Subscribe to Gizbot

ವಿದ್ಯುತ್‌ ಉತ್ಪಾದಿಸುವ "ಪ್ಲಾಸ್ಟಿಕ್‌ ಹುಲ್ಲು" ಆವಿಷ್ಕರಿಸಿದ ಚೀನಾ

Written By:

ವಿದ್ಯುತ್ ಅನ್ನು ಗಾಳಿಯಿಂದ ಉತ್ಪಾದನೆ ಮಾಡಿದ್ದಾರೆ, ನೀರಿನಿಂದ ಉತ್ಪಾದನೆ ಮಾಡಿದ್ದಾರೆ, ಸಮುದ್ರದ ಅಲೆಗಳಿಂದ ಉತ್ಪಾದನೆ ಮಾಡಿದ್ದಾರೆ. ಸೂರ್ಯನ ಬೆಳಕಿನಿಂದ ವಿದ್ಯುತ್‌ ಉತ್ಪಾದನೆ ಮಾಡಿದ್ದಾರೆ. ಅಲ್ಲದೇ ಸ್ಮಾರ್ಟ್‌ಫೋನ್‌ ಚಾರ್ಜ್‌ ವಿಷಯಕ್ಕೆ ಬಂದರಂತು ಕುತೂಹಲಕಾರಿಯಾದ ಸ್ಮಾರ್ಟ್‌ಫೋನ್‌ ಚಾರ್ಜಿಂಗ್ ವಿಧಾನಗಳನ್ನು ನೋಡಬಹುದು. ಕನ್ನಡ ಗಿಜ್‌ಬಾಟ್‌ ಲೇಖನಗಳನ್ನು ಓದುತ್ತಿದ್ದರೆ ನಿಮಗೆ ಅಂತಹ ಲೇಖನಗಳು ಸಿಗುತ್ತವೆ. ಮುಖ್ಯ ವಿಷಯಕ್ಕೆ ಬರುತ್ತೇನೆ. ಓದುಗರಿಗೆ ನನ್ನದೊಂದು ಪ್ರಶ್ನೆ ಏನಪ್ಪಾ ಅಂದ್ರೆ "ಪ್ಲಾಸ್ಟಿಕ್‌ ಹುಲ್ಲು" ಬಗ್ಗೆ ಎಲ್ಲಾದ್ರು ಮಾಹಿತಿ ಕೇಳಿದ್ದೀರ. 'ಖಂಡಿತ ಇಲ್ಲ' ಎಂಬುದು ನಿಮ್ಮ ಉತ್ತರ. ಪ್ಲಾಸ್ಟಿಕ್‌ ಹುಲ್ಲಿನಿಂದ ವಿದ್ಯುತ್‌ ಉತ್ಪಾದನೆ ಬಗ್ಗೆ ಕೇಳಿದ್ದೀರ ? ಅದು ಇಲ್ಲ, ಎಂಬುದು ನಿಮ್ಮ ಉತ್ತರವಾಗಿರುತ್ತದೆ. ಆದರೆ ಈ ಬಗ್ಗೆ ವಿಶೇಷ ಮಾಹಿತಿಯನ್ನು ನಾವು ನಿಮಗೆ ನೀಡುತ್ತೇವೆ.

ಓದಿರಿ:ಕರೆಂಟ್‌ ಇಲ್ಲದೇ ಬಟ್ಟೆ ಒಗೆಯುವ ವಾಷಿಂಗ್‌ ಮಷಿನ್‌

ಚೀನಾ ಪರಿಸರ ಮಾಲಿನ್ಯಕ್ಕೆ ಹೆಸರುವಾಸಿ ಎಂಬುದು ಗೊತ್ತೇಇದೆ. ಆದರೆ ನೆನಪಿಡಿ ಚೀನಾ ಈಗ ನವೀಕರಿಸಬಹುದಾದ ಇಂಧನ ಅಭಿವೃದ್ದಿಯಲ್ಲಿ ಅಮೇರಿಕಕ್ಕಿಂತ ಮುಂದೆ ಇದೆ. ಚೀನಾ ಈಗ ಅಚ್ಚರಿಯಾದ ಹೊಸ ಆವಿಷ್ಕಾರವನ್ನು ಕೈಗೊಂಡಿದೆ. ಚೀನಾ "ಪ್ಲಾಸ್ಟಿಕ್‌ ಹುಲ್ಲು"(Plastic Grass) ಅಭಿವೃದ್ದಿಪಡಿಸುತ್ತಿದ್ದು, ಗಾಳಿಯೂ ಪ್ಲಾಸ್ಟಿಕ್‌ ಹುಲ್ಲಿನ ಮೇಲ್ಮೈನಲ್ಲಿ ಬೀಸಿದರೆ ಪ್ಲಾಸ್ಟಿಕ್‌ ಹುಲ್ಲು ವಿದ್ಯುತ್‌ ಉತ್ಪಾದನೆ ಮಾಡುತ್ತದಂತೆ. ಈ ಬಗ್ಗೆ ವಿಶೇಷ ಮಾಹಿತಿಯನ್ನು ಲೇಖನದ ಸ್ಲೈಡರ್‌ಗಳಲ್ಲಿ ಓದಿ ತಿಳಿಯಿರಿ..

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಪ್ಲಾಸ್ಟಿಕ್‌ ಹುಲ್ಲು

ಪ್ಲಾಸ್ಟಿಕ್‌ ಹುಲ್ಲು

ಚೀನಾದ ಚೆಂಗ್ಡು ನೈಋತ್ಯ ಜಿಯಾಟಾಂಗ್‌ ವಿಶ್ವವಿದ್ಯಾಲಯದ ವಿಜ್ಞಾನಿಗಳು ಸರಳ ರೀತಿಯಲ್ಲಿ ಪ್ಲಾಸ್ಟಿಕ್‌ ಹುಲ್ಲನ್ನು ಅಭಿವೃದ್ದಿಪಡಿಸಿದ್ದಾರೆ.

ಝಾಂಗ್ ಲಿನ್ ವಾಂಗ್

ಝಾಂಗ್ ಲಿನ್ ವಾಂಗ್

ಪ್ಲಾಸ್ಟಿಕ್‌ ಹುಲ್ಲು ಸಂಶೋಧನೆ ಮಾಡಿದ ವಿಜ್ಞಾನಿಗಳ ಗುಂಪಿನ ನೇತೃತ್ವವನ್ನು "ಝಾಂಗ್ ಲಿನ್ ವಾಂಗ್ " ವಹಿಸಿದ್ದಾರೆ. ಇವರು ಹೊಸ ವಿಧದ ಟ್ರೈಬೊಇಲೆಕ್ಟ್ರಿಕ್‌ ನ್ಯಾನೋ-ಜೆನೆರೇಟರ್‌ ತಯಾರಿಸಿದ್ದು ಹೊಸ ತಂತ್ರಜ್ಞಾನ ಮಾದರಿಯಾಗಿದೆ. ಇದರ ವಿಶೇಷತೆ ಎಂದರೆ ಈ ತಂತ್ರಜ್ಞಾನವು ಉಷ್ಣ ಶಕ್ತಿಯನ್ನು ವಿದ್ಯುತ್‌ ಆಗಿ ಪರಿರ್ತಿಸುತ್ತದೆ.

 ನ್ಯಾನೋ-ಜೆನೆರೇಟರ್‌

ನ್ಯಾನೋ-ಜೆನೆರೇಟರ್‌

ನ್ಯಾನೋ ಜೆನೆರೇಟರ್‌ ಮೂರು ತತ್ವಗಳ ಆಧಾರದಲ್ಲಿ ಕೆಲಸ ನಿರ್ವಹಿಸುತ್ತದೆ. ಪೈಜೋಇಲೆಕ್ಟ್ರಿಕ್‌, ಟ್ರೈಬೊಇಲೆಕ್ಟ್ರಿಕ್‌, ಪೈರೊಇಲೆಕ್ಟ್ರಿಕ್‌ ತತ್ವಗಳು.

TENG (ಟ್ರೈಬೊಇಲೆಕ್ಟ್ರಿಕ್‌ ನ್ಯಾನೋ ಜೆನೆರೇಟರ್‌) ಕಾರ್ಯ

TENG (ಟ್ರೈಬೊಇಲೆಕ್ಟ್ರಿಕ್‌ ನ್ಯಾನೋ ಜೆನೆರೇಟರ್‌) ಕಾರ್ಯ

ಯಾಂತ್ರಿಕ ಶಕ್ತಿ ಮತ್ತು ಉಷ್ಣ ಶಕ್ತಿ ಎಂದು ಎರಡು ರೀತಿಯ ಕಾರ್ಯವಿಧಾನ ಇದರಲ್ಲಿ ನಡೆಯುತ್ತದೆ. ಪಾಲಿಥೈಲೇನ್‌ ಟೆರೆಫ್ಥಲೇಟ್‌ ನಿಂದ ತೆಳುವಾಗಿ ರಚಿಸಲಾದ TENG ಲಂಬವಾಗಿ ಪಟ್ಟಿಗಳ ಮೇಲೆ ನಿಂತಿರುತ್ತದೆ. ಇದು ಇಂಡಿಯಂ ಟಿನ್‌ ಆಕ್ಸೈಡ್‌(ITO) ಇಂದ ಆವೃತವಾಗಿರುತ್ತದೆ. ಇನ್ನೊಂದು ಕಡೆಯಿಂದ ನ್ಯಾನೋವೈರ್‌ಗಳಿಂದ ಆವೃತ್ತವಾಗಿದ್ದು, ಜೊತೆಗೆ ಇಲೆಕ್ಟ್ರಾನ್ಸ್‌ಗಳನ್ನು 2 ವಸ್ತುಗಳ ನಡುವೆ ಚಾಲನೆ ಮಾಡಲು ಹೊಂದಿರುತ್ತದೆ. ಈ ಮಾಹಿತಿಯು "Advanced Materials" ನಿಯತಕಾಲಿಕೆಯಲ್ಲಿ ಪ್ರಕಟವಾಗಿದೆ.

ಗಾಳಿ ಬೀಸಿದಾಗ ವಿದ್ಯುತ್‌ ಉತ್ಪಾದನೆ

ಗಾಳಿ ಬೀಸಿದಾಗ ವಿದ್ಯುತ್‌ ಉತ್ಪಾದನೆ

TENG ಸ್ಟ್ರಿಪ್‌ 154Hz ಆವರ್ತನ ವೈಬ್ರೇಶನ್‌ ಅನ್ನು ತಯಾರಿಸಿ ವಿದ್ಯುತ್‌ ನೀಡಲು ಸಹಕರಿಸುತ್ತದೆ. 10*2cm ನ 2 ಸ್ಟ್ರಿಪ್‌ಗಳು 27m/s ಗಾಳಿ ವೇಗದಿಂದ 98V ವಿದ್ಯುತ್‌ ಅನ್ನು ಉತ್ಪಾದಿಸುತ್ತವೆ.

 60 ಸ್ಟ್ರಿಪ್‌ಗಳು

60 ಸ್ಟ್ರಿಪ್‌ಗಳು

TENG ಬಿಲ್ಟಿಂಗ್‌ಗಳ ಮೇಲ್ಛಾವಣಿಯ ಮೇಲೆ 60 ಸ್ಟ್ರಿಪ್‌ಗಳನ್ನು ಅಳವಡಿಸಿ 2.37 Wm-2 ವಿದ್ಯುತ್‌ ಸಾಂದ್ರತೆಯನ್ನು ಜನೆರೇಟ್‌ ಮಾಡುವ ಸಾಮರ್ಥ್ಯವನ್ನು ಸಂಶೋಧನಾ ತಂಡ ಹೊಂದಿದೆ. ಈ ವಿದ್ಯುತ್‌ 60LED ಬಲ್ಪ್‌ಗಳಿಗೆ ಬೆಳಕು ಹರಿಸಲು ಸಾಧ್ಯವಾಗುತ್ತದೆ ಎನ್ನಲಾಗಿದೆ.

 ವಿದ್ಯುತ್‌

ವಿದ್ಯುತ್‌

TENG, ಮನೆಗಳಿಗೆ ಬೇಕಾದ ವಿದ್ಯುತ್‌ ನೀಡಲು ಸಾಮರ್ಥ್ಯವನ್ನು ಹೊಂದಿದೆ. ಆದರೆ ಈ ಸಂಶೋಧನೆಯನ್ನು ಲ್ಯಾಬ್‌ನಲ್ಲಿ ಪರೀಕ್ಷಿಸಿರುವುದರಿಂದ, ಗ್ರಾಹಕರಿಗೆ ತಲುಪುವವರೆಗೆ ಕಾಯಬೇಕಾಗಿದೆ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
China Is Developing Plastic Grass That Generates Electricity When Wind Blows Over It. Read more about this in kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot