Home
ಸುದ್ದಿಜಾಲ

ಶಿಯೋಮಿಯ ರೆಡ್ಮಿ ಫೋನ್‌ ಖರೀದಿಸಲು ಇದುವೇ ಬೆಸ್ಟ್‌ ಟೈಮ್!

ದೇಶಿಯ ಮೊಬೈಲ್ ಮಾರುಕಟ್ಟೆಗೆ ನೂತನ ಮೊಬೈಲ್ ಕಂಪನಿಗಳು ಎಂಟ್ರಿ ಕೊಡುತ್ತಲೆ ಇವೆ. ಅವುಗಳಲ್ಲಿ ಸದ್ಯ ಚೀನಾ ಮೂಲದ ಶಿಯೋಮಿ ಸಂಸ್ಥೆಯು ಬಜೆಟ್ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಿ ಗಟ್ಟಿ ಸ್ಥಾನ ಪಡೆದಿದೆ. ಶಿಯೋಮಿ ಸ್ಮಾರ್ಟ್‌ಫೋನ್ ಖರೀದಿಸಬೇಕು ಎಂದುಕೊಂಡಿರುವ ಗ್ರಾಹಕರಿಗೆ ಇದೀಗ ಭರ್ಜರಿ ಆಫರ್ ಘೋಷಿಸಿದ್ದು, ನೂತನ ಸ್ಮಾರ್ಟ್‌ಫೋನ್‌ಗಳು ರಿಯಾಯಿತಿ ದರದಲ್ಲಿ ಲಭ್ಯ ಇವೆ.

ಮಿ ಸೂಪರ್ ಸೇಲ್

ಹೌದು, ಶಿಯೋಮಿ ಕಂಪನಿಯು ಈಗ ಮಿ ಸೂಪರ್ ಸೇಲ್ ಮೇಳವನ್ನು ಆಯೋಜಿಸಿದೆ. ಈ ಸೇಲ್ ಮೇಳವು ಇದೇ ಜನೆವರಿ 27ರಿಂದ ಆರಂಭವಾಗಿದ್ದು, ಇದೇ ಜ.31ರ ವರೆಗೂ ಚಾಲ್ತಿ ಇರಲಿದೆ. ಇನ್ನು ಈ ಸೇಲ್ ಮೇಳದಲ್ಲಿ ಶಿಯೋಮಿಯ ಜನಪ್ರಿಯ ಸ್ಮಾರ್ಟ್‌ಫೋನ್‌ಗಳ ಮೇಲೆ ಭರ್ಜರಿ ಡಿಸ್ಕೌಂಟ್ ನೀಡಲಾಗಿದ್ದು, ಆಕರ್ಷಕ ಇಎಮ್‌ಐ ಆಯ್ಕೆಗಳು ಸಹ ಲಭ್ಯವಾಗಲಿವೆ. ಶಿಯೋಮಿಯ ಅಧಿಕೃತ ವೆಬ್‌ತಾಣದಲ್ಲಿ ಗ್ರಾಹಕರು ಫೋನ್ ಖರೀದಿಸಬಹುದಾಗಿದೆ. ಹಾಗಾದರೆ ಮಿ ಸೂಪರ್ ಸೇಲ್ ಮೇಳದಲ್ಲಿ ಯಾವೆಲ್ಲಾ ಫೋನ್‌ಗಳಿಗೆ ಭಾರಿ ಡಿಸ್ಕೌಂಟ್ ಇದೆ ಎನ್ನುವುದನ್ನು ತಿಳಿಯಲು ಮುಂದೆ ಓದಿರಿ.

ರೆಡ್ಮಿ ಕೆ20 ಪ್ರೊ

ರೆಡ್ಮಿ ಕೆ20 ಪ್ರೊ

ಶಿಯೋಮಿ ಫ್ಲ್ಯಾಗ್‌ಶಿಪ್ ಫೋನ್ ಎಂದೆ ಗುರುತಿಸಿಕೊಂಡಿರುವ 'ರೆಡ್ಮಿ ಕೆ20 ಪ್ರೊ' ಫೋನ್ ಇದೀಗ ಮಿ ಸೂಪರ್ ಸೇಲ್‌ನಲ್ಲಿ ಭಾರಿ ರಿಯಾಯಿತಿ ಪಡೆದಿದೆ. 6GBRAM ಮತ್ತು 128GB ವೇರಿಯಂಟ್‌ನ ರೆಡ್ಮಿ ಕೆ20 ಪ್ರೊ ಫೋನ್ 27,999ರೂ.ಗಳಿಗೆ ಲಾಂಚ್ ಆಗಿತ್ತು. ಆದ್ರೆ 'ಮಿ ಸೂಪರ್ ಸೇಲ್'‌ನಲ್ಲಿ 24,999ರೂ.ಗಳಿಗೆ ಲಭ್ಯ ಇದೆ. ಆಕರ್ಷಕ ಇಎಮ್‌ಐ ಸೌಲಭ್ಯವನ್ನು ಸಹ ಪಡೆದುಕೊಂಡಿದೆ. ಬ್ಲೂ ಬಣ್ಣದ ಆಯ್ಕೆಯನ್ನು ಹೊಂದಿದೆ.

ರೆಡ್ಮಿ ನೋಟ್ 7 ಪ್ರೊ

ರೆಡ್ಮಿ ನೋಟ್ 7 ಪ್ರೊ

ಮೊಬೈಲ್ ಮಾರುಕಟ್ಟೆಯಲ್ಲಿ ಹೊಸ ಟ್ರೆಂಡ್ ಬರೆದ ರೆಡ್ಮಿ ನೋಟ್ 7 ಪ್ರೊ ಫೋನಿಗೆ ಇಂದಿಗೂ ಡಿಮ್ಯಾಂಡ್ ಕಡಿಮೆ ಆಗಿಲ್ಲ. ಸದ್ಯ ಈ ಫೋನ್ ಸಹ ಡಿಸ್ಕೌಂಟ್ ಪಡೆದಿದೆ. 15,999ರೂ ಬೆಲೆಯಲ್ಲಿ 6GB RAM ಮತ್ತು 64GB ವೇರಿಯಂಟ್ ಬಿಡುಗಡೆ ಆಗಿತ್ತು. ಈ ಸೇಲ್ ಮೇಳದಲ್ಲಿ 6,000ರೂ ಡಿಸ್ಕೌಂಟ್ ಪಡೆದಿದ್ದು, ಕೇವಲ 9,999ರೂ.ಗಳಿಗೆ ಗ್ರಾಹಕರು ಖರೀದಿಸಬಹುದಾಗಿದೆ. 6 ತಿಂಗಳ ನೋ ಕಾಸ್ಟ್‌ ಇಎಮ್‌ಐ ಆಯ್ಕೆಗಳು ಲಭ್ಯ ಇವೆ.

ರೆಡ್ಮಿ ನೋಟ್ 7s

ರೆಡ್ಮಿ ನೋಟ್ 7s

ಜನಪ್ರಿಯ ರೆಡ್ಮಿ ನೋಟ್ ಸರಣಿಯಲ್ಲಿಯೇ ಈ ಫೋನ್ ಸಹ ಬಿಡುಗಡೆ ಆಗಿದ್ದು, ಇದು ಸಹ ಮಾರುಕಟ್ಟೆಯಲ್ಲಿ ಮೆಚ್ಚುಗೆ ಪಡೆದಿರುವ ಫೋನಾಗಿದೆ. 3GB RAM ಮತ್ತು 32GB ವೇರಿಯಂಟ್ ಸಾಮರ್ಥ್ಯದ ಈ ಫೋನ್ 10,999ರೂ.ಗಳಿಗೆ ಲಾಂಚ್ ಆಗಿತ್ತು. ಆದ್ರೀಗ 2,000ರೂ ರಿಯಾಯಿತಿ ಪಡೆದಿದ್ದು, 8,999ರೂ.ಗಳಿಗೆ ಗ್ರಾಹಕರ ಕೈ ಸೇರುತ್ತದೆ.

ರೆಡ್ಮಿ Y3

ರೆಡ್ಮಿ Y3

ಶಿಯೋಮಿಯ ರೆಡ್ಮಿ Y3 ಫೋನ್ ಸಹ ಗ್ರಾಹಕರನ್ನು ಸೆಳೆದಿದ್ದು, ಈ ಫೋನಿಗೂ ಆಫರ್ ನೀಡಲಾಗಿದೆ. 3GB RAM ಮತ್ತು 32GB ವೇರಿಯಂಟ್ ಸಾಮರ್ಥ್ಯದ ಈ ಫೋನ್ ಮಿ ಸೂಪರ್ ಸೇಲ್'‌ನಲ್ಲಿ ಕೇವಲ 7,999ರೂ.ಗಳಿಗೆ ಲಭ್ಯ ಇದೆ. ಅಂದಹಾಗೆ ಭಾರತದಲ್ಲಿ ಈ ಫೋನ್ 9,999ರೂ.ಗಳಿಗೆ ಬಿಡುಗಡೆ ಆಗಿತ್ತು. ಇನ್ನು ಈ ಫೋನ್ 32ಎಂಪಿ ಸೆಲ್ಫಿ ಕ್ಯಾಮೆರಾ ಅನ್ನು ಒಳಗೊಂಡಿದೆ.

ರೆಡ್ಮಿ ಗೋ

ರೆಡ್ಮಿ ಗೋ

ಶಿಯೋಮಿ ಎಂಟ್ರಿ ಲೆವೆಲ್ ಸ್ಮಾರ್ಟ್‌ಫೋನ್ ಆಗಿದ್ದು, ಅಗ್ಗದ ಬೆಲೆಯನ್ನು ಹೊಂದಿದೆ. ರೆಡ್ಮಿ ಗೋ ಫೋನ್ 4,499ರೂ.ಗಳಿಗೆ ಬಿಡುಗಡೆ ಆಗಿತ್ತು. ಸದ್ಯ ಮಿ ಸೂಪರ್ ಸೇಲ್ ಮೇಳದಲ್ಲಿ ಈ ಫೋನ್ 4,299ರೂ.ಗಳಿಗೆ ದೊರೆಯುತ್ತದೆ. ಇನ್ನು ಈ ಫೋನ್ 16GB ಸ್ಟೋರೇಜ್ ವೇರಿಯಂಟ್ ಆಯ್ಕೆಯನ್ನು ಪಡೆದಿದೆ.

Best Mobiles in India

English summary
Xiaomi is offering a discount of up to Rs 6,000 on purchase of select smartphones during the Mi Super Sale. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+