ಸದ್ಯ 10,000ರೂ. ಒಳಗೆ ಲಭ್ಯವಿರುವ ಅತ್ಯುತ್ತಮ ಸ್ಮಾರ್ಟ್‌ಫೋನ್‌ಗಳು!
ಪ್ರಸ್ತುತ ಮೊಬೈಲ್ ವಲಯದಲ್ಲಿಯೂ ಸಾಕಷ್ಟು ಪೈಪೋಟಿ ಇದ್ದು, ಕೆಲವು ಪ್ರತಿಷ್ಠಿತ ಕಂಪನಿಗಳು ಗ್ರಾಹಕರನ್ನು ಸೆಳೆಯಲು ಭಿನ್ನ ಶ್ರೇಣಿಯಲ್ಲಿ ಫೋನ್‌ಗಳನ್ನು ಬಿಡುಗಡೆ ಮಾಡಿತ್ತಲೇ ಸಾಗಿವೆ. ಅವುಗಳಲ್ಲಿ ಕೆಲವು ಕಂಪನಿಗಳು ಅಗ್ಗದ ಪ್ರೈಸ್‌ನಲ್ಲಿ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡುವ ಮೂಲಕ ಗ್ರಾಹಕರನ್ನು ಆಕರ್ಷಿಸುತ್ತ ಮುನ್ನಡೆದಿವೆ. ಇದರೊಂದಿಗೆ ಹೆಚ್ಚಿನ ಕ್ಯಾಮೆರಾ, ಅಧಿಕ ಬ್ಯಾಟರಿ ಬ್ಯಾಕ್‌ಅಪ್, ಫೋನಿನ ಲುಕ್ ಸೇರಿದಂತೆ ಇತ್ತೀಚಿಗಿನ ಟ್ರೆಂಡಿ ಫೀಚರ್ಸ್‌ಗಳನ್ನು ನೀಡುತ್ತಿವೆ. ಅದಾಗ್ಯೂ 10,000ರೂ. ಒಳಗಿನ ಬೆಲೆಯ ಫೋನ್‌ಗಳು ಬಹುಬೇಗನೆ ಡಿಮ್ಯಾಂಡ ಪಡೆಯುತ್ತವೆ.

ಹೌದು, ಮೊಬೈಲ್ ಮಾರುಕಟ್ಟೆಯಲ್ಲಿ ಹಲವು ಕಂಪೆನಿಗಳ ಸ್ಮಾರ್ಟ್‌ಫೋನ್‌ಗಳು ಆಯ್ಕೆ ಇದ್ದರೂ ನೂತನ ಫೋನ್ ಖರೀದಿಸುವ ಗ್ರಾಹಕರು ಬಜೆಟ್ ಅಥವಾ ಅಗ್ಗದ ಪ್ರೈಸ್ ಟ್ಯಾಗ್‌ನಲ್ಲಿ ಅತ್ಯುತ್ತಮ ಕ್ಯಾಮೆರಾ, ವೇಗದ ಪ್ರೊಸೆಸರ್, ಬಿಗ್ ಬ್ಯಾಟರಿ, ಆಕರ್ಷಕ ಡಿಸೈನ್ ಇರುವ ಸ್ಮಾರ್ಟ್‌ಫೋನ್‌ಗಳತ್ತ ಗಮನ ನೀಡುತ್ತಾರೆ. ಈ ನಿಟ್ಟಿನಲ್ಲಿ ಮೊಟೊ, ಶಿಯೋಮಿ, ರಿಯಲ್‌ಮಿ, ಪೊಕೊ ಸೇರಿದಂತೆ ಇತರೆ ಕೆಲವು ಬ್ರ್ಯಾಂಡ್‌ಗಳು ಕಡಿಮೆ ದರದಲ್ಲಿ ಆಕರ್ಷಕ ಫೋನ್ ಪರಿಚಯಿಸಿ ಗ್ರಾಹಕರ ಗಮನ ಸೆಳೆದಿವೆ. ಹಾಗಾದರೇ ಪ್ರಸ್ತುತ 10,000ರೂ. ಒಳಗೆ ಲಭ್ಯ ಇರುವ ಫೋನ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಪೊಕೊ C31 ಸ್ಮಾರ್ಟ್‌ಫೋನ್
ಪೊಕೊ C31 ಸ್ಮಾರ್ಟ್‌ಫೋನ್ 720x1,600 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.53-ಇಂಚಿನ ಹೆಚ್‌ಡಿ+ ಡಿಸ್‌ಪ್ಲೇ ಹೊಂದಿದೆ. ಇದು ಮೀಡಿಯಾ ಟೆಕ್ ಹಿಲಿಯೋ G35 SoC ಪ್ರೊಸೆಸರ್ ಹೊಂದಿದೆ. ಇದು ಆಂಡ್ರಾಯ್ಡ್ 10 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೇ 4GB RAM ಮತ್ತು 64GB ಇಂಟರ್ ಸ್ಟೋರೇಜ್ ವೇರಿಯೆಂಟ್ ಆಯ್ಕೆಯನ್ನು ಹೊಂದಿದೆ. ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 13 ಮೆಗಾ ಪಿಕ್ಸೆಲ್ ಸೆನ್ಸಾರ್ ಅನ್ನು ಹೊಂದಿದೆ. ಹಾಗೆಯೇ ಈ ಫೋನ್ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ.

ರೆಡ್ಮಿ 9 ಆಕ್ಟೀವ್ ಸ್ಮಾರ್ಟ್‌ಫೋನ್
ರೆಡ್ಮಿ 9 ಆಕ್ಟೀವ್ ಸ್ಮಾರ್ಟ್‌ಫೋನ್ 1080 x 2340 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 6.53 ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇಯನ್ನು ಹೊಂದಿದೆ. ಡಿಸ್‌ಪ್ಲೇಯು ಪಂಚ್ ಹೋಲ್ ಕ್ಯಾಮೆರಾ ಮಾದರಿಯಲ್ಲಿದ್ದು, 20:9 ಅನುಪಾತವನ್ನು ಪಡೆದಿದೆ. ಇದು ಮೀಡಿಯಾ ಟೆಕ್ ಹಿಲಿಯೊ G35 SoC ಪ್ರೊಸೆಸರ್ ಸಾಮರ್ಥ್ಯ ಹೊಂದಿದ್ದು, ಅದಕ್ಕೆ ಪೂಕರವಾಗಿ ಆಂಡ್ರಾಯ್ಡ್ 10 ಓಎಸ್ ಬೆಂಬಲ ಪಡೆದಿದೆ. ಹಾಗೆಯೇ ಈ ಫೋನ್ 4GB + 64GB ಮತ್ತು 6GB + 128GB ಸ್ಟೋರೇಜ್ ಸಾಮರ್ಥ್ಯದ ಎರಡು ಆಂತರಿಕ ಸ್ಟೋರೇಜ್ ಆಯ್ಕೆಯಗಳನ್ನು ಹೊಂದಿದೆ. ಹಾಗೆಯೇ ಡ್ಯುಯಲ್ ಕ್ಯಾಮೆರಾ ಸೆಟ್‌ಅಪ್ ರಚನೆಯನ್ನು ಹೊಂದಿದೆ. ಮುಖ್ಯ ಕ್ಯಾಮೆರಾವು 13 ಎಂಪಿ ಸೆನ್ಸಾರ್‌ನಲ್ಲಿದ್ದು, ಸೆಲ್ಫಿಗಾಗಿ 5ಎಂಪಿ ಸೆನ್ಸಾರ್ ಕ್ಯಾಮೆರಾ ಒದಗಿಸಲಾಗಿದೆ. ಇದರೊಂದಿಗೆ 5000mAh ಸಾಮರ್ಥ್ಯದ ಬ್ಯಾಟರಿ ಬಾಳಿಕೆಯನ್ನು ಒಳಗೊಂಡಿದೆ.

ರಿಯಲ್‌ಮಿ C25Y ಸ್ಮಾರ್ಟ್‌ಫೋನ್
ರಿಯಲ್‌ಮಿ C25Y ಸ್ಮಾರ್ಟ್‌ಫೋನ್ 720x1,600 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.5-ಇಂಚಿನ HD+ ಡಿಸ್‌ಪ್ಲೇ ಹೊಂದಿದೆ. ಆಕ್ಟಾ-ಕೋರ್ ಯುನಿಸೋಕ್ T610 SoC ಪ್ರೊಸೆಸರ್ ಅನ್ನು ಹೊಂದಿದೆ. ಇದು ಆಂಡ್ರಾಯ್ಡ್ 11 ನಲ್ಲಿ ರಿಯಲ್‌ಮಿ ಆರ್ ಎಡಿಷನ್ ಇಂಟರ್ಫೇಸ್‌ನೊಂದಿಗೆ ಕಾರ್ಯನಿರ್ವಹಿಸುತ್ತದೆ. ಜೊತೆಗೆ 4GB RAM + 64GB ಮತ್ತು 4GB RAM+ 128 GB ಇಂಟರ್ ಸ್ಟೋರೇಜ್ ವೇರಿಯೆಂಟ್ ಆಯ್ಕೆಯನ್ನು ಹೊಂದಿದೆ. ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಅಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಸೆನ್ಸಾರ್ ಹೊಂದಿದೆ. ಹಾಗೆಯೇ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 18W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ.

ಮೋಟೋ G10 ಪವರ್ ಸ್ಮಾರ್ಟ್‌ಫೋನ್
ಮೋಟೋ G10 ಪವರ್ ಸ್ಮಾರ್ಟ್‌ಫೋನ್ 720x1,600 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.5-ಇಂಚಿನ ಹೆಚ್‌ಡಿ + ಡಿಸ್‌ಪ್ಲೇಯನ್ನು ಹೊಂದಿದೆ. ಇದು ಆಕ್ಟಾ-ಕೋರ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 460 SoC ಪ್ರೊಸೆಸರ್ ಅನ್ನು ಒಳಗೊಂಡಿದ್ದು, ಆಂಡ್ರಾಯ್ಡ್ 11 ಬೆಂಬಲದೊಂದಿಗೆ ಕಾರ್ಯನಿರ್ವಹಿಸುತ್ತದೆ. ಹಾಗೆಯೇ ಇದು 4GB RAM ಮತ್ತು 64GB ಇಂಟರ್ ಸ್ಟೋರೇಜ್ ಸಾಮರ್ಥ್ಯವನ್ನು ಹೊಂದಿದೆ. ಇದರೊಂದಿಗೆ ಕ್ವಾಡ್ ರಿಯರ್ ಕ್ಯಾಮೆರಾ ಸೆಟಅಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 48 ಮೆಗಾ ಪಿಕ್ಸೆಲ್ ಸೆನ್ಸಾರ್, 8 ಮೆಗಾ ಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಸಹ ಹೊಂದಿದೆ. ಹಾಗೆಯೇ 6,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 20W ವೇಗದ ಚಾರ್ಜರ್‌ನ ಅನ್ನು ಬೆಂಬಲಿಸಲಿದೆ.


Click it and Unblock the Notifications








