Subscribe to Gizbot

ವೊಡಾಫೋನ್‌ ಗ್ರಾಹಕರಿಗೆ ಹೊಸ ವರ್ಷಕ್ಕೆ ಸಿಗಲಿದೆ ಬೋನಸ್..! ಏನದು.?

Written By:

ಜಿಯೋ ದೇಶದಲ್ಲಿ 4G VoLTE ಸೇವೆಯನ್ನು ಆರಂಭಿಸಿದ ನಂತರದಲ್ಲಿ ಎಲ್ಲಾ ಟೆಲಿಕಾಂ ಕಂಪನಿಗಳು 4G ಸೇವೆಯನ್ನು ಆರಂಭಿಸಿದವು. ಇದರಲ್ಲಿ ಏರ್‌ಟೆಲ್‌ ಮಾತ್ರವೇ 4G VoLTE ಸೇವೆಯನ್ನು ನಂತರದಲ್ಲಿ ಪರಿಚಯ ಮಾಡಿತ್ತು. ಇದೇ ಮಾದರಿಯಲ್ಲಿ ವೊಡಾಫೋನ್ ಸಹ ಹೊಸ ವರ್ಷದ ಆರಂಭದಲ್ಲಿ 4G VoLTE ಸೇವೆಯನ್ನು ಆರಂಭಿಸುವ ಯೋಜನೆಯನ್ನು ರೂಪಿಸಿದೆ.

ವೊಡಾಫೋನ್‌ ಗ್ರಾಹಕರಿಗೆ ಹೊಸ ವರ್ಷಕ್ಕೆ ಸಿಗಲಿದೆ ಬೋನಸ್..! ಏನದು.?

ಹೊಸ ವರ್ಷದಿಂದ ಹೊಸ ಸೇವೆಯನ್ನು ಆರಂಭಿಸಲಿರುವ ವೊಡಾಪೋನ್ ಮೊದಲಿಗೆ ಮುಂಬೈ, ಗುಜರಾತ್, ದೆಹಲಿ, ಕರ್ನಾಟಕ ಮತ್ತು ಕೊಲ್ಕತ್ತಾದಲ್ಲಿ ಪ್ರಾರಂಭಿಸಲಿದ್ದು, ನಂತರದಲ್ಲಿ ಬೇರೆ ಕಡೆಗಳಲ್ಲಿ ಈ ಸೇವೆಯನ್ನು ಪರಿಚಯಿಸಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಏರ್‌ಟೆಲ್‌ಗಿಂತಲೂ ವೇಗ 4G VoLTE ಸೇವೆಯನ್ನು ವಿಸ್ತರಿಸಲು ಮುಂದಗಿದೆ.

ಓದಿರಿ: ನಿಮ್ಮದು 3G ಫೋನಾ..? ಹೊಸ ವರ್ಷದಿಂದ ವಾಟ್ಸ್‌ಆಪ್‌ ಬಂದ್..! ಏನು ಮಾಡಬೇಕು..?

4G VoLTE ಸೇವೆಯನ್ನು ಆರಂಭಿಸುವ ಸಂದರ್ಭದಲ್ಲಿ ವೊಡಾಪೋನ್ ತನ್ನ ಬಳಕೆದಾರರಿಗೆ ಹೊಸ ಮಾದರಿಯ ಆಫರ್ ಅನ್ನು ನೀಡಲಿದ್ದು, ಅಲ್ಲದೇ ಜಿಯೋ ಮಾದರಿಯಲ್ಲಿ ಉಚಿತ ಕರೆ ಮಾಡುವ ಸೇವೆಯನ್ನು ನೀಡುವ ಸಾಧ್ಯತೆಯೂ ಇದೆ ಎನ್ನಲಾಗಿದೆ. ಒಟ್ಟಿನಲ್ಲಿ ವೊಡಾಫೋನ್ ಗ್ರಾಹಕರಿಗೆ ಇದು ಲಾಭವಾಗುವ ಸಾಧ್ಯತೆ ಇದೆ.

ವೊಡಾಫೋನ್‌ ಗ್ರಾಹಕರಿಗೆ ಹೊಸ ವರ್ಷಕ್ಕೆ ಸಿಗಲಿದೆ ಬೋನಸ್..! ಏನದು.?

ಈ ಹೊಸ ಸೇವೆಯಿಂದಾಗಿ ವೊಡಾಪೋನ್ ಬಳಕೆದಾರರು HD ವಾಯ್ಸ್ ಕಾಲಿಂಗ್ ಮಾಡುವ ಅವಕಾಶವನ್ನು ಮಾಡಿಕೊಡಲಾಗಿದ್ದು, ವೇಗದ 4G ಸೇವೆಯನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ. ಇದರಿಂದಾಗಿ ಡೇಟಾ ವೇಗವು ಅತೀಯಾಗಿ ಇರಲಿದೆ. ಇದೇ ಮಾದರಿಯಲ್ಲಿ BSNL ಸಹ 4Gಸೇವೆಯನ್ನು ಲಾಂಚ್ ಮಾಡುವ ಸನಿಹದಲ್ಲಿದೆ ಎನ್ನಲಾಗಿದೆ.

ಓದಿರಿ: ಗಿಜ್‌ಬಾಟ್ ನೀಡುತ್ತಿದೆ ಹಾನರ್ 7X ಗೆಲ್ಲುವ ಅವಕಾಶ..! ನಿಮಗಿದೆಯೇ ಅದೃಷ್ಟ..?

English summary
Vodafone to Launch 4G VoLTE Services in January. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot