Home
ಸುದ್ದಿಜಾಲ

ಗೂಗಲ್‌ ತಾನೇ ಪರಿಚಯಿಸಿದ್ದ ಈ ಸೇವೆಗಳಿಗೆ ಮಣ್ಣು ಕೊಟ್ಟಿದೆ!

ಗೂಗಲ್ ಸಂಸ್ಥೆಯು ವಿಶ್ವದ ದೈತ್ಯ ಟೆಕ್ ಕಂಪನಿಯಾಗಿ ಗುರುತಿಸಿಕೊಂಡಿದ್ದು, ಅಪ್ಲಿಕೇಶನ್, ಆಂಡ್ರಾಯ್ಡ್‌ ಓಎಸ್‌ ಸೇರಿದಂತೆ ಹಲವು ವೈವಿಧ್ಯಮಯ ಸೇವೆಗಳನ್ನು ಒಳಗೊಂಡಿದೆ. ಒಂದೆಡೆ ಗೂಗಲ್‌ ಹಲವು ನೂತನ ಸೇವೆಗಳನ್ನು ಅಳವಡಿಸುತ್ತಲೇ ಸಾಗುತ್ತಿದ್ದು, ಇನ್ನೊಂದೆಡೆ ತನ್ನ ಕೆಲವು ಜನಪ್ರಿಯ ಸೇವೆಗಳಿಗೆ ಈ ವರ್ಷ (2019) ಶಾಶ್ವತವಾಗಿ ಗುಡ್‌ಬೈ ಹೇಳಿ ಮಣ್ಣು ಕೊಟ್ಟಿದೆ. ಬಹುಶಃ ಆ ಅಪ್ಲಿಕೇಶನ್‌ಗಳನ್ನು ನೀವು ಬಳಸಿರುತ್ತಿರಾ.

ಯೂಟ್ಯೂಬ್

ಹೌದು, ಗೂಗಲ್ ಸಂಸ್ಥೆ ಅಂದರೇ ಅದು ಕೇವಲ ಸರ್ಚ್ ಇಂಜಿನ್‌ ಅಷ್ಟೇ ಹೊಂದಿಲ್ಲ. ಬದಲಿಗೆ ಯೂಟ್ಯೂಬ್, ಆಂಡ್ರಾಯ್ಡ್‌ ಓಎಸ್‌, ಜಿ ಮೇಲ್, ಗೂಗಲ್ ಮ್ಯಾಪ್, ಗೂಗಲ್ ಪೇ, ಯೂಟ್ಯೂಬ್ ಗೇಮಿಂಗ್, ಕ್ರೋಮ್ ಕಾಸ್ಟ್‌ ಮ್ಯೂಸಿಕ್ ಸೇರಿದಂತೆ ಇನ್ನು ಹಲವು ವಿಭಿನ್ನ ಸೇವೆಗಳನ್ನು ಸಂಸ್ಥೆಯು ಒಳಗೊಂಡಿದೆ. ಆದ್ರೆ ಇತ್ತೀಚಿಗೆ ಕೆಲವು ಸೇವೆಗಳ ಬಾಗಿಲನ್ನು ಪರ್ಮನೆಂಟ್‌ ಆಗಿ ಮುಚ್ಚಿದೆ. ಹಾಗಾದರೇ ಗೂಗಲ್ ಗುಡ್‌ಬೈ ಹೇಳಿದ ಆ ಸೇವೆಗಳು ಯಾವುವು ಎಂಬುದನ್ನು ತಿಳಿಯಲು ಮುಂದೆ ಓದಿರಿ.

ಗೂಗಲ್ ಪ್ಲಸ್‌ (Google +)

ಗೂಗಲ್ ಪ್ಲಸ್‌ (Google +)

ಗೂಗಲ್ ಪ್ಲಸ್‌ ಸೇವೆಯು 2011ರಲ್ಲಿ ಲಾಂಚ್ ಆಗಿದ್ದು, ಇದು ಗೂಗಲ್‌ನ ಇಂಟರನೆಟ್‌ ಆಧಾರಿತ ಸಾಮಾಜಿಕ ತಾಣವಾಗಿತ್ತು. ಲೊಕೇಶನ್ ಟ್ಯಾಗ್ ಸೌಲಭ್ಯ, ಪೋಟೊಗಳನ್ನು ಪೋಸ್ಟ್‌ ಮಾಡುವ ಆಯ್ಕೆ ಮತ್ತು ಎಡಿಟ್‌ ಸೌಲಭ್ಯಗಳನ್ನು ಸಹ ಒಳಗೊಂಡಿತ್ತು. ಇತ್ತೀಚಿಗೆ ಗೂಗಲ್ ಈ ಸೇವೆಯನ್ನು ಶಾಶ್ವತವಾಗಿ ನಿಲ್ಲಿಸಿದೆ. ಹೀಗಾಗಿ ಗೂಗಲ್ ಪ್ಲಸ್‌ ಇನ್ನಿಲ್ಲ.

ಗೂಗಲ್ ಅಲೊ (Google Allo)

ಗೂಗಲ್ ಅಲೊ (Google Allo)

'ಗೂಗಲ್ ಅಲೊ' ಇಂಟರ್ನೆಟ್‌ ಆಧಾರಿತ ಟೆಕ್ಸ್ಟ್ ಮೆಸೆಜ್ ಅಪ್ಲಿಕೇಶನ್ ಆಗಿದ್ದು, ಆಂಡ್ರಾಯ್ಡ್‌ ಮತ್ತು ಐಎಸ್‌ಓ ಎರಡು ಮಾದರಿಯ ಓಎಸ್‌ಗಳಿಗೂ ಬೆಂಬಲ ನೀಡಿತ್ತು. ಇದರೊಂದಿಗೆ ವೆಬ್‌ ವರ್ಷನ್ ಮಾದರಿಯಲ್ಲಿಯೂ ಸೇವೆ ಹೊಂದಿತ್ತು. ಗೂಗಲ್ ಚಾಟ್‌ ಹೆಸರಿನಿಂದ ಸಹ ಗುರುತಿಸಲಾಗುತ್ತಿದ್ದ ಈ ಸೇವೆ ಈಗ ನೆನಪು ಮಾತ್ರ.

ಯೂಟ್ಯೂಬ್ ಗೇಮಿಂಗ್ (Youtube Gaming)

ಯೂಟ್ಯೂಬ್ ಗೇಮಿಂಗ್ (Youtube Gaming)

ಯೂಟ್ಯೂಬ್ ಸಹ ಗೂಗಲ್ ಸಂಸ್ಥೆಗೆ ಸೇರಿದ್ದಾಗಿದ್ದು, ಯೂಟ್ಯೂಬ್‌ನಲ್ಲಿ ಗೇಮಿಂಗ್ ಡಿವಿಜ಼ನ್ ಸೇವೆಯನ್ನು ಪರಿಚಯಿಸಲಾಗಿತ್ತು. ಇದರಲ್ಲಿ ಬಳಕೆದಾರರು ಲೈವ್ ಗೇಮ್ಸ್‌ ಸ್ಟ್ರೀಮ್ ಮಾಡಬಹುದಾಗಿದ್ದು, ಇತರರ ಗೇಮ್ಸ್‌ ವೀಕ್ಷಿಸಬಹುದಾದ ಆಯ್ಕೆ ನೀಡಲಾಗಿತ್ತು. ಈ ಸೇವೆಯು ಈಗ ಬಂದ ಆಗಿದೆ.

ಯೂಟ್ಯೂಬ್ ಮೆಸೆಜಸ್‌ (YouTube Messages)

ಯೂಟ್ಯೂಬ್ ಮೆಸೆಜಸ್‌ (YouTube Messages)

ಗೂಗಲ್ ಸಂಸ್ಥೆಯು ಪರಿಚಯಿಸಿದ್ದ, 'ಯೂಟ್ಯೂಬ್ ಮೆಸೆಜಸ್‌ ಸೇವೆಯಲ್ಲಿ ಇತರರಿಗೆ ಮೆಸೆಜ್, ವಿಡಿಯೊಗಳನ್ನು ಸೆಂಡ್ ಮಾಡಬಹುದಾದ ಸೌಲಭ್ಯಗಳಿದ್ದವು. ಆದ್ರೆ ಯೂಟ್ಯೂಬ್ ಮೆಸೆಜಸ್' ಸೇವೆಯು ಹೆಚ್ಚು ಕಾಲ ಬಳಕೆಯಲ್ಲಿರಲಿಲ್ಲ. ಈ ಸೇವೆಗೂ ಗೂಗಲ್ ಶಾಶ್ವತವಾಗಿ ಬಾಗಿಲು ಹಾಕಿದೆ.

ಗೂಗಲ್ ಅರೊ(Aero)

ಗೂಗಲ್ ಅರೊ(Aero)

ಗೂಗಲ್ ಸಂಸ್ಥೆಯು ಫುಡ್‌ ಆರ್ಡರ್ ಮತ್ತು ಡೆಲಿವರಿ ಸೇವೆಗಳಿಗಾಗಿ 'ಅರೊ(Aero)' ಹೆಸರಿನ ಅಪ್ಲಿಕೇಶನ್ ಅನ್ನು ಆರಂಭಿಸಿತ್ತು. ಆದರೆ ಈ ಸೇವೆ ಗಟ್ಟಿಯಾಗಿ ನಿಲ್ಲುವಲ್ಲಿ ಯಶಸ್ವಿಯಾಗಲಿಲ್ಲ. ಗೂಗಲ್ ಈ ಸೇವೆಗೂ ಸಹ ಪೂರ್ಣ ವಿರಾಮ ಇಟ್ಟಿದೆ.

Best Mobiles in India

English summary
The Google even took time to remember some of its popular services that it killed over the years in its Seattle Campus. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+