ತೋಷಿಬಾದ 43 ಇಂಚಿನ ಸ್ಮಾರ್ಟ್‌ಟಿವಿಗೆ ಬರೋಬ್ಬರಿ 41% ಡಿಸ್ಕೌಂಟ್!
ಸ್ಮಾರ್ಟ್‌ಟಿವಿಗಳು ಇಂದು ಅಗ್ಗದ ಬೆಲೆಗೆ ಲಭ್ಯವಾದರೂ ಅಗತ್ಯ ಫೀಚರ್ಸ್‌ಗಳು ಇರುವುದಿಲ್ಲ.ಆದರೆ, ಸ್ಮಾರ್ಟ್‌ಗ್ಯಾಜೆಟ್ ವಿಭಾಗದಲ್ಲಿ ವಿಶೇಷ ಜನಪ್ರಿಯತೆ ಪಡೆದುಕೊಂಡಿರುವ ತೋಷಿಬಾ ಕಂಪೆನಿಯ ಸ್ಮಾರ್ಟ್‌ಟಿವಿಗಳು ಅತ್ಯದ್ಭುತ ಫೀಚರ್ಸ್‌ಗಳನ್ನು ಪಡೆದುಕೊಂಡಿದ್ದು, ಇವು ಬಳಕೆದಾರರಿಗೆ ಹಲವಾರು ರೀತಿಯಲ್ಲಿ ಪ್ರಯೋಜನ ನೀಡಲಿವೆ. ಈ ನಡುವೆ ತೋಷಿಬಾದ ಈ ಸ್ಮಾರ್ಟ್‌ಟಿವಿಗೆ ಭರ್ಜರಿ ಆಫರ್ ಘೋಷಣೆ ಮಾಡಲಾಗಿದೆ.
ಹೌದು, ತೋಷಿಬಾ V35KP (Toshiba V35KP) ಸ್ಮಾರ್ಟ್‌ಟಿವಿಗೆ ಮಾರುಕಟ್ಟೆಯಲ್ಲಿ ಬರೋಬ್ಬರಿ 41% ರಿಯಾಯಿತಿ ಘೋಷಣೆ ಮಾಡಲಾಗಿದೆ. ಈ ಸ್ಮಾರ್ಟ್‌ಟಿವಿ ಕಲರ್ ರೀ-ಮಾಸ್ಟರ್ ತಂತ್ರಜ್ಞಾನವನ್ನು ಹೊಂದಿದ್ದು ಈ ಮೂಲಕ ಅತ್ಯುತ್ತಮ ನೋಟ ಲಭ್ಯವಾಗಲಿದೆ. ಹಾಗೆಯೇ ಗೇಮ್ ಪ್ರಿಯರಿಗಂತೂ ಸಾಕಷ್ಟು ಅನುಕೂಲ. ಹಾಗಿದ್ರೆ, ಮತ್ಯಾಕೆ ತಡ ಬನ್ನಿ ಈ ಸ್ಮಾರ್ಟ್‌ಟಿವಿಯ ಪ್ರಮುಖ ಫೀಚರ್ಸ್ ಹಾಗೂ ಆಫರ್ ಬೆಲೆಗಳ ಬಗ್ಗೆ ಮಾಹಿತಿ ತಿಳಿದುಕೊಳ್ಳೋಣ.

ತೋಷಿಬಾ V35KP ಡಿಸ್‌ಪ್ಲೇ ವಿವರ: ಈ ಸ್ಮಾರ್ಟ್‌ಟಿವಿ 43 ಇಂಚಿನ ಎಲ್‌ಇಡಿ ಫುಲ್ ಹೆಚ್‌ಡಿ ಡಿಸ್‌ಪ್ಲೇ ಹೊಂದಿದ್ದು, 1920 x 1080 ಪಿಕ್ಸೆಲ್ ರೆಸಲ್ಯೂಶನ್ ನೀಡಲಿದೆ. ಹಾಗೆಯೇ 60 Hz ರಿಫ್ರೆಶ್ ರೇಟ್ ಆಯ್ಕೆ ಹೊಂದಿದೆ. ಇದರೊಂದಿಗೆ 300 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ನೀಡಿಲಿದ್ದು, 178 ಡಿಗ್ರಿ ಕೋನದಲ್ಲಿ ಸ್ಪಷ್ಟ ವೀಕ್ಷಣೆ ಒದಗಿಸಲಿದೆ.
ತೋಷಿಬಾ V35KP ಪ್ರಮುಖ ಫೀಚರ್ಸ್: CA55 x 4 at 1.15 GHz ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸುವ ಈ ಟಿವಿ 1 GB RAM ಹಾಗೂ 8 GB ಇಂಟರ್ ಸ್ಟೋರೇಜ್ ಆಯ್ಕೆ ಪಡೆದುಕೊಂಡಿದೆ. ಇನ್ನುಳಿದಂತೆ REGZA ಹೈ-ಗ್ರೇಡ್ ಇಂಜಿನ್‌ನಿಂದ ಚಾಲಿತವಾಗಿರುವ ಇದು ಕಲರ್ ರೀ-ಮಾಸ್ಟರ್ ತಂತ್ರಜ್ಞಾನವನ್ನು ಹೊಂದಿದ್ದು ಯಾವುದೇ ವಿಡಿಯೋದಲ್ಲಿನ ನೈಜ ಬಣ್ಣಗಳನ್ನು ಖಚಿತಪಡಿಸುತ್ತದೆ. ಇದರಿಂದಾಗಿ ನೀವು ಅತ್ಯುತ್ತಮವಾದ ವೀಕ್ಷಣೆಯ ಅನುಭವವನ್ನು ಪಡೆದುಕೊಳ್ಳಬಹುದು.
ಹೆಚ್ಚಿನ ಕಾಂಟ್ರಾಸ್ಟ್ ಪ್ಯಾನಲ್, ನಾಯ್ಸ್ ರೆಡಕ್ಸನ್ ಫೀಚರ್ಸ್ ಆಯ್ಕೆಯನ್ನು ಈ ಸ್ಮಾರ್ಟ್‌ಟಿವಿ ಪಡೆದುಕೊಂಡಿದ್ದು, ಇದರೊಂದಿಗೆ ಎರಡು ಪೂರ್ಣ ಶ್ರೇಣಿತ ಸ್ಪೀಕರ್‌ಗಳನ್ನು ಹೊಂದಿದೆ. ಇದು ಡಿಜಿಎಸ್ ವರ್ಚುವಲ್ ಎಕ್ಸ್, ಡಾಲ್ಬಿ ಆಡಿಯೋ, ಸ್ಟೀರಿಯೋ ಸ್ಪೀಕರ್ ಸೌಲಭ್ಯವನ್ನು ಪಡೆದುಕೊಂಡಿದ್ದು, 20 W ಸೌಂಡ್ ಔಟ್‌ಪುಟ್ ನೀಡಲಿದೆ.

ಹಾಗೆಯೇ ಕ್ರೀಡೆ, ಚಲನಚಿತ್ರ, ಸಂಗೀತ, ಸುದ್ದಿ ವೀಕ್ಷಣೆ ಸಂದರ್ಭದಲ್ಲಿ ಅದಕ್ಕೆ ತಕ್ಕನಾದ ಸೌಂಡ್ ಫೀಚರ್ಸ್ ಅನ್ನು ನೀಡುವ ವಿಶೇಷ ಆಯ್ಕೆ ಈ ಸ್ಮಾರ್ಟ್‌ಟಿವಿಯಲ್ಲಿದ್ದು, ಇದಕ್ಕಾಗಿ ಈ ಸ್ಮಾರ್ಟ್‌ಟಿವಿ ಡಿಟಿಎಸ್ ವರ್ಚುವಲ್ X, MP3, WMA ಸೇರಿದಂತೆ ಇತರ ಆಡಿಯೋ ಸ್ವರೂಪಗಳಿಗೆ ಬೆಂಬಲ ನೀಡುತ್ತದೆ.
ಇನ್ನು ಕನೆಕ್ಟಿವಿಟಿ ವಿಚಾರದಲ್ಲಿ ಈ ಸ್ಮಾರ್ಟ್‌ಟಿವಿ ಎರಡು ಹೆಚ್‌ಡಿಎಮ್‌ಐ ಪೋರ್ಟ್, ಎರಡು ಯುಎಸ್‌ಬಿ ಪೋರ್ಟ್, ಒಂದು ಹೆಡ್‌ಫೋನ್ ಜ್ಯಾಕ್, RF ಕನೆಕ್ಟಿವಿಟಿ ಇನ್‌ಪುಟ್ ಸೇರಿದಂತೆ ಇತರೆ ಇತರೆ ಕನೆಕ್ಟಿವಿಟಿ ಆಯ್ಕೆಯಗಳನ್ನು ಪಡೆದುಕೊಂಡಿದೆ. ಜೊತೆಗೆ 5000 ಕ್ಕೂ ಹೆಚ್ಚು ಆಪ್‌ಗಳು ಮತ್ತು ಗೇಮ್‌ಗಳನ್ನು ಡೌನ್‌ಲೋಡ್ ಮಾಡುವ ಅವಕಾಶ ನೀಡಲಿದೆ. ಇದರೊಂದಿಗೆ ಗೂಗಲ್ ಅಸಿಸ್ಟೆಂಟ್ ಸೇವೆ ಸಹ ಲಭ್ಯ.

ತೋಷಿಬಾ V35KP ಬೆಲೆ ಹಾಗೂ ಲಭ್ಯತೆ: ಈ ಸ್ಮಾರ್ಟ್‌ಟಿವಿ ಮಾರುಕಟ್ಟೆಯಲ್ಲಿ 34,990ರೂ.ಗಳ ಸಾಮಾನ್ಯ ದರ ಹೊಂದಿದೆ.ಆದರೆ 41% ರಿಯಾಯಿತಿ ಪಡೆದುಕೊಂಡಿದ್ದು, ಈ ಮೂಲಕ ನೀವು 20,499ರೂ.ಗಳಿಗೆ ಈ ಟಿವಿ ಖರೀದಿ ಮಾಡಬಹುದಾಗಿದೆ. ಅದರಂತೆ 9,000ರೂ.ಗಳ ನ್ನು ಉಳಿಕೆ ಮಾಡಿದಂತೆ ಆಗಲಿದೆ. ಇಷ್ಟೇ ಅಲ್ಲದೆ ಕೆಲವು ಬ್ಯಾಂಕ್ ಹಾಗೂ ಇತರೆ ಆಫರ್ ಸಹ ಲಭ್ಯ ಇದ್ದು ಇನ್ನೂ ಕಡಿಮೆ ಬೆಲೆಯಲ್ಲಿ ಈ ಟಿವಿ ಖರೀದಿ ಮಾಡಬಹುದು. ಈ ಆಫರ್ ಫ್ಲಿಪ್‌ಕಾರ್ಟ್‌ನಲ್ಲಿ ಲಭ್ಯ.


Click it and Unblock the Notifications








