Subscribe to Gizbot

ಶಿಯೋಮಿ ಫೋನ್‌ ಕೆಟ್ಟರೇ ತಲೆ ಕೆಡಿಸಿಕೊಳ್ಳಬೇಡಿ..!

Written By:

ಶಿಯೋಮಿ ಭಾರತೀಯ ಮಾರುಕಟ್ಟೆಯಲ್ಲಿ ಹೆಚ್ಚಿನ ಗ್ರಾಹಕನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಕಡಿಮೆ ಬೆಲೆಗೆ ಎಲ್ಲಾ ವಿಭಾಗದಲ್ಲಿ ಉತ್ತಮ ಫೋನ್‌ಗಳನ್ನು ಗ್ರಾಹಕರ ಕೈಗೆ ಇಡುತ್ತಿರುವುದು ಇದಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಮತ್ತಷ್ಟು ಗ್ರಾಹಕರ ನಂಬಿಕೆಯನ್ನು ಗಳಿಸಿಕೊಳ್ಳುವ ಸಲುವಾಗಿ ಶಿಯೋಮಿ ತನ್ನ ಬಳಕೆದಾರರಿಗೆ ಮತ್ತೊಂದು ಸೇವೆಯನ್ನು ನೀಡಲು ಮುಂದಾಗಿದೆ.

ಶಿಯೋಮಿ ಫೋನ್‌ ಕೆಟ್ಟರೇ ತಲೆ ಕೆಡಿಸಿಕೊಳ್ಳಬೇಡಿ..!

ಓದಿರಿ: ವೊಡಾಫೋನ್‌ ಗ್ರಾಹಕರಿಗೆ ಹೊಸ ವರ್ಷಕ್ಕೆ ಸಿಗಲಿದೆ ಬೋನಸ್..! ಏನದು.?

ಶಿಯೋಮಿ ಬಳಕೆದಾರರು ತಮ್ಮ ಸ್ಮಾರ್ಟ್‌ಫೋನ್‌ಗಳನ್ನು ರಿಪೇರಿ ಇಲ್ಲವೇ ಸರ್ವೀಸ್‌ಗೆ ನೀಡಿದ ಸಂದರ್ಭದಲ್ಲಿ ತಮ್ಮ ಫೋನ್ ರೆಡಿಯಾಗಿಯೇ ಇಲ್ಲವೇ, ಯಾವಾಗ ವಾಪಸ್ಸು ದೊರೆಯುತ್ತಿದೆ ಎಂಬುದನ್ನು ಆನ್‌ಲೈನಿನಲ್ಲಿ ಟ್ರಾಕ್‌ ಮಾಡುವ ಹೊಸದೊಂದು ಅವಕಾಶವನ್ನು ಮಾಡಿಕೊಟ್ಟಿದೆ. ಇದರಿಂದಾಗಿ ಗ್ರಾಹಕರು ಮತ್ತೇ ಮತ್ತೇ ಸರ್ವೀಸ್‌ ಸೆಂಟರ್‌ಗಳಿಗೆ ಅಲೆಯುವ ಸಂದರ್ಭ ವಿರುವುದಿಲ್ಲ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

ಮಿ ವೆಬ್‌ ತಾಣದಲ್ಲಿಯೇ ಅವಕಾಶ:

ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಮಿ ವೆಬ್ ತಾಣದಲ್ಲಿ ಯೇ ಈ ಟ್ರಾಕಿಂಗ್ ಸೇವೆಯನ್ನು ನೀಡಲು ಶಿಯೋಮಿ ಮುಂದಾಗಿದೆ ಎನ್ನುವ ವಿಚಾರವನ್ನು ಭಾರತದ ಶಿಯೋಮಿ ಮುಖ್ಯಸ್ಥ ಮನುಕುಮಾರ್ ಜೈನ್ ಟ್ವಿಟರ್ ಮೂಲಕ ತಿಳಿಸಿದ್ದಾರೆ ಎನ್ನಲಾಗಿದೆ.

ಟ್ರಾಕ್ ಮಾಡಿ:

ಟ್ರಾಕ್ ಮಾಡಿ:

ನೀವು ಸರ್ವೀಸ್‌ಗೆ ನೀಡಿದ ಫೋನ್ ಬಗ್ಗೆ ಮಾಹಿತಿಯನ್ನು ಟ್ರಾಕ್ ಮಾಡುವ ಸಲುವಾಗಿ ನೀವು ನಿಮ್ಮ ಕಾಂಟೆಕ್ಟ್ ನಂಬರ್/ಸರ್ವೀಸ್ ನಂಬರ್/IMEI ನಂಬರ್ ಗಳಲ್ಲಿ ಯಾವುದಾದರು ಒಂದನ್ನು ದಾಖಲಿಸಿದರೆ ನಿಮ್ಮ ರಿಜಿಸ್ಟರ್ ಅಗಿರುವ ಮೊಬೈಲ್ ನಂಬರ್‌ಗೆ OTP ಬರಲಿದೆ ಅದನ್ನು ದಾಖಲು ಮಾಡಿದರೆ ನಿಮ್ಮ ಪೋನ್ ಎಲ್ಲಿದೆ ಎಂಬುದು ತಿಳಿಯುತ್ತದೆ.

ಉತ್ತಮ ಸೇವೆ:

ಉತ್ತಮ ಸೇವೆ:

ಸದ್ಯದ ಪರಿಸ್ಥಿತಿಯಲ್ಲಿ ಮೊಬೈಲ್ ಸರ್ವೀಸ್‌ಗೆ ನೀಡಿದ ಮೇಲೆ ಅವರು ಕರೆ ಮಾಡುವ ವರೆಗೂ ನಮ್ಮ ಫೋನ್‌ ಯಾವ ಸ್ಥಿತಿಯಲ್ಲಿದೇ ಎಂಬುದು ತಿಳಿಯುತ್ತಿರಲಿಲ್ಲ, ಆದರೆ ಇನ್ನು ಮುಂದೆ ಶಿಯೋಮಿ ಫೋನ್‌ ಕುರಿತ ಮಾಹಿತಿಯನ್ನು ಆನ್‌ಲೈನಿನಲ್ಲಿ ಪಡೆಯಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
track your Xiaomi phone's repair status online. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot