ಸಿಲಿಕಾನ್ ನಗರಿ ಬೆಂಗಳೂರಿನಲ್ಲಿ ಅದೃಷ್ಟ ಖುಲಾಯಿಸಿದ ಟೆಕ್ ಕಂಪೆನಿಗಳು

By Shwetha
|

ಆಧುನೀಕತೆ ಬೆಳೆಯುತ್ತಿದ್ದಂತೆ ನಮ್ಮನ್ನು ನಾವು ಹೆಚ್ಚು ಹೆಚ್ಚು ಪರಿಷ್ಕರಣೆಗೆ ಒಳಪಡಿಸುತ್ತೇವೆ. ಧನಾತ್ಮಕ ಅಂಶಗಳನ್ನು ಪಡೆದುಕೊಂಡು ನಮ್ಮನ್ನು ನಾವು ಹೆಚ್ಚು ಹೆಚ್ಚು ತಯಾರು ಪಡಿಸಿಕೊಳ್ಳುತ್ತೇವೆ. ಈ ತಯಾರಿಕೆಗೆ ಸರಿಯಾದ ಆಧಾರ ಬೇಕಾಗಿದ್ದು ಅಂತಹ ಆಧಾರ ಪ್ರಬಲವಾಗಿದ್ದರೆ ನಮ್ಮ ಗುರಿಯನ್ನು ನಾವು ಯಾವುದೇ ಸೋಲಿಲ್ಲದೆ ತಲುಪುತ್ತೇವೆ.

ಓದಿರಿ:ವಿದ್ಯುತ್‌ ಉತ್ಪಾದಿಸುವ "ಪ್ಲಾಸ್ಟಿಕ್‌ ಹುಲ್ಲು" ಆವಿಷ್ಕರಿಸಿದ ಚೀನಾ

ಬೆಂಗಳೂರಿನಂತಹ ಮಹಾ ನಗರ ಕೂಡ ಈ ಬೆಳೆಯುವಿಕೆ ತಕ್ಕ ಮಣೆ ಮತ್ತು ಮನ್ನಣೆಯನ್ನು ಹಾಕುತ್ತಿದ್ದು ತಂತ್ರಜ್ಞಾನ ಪ್ರಗತಿಗೆ ಈ ನಗರ ಸ್ವರ್ಗ ಎಂದೆನಿಸಿದೆ. ಇತರ ಮಹಾನಗರಗಳು ಹೇಗೆ ತಂತ್ರಜ್ಞಾನ ಪ್ರಗತಿಯನ್ನು ಬೆನ್ನುತಟ್ಟಿ ಪ್ರೋತ್ಸಾಹಿಸುತ್ತದೆಯೋ ಅಂತೆಯೇ ಸಿಲಿಕಾನ್ ಸಿಟಿ ಕೂಡ ಈಗ ಟೆಕ್ ಕಂಪೆನಿಗಳಿಗೆ ಬೆಂಬಲವನ್ನು ನೀಡುತ್ತಿದೆ. ಇಂದಿನ ಲೇಖನದಲ್ಲಿ ಬೆಂಗಳೂರಿನಲ್ಲಿ ನೆಲೆ ನಿಂತ ಟಾಪ್ ಕಂಪೆನಿಗಳ ಪರಿಚಯವನ್ನು ನಾವು ನಿಮಗೆ ಮಾಡಿಕೊಡುತ್ತಿದ್ದು ಅವುಗಳೂ ನಿಮಗೆ ಸ್ಫೂರ್ತಿ ನೀಡಲಿ.

ಎಜಿಟ್ಯಾಪ್

ಎಜಿಟ್ಯಾಪ್

ಈ ಸಂಸ್ಥೆ ಮೊಬೈಲ್ ಆಧಾರಿತ ಪಾವತಿಗಳ ಸೇವೆಯನ್ನು ಒದಗಿಸುತ್ತಿದ್ದು ಬೆಂಗಳೂರಿನಲ್ಲಿ ತನ್ನ ಪ್ರಗತಿಪೂರ್ಣ ಮಾರುಕಟ್ಟೆಯನ್ನು ಹೊಂದಿದೆ. ಇದು 2011 ರಲ್ಲಿ ಅಭಿಜಿತ್ ಬೋಸ್‌ನಿಂದ ಸ್ಥಾಪನೆಯಾಯಿತು.

ಸೋರ್ಸ್ ಬಿಟ್ಸ್

ಸೋರ್ಸ್ ಬಿಟ್ಸ್

ಸ್ಯಾನ್ ಫ್ರಾನಿಸ್ಕೊ ಮೂಲದ ಈ ಕಂಪೆನಿ ಬೆಂಗಳೂರಿನಲ್ಲಿ ಕೂಡ ತನ್ನ ಶಾಖೆಯನ್ನು ಹೊಂದಿದೆ. ಜಿಇ, ಸ್ಯಾಪ್, ಇಂಟೆಲ್‌ನಂತಹ ಕಂಪೆನಿಗಳಿಗೆ ಪರಿಹಾರವನ್ನು ಒದಗಿಸುವ ಹರಿಕಾರನಾಗಿ ಇದು ಕಾರ್ಯನಿರ್ವಹಿಸುತ್ತದೆ.

ಕುಲಿಜಾ

ಕುಲಿಜಾ

ಅಪ್ಲಿಕೇಶನ್ ಮತ್ತು ವೇದಿಕೆಗಳನ್ನು ಒದಗಿಸುವ ಕಂಪೆನಿ ಇದಾಗಿದ್ದು ಎಚ್‌ಡಿಎಫ್‌ಸಿ, ಬೋಶ್, ಟೈಟನ್, ಫೋರ್ಡ್, ನಿಸಾನ್, ಫ್ಲಿಪ್‌ಕಾರ್ಟ್ ಇದರ ಕ್ಲೈಂಟ್‌ಗಳಾಗಿವೆ.

ಪೇಯು ಮನಿ

ಪೇಯು ಮನಿ

ಭಾರತದಲ್ಲಿ ಹೆಚ್ಚುವರಿ ಪೇಮೆಂಟ್ ಪ್ರೊಸೆಸ್ ಅನ್ನು ಮಾಡುವ ಕಂಪೆನಿಯಾಗಿದೆ ಪೇಯು ಮನಿ. ಇದರ ಸ್ಥಾಪಕರು ನಿತಿನ್ ಗುಪ್ತ.

ಜಿಂಪ್ಲೈ

ಜಿಂಪ್ಲೈ

ಆನ್‌ಲೈನ್ ಮತ್ತು ಆಫ್‌ಲೈನ್ ಶಾಪಿಂಗ್ ತಲೆನೋವಿಗೆ ಸೂಕ್ತ ಪರಿಹಾರವನ್ನು ಜಿಂಪ್ಲೈ ನೀಡುತ್ತದೆ. ಪೀಠೋಪಕರಣಗಳು, ಮನೆಬಳಕೆಯ ವಸ್ತುಗಳನ್ನು ಈ ಕಂಪೆನಿ ಗ್ರಾಹಕರಿಗೆ ಒದಗಿಸುತ್ತದೆ.

ಕೋಡ್ ನೇಶನ್

ಕೋಡ್ ನೇಶನ್

ಸಾಫ್ಟ್‌ವೇರ್ ಕಂಪೆನಿಯಾಗಿರುವ ಕೋಡ್ ನೇಶನ್ ಬೆಂಗಳೂರಿನ ಒಂದು ವಿಖ್ಯಾತ ಟೆಕ್ ಸ್ಟಾರ್ಟಪ್ ಆಗಿ ಹೊರಹೊಮ್ಮಿದೆ.

ಮೆಕ್‌ಫಿ

ಮೆಕ್‌ಫಿ

ಇಂಟೆಲ್ ಸೆಕ್ಯುರಿಟಿಯ ಭಾಗವಾಗಿರುವ ಮೆಕ್‌ಫಿ ವರ್ಧಿತ ಹಾರ್ಡ್‌ವೇರ್ ಭದ್ರತೆಯನ್ನು ಗ್ರಾಹಕರಿಗೆ ಒದಗಿಸುತ್ತದೆ.

ಥಾಟ್ ವರ್ಕ್ಸ್

ಥಾಟ್ ವರ್ಕ್ಸ್

ಜಾಗತಿಕ ಸಾಫ್ಟ್‌ವೇರ್ ಕಂಪೆನಿಯಾಗಿರುವ ಥಾಟ್ ವರ್ಕ್ಸ್ ಸಾಫ್ಟ್‌ವೇರ್ ಸಂಬಂಧಿತ ಸಮಸ್ಯೆಗಳಿಗೆ ಪರಿಹಾರವನ್ನು ಕ್ಷಣದಲ್ಲಿ ಇದು ಒದಗಿಸುತ್ತದೆ.

ಜೋಪ್ಪರ್.ಕಾಮ್

ಜೋಪ್ಪರ್.ಕಾಮ್

ಸ್ಥಳೀಯ ಸ್ಟೋರ್‌ಗಳಿಂದ ಮೊಬೈಲ್ ಫೋನ್ ಮೂಲಕ ಶಾಪಿಂಗ್ ಮಾಡುವ ಅನುಕೂಲವನ್ನು ಜೋಪ್ಪರ್.ಕಾಮ್ ಗ್ರಾಹಕರಿಗೆ ಒದಗಿಸುತ್ತದೆ.

ಜಿಪ್ ಡಯಲ್

ಜಿಪ್ ಡಯಲ್

ಮಿಸ್ ಕಾಲ್ ಮಾರುಕಟ್ಟೆಯ ಮೂಲಕ ಗ್ರಾಹಕರನ್ನು ಹೆಚ್ಚು ತೊಡಗಿಸುತ್ತದೆ. ಮೊಬೈಲ್ ಮಾರ್ಕೆಟಿಂಗ್ ಮತ್ತು ಅನಾಲಿಟಿಕ್ಸ್ ಪ್ಲಾಟ್‌ಫಾರ್ಮ್ ಇದಾಗಿದ್ದು ಮಾರುಕಟ್ಟೆದಾರರು ಇದನ್ನು ಬಳಸಿ ತಮ್ಮ ಗ್ರಾಹಕರನ್ನು ಇದರಲ್ಲಿ 100% ವ್ಯಸ್ಥರಾಗಿರುವಂತೆ ಮಾಡುತ್ತಾರೆ.

ಇನ್‌ಮೊಬಿ

ಇನ್‌ಮೊಬಿ

ಮೊಬೈಲ್ ಇಕೋಸಿಸ್ಟಮ್‌ಗೆ ಇದು ನೆರವನ್ನು ನೀಡುತ್ತದೆ. ಮೊಬೈಲ್ ಕಂಪೆನಿಯಾಗಿರುವ ಇನ್‌ಮೊಬಿ ಸ್ಮಾರ್ಟರ್ ನಿರ್ಧಾರವನ್ನು ತೆಗೆದುಕೊಳ್ಳಲು ಗ್ರಾಹಕರಿಗೆ ನೆರವನ್ನು ನೀಡುತ್ತದೆ.

ಮೈಂಡ್ ಟ್ರಿ

ಮೈಂಡ್ ಟ್ರಿ

ಮೈಂಡ್ ಟ್ರಿ ಸ್ಲೋಗನ್ ವೆಲ್‌ಕಮ್ ಟು ಪಾಸಿಬಲ್ ಎಂದಾಗಿದೆ. ಇದು 200 ಕ್ಲೈಂಟ್‌ಗಳು ಮತ್ತು 14 ದೇಶಗಳಲ್ಲಿ ಕಚೇರಿಗಳನ್ನು ಹೊಂದಿದೆ. ಇ ಕಾಮರ್ಸ್, ಮೊಬಿಲಿಟಿ, ಕ್ಲೌಡ್ ಎನಾಬ್ಲಮೆಂಟ್ ಸೇವೆಯನ್ನು ಇದು ನೀಡುತ್ತದೆ.

 ಐಬಿಎಮ್

ಐಬಿಎಮ್

ಭಾರತದಲ್ಲಿ ಐಬಿಎಮ್ 1992 ರಿಂದ ತನ್ನ ಪ್ರಸ್ತುತಿಯನ್ನು ಸಾದರಪಡಿಸುತ್ತಿದೆ. ಉದ್ಯೋಗಿಗಳಿಗೆ ಇದು ಉತ್ತಮ ಅವಕಾಶವನ್ನು ಒದಗಿಸುತ್ತದೆ.

ವರಿಜೋನ್

ವರಿಜೋನ್

ಅತಿ ದೊಡ್ಡ ಕಮ್ಯೂನಿಕೇಶನ್ ತಂತ್ರಜ್ಞಾನ ಕಂಪೆನಿಯಾಗಿರುವ ವರಿಜೋನ್ ತನ್ನನ್ನು ಸಮಸ್ಯೆ ಪರಿಹರಿಸುವವರು, ಇಂಜಿನಿಯರ್, ತಂತ್ರಜ್ಞಾನ ಪರಿಣಿತ ಎಂದೇ ಕರೆಯಿಸಿಕೊಂಡಿದೆ. ಕೋರ್ಡ್, ವರ್ಡ್ಸ್, ಪಿಕ್ಸರ್ಸ್ ಅಥವಾ ನಂಬರ್ಸ್ ಬಗ್ಗೆ ಚಿಂತಿಸುತ್ತಿದ್ದೀರಿ ಎಂದಾದಲ್ಲಿ ವರಿಜೋನ್ ಅನ್ನು ಸಂಪರ್ಕಿಸಿ.

ಸ್ಯಾನ್ ಡಿಸ್ಕ್

ಸ್ಯಾನ್ ಡಿಸ್ಕ್

25 ವರ್ಷಗಳಿಗಿಂತಲೂ ಹೆಚ್ಚು ಕಾಲ, ಟ್ರಾನ್ಸ್‌ಫೋರ್ಮಿಂಗ್ ಡಿಜಿಟಲ್ ಸ್ಟೋರೇಜ್ ಸಂಸ್ಥೆಯಾಗಿದೆ. ಡೇಟಾ ಕೇಂದ್ರಗಳು ಇದನ್ನು ಬಳಸುತ್ತಿದ್ದು, ಹೆಚ್ಚಿನ ಸುಧಾರಿತ ಸ್ಮಾರ್ಟ್‌ಫೋನ್‌ಗಳು, ಟ್ಯಾಬ್ಲೆಟ್ಸ್, ಲ್ಯಾಪ್‌ಟಾಪ್ಸ್ ಇದರ ಪ್ರಯೋಜನವನ್ನು ಪಡೆದುಕೊಳ್ಳುತ್ತಿದೆ.

ಹೆಚ್ಚಿನ ಓದಿಗಾಗಿ

ಹೆಚ್ಚಿನ ಓದಿಗಾಗಿ

ತ್ವರೆ ಮಾಡಿ! ಬಜೆಟ್ ಬೆಲೆಯಲ್ಲಿ ಹೆಚ್ಚು ಬ್ಯಾಟರಿ ಸಾಮರ್ಥ್ಯದ ಫೋನ್ಸ್</a><br />ಓದಿರಿ:<a href=ಆಪಲ್‌ ಕಂಪನಿ ಸಂದರ್ಶನದ ಕಷ್ಟಕರ ಪ್ರಶ್ನೆ ಏನು ಗೊತ್ತೇ ?
ಓದಿರಿ:ಆಂಡ್ರಾಯ್ಡ್ ಬ್ಯಾಟರಿ ದೀರ್ಘತೆಗಾಗಿ 15 ರಹಸ್ಯಗಳು" title="ತ್ವರೆ ಮಾಡಿ! ಬಜೆಟ್ ಬೆಲೆಯಲ್ಲಿ ಹೆಚ್ಚು ಬ್ಯಾಟರಿ ಸಾಮರ್ಥ್ಯದ ಫೋನ್ಸ್
ಓದಿರಿ:ಆಪಲ್‌ ಕಂಪನಿ ಸಂದರ್ಶನದ ಕಷ್ಟಕರ ಪ್ರಶ್ನೆ ಏನು ಗೊತ್ತೇ ?
ಓದಿರಿ:ಆಂಡ್ರಾಯ್ಡ್ ಬ್ಯಾಟರಿ ದೀರ್ಘತೆಗಾಗಿ 15 ರಹಸ್ಯಗಳು" loading="lazy" width="100" height="56" />ತ್ವರೆ ಮಾಡಿ! ಬಜೆಟ್ ಬೆಲೆಯಲ್ಲಿ ಹೆಚ್ಚು ಬ್ಯಾಟರಿ ಸಾಮರ್ಥ್ಯದ ಫೋನ್ಸ್
ಓದಿರಿ:ಆಪಲ್‌ ಕಂಪನಿ ಸಂದರ್ಶನದ ಕಷ್ಟಕರ ಪ್ರಶ್ನೆ ಏನು ಗೊತ್ತೇ ?
ಓದಿರಿ:ಆಂಡ್ರಾಯ್ಡ್ ಬ್ಯಾಟರಿ ದೀರ್ಘತೆಗಾಗಿ 15 ರಹಸ್ಯಗಳು

Best Mobiles in India

English summary
In this article we are listed some famous Bangalore tech companies which will encourage carrier building. This city is giving full support for tech companies to grow..

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X