Just In
- 3 hrs ago
ಏರ್ಟೆಲ್ 5G+ ಯಿಂದ ರೈತರಿಗೆ ನೆರವು; ಭಾರೀ ಇಳುವರಿ ಪಡೆಯಬಹುದು!
- 6 hrs ago
ಮತ್ತೆ ಮರಳಿದ ರಿಲಯನ್ಸ್ ಡಿಜಿಟಲ್ ಇಂಡಿಯಾ ಸೇಲ್; ಆಫರ್ಗಳ ಸುರಿಮಳೆ!
- 23 hrs ago
2023ರಲ್ಲಿ ಸ್ಮಾರ್ಟ್‌ಫೋನ್ ಖರೀದಿಸುವ ಮುನ್ನ ನೀವು ಗಮನಿಸಲೇಬೇಕಾದ ವಿಚಾರಗಳು!
- 23 hrs ago
Ooredoo ಸಂಸ್ಥೆಯಿಂದ ಮೈಕ್ರೋಸಾಫ್ಟ್ ಟೀಮ್ಸ್ ಫೋನ್ ಬಗ್ಗೆ ಘೋಷಣೆ; ಯಾರಿಗೆ ಉಪಯೋಗ!?
Don't Miss
- Movies
Lakshana Serial: ಮನೆಗೆ ಬಂದ ಮೌರ್ಯ! ಮುಂದೇನು?
- News
Ballari utsav: ಗಾಯಕಿ ಮಂಗ್ಲಿ ಕಾರಿನ ಗ್ಲಾಸ್ ಪುಡಿ ಪುಡಿ ಮಾಡಿದ ಕಿಡಿಗೇಡಿಗಳು
- Sports
IND vs NZ: ಭಾರತದ ಶುಭ್ಮನ್ ಗಿಲ್ ಬ್ಯಾಟಿಂಗ್ ಕುರಿತು ಪಿಸಿಬಿ ಮಾಜಿ ಅಧ್ಯಕ್ಷ ಹೇಳಿದ್ದೇನು?
- Finance
ಎಚ್ಡಿಎಫ್ಸಿಯಿಂದ 10ವರ್ಷದಲ್ಲಿ 30ಶತಕೋಟಿ ಸಂಗ್ರಹದ ಚಿಂತನೆ
- Automobiles
ಬೆಲೆ ಇಳಿಸಿ, ಹೆಚ್ಚಿನ ಮೈಲೇಜ್ನೊಂದಿಗೆ ಟಾಟಾ ಬಿಡುಗಡೆಗೊಳಿಸಿದ ನೆಕ್ಸಾನ್ ಇವಿ ವಿಶೇಷತೆಗಳು
- Lifestyle
ವಾರ ಭವಿಷ್ಯ ಜ.22-ಜ.28: ಈ ವಾರ ಯಾವ ರಾಶಿಯವರಿಗೆ ಅದೃಷ್ಟ, ಯಾರು ಸ್ವಲ್ಪ ಜಾಗ್ರತೆವಹಿಸಬೇಕು ನೋಡಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಈ ತಿಂಗಳು ಫೋನ್ ಖರೀದಿಸುವ ಪ್ಯ್ಲಾನ್ ಇದೆಯಾ?.ಹಾಗಿದ್ರೆ ಸ್ವಲ್ಪ ಕಾಯಿರಿ!
ಪ್ರತಿ ತಿಂಗಳು ಮಾರುಕಟ್ಟೆಗೆ ಅಗ್ಗದ ಬೆಲೆಯಿಂದ ದುಬಾರಿ ಬೆಲೆಯ ಶ್ರೇಣಿಯಲ್ಲಿ ಹಲವು ಹೊಸ ಸ್ಮಾರ್ಟ್‌ಫೋನ್‌ಗಳು ಎಂಟ್ರಿ ಕೊಡುತ್ತವೆ. ಅವುಗಳಲ್ಲಿ ಕೆಲವು ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಯಲ್ಲಿ ಯಾವುದೇ ಸದ್ದು ಮಾಡದೇ ಮರೆಯಾಗುತ್ತವೆ. ಆದ್ರೆ, ಇನ್ನು ಕೆಲವು ಸ್ಮಾರ್ಟ್‌ಫೋನ್‌ಗಳು ಅವು ಮಾರುಕಟ್ಟೆಗೆ ಎಂಟ್ರಿ ಕೊಡುವುದಕ್ಕೂ ಮುಂಚೆಯೇ ಗ್ರಾಹಕರಲ್ಲಿ ನಿರೀಕ್ಷೆಗಳನ್ನು ಮೂಡಿಸಿರುತ್ತವೆ.

ಹೌದು, ಅತ್ಯುತ್ತಮ ಕ್ಯಾಮೆರಾ, ಪ್ರೊಸೆಸರ್, ಬ್ಯಾಟರಿ ಮತ್ತು ಬೆಲೆಯಿಂದಾಗಿ ಗ್ರಾಹಕರಲ್ಲಿ ಭಾರಿ ನಿರೀಕ್ಷೆಗಳನ್ನು ಮೂಡಿಸಿರುತ್ತವೆ. ಅಂಥಹ ಸ್ಮಾರ್ಟ್‌ಫೋನ್‌ಗಳಿಗಾಗಿ ಗ್ರಾಹಕರು ಸಹ ಎದುರು ನೋಡುತ್ತಿರುತ್ತಾರೆ. ಹಾಗೆಯೇ ಇದೇ ಸೆಪ್ಟಂಬರ್ ತಿಂಗಳಿನಲ್ಲಿಯೂ ಕೆಲವು ಬಹುನಿರೀಕ್ಷಿತ ಸ್ಮಾರ್ಟ್‌ಫೋನ್‌ಗಳು ಬಿಡುಗಡೆ ಆಗಲಿದ್ದು, ಆ ಫೋನ್‌ಗಳಿಗಾಗಿ ಗ್ರಾಹಕರಂತೂ ಕಾತುರದಿಂದ ಕಾಯುತ್ತಿದ್ದಾರೆ. ಹಾಗಾದರೇ ಮಾರುಕಟ್ಟೆಗೆ ಈ ತಿಂಗಳು ಲಾಂಚ್ ಆಗಲಿರುವ 5 ಪ್ರಮುಖ ಸ್ಮಾರ್ಟ್‌ಫೋನ್‌ಗಳು ಯಾವುವು ಎಂಬುದನ್ನು ಮುಂದೆ ನೋಡೋಣ.

ಐಫೋನ್ 11 ಸರಣಿ
ಜನಪ್ರಿಯ ಐಫೋನ್ 11 ಸರಣಿ ಇದೇ ಸೆಪ್ಟಂಬರ್ 10ರಂದು ಬಿಡುಗಡೆ ಆಗುವುದು ಬಹುತೇಕ ಖಚಿತವಾಗಿದೆ. ಈಗಾಗಲೇ ಐಫೋನ್ 11 ಸರಣಿ ವಿಶೇಷ ಫೀಚರ್ಸ್‌ಗಳ ಕುರಿತು ಮಾಹಿತಿಗಳು ಲೀಕ್ ಆಗಿದ್ದು, ಐಫೋನ್ ಪ್ರಿಯರ ನಿರೀಕ್ಷೆಗಳನ್ನು ಡಬಲ್ ಮಾಡಿವೆ. ಈ ಐಫೋನ್ 11 ಸರಣಿಯು 'ಐಫೋನ್ 11 ಪ್ರೊ, 'ಐಫೋನ್ 11 ಆರ್' ಮತ್ತು 'ಐಫೋನ್ 11 ಪ್ರೊ ಮ್ಯಾಕ್ಸ್' ಮಾದರಿಗಳನ್ನು ಒಳಗೊಂಡಿರಲಿದೆ. ಈ ಸರಣಿಯು ಹೊಸ ಬಣ್ಣಗಳ ಆಯ್ಕೆ ಮತ್ತು ಐಓಎಸ್ 13 ಓಎಸ್ ಹೊಂದಿರಲಿದೆ.

ವಿವೋ ನೆಕ್ಸ್ 3
ವಿವೋ ಕಂಪನಿಯ ಇದೇ ಸೆಪ್ಟಂಬರ್ 12ರಂದು 'ವಿವೋ ನೆಕ್ಸ್ 3' ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಲು ಉತ್ಸುಕವಾಗಿದೆ. ಈ ಫೋನ್ ಸಹ ಈಗಾಗಲೇ ತನ್ನ ಬಿಗ್ ಬ್ಯಾಟರಿ ಬ್ಯಾಕ್‌ಅಪ್ ಮತ್ತು 44W ಫಾಸ್ಟ್ ಚಾರ್ಜಿಂಗ್ ತಂತ್ರಜ್ಞಾನದಿಂದ ಗ್ರಾಹಕರಲ್ಲಿ ನಿರೀಕ್ಷೆಗಳನ್ನು ಮೂಡಿಸಿದೆ. ಹಾಗೆಯೇ ಈ ಸ್ಮಾರ್ಟ್‌ಫೋನ್ ತ್ರಿವಳಿ ಕ್ಯಾಮೆರಾ ಸೆಟ್‌ಅಪ್ ಒಳಗೊಂಡಿದ್ದು, ಸೆಲ್ಫಿಗಾಗಿ ಪಾಪ್‌ಅಪ್ ಕ್ಯಾಮೆರಾ ಹೊಂದಿರಲಿದೆ. ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 855 SoC ಪ್ರೊಸೆಸರ್ ಶಕ್ತಿಯನ್ನು ಪಡೆದಿರಲಿದೆ.

ಒಪ್ಪೊ ರೆನೋ 2
ಚೀನಾ ಮೂಲದ ಜನಪ್ರಿಯ ಒಪ್ಪೊ ಕಂಪನಿಯು ರೆನೋ ಸರಣಿಯ ಮೂಲಕ ಗ್ರಾಹಕರಿಂದ ಸೈ ಎನಿಸಿಕೊಂಡಿದ್ದು, ಅದರ ಮುಂದುವರಿದ ಭಾಗವಾಗಿ ಇದೀಗ ಒಪ್ಪೊ ರೆನೋ 2 ಲಾಂಚ್‌ಗೆ ತಯಾರಾಗಿದೆ. ಈ ಫೋನ್ 20X ಜೂಮ್ ಸಾಮರ್ಥ್ಯದೊಂದಿಗೆ 48ಎಂಪಿ ಕ್ಯಾಮೆರಾ ಸೆನ್ಸಾರ್ ಹೊಂದಿದ್ದು, ಸ್ನ್ಯಾಪ್‌ಡ್ರಾಗನ್ 730G ಚಿಪ್‌ಸೆಟ್ ಇರಲಿದೆ. ಹಾಗೆಯೇ 4000mAh ಬ್ಯಾಟರಿ ಒಳಗೊಂಡಿರಲಿದ್ದು, VOOC ಫಾಸ್ಟ್ ಚಾರ್ಜಿಂಗ್ ಸೌಲಭ್ಯವನ್ನು ಪಡೆದಿರಲಿದೆ.

ರಿಯಲ್ ಮಿ Q
ಜನಪ್ರಿಯ ಸ್ಮಾರ್ಟ್‌ಫೋನ್ ಕಂಪನಿಗಳ ಪೈಕಿ ಇಂದಾಗಿರುವ 'ರಿಯಲ್ ಮಿ' ಯು ಸಹ ಇದೀಗ ಹೈ ಎಂಡ್ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಲು ಸಜ್ಜಾಗಿದೆ. ಇದೇ ಸೆಪ್ಟೆಂಬರ್ 5ರಂದು ಚೀನಾದಲ್ಲಿ ರಿಯಲ್ ಮಿ Q ಸ್ಮಾರ್ಟ್‌ಫೋನ್ ಲಾಂಚ್ ಮಾಡುವುದಾಗಿ ತಿಳಿಸಿದೆ. ರಿಯಲ್ ಮಿ Q ಸ್ಮಾರ್ಟ್‌ಫೋನ್ ಸಹ 48ಎಂಪಿ ಕ್ಯಾಮೆರಾ ಒಳಗೊಂಡಿರಲಿದ್ದು, ಸೋನಿಯ IMX586 ಸೆನ್ಸಾರ್ ಕ್ಯಾಮೆರಾ ಪಡೆದಿರಲಿದೆ. ಹಾಗೆಯೇ ಸ್ನ್ಯಾಪ್‌ಡ್ರಾಗನ್ 712 ಪ್ರೊಸೆಸರ್ ಬಲ ಇರಲಿದೆ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470