ಜಸ್ಟ್ 5,000ರೂ. ಬೆಲೆಯಲ್ಲಿ ಖರೀದಿಸಬಹುದಾದ 5 ಇಯರ್‌ಬಡ್ಸ್‌!

|

ಸ್ಮಾರ್ಟ್‌ಫೋನ್‌ ಇದ್ದ ಮೇಲೆ ಅದಕ್ಕೊಂದು ಇಯರ್‌ಫೋನ್ ಇರಲೇಬೇಕು. ಆದರೆ ಇದೀಗ ಟ್ರೆಂಡ್ ಬದಲಾಗಿದ್ದು, ಫೋನ್ ಬಳಕೆದಾರರು ಇಯರ್‌ಫೋನ್ ಬದಲಾಗಿ ಇಯರ್‌ಬಡ್ಸ್‌ಗಳ ಬಳಕೆಯತ್ತ ಆಕರ್ಷಿತರಾಗುತ್ತಿದ್ದಾರೆ. ಏಕೆಂದರೇ ಇಯರ್‌ಫೋನ್‌ಗಿಂತ ಇಯರ್‌ಬಡ್ಸ್‌ಗಳು ಹೆಚ್ಚು ಕಂಫರ್ಟ್‌ ಮತ್ತು ಟ್ರೆಂಡಿ ಲುಕ್ ಪಡೆದಿವೆ. ಆದರೆ ಬಜೆಟ್‌ ದರದಲ್ಲಿ ಬೆಸ್ಟ್‌ ಫೀಚರ್ಸ್‌ ಪಡೆದಿರುವ ಇಯರ್‌ಬಡ್ಸ್‌ ಆಕರ್ಷಕ ಅನಿಸುತ್ತವೆ.

ಪ್ರತಿಷ್ಠಿತ

ಹೌದು, ಸದ್ಯ ಮಾರುಕಟ್ಟೆಯಲ್ಲಿ ಭಿನ್ನ ಬೆಲೆಯ ಪ್ರೈಸ್‌ಟ್ಯಾಗ್‌ನಲ್ಲಿ ಇಯರ್‌ಬಡ್ಸ್‌ಗಳು ಲಭ್ಯ ಇವೆ. ಅವುಗಳಲ್ಲಿ ಪ್ರತಿಷ್ಠಿತ ಕಂಪನಿಗಳ ಇಯರ್‌ಬಡ್ಸ್‌ಗಳು ಗುಣಮಟ್ಟ ಜೊತೆಗೆ ಹೆಚ್ಚಿನ ಆಡಿಯೊ ಸೌಲಭ್ಯಗಳನ್ನು ಪಡೆದಿರುತ್ತವೆ. ಈ ನಿಟ್ಟಿನಲ್ಲಿ ಬಹುತೇಕ ಗ್ರಾಹಕರು ಬ್ರ್ಯಾಂಡೆಂಡ್ ಇಯರ್‌ಬಡ್ಸ್‌ ಖರೀದಿಗೆ ಮುಂದಾಗುತ್ತಾರೆ. ಮತ್ತೆ ಕೆಲವರು ಬಜೆಟ್‌ ಬೆಲೆಯಲ್ಲಿಯೇ ಸಿಗುವ ಉತ್ತಮ ಆಡಿಯೊ ಇಯರ್‌ಬಡ್ಸ್‌ಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಸದ್ಯ ಮಾರುಕಟ್ಟೆಯಲ್ಲಿ ಲಭ್ಯ ಇರುವ 5,000ರೂ. ಒಳಗಿನ ಐದು ಬೆಸ್ಟ್‌ ಇಯರ್‌ಬಡ್ಸ್‌ಗಳು ಯಾವುವು ಎನ್ನುವ ಬಗ್ಗೆ ಈ ಲೇಖನದಲ್ಲಿ ತಿಳಿಸಲಾಗಿದೆ. ಮುಂದೆ ಓದಿರಿ.

ಒಪ್ಪೊ Enco W51

ಒಪ್ಪೊ Enco W51

ಒಪ್ಪೊ ಕಂಪನಿಯ ಒಪ್ಪೊ Enco W51 ಡಿವೈಸ್‌ 4,990ರೂ.ಗಳ ಪ್ರೈಸ್‌ಟ್ಯಾಗ್‌ ಅನ್ನು ಪಡೆದುಕೊಂಡಿದೆ. ಈ ಡಿವೈಸ್‌ ಉತ್ತಮ ಎಎನ್‌ಸಿ ಕಾರ್ಯಕ್ಷಮತೆ ಮತ್ತು ಬಾಸ್ಸಿ ಸೌಂಡ್ ಪ್ರೊಫೈಲ್‌ ಇದೆ. ವೈರ್‌ಲೆಸ್ ಚಾರ್ಜಿಂಗ್ ಇದ್ದು, ಯಾವಾಗಲೂ ಯುಎಸ್‌ಬಿ-ಸಿ ಚಾರ್ಜರ್ ಅನ್ನು ಪ್ಲಗ್ ಮಾಡುವ ಅಗತ್ಯವಿಲ್ಲ. ಇದರ ಬ್ಯಾಟರಿ ಬಾಳಿಕೆ ಅದ್ಭುತವಾಗಿದೆ.

ಒನ್‌ಪ್ಲಸ್ ಬಡ್ಸ್ Z

ಒನ್‌ಪ್ಲಸ್ ಬಡ್ಸ್ Z

ಒನ್‌ಪ್ಲಸ್‌ ಬಡ್ಸ್‌ ಕಂಪನಿಯ ಒನ್‌ಪ್ಲಸ್ ಬಡ್ಸ್ Z ಇಯರ್‌ಬಡ್ಸ್‌ ಡಿವೈಸ್‌ ಸಹ ಆಕರ್ಷಕ ಲುಕ್ ಪಡೆದಿದ್ದು, ಇದರ ಬೆಲೆಯು ಜಸ್ಟ್‌ 2,899ರೂ. ಆಗಿದೆ. ಈ ಡಿವೈಸ್‌ IP55-ರೇಟೆಡ್ ಧೂಳು- ಮತ್ತು ಬೆವರು-ನಿರೋಧಕ ನಿರ್ಮಾಣ ಮತ್ತು ನಿಷ್ಕ್ರಿಯ ಶಬ್ದ ರದ್ದತಿಗಾಗಿ ಸಿಲಿಕೋನ್ ಇಯರ್ ಸುಳಿವುಗಳನ್ನು ಹೊಂದಿದೆ. ಇನ್ನು ಈ ಇಯರ್‌ಬಡ್ಸ್‌ 10mm ಆಡಿಯೊ ಡ್ರೈವರ್‌ಗಳನ್ನು ಹೊಂದಿದೆ.

ಶಿಯೋಮಿಯ ಮಿ ಟ್ರೂ ವಾಯರ್‌ಲೆಸ್‌ ಇಯರ್‌ಫೋನ್ 2

ಶಿಯೋಮಿಯ ಮಿ ಟ್ರೂ ವಾಯರ್‌ಲೆಸ್‌ ಇಯರ್‌ಫೋನ್ 2

ಶಿಯೋಮಿ ಕಂಪನಿಯ ಮಿ ಟ್ರೂ ವಾಯರ್‌ಲೆಸ್‌ ಇಯರ್‌ಫೋನ್ 2 ಇಯರ್‌ಬಡ್‌ಗಳು 14.2mm ಡೈನಾಮಿಕ್ ಆಡಿಯೋ ಡ್ರೈವರ್ ಅನ್ನು ಒಳಗೊಂಡಿದೆ. ಅಲ್ಲದೆ ಈ ಇಯರ್‌ಫೋನ್‌ ಟೈಟಾನಿಯಂ ಕಾಂಪೋಸಿಟ್ ಡಯಾಫ್ರಾಮ್ ಅನ್ನು ಸಹ ಒಳಗೊಂಡಿರುತ್ತವೆ. ಇದಲ್ಲದೆ ಮಿ ಟ್ರೂ ವೈರ್‌ಲೆಸ್ ಇಯರ್‌ಫೋನ್ಸ್ 2 ಅರ್ಧದಷ್ಟು ಕಿವಿಯ ವಿನ್ಯಾಸವನ್ನು ಹೊಂದಿದೆ, ಈ ಡಿವೈಸ್‌ ಬೆಲೆಯು ಜಸ್ಟ್‌ 2,999ರೂ. ಆಗಿದೆ.

ಒಪ್ಪೊ ಎನ್ಕೊ W31

ಒಪ್ಪೊ ಎನ್ಕೊ W31

ಕಂಪನಿಯ ಎನ್ಕೊ W31 ಟ್ರೂಲಿ ವಾಯರ್‌ಲೆಸ್‌ ಇಯರ್‌ಫೋನ್‌ ಕಡಿಮೆ ಲೇಟೆನ್ಸಿ ಟ್ರಾನ್ಸ್‌ಮಿಷನ್‌ ಇನ್-ಇಯರ್ ವಿನ್ಯಾಸವನ್ನು ಹೊಂದಿದೆ. ಇದರ ವಿನ್ಯಾಸವು ನಿಮ್ಮ ಕಿವಿಗಳ ಒಳಗೆ ಸಿಲಿಕೋನ್ ಕಿವಿ ಸುಳಿವುಗಳೊಂದಿಗೆ ಸುರಕ್ಷಿತವಾಗಿ ಕೂರುವುದಕ್ಕೆ ಅನುಕೂಲವಾಗಿದೆ. ಇದಲ್ಲದೆ ಈ ಇಯರ್‌ಫೋನ್‌ಗಳು ಧೂಳು ಮತ್ತು ವಾಟರ್‌ ಪ್ರೂಫ್‌ ವ್ಯವಸ್ಥೆಯನ್ನ ಹೊಂದಿದೆ. ಈ ಡಿವೈಸ್‌ 3,499ರೂ.ಗಳ ಪ್ರೈಸ್‌ಟ್ಯಾಗ್‌ ಹೊಂದಿದೆ.

ರಿಯಲ್‌ಮಿ ಬಡ್ಸ್‌ ಏರ್‌ ಪ್ರೊ

ರಿಯಲ್‌ಮಿ ಬಡ್ಸ್‌ ಏರ್‌ ಪ್ರೊ

ರಿಯಲ್‌ಮಿ ಬಡ್ಸ್‌ ಏರ್‌ ಪ್ರೊ ಆಕ್ಟಿವ್‌ ನಾಯ್ಸ್‌ ಕ್ಯಾನ್ಸಲೇಶನ್‌ ಸಿಸ್ಟಂ ಅನ್ನು ಹೊಂದಿರುವ ರಿಯಲ್‌ಮಿ ಸಂಸ್ಥೆಯ ಮೊದಲ ವಾಯರ್‌ಲೆಸ್‌ ಇಯರ್‌ಫೋನ್‌ ಆಗಿದೆ. ಇನ್ನು ಈ ಬಡ್ಸ್ ಏರ್ ಪ್ರೊ 35DB ವರೆಗಿನ ಶಬ್ದ ಕಡಿತವನ್ನು ಭರವಸೆ ನೀಡುತ್ತದೆ. ಅಲ್ಲದೆ ಎಎನ್‌ಸಿ ಮತ್ತು ವಾಯ್ಸ್‌ ಕಾಲ್‌ಗಳಿಗಾಗಿ ಡ್ಯುಯಲ್-ಮೈಕ್ರೊಫೋನ್ ವ್ಯವಸ್ಥೆಯನ್ನು ಹೊಂದಿದೆ. ಜೊತೆಗೆ 94ms ಕಡಿಮೆ ಲೇಟೆನ್ಸಿ ಮೋಡ್, ಪಾರದರ್ಶಕತೆ ಮೋಡ್, ಇಯರ್‌ಫೋನ್‌ ಮತ್ತು ಕೇಸ್‌ನಲ್ಲಿ 25 ಗಂಟೆಗಳ ಬ್ಯಾಟರಿ ಅವಧಿಯನ್ನು ಹೊಂದಿದೆ. ಇನ್ನು ಈ ಡಿವೈಸ್‌ ಬೆಲೆಯು 4,999ರೂ. ಆಗಿದೆ.

Best Mobiles in India

English summary
Top TWS earbuds to buy under Rs 5,000 in February 2021.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X