Subscribe to Gizbot

ಬೆಂಗಳೂರಿನ ಈ ಕಂಪೆನಿಗಳಿಂದ ಕೈತುಂಬಾ ಸಂಬಳ

Written By:

ಸಿಲಿಕಾನ್ ಸಿಟಿ ಎಂದೇ ಪ್ರಖ್ಯಾತಗೊಂಡಿರುವ ಬೆಂಗಳೂರು ಟೆಕ್ ಜಗತ್ತಿನಲ್ಲಿ ತನ್ನ ಸಾಮರ್ಥ್ಯವೇನು ಎಂಬುದನ್ನು ತೋರಿಸಿಕೊಟ್ಟಿದೆ. ಹೆಚ್ಚಿನ ಟೆಕ್ ಉದ್ಯಮಿಗಳಿಗೆ ಭದ್ರಬುನಾದಿಯನ್ನು ಕಟ್ಟಿಕೊಡುತ್ತಿರುವ ಬೆಂಗಳೂರು ಬೆಳೆಯುತ್ತಿರು ಟೆಕ್ ಉದ್ಯಮಿಗಳಿಗೆ ಅವಕಾಶದ ಬಾಗಿಲನ್ನೇ ತೆರೆದಿಟ್ಟಿದೆ.

ಓದಿರಿ: 2015 ರ ಮೈಂಡ್‌ ಬ್ಲೋಯಿಂಗ್ ಟೆಕ್‌ ಆವಿಷ್ಕಾರಗಳು

ಇಂದಿನ ಲೇಖನದಲ್ಲಿ ಬೆಂಗಳೂರು ಮಹಾನಗರಿಯಲ್ಲಿ ಕೈತುಂಬಾ ಸಂಬಳ ಮತ್ತು ಹೆಸರು ಗಳಿಸಬಹುದಾದ ಟಾಪ್ ಟೆಕ್ ಸಂಸ್ಥೆಗಳ ಹೆಸರನ್ನು ನಾವು ನೀಡುತ್ತಿದ್ದೇವೆ. ಇಲ್ಲಿ ಉದ್ಯೋಗ ದೊರೆತರೆ ನಿಮ್ಮ ಭಾಗ್ಯದ ಬಾಗಿಲು ತೆರೆದಂತೆಯೇ. ಬನ್ನಿ ಆ ಕಂಪೆನಿಗಳು ಯಾವುವು ಎಂಬುದನ್ನು ನೋಡೋಣ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಪ್ರತಿಭಾವಂತ ಟೆಕ್ಕಿ

ಗೂಗಲ್ ಇಂಡಿಯಾ

ಅತಿದೊಡ್ಡ ಸರ್ಚ್ ಇಂಜಿನ್ ಗೂಗಲ್ ತನ್ನ ಸಂಸ್ಥೆಯಲ್ಲಿ ಉತ್ಸಾಹಿ ಮತ್ತು ಪ್ರತಿಭಾವಂತ ಟೆಕ್ಕಿಗಳಿಗಾಗಿ ಉದ್ಯೋಗವನ್ನು ಒದಗಿಸಿಕೊಡುತ್ತಿದೆ. ನಿಮಗೆ ಎಲ್ಲಾ ರೀತಿಯ ಕೆಲಸಕ್ಕೆ ಸಂಬಂಧಪಟ್ಟ ಸಹಾಯವನ್ನು ಈ ಸಂಸ್ಥೆಯಲ್ಲಿ ನಿಮಗೆ ಮಾಡುತ್ತಾರೆ.

ಜ್ಞಾನಅಭಿವೃದ್ಧಿ

ಇಂಟೆಲ್ ಟೆಕ್ನಾಲಜೀಸ್

ಉತ್ಸಾಹಿ ಟೆಕ್ಕಿಗಳಿಗೆ ಇಂಟೆಲ್ ಭಾಗ್ಯವಾಗಿದೆ. ಇಲ್ಲಿನ ಸಂದರ್ಶನಗಳೂ ಅಷ್ಟೇ ನಿಮ್ಮ ಜ್ಞಾನವನ್ನು ಅಳೆಯುವಷ್ಟರ ಮಟ್ಟಿಗೆ ತೂಕದ್ದಾಗಿರುತ್ತದೆ.

ಆನ್‌ಲೈನ್ ಟ್ರಾವೆಲ್ ಕಂಪೆನಿ

ಮೇಕ್ ಮೈ ಟ್ರಿಪ್

ಭಾರತೀಯ ಆನ್‌ಲೈನ್ ಟ್ರಾವೆಲ್ ಕಂಪೆನಿಯಾಗಿರುವ ಮೇಕ್ ಮೈ ಟ್ರಿಪ್ ಅನ್ನು ದೀಪ್ ಕಾಲ್ರಾ 2000 ದಲ್ಲಿ ಲಾಂಚ್ ಮಾಡಿದರು. ಫ್ಲೈಟ್ ಟಿಕೇಟ್‌ಗಳು, ಬಸ್ ಟಿಕೇಟ್ ಸೇರಿದಂತೆ ಆನ್‌ಲೈನ್ ಟ್ರಾವೆಲ್ ಸೇವೆಗಳನ್ನು ಒದಗಿಸುತ್ತದೆ.

ಸರಳ ಆನ್‌ಲೈನ್ ಸಾಫ್ಟ್‌ವೇರ್

ಇನ್‌ಟ್ಯೂಟ್ ಇಂಡಿಯಾ

ಸಣ್ಣ ಮತ್ತು ಮಧ್ಯಮ ವ್ಯವಹಾರ ಮಾಲೀಕರುಗಳಿಗೆ ಸಹಾಯವನ್ನೊಗಿಸುವ ಸರಳ ಆನ್‌ಲೈನ್ ಸಾಫ್ಟ್‌ವೇರ್ ಸಂಸ್ಥೆ ಆಗಿದ್ದು ಮಾಹಿತಿಯುಕ್ತ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಇದು ನೆರವು ಒದಗಿಸುತ್ತದೆ.

ಭಾರತೀಯ ಮಲ್ಟಿನ್ಯಾಶನಲ್ ಕಂಪೆನಿ

ಎನ್‌ಐಐಟಿ (NIIT)

ಭಾರತೀಯ ಮಲ್ಟಿನ್ಯಾಶನಲ್ ಕಂಪೆನಿ ಎಂದೆನಿಸಿರುವ ಎನ್‌ಐಐಟಿ ಕಾರ್ಪೊರೇಶನ್‌ಗಳು, ಸಂಸ್ಥೆಗಳು ಮತ್ತು ವ್ಯಕ್ತಿಗಳಿಗೆ ತರಬೇತಿ ಪರಿಹಾರಗಳನ್ನು ಒದಗಿಸುತ್ತದೆ.

ಆನ್‌ಲೈನ್ ಪಾವತಿ

ಪೇಪಾಲ್ ಇಂಡಿಯಾ

ವೇಗವಾದ, ಅಂತೆಯೇ ಹಣ ಕಳುಹಿಸಲು ಸುರಕ್ಷಿತ ವಿಧಾನವಾಗಿ ಅಂತೆಯೇ ಆನ್‌ಲೈನ್ ಪಾವತಿಯನ್ನು ಮಾಡುವಲ್ಲಿ ಪೇಪಾಲ್ ಬಳಕೆದಾರರಿಗೆ ಸಹಾಯ ಮಾಡಲಿದೆ.

ಸಾಫ್ಟ್‌ವೇರ್ ಅಪ್ಲಿಕೇಶನ್‌ಗಳ ವಿತರಣೆ

ಸ್ಯಾಪ್ ಲ್ಯಾಬ್ಸ್

ಸಂಶೋಧಕರು, ವಿನ್ಯಾಸಗಳು, ಅಂತೆಯೇ ಸಾಫ್ಟ್‌ವೇರ್ ಅಪ್ಲಿಕೇಶನ್‌ಗಳ ವಿತರಣೆಯನ್ನು ಇದು ಮಾಡುತ್ತದೆ. ಧನಾತ್ಮಕವಾಗಿ ಉದ್ಯೋಗಿಗಳನ್ನು ಪ್ರೇರೇಪಿಸುವ ಕಾರ್ಯವನ್ನು ಈ ಸಂಸ್ಥೆ ಮಾಡುತ್ತದೆ.

ತಂತ್ರಜ್ಞಾನ ಸೇವೆ

ಅಕ್ಸೆಂಚರ್ ಸರ್ವೀಸ್

ಬಹುರಾಷ್ಟ್ರೀಯ ಮ್ಯಾನೇಜ್‌ಮೆಂಟ್ ಕನ್ಸೋಲಿಂಗ್, ತಂತ್ರಜ್ಞಾನ ಸೇವೆಗಳನ್ನು ಇದು ಒದಗಿಸುತ್ತಿದೆ.

ಉದ್ಯೋಗ ವಾತಾವರಣ

ನೆಟ್ ಆಪ್ ಇಂಡಿಯಾ

ಉದ್ಯೋಗಿಗಳಿಗೆ ಮುಕ್ತ, ಪಾರದರ್ಶಕ ಉದ್ಯೋಗ ವಾತಾವರಣವನ್ನು ಇದು ಒದಗಿಸುತ್ತದೆ. ಇದು ಒಂದು ವಿಕಿಪೇಜ್ ಅನ್ನು ತೆರೆದಿದ್ದು ಪ್ರಸ್ತುತ ವಿಧಾನಗಳು ಮತ್ತು ಸಂದರ್ಶನ ನೇಮಕಾತಿ ಮೊದಲಾದ ಮಾಹಿತಿಗಳನ್ನು ಇದು ಒಳಗೊಂಡಿದೆ.

ವೃತ್ತಿಪರ ಅಭಿವೃದ್ಧಿ

ಕ್ವಾಲ್‌ಕಾಮ್

ಉದ್ಯೋಗಿಗಳ ವೃತ್ತಿಪರ ಅಭಿವೃದ್ಧಿಗಾಗಿ ಸಹಕಾರವನ್ನು ನೀಡುವ ಈ ಸಂಸ್ಥೆ ವೈರ್‌ಲೆಸ್ ಟೆಕ್ನಾಲಜಿ ಕೋರ್ಸ್‌ಗಳನ್ನು ಅಭಿವೃದ್ಧಿಪಡಿಸುತ್ತಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Here's over to the 10 best IT workplaces in India's Best Companies to Work for 2012 list.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot