ಟಿಕ್‌ಟಾಕ್‌ಗೆ ಬದಲಿಯಾಗಿ ಭಾರತದಲ್ಲಿ ಲಭ್ಯವಿರುವ ಐದು ಆಪ್‌ಗಳು!

|

ರಾಷ್ಟ್ರದ ಸಾರ್ವಭೌಮತ್ವ ಮತ್ತು ಸುರಕ್ಷತೆಯ ಹಿತದೃಷ್ಟಿಯಿಂದ ಭಾರತ ಸರ್ಕಾರ ಚೀನಾ ಮೂಲದ 59 ಆಪ್‌ಗಳನ್ನ ಬ್ಯಾನ್‌ ಮಾಡಿದೆ. ಸದ್ಯ ಕೇಂದ್ರ ಸರ್ಕಾರ ಬ್ಯಾನ್‌ ಮಾಡಿರುವ ಚೀನಾ ಆಪ್‌ಗಳು ಭಾರತದಲ್ಲಿ ಸಾಕಷ್ಟು ಜನಪ್ರಿಯತೆಯನ್ನ ಪಡೆದುಕೊಂಡಿದ್ದವು. ಅದರಲ್ಲೂ ಭಾರತದಲ್ಲಿ ಟಿಕ್‌ಟಾಕ್‌ ಆಪ್‌ ಸಾಕಷ್ಟು ಜನಪ್ರಿಯತೆಯನ್ನ ಪಡೆದುಕೊಂಡಿತಲ್ಲದೆ, ಜಾಗತಿಕವಾಗಿ ಅತಿ ಹೆಚ್ಚು ಬಳಕೆದಾರರನ್ನು ಹೊಂದಿತ್ತು. ಆದರೆ ಇದೀಗ ಟಿಕ್‌ಟಾಕ್‌ ಆಪ್‌ ಬ್ಯಾನ್‌ ಮಾಡಲಾಗಿದೆ. ಹಾಗಂತ ಟಿಕ್‌ಟಾಕ್‌ ಇಲ್ಲ ಅಂತಾ ನಿವು ಕೋರಗುವುದು ಬೇಡ, ಅದಕ್ಕೆ ಬದಲಿಯಾಗಿ ಟಿಕ್‌ಟಾಕ್‌ ಮಾದರಿಯಲ್ಲಿಯೇ ಕಾರ್ಯನಿರ್ವಹಿಸುವ ಬೇರೆ ಆಪ್‌ಗಳು ಕೂಡ ಗೂಗಲ್‌ಪ್ಲೇ ಸ್ಟೋರ್‌ ನಲ್ಲಿ ಲಭ್ಯವಿವೆ.

ಟಿಕ್‌ಟಾಕ್

ಹೌದು, ಟಿಕ್‌ಟಾಕ್ ಮತ್ತು ಶೇರ್‌ಇಟ್‌ ನಂತಹ ಕೆಲವು ಜನಪ್ರಿಯ ಅಪ್ಲಿಕೇಶನ್‌ಗಳನ್ನು ಒಳಗೊಂಡಂತೆ ಒಟ್ಟು 59 ಅಪ್ಲಿಕೇಶನ್‌ಗಳನ್ನು ಭಾರತ ಸರ್ಕಾರ ಅಧಿಕೃತವಾಗಿ ನಿಷೇಧಿಸಿದೆ. ಈ ಅಪ್ಲಿಕೇಶನ್‌ಗಳು ಸದ್ಯ ಭಾರತದಲ್ಲಿನ ಗೂಗಲ್ ಪ್ಲೇ ಸ್ಟೋರ್ ಮತ್ತು ಆಪಲ್ ಆಪ್ ಸ್ಟೋರ್‌ನಿಂದ ಕಣ್ಮರೆಯಾಗಿವೆ. ಹಾಗಂತ ಯೋಚಿಸುವ ಅಗತ್ಯ ಇಲ್ಲ ಟಿಕ್‌ಟಾಕ್‌ ಬದಲಿಗೆ ಟಿಕ್‌ಟಾಕ್‌ ಮಾದರಿಯ ಆಪ್‌ಗಳು ಪ್ಲೇ ಸ್ಟೋರ್‌ನಲ್ಲಿ ಲಭ್ಯವಿವೆ. ಅಷ್ಟಕ್ಕೂ ಟಿಕ್‌ಟಾಕ್‌ಗೆ ಬದಲಿಯಾಗಿ ನೀವು ಬಳಸಬಹುದಾದ ಇತರೆ ಆಪ್‌ಗಳು ಯಾವುವು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

YoPlay

YoPlay

ಯೋಪ್ಲೇ ಅಪ್ಲಿಕೇಶನ್‌ ಟಿಕ್‌ಟಾಕ್‌ ಆಪ್‌ಗೆ ಬದಲಿ ಆಗಿ ಲಬ್ಯವಾಗುವ ಉತ್ತಮ ಆಪ್‌ಗಳಲ್ಲಿ ಒಂದಾಗಿದೆ. ಈ ಆಪ್‌ನಲ್ಲಿ 15 ಸೆಕೆಂಡುಗಳ ವೀಡಿಯೊಗಳನ್ನು ಹೋಸ್ಟ್ ಮಾಡಬಹುದಾಗಿದೆ. ಇನ್ನು ಈ ಪ್ಲೇ ಸ್ಟೋರ್‌ನಲ್ಲಿ ಈ ಆಪ್‌ ಒಟ್ಟು 10,000ಕ್ಕೂ ಅಧಿಕ ಡೌನ್‌ಲೋಡ್ ಅನ್ನು ಹೊಂದಿದೆ ಮತ್ತು 4.3 ರೇಟಿಂಗ್‌ ಅನ್ನು ಪಡೆದುಕೊಂಡಿದೆ. ಇನ್ನು ಈ ಅಪ್ಲಿಕೇಶನ್ ಸುಮಾರು 83ಎಂಬಿ ಗಾತ್ರವನ್ನ ಹೊಂದಿದ್ದು, ಆಂಡ್ರಾಯ್ಡ್ 4.4 ಅಥವಾ ಇತ್ತೀಚಿನ ಓಎಸ್‌ ಬೆಂಬಲಿತ ಯಾವುದೇ ಆಂಡ್ರಾಯ್ಡ್ ಫೋನ್‌ನಲ್ಲಿ ಡೌನ್‌ಲೋಡ್ ಮಾಡಬಹುದಾಗಿದೆ. ಇದರಲ್ಲಿಯೂ ಸಹ ಟಿಕ್‌ಟಾಕ್‌ನಂತಯೇ ನಿಮ್ಮ ವೀಡಿಯೋಗಳನ್ನ ನೀವು ಕ್ರಿಯೆಟ್‌ ಮಾಡಬಹುದಾಗಿದೆ.

Vskit

Vskit

ವಿಎಸ್‌ಕಿಟ್ ಒಂದು ಶಾರ್ಟ್‌ ವಿಡಿಯೋ ಅಪ್ಲಿಕೇಶನ್‌ ಆಗಿದ್ದು, ಟಿಕ್‌ಟಾಕ್‌ಗೆ ಬದಲಿಯಾಗಿ ಬಳಸಬಹುದಾದ ಮತ್ತೊಂದು ಆಪ್‌ ಆಗಿದೆ. ಇನ್ನು ಈ ಆಪ್‌ ಕೂಡ ಗೂಗಲ್‌ಪ್ಲೇ ಸ್ಟೋರ್‌ನಲ್ಲಿ 4.3 ರೇಟಿಂಗ್‌ ಅನ್ನು ಹೊಂದಿದ್ದು, ಒಂದು ಕೋಟಿಗೂ ಅಧಿಕ ಡೌನ್‌ಲೋಡ್‌ಗಳನ್ನು ಹೊಂದಿದೆ.

Roposo

Roposo

ಇನ್ನು ರೊಪೊಸೊ ಆಪ್‌ ಕೂಡ ಟಿಕ್‌ಟಾಕ್‌ಗೆ ಬದಲಿಯಾಗಿ ಲಬ್ಯವಿರುವ ಉತ್ತಮ ಆಪ್‌ಗಳಲ್ಲಿ ಒಂದಾಗಿದೆ. ಇನ್ನು ಈ ಆಪ್‌ ಪ್ಲೇ ಸ್ಟೋರ್‌ನಲ್ಲಿ ಐದು ಕೋಟಿಗೂ ಅಧಿಕ ಹೆಚ್ಚು ಡೌನ್‌ಲೋಡ್‌ಗಳನ್ನು ಹೊಂದಿದ್ದು, ಟಿಕ್‌ಟಾಕ್‌ಗೆ ಸೆಡ್ಡು ಹೊಡೆಯುವ ಭಾರತೀಯ ನಿರ್ಮಿತ ಆಪ್‌ಗಳಲ್ಲಿ ಇದು ಕೂಡ ಒಂದಾಗಿದೆ. ಇನ್ನು ಈ ಅಪ್ಲಿಕೇಶನ್‌ನಲ್ಲಿ ಹೆಚ್ಚಿನ ವಿಷಯ ಆಯ್ಕೆಗಳ ಬಗ್ಗೆ ಅವಕಾಶವಿದ್ದು, ಈ ಅಪ್ಲಿಕೇಶನ್ ಸಾಕಷ್ಟು ಆಯ್ಕೆಗಳನ್ನು ನೀಡುತ್ತದೆ. ಅಲ್ಲದೆ ಬಳಕೆದಾರರು ನೇರವಾಗಿ ಅಪ್ಲಿಕೇಶನ್‌ನಲ್ಲಿ ವೀಡಿಯೊಗಳನ್ನು ಎಡಿಟ್‌ ಮಾಡಲು ಮತ್ತು ಅವುಗಳನ್ನು ಸುಲಭವಾಗಿ ಅಪ್‌ಲೋಡ್ ಮಾಡಲು ಅವಕಾಶವನ್ನು ಸಹ ನಿಡುತ್ತದೆ.

Rizzle

Rizzle

rizzle ಆಪ್‌ ಕೂಡ ಟಿಕ್‌ಟಾಕ್ ಆಪ್‌ಗೆ ಪರ್ಯಾಯ ಆಪ್‌ ಆಗಿದೆ. ಇದು ಸಹ ಬಳಕೆದಾರರಿಗೆ ಹೊಸ ಜನರನ್ನು ಭೇಟಿ ಮಾಡಲು ಅನುವು ಮಾಡಿಕೊಡುತ್ತದೆ. ಅಲ್ಲದೆ ಬಳಕೆದಾರರು ಇತರರ ಜೊತೆಗೆ ಚಾಟ್‌ ಹಾಗೂ ಸಂವಹನ ನಡೆಸಲು ಅನುವು ಮಾಡಿಕೊಡುತ್ತದೆ. ಇನ್ನು ಇದು ಪ್ಲೇ ಸ್ಟೋರ್‌ನಲ್ಲಿ 4.8 ಸ್ಟಾರ್‌ ರೇಟಿಂಗ್ ಹೊಂದಿದ್ದು, 10 ಲಕ್ಷಕ್ಕೂ ಹೆಚ್ಚು ಡೌನ್‌ಲೋಡ್‌ಗಳನ್ನು ಹೊಂದಿದೆ.

Brilla

Brilla

ಬ್ರಿಲ್ಲಾ ಅಪ್ಲಿಕೇಶನ್‌ ಇದು ಒಂದು ಶಾರ್ಟ್‌ ವೀಡಿಯೊ ಅಪ್ಲಿಕೇಶನ್‌ ಆಗಿದ್ದು, ಇದು ವಿಭಿನ್ನ ವರ್ಗಗಳಿಂದ ವಿಂಗಡಿಸಲಾದ ವೀಡಿಯೊ ಫೀಚರ್ಸ್‌ಗಳನ್ನು ಒಳಗೊಂಡಿದೆ. ಇದಲ್ಲದೆ ವೀಡಿಯೊಗಳನ್ನು ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ವಾಟ್ಸಾಪ್‌ನಂತಹ ವಿವಿಧ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ಹಂಚಿಕೊಳ್ಳಲು ಇದರಲ್ಲಿ ಅವಕಾಶವನ್ನು ಸಹ ನೀಡಲಾಗಿದೆ.

Best Mobiles in India

Read more about:
English summary
The government of India has officially banned a total of 59 apps, including some of the most popular apps like TikTok and Shareit.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X