ಹೆಚ್ಚು ಸಂಬಳ ಪಡೆಯುವ ಸಿಇಒಗಳಲ್ಲಿ ಸತ್ಯ ನಡೇಲ್ಲಾ ಮೊದಲಿಗರು

By Shwetha

  ವರ್ಷಕ್ಕೆ $84.3 ಮಿಲಿಯನ್ (ರೂ 525 ಕೋಟಿ) ಪಾವತಿಯನ್ನು ಪಡೆಯುವುದರ ಮೂಲಕ ಮೈಕ್ರೋಸಾಫ್ಟ್ ದೈತ್ಯ ಭಾರತೀಯ ಮೂಲದ ಸತ್ಯ ನಡೇಲ್ಲಾ ಯುಎಸ್‌ನ ಹೆಚ್ಚು ಸಂಬಳ ಪಡೆದುಕೊಳ್ಳುವ ಸಿಇಒ ಆಗಿ ಸ್ಥಾನ ಪಡೆದುಕೊಂಡಿದ್ದಾರೆ.

  [ಓದಿರಿ: ಮೈಕ್ರೋಸಾಫ್ಟ್ ಸಿಇಒ ಸತ್ಯ ನಡೇಲ್ಲಾರ 10 ಜೀವನ ರಹಸ್ಯಗಳು]

  100 ಸಿಇಒ ಪಾವತಿ ಅಧ್ಯಯನವು, ಸಿಇಒ ಸಂಬಳವನ್ನು ಕುರಿತು ಅಧ್ಯಯನವನ್ನು ಕೈಗೊಂಡಿದ್ದು ಕಳೆದ ಬಾರಿ ಪ್ರಥಮ ಸ್ಥಾನದಲ್ಲಿದ್ದ ಒರೇಕಲ್‌ನ ಲ್ಯಾರಿ ಎಲಿಸನ್ ಅನ್ನು ಸತ್ಯ ನಡೇಲ್ಲಾ ಹಿಂದಿಕ್ಕಿದ್ದಾರೆ. ಇಂತಹ ಮಹಾನ್ ಸಾಧನೆಯನ್ನು ಸಾಧಿಸಿರುವ ಭಾರತೀಯ ಸತ್ಯ ನಡೇಲ್ಲಾರ ಕುರಿತು ನೀವು ಅರಿಯಬೇಕಾದ್ದು ಬಹಳಷ್ಟಿದೆ ಗೆಳೆಯರೇ. ಬನ್ನಿ ಇಂದಿನ ಲೇಖನದಲ್ಲಿ ಅವರ ಸಾಧನೆಗಳನ್ನು ಕುರಿತು ಅರಿತುಕೊಳ್ಳೋಣ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  ಸತ್ಯ ನಡೇಲ್ಲಾ ಬಾಲ್ಯ

  ಹೈದ್ರಾಬಾದ್‌ನಲ್ಲಿ 1967 ರಲ್ಲಿ ಜನಿಸಿದ ಈ ಮಹಾನ್ ಟೆಕ್ ದೈತ್ಯ ಮೂಸಿ ನದಿಯ ತಟದಲ್ಲಿ ತಮ್ಮ ಬಾಲ್ಯವನ್ನು ಕಳೆದವರು.

  ವಿದ್ಯಾಭ್ಯಾಸ

  ಹೈದ್ರಾಬಾದ್‌ನ ಪಬ್ಲಿಕ್ ಶಾಲೆ ಹಾಗೂ ಕರ್ನಾಟಕದಲ್ಲಿ ಅವರು ಶಿಕ್ಷಣವನ್ನು ಪಡೆದುಕೊಂಡರು. ಮಣಿಪಾಲ ವಿಶ್ವವಿದ್ಯಾನಿಲಯದಿಂದ ಇಲೆಕ್ಟ್ರಿಕಲ್ ಇಂಜಿನಿಯರಿಂಗ್ ಪದವಿಯನ್ನು ಪಡೆದುಕೊಂಡ ನಡೇಲ್ಲಾ ತರಗತಿಯಲ್ಲೇ ಪ್ರಥಮ ಸ್ಥಾನವನ್ನು ಯಾರಿಗೂ ಬಿಟ್ಟುಕೊಡುತ್ತಿರಲಿಲ್ಲವಂತೆ.

  ಐಎಎಸ್ ಅಧಿಕಾರಿ ಪುತ್ರ

  ಐಎಎಸ್ ಅಧಿಕಾರಿ ಬಿ. ಎನ್ ಯುಗಂಧರ್ ಪುತ್ರನಾದ ಸತ್ಯ ನಡೇಲ್ಲಾರಿಗೆ ತಂದೆಯೆಂದರೆ ತುಂಬಾ ಹೆಮ್ಮೆ.

  22 ವರ್ಷದಲ್ಲೇ ಸಾಫ್ಟ್‌ವೇರ್ ದಿಗ್ಗಜ

  ಸನ್ ಮೈಕ್ರೋಸಿಸ್ಟಮ್‌ನಲ್ಲಿ ತಂತ್ರಜ್ಞಾನ ಸ್ಟಾಫ್ ಆಗಿ ನಡೇಲ್ಲಾ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದವರು. ಮೈಕ್ರೋಸಾಫ್ಟ್‌ನಲ್ಲಿ ವೃತ್ತಿಯನ್ನು ಆರಂಭಿಸಿದೊಡನೆ ಅವರು ವಿಂಡೋಸ್ ಎನ್‌ಟಿ ಪ್ರಾಜೆಕ್ಟ್‌ನಲ್ಲಿ ಕಾರ್ಯನಿರ್ವಹಿಸಿದರು.

  ಮೈಕ್ರೋಸಾಫ್ಟ್ ವಾರ್ಷಿಕ ಆದಾಯ $ 19 ಬಿಲಿಯನ್‌

  ಎಮ್ಎಸ್ ಕ್ಲೌಡ್ ಮತ್ತು ಎಂಟರ್‌ಪ್ರೈಸ್ ವ್ಯವಹಾರಕ್ಕೆ ಮುಖ್ಯಸ್ಥರಾಗಿ, ಸತ್ಯ ಕಂಪೆನಿ ವಾರ್ಷಿಕ ಆದಾಯ $19 ಬಿಲಿಯನ್ ಅನ್ನು ಗಳಿಸುವಲ್ಲಿ ಕೈ ಜೋಡಿಸಿದವರು.

  ಕಲಿಕೆಯಲ್ಲಿ ಬತ್ತದ ಆಸಕ್ತಿ

  ವಿಸ್ಕೋನ್ಸಿನ್ ವಿಶ್ವವಿದ್ಯಾಲಯದಿಂದ ಕಂಪ್ಯೂಟರ್ ಸೈನ್ಸ್ ಮಾಸ್ಟರ್ ಪದವಿಯನ್ನು ಗಳಿಸಿಕೊಂಡ ನಂತರ ಚಿಕಾಗೋ ವಿಶ್ವವಿದ್ಯಾಲಯದಿಂದ ಬ್ಯುಸಿನೆಸ್ ಅಡ್ಮಿನಿಸ್ಟ್ರೇಶನ್‌ನಲ್ಲಿ ಮಾಸ್ಟರ್ ಪದವಿಯನ್ನು ಪಡೆದುಕೊಂಡವರು.

  ಕ್ರಿಕೆಟ್‌ನಲ್ಲಿ ನಡೇಲ್ಲಾ ಆಸಕ್ತಿ

  ನಡೇಲ್ಲಾ ತಮ್ಮ ಶಾಲಾ ಸಮಯದಲ್ಲಿ ಕ್ರಿಕೆಟ್ ಆಟವನ್ನು ಹೆಚ್ಚು ಆಸಕ್ತಿಯಿಂದ ಆಡುತ್ತಿದ್ದವರು. ಕ್ರಿಕೆಟ್ ಪಂದ್ಯಗಳಿಂದ ಅವರು ಟೀಮ್ ವರ್ಕ್ ಮತ್ತು ನಾಯಕತ್ವ ಗುಣಗಳನ್ನು ಅರಿತುಕೊಂಡವರು.

  ನಡೇಲ್ಲಾ ಕುಟುಂಬ ಜೀವನ

  ತಮ್ಮ ಶಾಲಾ ಗೆಳತಿಯನ್ನೇ ವಿವಾಹವಾಗಿ ಮೂರು ಮಕ್ಕಳು ಮತ್ತು ಪತ್ನಿಯೊಂದಿಗೆ ಸಂತೃಪ್ತ ಕುಟುಂಬ ಜೀವನವನ್ನು ಆನಂದಿಸುತ್ತಿದ್ದಾರೆ.

  ಸೋಶಿಯಲ್ ಮೀಡಿಯಾದಲ್ಲಿ ಕಡಿಮೆ ಆಸಕ್ತಿ

  ತಮ್ಮ ಕುಟುಂಬ ಹಾಗೂ ವೃತ್ತಿಯೊಂದಿಗೆ ಸಂತಸದಿಂದ ಕಳೆಯುವ ಸತ್ಯ ನಡೇಲ್ಲಾ ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚಿನ ಆಸಕ್ತಿಯನ್ನು ಇಟ್ಟುಕೊಂಡವರಲ್ಲ. ಇವರು 2010 ರಲ್ಲಿ ಕಡೆಯ ಟ್ವೀಟ್ ಮಾಡಿದ್ದಾರೆ.

  ಭಾಷಣ ಪ್ರಿಯರು

  ಹೆಚ್ಚಿನ ತಂತ್ರಜ್ಞಾನ ಸಂಬಂಧಿತ ಕಾರ್ಯಕ್ರಮಗಳು ಮತ್ತು ಸಮಾರಂಭಗಳಲ್ಲಿ ಸತ್ಯ ನಡೇಲ್ಲಾ ನಿಯಮಿತ ಭಾಷಣಗಾರರಾಗಿದ್ದಾರೆ. ಇವರು ಉತ್ತಮ ವಾಗ್ಮಿ ಕೂಡ ಹೌದು.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  English summary
  With a pay package of $84.3 million (Rs.525 crore) a year, technology giant Microsoft's Indian-origin chief Satya Nadella has emerged as the top-paid CEO in the US, as per a new list.
  Opinion Poll

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more