ಮೈಕ್ರೋಸಾಫ್ಟ್ ಸಿಇಒ ಸತ್ಯ ನಡೇಲ್ಲಾರ 10 ಜೀವನ ರಹಸ್ಯಗಳು

Written By:

ಯುಎಸ್ ನಿವಾಸಿಯಲ್ಲದ ಹಾಗೂ ಮೈಕ್ರೋಸಾಫ್ಟ್‌ನ ಮೂರನೇ ಸಿಇಒ ಆಗಿರುವ ಸತ್ಯ ನಡೇಲ್ಲಾ, ಸ್ಟೀವ್ ಬಾಲ್ಮರ್ ನಂತರ ಮುಂದುವರಿಯತ್ತಿದ್ದಾರೆ. 22 ವರ್ಷಗಳಿಗಿಂತಲೂ ಹೆಚ್ಚಿನ ಸೇವೆಯನ್ನು ಮೈಕ್ರೋಸಾಫ್ಟ್‌ನಲ್ಲಿ ಸಲ್ಲಿಸಿರುವ ನಡೇಲ್ಲಾ ತಮ್ಮ ಜಾಣ್ಮೆ ಹಾಗೂ ಕಾರ್ಯತತ್ಪರತೆಯಿಂದ ಮುನ್ನಡೆಯಲ್ಲಿದ್ದಾರೆ.

ಇದನ್ನೂ ಓದಿ: ಸ್ಮಾರ್ಟ್‌ಫೋನ್ ಕುರಿತು ನೀವು ಅರಿಯದ 20 ರಹಸ್ಯಗಳು

ಇಂದಿನ ಲೇಖನದಲ್ಲಿ ಸತ್ಯ ನಡೇಲ್ಲಾ ಕುರಿತು ಇನ್ನಷ್ಟು ಅಂಶಗಳನ್ನು ಅರಿತುಕೊಳ್ಳೋಣ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸತ್ಯ ನಡೇಲ್ಲಾ ಜೀವನ

ಸತ್ಯ ನಡೇಲ್ಲಾ ಜೀವನ

ಮೈಕ್ರೋಸಾಫ್ಟ್ ಸಿಇಒ ಸತ್ಯ ನಡೇಲ್ಲಾರ 10 ಜೀವನ ರಹಸ್ಯಗಳು

ಹೈದ್ರಾಬಾದ್‌ನಲ್ಲಿ 1967 ರಲ್ಲಿ ಜನಿಸಿದ ಸತ್ಯ ನಡೇಲ್ಲಾ, ಮೂಸಿ ನದಿಯ ತಟದಲ್ಲಿ ತಮ್ಮ ಬಾಲ್ಯವನ್ನು ಕಳೆದವರು.

ವಿದ್ಯಾಭ್ಯಾಸ

ವಿದ್ಯಾಭ್ಯಾಸ

ಮೈಕ್ರೋಸಾಫ್ಟ್ ಸಿಇಒ ಸತ್ಯ ನಡೇಲ್ಲಾರ 10 ಜೀವನ ರಹಸ್ಯಗಳು

ಹೈದ್ರಾಬಾದ್‌ನ ಪಬ್ಲಿಕ್ ಶಾಲೆಯಲ್ಲಿ ಹಾಗೂ ಕರ್ನಾಟಕದಲ್ಲಿ ಶಿಕ್ಷಣವನ್ನು ಪಡೆದುಕೊಂಡರು. ಮಣಿಪಾಲ ಯೂನಿವರ್ಸಿಟಿಯಿಂದ ಇಲೆಕ್ಟ್ರಿಕಲ್ ಇಂಜಿನಿಯರಿಂಗ್ ಪದವಿಯನ್ನು ಪಡೆದುಕೊಂಡರು. ತರಗತಿಯಲ್ಲಿ ಪ್ರಥಮ ಸ್ಥಾನ ಸತ್ಯ ನಡೇಲ್ಲಾರದಾಗಿತ್ತು.

ಐಎಎಸ್ ಅಧಿಕಾರಿ ಪುತ್ರ

ಐಎಎಸ್ ಅಧಿಕಾರಿ ಪುತ್ರ

ಮೈಕ್ರೋಸಾಫ್ಟ್ ಸಿಇಒ ಸತ್ಯ ನಡೇಲ್ಲಾರ 10 ಜೀವನ ರಹಸ್ಯಗಳು

ಐಎಎಸ್ ಅಧಿಕಾರಿ ಬಿಎನ್ ಯುಗಂಧರ್ ಪುತ್ರ ಸತ್ಯ ನಡೇಲ್ಲಾ ತಮ್ಮ ತಂದೆಯ ಬಗ್ಗೆ ತುಂಬಾ ಹೆಮ್ಮೆ ಪಟ್ಟುಕೊಳ್ಳುತ್ತಾರೆ.

22 ವರ್ಷದಲ್ಲೇ ಸಾಫ್ಟ್‌ವೇರ್ ದಿಗ್ಗಜ

22 ವರ್ಷದಲ್ಲೇ ಸಾಫ್ಟ್‌ವೇರ್ ದಿಗ್ಗಜ

ಮೈಕ್ರೋಸಾಫ್ಟ್ ಸಿಇಒ ಸತ್ಯ ನಡೇಲ್ಲಾರ 10 ಜೀವನ ರಹಸ್ಯಗಳು

ಸನ್ ಮೈಕ್ರೋಸಿಸ್ಟಮ್‌ನಲ್ಲಿ ತಂತ್ರಜ್ಞಾನ ಸ್ಟಾಫ್ ಆಗಿ ನಡೇಲ್ಲಾ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದವರು. ಮೈಕ್ರೋಸಾಫ್ಟ್‌ನಲ್ಲಿ ವೃತ್ತಿಯನ್ನು ಆರಂಭಿಸಿದೊಡನೆ ಅವರು ವಿಂಡೋಸ್ ಎನ್‌ಟಿ ಪ್ರಾಜೆಕ್ಟ್‌ನಲ್ಲಿ ಕಾರ್ಯನಿರ್ವಹಿಸಿದರು.

ಮೈಕ್ರೋಸಾಫ್ಟ್ ವಾರ್ಷಿಕ ಆದಾಯ $ 19 ಬಿಲಿಯನ್‌ಗೆ ಕೈ ಜೋಡಿಸಿದರು

ಮೈಕ್ರೋಸಾಫ್ಟ್ ವಾರ್ಷಿಕ ಆದಾಯ $ 19 ಬಿಲಿಯನ್‌ಗೆ ಕೈ ಜೋಡಿಸಿದರು

ಮೈಕ್ರೋಸಾಫ್ಟ್ ಸಿಇಒ ಸತ್ಯ ನಡೇಲ್ಲಾರ 10 ಜೀವನ ರಹಸ್ಯಗಳು

ಎಮ್ಎಸ್ ಕ್ಲೌಡ್ ಮತ್ತು ಎಂಟರ್‌ಪ್ರೈಸ್ ವ್ಯವಹಾರಕ್ಕೆ ಮುಖ್ಯಸ್ಥರಾಗಿ, ಸತ್ಯ ಕಂಪೆನಿ ವಾರ್ಷಿಕ ಆದಾಯ $19 ಬಿಲಿಯನ್ ಅನ್ನು ಗಳಿಸುವಲ್ಲಿ ಕೈ ಜೋಡಿಸಿದವರು.

ಕಲಿಕೆಯಲ್ಲಿ ಬತ್ತದ ಆಸಕ್ತಿ

ಕಲಿಕೆಯಲ್ಲಿ ಬತ್ತದ ಆಸಕ್ತಿ

ಮೈಕ್ರೋಸಾಫ್ಟ್ ಸಿಇಒ ಸತ್ಯ ನಡೇಲ್ಲಾರ 10 ಜೀವನ ರಹಸ್ಯಗಳು

ವಿಸ್ಕೋನ್ಸಿನ್ ವಿಶ್ವವಿದ್ಯಾಲಯದಿಂದ ಕಂಪ್ಯೂಟರ್ ಸೈನ್ಸ್ ಮಾಸ್ಟರ್ ಪದವಿಯನ್ನು ಗಳಿಸಿಕೊಂಡ ನಂತರ ಚಿಕಾಗೋ ವಿಶ್ವವಿದ್ಯಾಲಯದಿಂದ ಬ್ಯುಸಿನೆಸ್ ಅಡ್ಮಿನಿಸ್ಟ್ರೇಶನ್‌ನಲ್ಲಿ ಮಾಸ್ಟರ್ ಪದವಿಯನ್ನು ಪಡೆದುಕೊಂಡವರು.

ಕ್ರಿಕೆಟ್‌ನಲ್ಲಿ ನಡೇಲ್ಲಾ ಆಸಕ್ತಿ

ಕ್ರಿಕೆಟ್‌ನಲ್ಲಿ ನಡೇಲ್ಲಾ ಆಸಕ್ತಿ

ಮೈಕ್ರೋಸಾಫ್ಟ್ ಸಿಇಒ ಸತ್ಯ ನಡೇಲ್ಲಾರ 10 ಜೀವನ ರಹಸ್ಯಗಳು

ನಡೇಲ್ಲಾ ತಮ್ಮ ಶಾಲಾ ಸಮಯದಲ್ಲಿ ಕ್ರಿಕೆಟ್ ಆಟವನ್ನು ಹೆಚ್ಚು ಆಸಕ್ತಿಯಿಂದ ಆಡುತ್ತಿದ್ದವರು. ಕ್ರಿಕೆಟ್ ಪಂದ್ಯಗಳಿಂದ ಅವರು ಟೀಮ್ ವರ್ಕ್ ಮತ್ತು ನಾಯಕತ್ವ ಗುಣಗಳನ್ನು ಅರಿತುಕೊಂಡವರು.

ನಡೇಲ್ಲಾ ಕುಟುಂಬ ಜೀವನ

ನಡೇಲ್ಲಾ ಕುಟುಂಬ ಜೀವನ

ಮೈಕ್ರೋಸಾಫ್ಟ್ ಸಿಇಒ ಸತ್ಯ ನಡೇಲ್ಲಾರ 10 ಜೀವನ ರಹಸ್ಯಗಳು

ನಡೇಲ್ಲಾ ತಮ್ಮ ಶಾಲಾ ಗೆಳತಿಯನ್ನೇ ವಿವಾಹವಾಗಿ ಮೂರು ಮಕ್ಕಳು ಮತ್ತು ಪತ್ನಿಯೊಂದಿಗೆ ಸಂತೃಪ್ತ ಕುಟುಂಬ ಜೀವನವನ್ನು ಆನಂದಿಸುತ್ತಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಕಡಿಮೆ ಆಸಕ್ತಿ

ಸೋಶಿಯಲ್ ಮೀಡಿಯಾದಲ್ಲಿ ಕಡಿಮೆ ಆಸಕ್ತಿ

ಮೈಕ್ರೋಸಾಫ್ಟ್ ಸಿಇಒ ಸತ್ಯ ನಡೇಲ್ಲಾರ 10 ಜೀವನ ರಹಸ್ಯಗಳು

ತಮ್ಮ ಕುಟುಂಬ ಹಾಗೂ ವೃತ್ತಿಯೊಂದಿಗೆ ಸಂತಸದಿಂದ ಕಳೆಯುವ ಸತ್ಯ ನಡೇಲ್ಲಾ ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚಿನ ಆಸಕ್ತಿಯನ್ನು ಇಟ್ಟುಕೊಂಡವರಲ್ಲ. ಇವರು 2010 ರಲ್ಲಿ ಕಡೆಯ ಟ್ವೀಟ್ ಮಾಡಿದ್ದಾರೆ.

ಭಾಷಣ ಪ್ರಿಯರು

ಭಾಷಣ ಪ್ರಿಯರು

ಮೈಕ್ರೋಸಾಫ್ಟ್ ಸಿಇಒ ಸತ್ಯ ನಡೇಲ್ಲಾರ 10 ಜೀವನ ರಹಸ್ಯಗಳು

ಹೆಚ್ಚಿನ ತಂತ್ರಜ್ಞಾನ ಸಂಬಂಧಿತ ಕಾರ್ಯಕ್ರಮಗಳು ಮತ್ತು ಸಮಾರಂಭಗಳಲ್ಲಿ ಸತ್ಯ ನಡೇಲ್ಲಾ ನಿಯಮಿತ ಭಾಷಣಗಾರರಾಗಿದ್ದಾರೆ. ಇವರು ಉತ್ತಮ ವಾಗ್ಮಿ ಕೂಡ ಹೌದು.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
This article tells about 10 Lesser Known Facts About Hyderabad-born Satya Nadella, Now CEO Of Microsoft.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot