆ ಕೊಂಡುಕೊಳ್ಳಬಹುದಾಗಿದೆ. ಇದು ಆಕ್ಟಾ ಕೋರ್ (2.6 GHz, ಡ್ಯುಯಲ್ ಕೋರ್ + 2 GHz, ಹೆಕ್ಸಾ ಕೋರ್) ಮೀಡಿಯಾ ಟೆಕ್ ಡೈಮೆನ್ಸಿಟಿ 7050 ಪ್ರೊಸೆರ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, 50 MP + 8 MP + 2 MP ಟ್ರಿಪಲ್ ರಿಯರ್ ಕ್ಯಾಮೆರಾ ಹಾಗೂ 16 MP ಸೆಲ್ಫಿ ಕ್ಯಾಮೆರಾದೊಂದಿಗೆ ಉತ್ತಮ ಫೋನ್ ಎನಿಸಿಕೊಂಡಿದೆ.

ಲಾವಾ ಬ್ಲೇಜ್ ಕರ್ವ್ 5G : ಈ ಫೋನ್ (Lava Blaze Curve 5G) ನಿಮಗೆ 17,999 ರೂ.ಗ ಬೆಲೆಗೆ ಲಭ್ಯ ಇದೆ. ಇನ್ನು ಈ ಫೋನ್ ಆಕ್ಟಾ ಕೋರ್ (2.6 GHz, ಡ್ಯುಯಲ್ ಕೋರ್ + 2 GHz, ಹೆಕ್ಸಾ ಕೋರ್) ಮೀಡಿಯಾ ಟೆಕ್ ಡೈಮೆನ್ಸಿಟಿ 7050 ಪ್ರೊಸೆಸರ್‌ನಲ್ಲಿ ಕೆಲಸ ಮಾಡಲಿದ್ದು, 64 MP + 8 MP + 2 MP ನ ಟ್ರಿಪಲ್ ರಿಯರ್ ಕ್ಯಾಮೆರಾ, 32 MP ಸೆಲ್ಫಿ ಕ್ಯಾಮರಾ ಆಯ್ಕೆ ಪಡೆದುಕೊಂಡಿದೆ. ಹಾಗೆಯೇ 5000 mAh ಸಾಮರ್ಥ್ಯದ ಬ್ಯಾಟರಿಯನ್ನು ಈ ಫೋನ್‌ನಲ್ಲಿ ಕಾಣಬಹುದಾಗಿದೆ.
ಶಿಯೋಮಿ ರೆಡ್ಮಿ ನೋಟ್ 13 ಪ್ರೊ: ಈ ಫೋನ್ (Xiaomi Redmi Note 13 Pro) ಅನ್ನು ನೀವು 25,999 ರೂ.ಗಳ ಬೆಲೆಗೆ ಖರೀದಿ ಮಾಡಬಹುದಾಗಿದೆ. ಹಾಗೆಯೇ ಇದು ಆಕ್ಟಾ ಕೋರ್ (2.4 GHz, ಕ್ವಾಡ್ ಕೋರ್ + 1.95 GHz, ಕ್ವಾಡ್ ಕೋರ್) ಸ್ನಾಪ್‌ಡ್ರಾಗನ್ 7S ಜನ್ 2 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, 200 MP + 8 MP + 2 MP ಟ್ರಿಪಲ್ ರಿಯರ್ ಕ್ಯಾಮೆರಾ, 16 MP ಸೆಲ್ಫಿ ಕ್ಯಾಮೆರಾ ಆಯ್ಕೆ ಮೂಲಕ ಉತ್ತಮ ಫೋನ್ ಎನಿಸಿಕೊಂಡಿದೆ.

ರಿಯಲ್‌ಮಿ 12 ಪ್ರೊ ಪ್ಲಸ್: ಈ ಫೋನ್ (Realme 12 Pro Plus) ನಿಮಗೆ 28,497 ರೂ.ಗಳ ಬೆಲೆಗೆ ಲಭ್ಯ ಇದೆ. ಜೊತೆಗೆ ಈ ಫೋನ್ ಆಕ್ಟಾ ಕೋರ್ (2.4 GHz, ಕ್ವಾಡ್ ಕೋರ್ + 1.95 GHz, ಕ್ವಾಡ್ ಕೋರ್) ಸ್ನಾಪ್‌ಡ್ರಾಗನ್ 7s ಜನ್ 2 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, 50 MP + 8 MP + 64 MP ಟ್ರಿಪಲ್ ರಿಯರ್ ಕ್ಯಾಮೆರಾ ಹಾಗೂ 32 MP ಸೆಲ್ಫಿ ಕ್ಯಾಮರಾ ಆಯ್ಕೆ ಪಡೆದುಕೊಂಡಿದೆ. ಜೊತೆಗೆ ಈ ಫೋನ್ 5000 mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದಿದ್ದು, ಸೂಪರ್ ವೂಕ್ ಚಾರ್ಜಿಂಗ್ ಬೆಂಬಲ ಹೊಂದಿದೆ.


Click it and Unblock the Notifications








