Home
ಸುದ್ದಿಜಾಲ

ಮೊಬೈಲ್‌ ಬಳಕೆದಾರರಿಗೆ ಸಿಹಿಸುದ್ದಿ!..ಮೇ 1 ರಿಂದ ನಿಮಗೆ ಈ ಕಿರಿಕಿರಿ ಇರಲ್ಲ!

ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ (TRAI) ಟೆಲಿಕಾಂ ಬಳಕೆದಾರರ ಉಪಯುಕ್ತ ನಿಯಮಗಳನ್ನು ಜಾರಿ ಮಾಡುತ್ತಾ ಸಾಗಿ ಬಂದಿದೆ. ಇದೀಗ ಮತ್ತೊಂದು ಅನುಕೂಲಕ ನಿಯಮ ತಿಳಿಸಿದ್ದು, ಗ್ರಾಹಕರಿಗೆ ಖುಷಿ ನೀಡಿದೆ. ಸ್ಪ್ಯಾಮ್, ನಕಲಿ ಎಸ್‌ಎಮ್‌ಎಸ್‌ ಮತ್ತು ಗ್ರಾಹಕರಿಗೆ ಪ್ರಚಾರದ ಕರೆಗಳಿಗಾಗಿ ಹೊಸ ನಿಯಮಗಳನ್ನು ತಂದಿದೆ. ಈ ಹೊಸ ನಿಯಮಗಳನ್ನು ಮೇ 1, 2023 ರಿಂದ ಜಾರಿಗೆ ತರಲಾಗುವುದು.

ಹೌದು, ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಮೇ 1, 2023 ರಿಂದ ಗ್ರಾಹಕರಿಗೆ ನಕಲಿ ಕಾಲ್‌ಗಳು, ಪ್ರಚಾರದ ಕಾಲ್‌ಗಳು ಮತ್ತು ಎಸ್‌ಎಂಎಸ್‌ಗಳಿಗೆ ಸಂಬಂಧಿಸಿದ ನಿಯಮಗಳನ್ನು ಬದಲಾಯಿಸುವುದಾಗಿ ತಿಳಿಸದೆ. ಈ ರೀತಿಯ ಕರೆಗಳು ಮತ್ತು ಎಸ್‌ಎಂಎಸ್‌ಗಳಿಗೆ ಬ್ರೇಕ್‌ ಹಾಕಲು ಟ್ರಾಯ್ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಫಿಲ್ಟರ್ ಅನ್ನು ಸೆಟ್ ಮಾಡಲಿದೆ.

ಮೊಬೈಲ್‌ ಬಳಕೆದಾರರಿಗೆ ಸಿಹಿಸುದ್ದಿ!..ಮೇ 1 ರಿಂದ ನಿಮಗೆ ಈ ಕಿರಿಕಿರಿ ಇರಲ್ಲ!

ಕರೆಗಳು ಮತ್ತು ಎಸ್‌ಎಂಎಸ್ ಸೇವೆಗಳಲ್ಲಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಸ್ಪ್ಯಾಮ್‌ ಫಿಲ್ಟರ್ ನಿಂದಾಗಿ ಬಳಕೆದಾರರಿಗೆ ದಿನನಿತ್ಯದ ಅಪೇಕ್ಷಿಸದ ಸ್ಪ್ಯಾಮ್ ಕರೆಗಳು ಮತ್ತು ಎಸ್‌ಎಂಎಸ್‌ಗಳಿಂದ ಟೆಲಿಕಾಂ ಗ್ರಾಹಕರಿಗೆ ಇದರಿಂದ ಮುಕ್ತಿ ಸಿಗಲಿದೆ. ಇದೊಂದು ಬಹು ಉಪಯುಕ್ತ ಯೋಜನೆ ಎನಿಸಿದೆ.

ಟ್ರಾಯ್ ಹೊಸ ಆದೇಶ ಏನು? : ವರದಿಗಳ ಪ್ರಕಾರ, ತಮ್ಮ ಕರೆಗಳು ಮತ್ತು ಎಸ್‌ಎಂಎಸ್ ಸೇವೆಗಳಲ್ಲಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಸ್ಪ್ಯಾಮ್ ಫಿಲ್ಟರ್ ಅನ್ನು ಹಾಕುವುದು ಕಡ್ಡಾಯವಾಗಿದೆ ಎಂದು ಟೆಲಿಕಾಂ ಕಂಪನಿಗಳಿಗೆ ಟ್ರಾಯ್ ಆದೇಶ ಹೊರಡಿಸಿದೆ. ನಕಲಿ ಕರೆಗಳು ಮತ್ತು ಪ್ರಚಾರದ ಕರೆಗಳನ್ನು ತಪ್ಪಿಸಲು AI ಫಿಲ್ಟರ್ ಬಳಕೆದಾರರಿಗೆ ನೆರವು ಮಾಡುತ್ತದೆ. ಇನ್ನು ಭಾರ್ತಿ ಏರ್‌ಟೆಲ್, ರಿಲಯನ್ಸ್ ಜಿಯೋ ಟೆಲಿಕಾಂ ಕಂಪನಿಗಳು ಶೀಘ್ರದಲ್ಲೇ AI ಫಿಲ್ಟರ್ ಸೇವೆಯನ್ನು ಪ್ರಾರಂಭಿಸುವುದಾಗಿ ತಿಳಿಸಿವೆ.

ಮೊಬೈಲ್‌ ಬಳಕೆದಾರರಿಗೆ ಸಿಹಿಸುದ್ದಿ!..ಮೇ 1 ರಿಂದ ನಿಮಗೆ ಈ ಕಿರಿಕಿರಿ ಇರಲ್ಲ!

ಭಾರ್ತಿ ಏರ್‌ಟೆಲ್ ಟೆಲಿಕಾಂ ತನ್ನ ಸೇವೆಗಳಿಗೆ ಎಐ (AI) ಫಿಲ್ಟರ್ ಅನ್ನು ಘೋಷಿಸಿದೆ ಎಂದು ವರದಿಯಾಗಿದೆ. ಹಾಗೆಯೇ ಜಿಯೋ ಟೆಲಿಕಾಂ ತನ್ನ ಸೇವೆಗಳಲ್ಲಿ AI ಫಿಲ್ಟರ್ ಅನ್ನು ಸದ್ಯದಲ್ಲೇ ರೋಲ್ ಔಟ್ ಮಾಡುವುದಾಗಿ ತಿಳಿಸಿದೆ. ಇನ್ನು ನೂತನ AI ಫಿಲ್ಟರ್ ಇದೇ ಮೇ 1, 2023 ರಿಂದ ಕಾರ್ಯ ನಿರ್ವಹಿಸಲು ಪ್ರಾರಂಭಿಸುವ ನಿರೀಕ್ಷೆ ಹೆಚ್ಚಿದೆ.

ಶೀಘ್ರದಲ್ಲೇ ಲಭ್ಯವಾಗಲಿದೆ ಕಾಲ್ ಐಡಿ ಫೀಚರ್ಸ್‌ : ಬಳಕೆದಾರರಿಗೆ ದೊಡ್ಡ ಸಮಸ್ಯೆಯಾಗಿರುವ ನಕಲಿ ಕರೆಗಳು ಮತ್ತು ಎಸ್‌ಎಂಎಸ್‌ (sms) ಗಳನ್ನು ತಡೆಯುವ ನಿಟ್ಟಿನಲ್ಲಿ ಟ್ರಾಯ್‌ ಬಹಳ ಹಿಂದಿನಿಂದಲೂ ಕಾರ್ಯ ಮಾಡುತ್ತಿದೆ. ಮುಗ್ಧ ಗ್ರಾಹಕರನ್ನು ವಂಚಿಸಲು ಮತ್ತು ಖಾತೆಗಳಿಂದ ಅವರ ಹಣವನ್ನು ತಪ್ಪಿಸಿಕೊಳ್ಳಲು ಸ್ಕ್ಯಾಮರ್‌ಗಳು ಪ್ರಯತ್ನಿಸುವ ಮಾರ್ಗಗಳಲ್ಲಿ ಇದೂ ಸಹ ಒಂದಾಗಿದೆ.

ಮೊಬೈಲ್‌ ಬಳಕೆದಾರರಿಗೆ ಸಿಹಿಸುದ್ದಿ!..ಮೇ 1 ರಿಂದ ನಿಮಗೆ ಈ ಕಿರಿಕಿರಿ ಇರಲ್ಲ!

ಹೀಗಾಗಿ 10 ಅಂಕಿಗಳ ಮೊಬೈಲ್ ಸಂಖ್ಯೆಗೆ ಪ್ರಚಾರದ ಕರೆಗಳನ್ನು ನಿಲ್ಲಿಸುವಂತೆ ಟೆಲಿಕಾಂ ಕಂಪನಿಗಳಿಗೆ ಟ್ರಾಯ್‌ (TRAI) ಒತ್ತಾಯಿಸುತ್ತಿದೆ. ಮೊಬೈಲ್ ಫೋನ್‌ನಲ್ಲಿ ಕರೆ ಮಾಡಿದವರ ಫೋಟೋ ಮತ್ತು ಹೆಸರನ್ನು ಕಾಣಿಸಿವ ಕಾಲ್ ಐಡಿ ಫೀಚರ್ ಅನ್ನು ತರುವ ಆಯ್ಕೆಯನ್ನೂ ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರವು ಹುಡುಕುತ್ತಿದೆ.

ಭಾರ್ತಿ ಏರ್‌ಟೆಲ್ ಮತ್ತು ರಿಲಯನ್ಸ್‌ ಜಿಯೋ ಟೆಲಿಕಾಂ ಕಂಪನಿಗಳು ಖಾಸಗಿತನದ ಸಮಸ್ಯೆಯಿಂದಾಗಿ ಈ ತಂತ್ರಜ್ಞಾನ ವನ್ನು ತರಲು ಹಿಂದೇಟು ಹಾಕುತ್ತಿವೆ. ಆದರೆ, ಅದರ ಬಗ್ಗೆ ಯಾವುದೇ ಹೆಚ್ಚಿನ ಮಾಹಿತಿ ಇಲ್ಲ. ಬಳಕೆದಾರರಿಗೆ ತೊಂದರೆ ಆಗುತ್ತಿರುವ ಕರೆಗಳು ಮತ್ತು ಎಸ್‌ಎಂಎಸ್‌ ಗಳನ್ನು ತಡೆಯಲು ಇದೇ ಮೇ 1 ರಿಂದ AI ಫಿಲ್ಟರ್ ಅನ್ನು ಮಾತ್ರ ಕಾರ್ಯಗತಗೊಳಿಸಲಾಗುವುದು ಎಂದು ವರದಿಯಿಂದ ತಿಳಿದು ಬಂದಿದೆ.

Best Mobiles in India

English summary
It is being mandatory to putting Aritificial Intelligence Spam filter in their calls and SMS services from May 1.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+