Home
ಸುದ್ದಿಜಾಲ

ಭಾರತದಲ್ಲಿ ತೋಶಿಬಾ ಮಿನಿ 4K ಸ್ಮಾರ್ಟ್‌ಟಿವಿ ಲಾಂಚ್!..ಬೆಲೆ ಕೇಳಿದ್ರೆ, OMG ಅಂತೀರಾ!

ಟೆಕ್‌ ವಲಯದಲ್ಲಿ ತೋಶಿಬಾ ಸಂಸ್ಥೆಯು ತನ್ನದೇ ಸ್ಥಾನ ಉಳಿಸಿಕೊಂಡು ಮುನ್ನಡೆದಿದೆ. ಇದೀಗ ತೋಶಿಬಾ ಸಂಸ್ಥೆಯು ಭಾರತದಲ್ಲಿ ಹೊಸದಾಗಿ ಮಿನಿ LED ಸ್ಮಾರ್ಟ್‌ ಟಿವಿ ಅನ್ನು ಬಿಡುಗಡೆ ಮಾಡಿದೆ. ಈ ಸ್ಮಾರ್ಟ್‌ ಟಿವಿಯ ಹೆಸರು M650 ಆಗಿದೆ. ಇನ್ನು ಈ ನೂತನ ಸ್ಮಾರ್ಟ್‌ ಟಿವಿಯ ಬೆಲೆ ಮತ್ತು ಫೀಚರ್ಸ್‌ ಬಗ್ಗೆ ತಿಳಿದ್ರೆ ನೀವು ಖಂಡಿತಾ ಅಚ್ಚರಿ ಪಡ್ತೀರಾ.

ಹೌದು, ತೋಶಿಬಾ ಕಂಪನಿಯು ನೂತನವಾಗಿ ದೇಶಿಯ ಮಾರುಕಟ್ಟೆಗೆ M650 ಹೆಸರಿನ ಮಿನಿ ಎಲ್‌ಇಡಿ ಸ್ಮಾರ್ಟ್‌ ಟಿವಿ ಅನ್ನು ಪರಿಚಯಿಸಿದೆ. ಈ ಸ್ಮಾರ್ಟ್‌ ಟಿವಿಯು 55 ಇಂಚಿನ ಹಾಗೂ 65 ಇಂಚಿನ ಗಾತ್ರಗಳ ಆಯ್ಕೆಯಲ್ಲಿ ಗ್ರಾಹಕರಿಗೆ ಲಭ್ಯವಾಗಲಿದೆ. ಇದು ಕ್ವಾಂಟಮ್ ಡಾಟ್ ಕಲರ್ ಮತ್ತು ಫುಲ್ ಅರೇ ಲೋಕಲ್ ಡಿಮ್ಮಿಂಗ್ ಪ್ರೊ ತಂತ್ರಜ್ಞಾನವನ್ನು ಒಳಗೊಂಡಿದೆ.

ಭಾರತದಲ್ಲಿ ತೋಶಿಬಾ ಮಿನಿ ಸ್ಮಾರ್ಟ್‌ಟಿವಿ ಲಾಂಚ್!..ಬೆಲೆ ಕೇಳಿದ್ರೆ,  OMG ಅಂತೀರಾ

ತೋಶಿಬಾ 4K ಮಿನಿ LED ಸ್ಮಾರ್ಟ್ ಟಿವಿ M650 ಅಲ್ಟ್ರಾ ತೆಳುವಾದ ಬೆಜೆಲ್‌ಗಳು ಮತ್ತು ಸ್ಲಿಮ್ ವಿನ್ಯಾಸದ ರಚನೆ ಅನ್ನು ಹೊಂದಿದೆ. ಈ ಟಿವಿಯು ಮೆಟಲ್‌ ಸ್ಟ್ಯಾಂಡ್ ಅನ್ನು ಹೊಂದಿದ್ದು, ಇದು ಸಂಪೂರ್ಣವಾಗಿ ಪರಿಸರ ಸ್ನೇಹಿಯಾಗಿದೆ ಎಂದು ಕಂಪನಿ ಹೇಳಿಕೊಂಡಿದೆ. ಇನ್ನು ಈ ಟಿವಿಯು ಡಾಲ್ಬಿ ವಿಷನ್‌ IQ ಮತ್ತು HDR10+ ಅಡಾಪ್ಟಿವ್ ಕಂಟೆಂಟ್ ಪಡೆದಿದ್ದು, 600 nits ಗರಿಷ್ಠ ಬ್ರೈಟ್ನೆಸ್‌ ಒಳಗೊಂಡಿದೆ.

ಅದೇ ರೀತಿ M650 ಸ್ಮಾರ್ಟ್ ಟಿವಿಯಲ್ಲಿ ಗೇಮಿಂಗ್‌ನಲ್ಲಿ ಬಳಸಬಹುದಾದ ಹೆಚ್ಚಿನ ರಿಫ್ರೆಶ್ ರೇಟ್‌ಗೆ ಸ್ಕ್ರೀನ್‌ ಸಪೋರ್ಟ್‌ ಅನ್ನು ಹೊಂದಿದೆ. ಕಣ್ಣಿನ ಆಯಾಸಕ್ಕಾಗಿ ಕಡಿಮೆ ಮಾಡುವ ಸಲುವಾಗಿ, ಇದ್ರಲ್ಲಿ ಐ-ಕೇರ್ ಬ್ಲೂ ತಂತ್ರಜ್ಞಾನವನ್ನು ಒಳವಡಿಸಲಾಗಿದೆ. ಸೂಪರ್ ಕಾಂಟ್ರಾಸ್ಟ್ ಬೂಸ್ಟರ್, ಕಲರ್ ರೀಮಾಸ್ಟರ್ ಪ್ರೊ ಮತ್ತು ಪಿಕ್ಚರ್ ಆಪ್ಟಿಮೈಸರ್ ತಂತ್ರಜ್ಞಾನ ಒಳಗೊಂಡಂತೆ AI ಫೀಚರ್ಸ್‌ಗಳ ಬೆಂಬಲ ಇದೆ.

M650 ಸ್ಮಾರ್ಟ್ ಟಿವಿಯು ಒಟ್ಟು 49 ವ್ಯಾಟ್‌ಗಳ ವಾಯಿಸ್‌ ಔಟ್‌ಪುಟ್ ಸೌಲಭ್ಯ ಅನ್ನು ಪಡೆದಿದೆ. ಇದರ ಜೊತೆಗೆ ಆಡಿಯೊ ಗುಣಮಟ್ಟವನ್ನು ಹೆಚ್ಚಿಸಲು ಇದು REGZA ಸೌಂಡ್, ಡೈಲಾಗ್ ಎನ್‌ಹಾನ್ಸರ್, 360 ಸೌಂಡ್ ಅಪ್‌ಸ್ಕೇಲಿಂಗ್ ಮತ್ತು REGZA ಬಾಸ್ ವೂಫರ್‌ ಸಪೋರ್ಟ್‌ ಅನ್ನು ಪಡೆದಿದೆ.

ಅಲ್ಲದೇ ತೋಶಿಬಾ 4K ಮಿನಿ LED ಸ್ಮಾರ್ಟ್‌ ಟಿವಿಯು VIDAA OS ಅನ್ನು ಪಡೆದುಕೊಂಡಿದ್ದು, ನೆಟ್‌ಫ್ಲಿಕ್ಸ್‌ ಓಟಿಟಿ, ಅಮೆಜಾನ್‌ ಪ್ರೈಮ್‌ ವಿಡಿಯೋ ಓಟಿಟಿ, ಯಪ್ಪ ಟಿವಿ, ಯೂಟ್ಯೂಬ್‌, ಹಂಗಾಮಾ, ಡೈಲಿ ಪ್ಲೇ ಮೋಷನ್‌ ಸೇರಿದಂತೆ ಇತರೆ ಓಟಿಟಿ ಸ್ಟ್ರೀಮಿಂಗ್‌ ಪ್ಲಾಟ್‌ಫಾರ್ಮ್‌ ಗಳ ಸಪೋರ್ಟ್‌ ಸಹ ಇದು ಪಡೆದಿದೆ.

ಅಂದಾಹಗೆ ಕನೆಕ್ಟಿವಿಟಿಗಾಗಿ, ಈ ಸ್ಮಾರ್ಟ್‌ ಟಿವಿಯಲ್ಲಿ ಆಪಲ್‌ ಏರ್‌ಪ್ಲೇ, ಬ್ಲೂಟೂತ್‌ 5.0, ಡ್ಯುಯಲ್-ಬ್ಯಾಂಡ್ ವೈ ಫೈ, HDMI 2.1 ಮತ್ತು USB ಪೋರ್ಟ್‌ಗಳ ಸಪೋರ್ಟ್‌ ಅನ್ನು ಒಳಗೊಂಡಿದೆ. ಇನ್ನು ಈ ಟಿವಿಯು ಹೊಂದಿರುವ HDMI ಮತ್ತು USB ಪೋರ್ಟ್‌ಗಳ ನಂಬರ್‌ ಅನ್ನು ಕಂಪನಿಯು ನಿರ್ದಿಷ್ಟವಾಗಿ ಬಹಿರಂಗ ಮಾಡಿಲ್ಲ.

ಮಾರುಕಟ್ಟೆಗೆ ಎಂಟ್ರಿ ಪಡೆದಿರುವ ನೂತನ ತೋಶಿಬಾ M650 ಸ್ಮಾರ್ಟ್ ಟಿವಿಯು ಇತ್ತೀಚಿಗೆ ಟ್ರೆಂಡ್‌ನಲ್ಲಿರುವ ವಾಯಿಸ್‌ ಅಸಿಸ್ಟಂಟ್‌ ಸೌಲಭ್ಯ ಪಡೆದಿದೆ. ಟಿವಿ ರಿಮೋಟ್‌ನಿಂದ ನೇರವಾಗಿ ಪ್ರವೇಶಿಸಬಹುದಾದ ಅಲೆಕ್ಸಾ, ವಿಡಾ ವಾಯ್ಸ್ ಮತ್ತು ಗೂಗಲ್ ಅಸಿಸ್ಟೆಂಟ್ ಸೇರಿದಂತೆ ಬಹು ವಾಯಿಸ್‌ ಅಸಿಸ್ಟಂಟ್‌ ಸಪೋರ್ಟ್‌ ಅನ್ನು ಹೊಂದಿದೆ.

ತೋಶಿಬಾ 4K ಮಿನಿ LED ಸ್ಮಾರ್ಟ್‌ ಟಿವಿಯು ಜನಪ್ರಿಯ ಅಮೆಜಾನ್ ತಾಣದಲ್ಲಿ ಜುಲೈ 15 ರಿಂದ ಪ್ರಾರಂಭವಾಗುವ ಅಮೆಜಾನ್ ಪ್ರೈಮ್ ಡೇ ಸೇಲ್‌ನಲ್ಲಿ ಖರೀದಿಗೆ ಲಭ್ಯವಾಗಲಿದೆ. 55 ಇಂಚಿನ ಟಿವಿ ಬೆಲೆ 54,999ರೂ ಮತ್ತು 65 ಇಂಚಿನ ಟಿವಿ ಬೆಲೆ 74,999ರೂ. ಆಗಿದೆ. ಇವುಗಳು ಪರಿಚಯಾತ್ಮಕ ಬೆಲೆ ಆಗಿದ್ದು, ನಂತರದ ದಿನಗಳಲ್ಲಿ ಬೆಲೆ ಏರಿಕೆ ಆಗಲಿವೆ ಎನ್ನಲಾಗಿದೆ.

Best Mobiles in India

English summary
Toshiba 4K Mini LED Smart TV M650 Launched in India. Check Price, Specifications and sale details here.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+