ವೊಡಾಫೋನ್‌ ಮತ್ತು ಏರ್‌ಟೆಲ್‌ನ ವೇಗದ ಡೇಟಾ ಯೋಜನೆಗಳಿಗೆ ಟ್ರಾಯ್ ತಡೆ!

|

ಏರ್​ಟೆಲ್ ಮತ್ತು ವೊಡಾಫೋನ್ ಐಡಿಯಾದ ಆದ್ಯತೆಯ ವೇಗದ ಡೇಟಾ ನೀಡುವ ಪ್ಲ್ಯಾನ್‌ಗಳಿಗೆ ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ (TRAI) ತಡೆ ನೀಡುವಂತೆ ಆದೇಶ ನೀಡಿದೆ. ಈ ಪಟ್ಟಿಗೆ ಸೇರುವ ವೊಡಾಫೋನ್‌ ಐಡಿಯಾದ ರೆಡ್‌ಎಕ್ಸ್‌ ಪ್ಲ್ಯಾನ್‌ಗಳು ಹಾಗೂ ಏರ್‌ಟೆಲ್‌ ಟೆಲಿಕಾಂನ ಪ್ಲಾಟಿನಂ ಯೋಜನೆಗಳು ಅಧಿಕ ವೇಗದ ಡೇಟಾ ಪ್ರಯೋಜನಗಳನ್ನು ಪಡೆದಿವೆ.

ವೊಡಾಫೋನ್‌ ಮತ್ತು ಏರ್‌ಟೆಲ್‌

ವೊಡಾಫೋನ್‌ ಮತ್ತು ಏರ್‌ಟೆಲ್‌ ಸಂಸ್ಥೆಗಳ ಈ ಯೋಜನೆಗಳನ್ನು ಆಯ್ದಕೊಳ್ಳುವ ಬಳಕೆದಾರರಿಗೆಗ ವೇಗದ ಇಂಟರ್ನೆಟ್ ಹಾಗೂ ಆದ್ಯತೆಯ ಸೇವೆ ಒದಗಿಸುವ ಯೋಜನೆ ಹೊಂದಿತ್ತು. ಹೀಗಾಗಿ ಇತರೆ ಪ್ಲ್ಯಾನ್‌ಗಳನ್ನು ಆಯ್ದಕೊಂಡ ಚಂದಾದಾರರಿಗೆ ನೆಟವರ್ಕ್‌, ಡೇಟಾ ಗುಣಮಟ್ಟದಲ್ಲಿ ಸಮಸ್ಯೆ ಆಗುವ ಸಾಧ್ಯತೆಗಳು ಇರುತ್ತವೆ ಎಂಬ ಟ್ರಾಯ್ ತಿಳಿಸಿದೆ.

ವೊಡಾಫೋನ್

ಟ್ರಾಯ್ ತಡೆಗೆ ವೊಡಾಫೋನ್ ಪ್ರತಿಕ್ರಿಯಿಸಿದ್ದು, ವೊಡಾಫೋನ್ ರೆಡ್‌ಎಕ್ಸ್ ಯೋಜನೆ ನಮ್ಮ ಮೌಲ್ಯಯುತ ಪೋಸ್ಟ್‌ಪೇಯ್ಡ್ ಗ್ರಾಹಕರಿಗೆ ಲಭ್ಯವಿರುವ ಆಯ್ಕೆ. ಡೇಟಾ, ಕರೆಗಳು, ಪ್ರೀಮಿಯಂ ವಿಷಯ, ಅಂತರರಾಷ್ಟ್ರೀಯ ರೋಮಿಂಗ್ ಪ್ಯಾಕ್‌ಗಳು ಸೇರಿದಂತೆ ಹಲವು ಪ್ರಯೋಜನಗಳನ್ನು ಈ ಪ್ಲ್ಯಾನ್​ನಲ್ಲಿ ನೀಡಲಾಗುತ್ತಿದೆ. ಕಂಪನಿಯು ತನ್ನ ಗ್ರಾಹಕರಿಗೆ ಉತ್ತಮ ಮತ್ತು ಹೆಚ್ಚಿನ ವೇಗದ 4G ಡೇಟಾ ಸೇವೆಗಳನ್ನು ಒದಗಿಸಲು ಈಗಲೂ ಬದ್ಧವಾಗಿದೆ ಎಂದು ಹೇಳಿದೆ.

ಪೋಸ್ಟ್‌ಪೇಯ್ಡ್‌

ಅಧಿಕ ಬೆಲೆ ಪಾವತಿಸುವ ಪೋಸ್ಟ್‌ಪೇಯ್ಡ್‌ ಚಂದಾದಾರರಿಗೆ ಈ ವಿಶೇಷ ಯೋಜನೆಗಳ ಲಭ್ಯತೆ ಇತ್ತು. ಏರ್​ಟೆಲ್ ​499ರೂ. ಹಾಗೂ ಅದಕ್ಕೆ ಮೇಲ್ಪಟ್ಟ ಪ್ರೀಮಿಯಂ ಪೋಸ್ಟ್ ಪೇಯ್ಡ್ ಗ್ರಾಹಕರಿಗೆ 4G ವೇಗದ ಡೇಟಾ ಹಾಗೂ ಇನ್ನಿತರ ಆದ್ಯತೆ ಸೇವೆಗಳನ್ನು ಒದಗಿಸುವುದಾಗಿ ತಿಳಿಸಿತ್ತು. ಅದೇ ರೀತಿ ವೊಡಾಫೋನ್ ಸಹ 999ರೂ. ಪ್ಲ್ಯಾನ್ ಮೂಲಕ 50% ಹೆಚ್ಚಿನ ವೇಗದ ಡೇಟಾ ಮತ್ತು ವಿಶೇಷ ಸೇವೆಗಳನ್ನು ನೀಡುವ ಆಫರ್ ನೀಡಲಾಗಿತ್ತು.

ರೆಡ್‌ಎಕ್ಸ್

ವೊಡಾಫೋನ್‌ ಕಳೆದ ನವೆಂಬರ್‌ನಲ್ಲಿ 999 ರೂ.ಮಾಸಿಕ ದರದ ರೆಡ್‌ಎಕ್ಸ್ ಪ್ಲ್ಯಾನ್ ಪರಿಚಯಿಸಿತ್ತು. ಈ ಯೋಜನೆಯಲ್ಲಿ ಗ್ರಾಹಕರಿಗೆ ತಿಂಗಳಿಗೆ 150 GB ಡೇಟಾ ಲಭ್ಯತೆ, ಅಲ್ಲದೆ ಈ ಪ್ಯಾಕ್‌ ಆಯ್ದುಕೊಂಡ ಗ್ರಾಹಕರಿಗೆ ಶೇ. 50 ಸ್ಪೀಡ್ ಡೇಟಾ ಕೂಡ ಲಭ್ಯತೆ. ಇದರ ಜತೆಗೆ, ಅನಿಯಮಿತ ವಾಯ್ಸ್ ಕರೆ, ಡೇಟಾ ಮತ್ತು ದಿನಕ್ಕೆ 100 ಎಸ್‌ಎಂಎಸ್ ಸೌಲಭ್ಯ ತಿಳಿಸಿತ್ತು. ಉಳಿದಂತೆ ಅಧಿಕ ಮೌಲ್ಯದ ಪ್ರಯೋಜನ ಘೋಷಿಸಿತ್ತು, ಇದರಲ್ಲಿ ಇಂಟರ್‌ನ್ಯಾಶನಲ್ ರೋಮಿಂಗ್ ಸರ್ವಿಸ್, ಪ್ರೀಮಿಯಂ ಕಸ್ಟಮರ್ ಸರ್ವಿಸ್, ಏರ್‌ಪೋರ್ಟ್ ಲಾಂಜ್ ಅಕ್ಸೆಸ್ ಸೇವೆಗಳ ಬಗ್ಗೆ ತಿಳಿಸತ್ತು.

Best Mobiles in India

English summary
The regulator asks the Vodafone and Airtel “withhold, with immediate effect and until further orders” the two plans.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X