ಜಿಯೋಗೆ ಸೆಡ್ಡು ಹೊಡೆಯುತ್ತಿದೆಯಾ ಏರ್‌ಟೆಲ್; ಜಿಯೋ ಸೇವೆ ಬೇಡ ಎಂದವರ ಸಂಖ್ಯೆ ಎಷ್ಟು ಗೊತ್ತಾ!?
ಟೆಲಿಕಾಂ ವಲಯದಲ್ಲಿ ಏರ್‌ಟೆಲ್ ಹಾಗೂ ಜಿಯೋ ವಿವಿಧ ರೀತಿಯ ರೀಚಾರ್ಜ್ ಪ್ಲ್ಯಾನ್‌ಗಳನ್ನು ಪರಿಚಯಿಸುವ ಮೂಲಕ ಗ್ರಾಹಕರನ್ನು ಸೆಳೆಯುವಲ್ಲಿ ಎಲ್ಲಾ ತಂತ್ರಗಳನ್ನು ರೂಪಿಸಿಕೊಂಡು ಬರುತ್ತಿವೆ. ಇದರ ಭಾಗವಾಗಿಯೇ ತಾಮುಂದು ನಾಮುಂದೆ ಎಂಬಂತೆ ಏರ್‌ಟೆಲ್ ಹಾಗೂ ಜಿಯೋ 5G ಸೇವೆಯನ್ನು ಸಹ ನೀಡುತ್ತಿರುವುದು ವಿಶೇಷ ಸಂಗತಿ. ಆದರೆ, ಈ ಎಲ್ಲಾ ಬೆಳವಣಿಗೆ ನಡುವೆಯೂ ಜಿಯೋ ಸಂಕಷ್ಟಕ್ಕೆ ಸಿಲುಕಿದೆ.

ಹೌದು, TRAI ನ ಹೊಸ ವರದಿ ಏರ್‌ಟೆಲ್‌ಗೆ ಸಂಭ್ರಮಪಡುವ ವಿಷಯವಾದರೆ, ಜಿಯೋಗೆ ಬೇಸರದ ವಿಷಯವಾಗಿದೆ. ಯಾಕೆಂದರೆ ಜಿಯೋ ತನ್ನ ಸಕ್ರಿಯ ಬಳಕೆದಾರರನ್ನು ಕಳೆದುಕೊಂಡಿದೆ. ವಿಷಯ ಏನೆಂದರೆ ಏರ್‌ಟೆಲ್‌ಗಿಂತ 5G ಸೇವೆಯಲ್ಲಿ ಒಂದು ಹೆಜ್ಜೆ ಮುಂದಿರುವ ಜಿಯೋಗೆ ಯಾಕೆ ಹೀಗಾಗಿದೆ?, ಒಟ್ಟಾರೆ ಎಷ್ಟು ಸಕ್ರಿಯ ಬಳಕೆದಾರರು ಜಿಯೋಗೆ ವಿದಾಯ ಹೇಳಿದ್ದಾರೆ, ಏರ್‌ಟೆಲ್‌ಗೆ ಸೇರಿರುವ ಹೊಸ ಬಳಕೆದಾರರು ಎಷ್ಟು? ಎಂಬಿತ್ಯಾದಿ ವಿವರವನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.
ಭಾರತದ ಅತಿದೊಡ್ಡ ಟೆಲಿಕಾಂ ಆಪರೇಟರ್ ಆಗಿರುವ ಜಿಯೋ ನವೆಂಬರ್ 2022 ರಲ್ಲಿ 1.42 ಮಿಲಿಯನ್ ಚಂದಾದಾರರನ್ನು ಪಡೆದುಕೊಂಡಿತ್ತು. ಇದರ ನಡುವೆ ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ (TRAI) ಯ ಇತ್ತೀಚಿನ ಮಾಸಿಕ ಕಾರ್ಯಕ್ಷಮತೆ ವರದಿ ಬಿಡುಗಡೆಯಾಗಿದ್ದು, ಜಿಯೋ ಮತ್ತು ಏರ್‌ಟೆಲ್ ತಿಂಗಳ ಅವಧಿಯಲ್ಲಿ ಚಂದಾದಾರರನ್ನು ಪಡೆದುಕೊಂಡಿದೆ. ಬಿಎಸ್‌ಎನ್‌ಎಲ್ ಹಾಗೂ ವಿ ಕ್ರಮವಾಗಿ ಸುಮಾರು 2 ಮಿಲಿಯನ್ ಮತ್ತು 0.5 ಮಿಲಿಯನ್ ಸಕ್ರಿಯ ಚಂದಾದಾರರನ್ನು ಕಳೆದುಕೊಂಡಿವೆ. ಇದರ ನಡುವೆ ಏರ್‌ಟೆಲ್ 1 ಮಿಲಿಯನ್ ಸಕ್ರಿಯ ಬಳಕೆದಾರರನ್ನು ಪಡೆದುಕೊಂಡರೆ ಜಿಯೋ 2 ಮಿಲಿಯನ್ ಸಕ್ರಿಯ ಬಳಕೆದಾರರನ್ನು ಕಳೆದುಕೊಂಡಿದೆ.
ಜಿಯೋ ಸಕ್ರಿಯ ಬಳಕೆದಾರರನ್ನು ಯಾಕೆ ಕಳೆದುಕೊಂಡಿದೆ ಎನ್ನುವ ಬಗ್ಗೆ ಸುಲಭವಾಗಿ ತಿಳಿದುಕೊಳ್ಳುವುದು ಸಾಧ್ಯವಿಲ್ಲ. ರಾಷ್ಟ್ರದ ಹಲವು ಭಾಗಗಳಿಗೆ 5G ಅನ್ನು ಹೊರತರುವಲ್ಲಿ ಜಿಯೋ ಏರ್‌ಟೆಲ್‌ಗಿಂತ ಸ್ವಲ್ಪ ಮುಂದಿದೆ. ಹೀಗಾಗಿ, ಜಿಯೋ ಸಕ್ರಿಯ ಬಳಕೆದಾರರನ್ನು ಏಕೆ ಕಳೆದುಕೊಂಡಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಕಷ್ಟಕರವಾದ ಕೆಲಸವಾಗಿದೆ. ಇನ್ನು ಜಿಯೋದ ಸುಂಕಗಳು ಇತರ ಯಾವುದೇ ಖಾಸಗಿ ಟೆಲಿಕಾಂ ಆಪರೇಟರ್‌ಗಳಿಗಿಂತ ಕಡಿಮೆ ಇರುವುದು ಸಹ ಇದಕ್ಕೆ ಕಾರಣ ಇರಬಹುದೇ ಎನ್ನುವ ಪ್ರಶ್ನೆ ಸಹ ಮೂಡಿದೆ.

ಜಿಯೋ ತನ್ನ ಸಕ್ರಿಯ ಚಂದಾದಾರರನ್ನು ಕಳೆದುಕೊಳ್ಳಲು ಕಾರಣವೇನು?
ಇದರಲ್ಲಿ ಗಮನಿಸಬೇಕಾದ ವಿಷಯ ಏನೆಂದರೆ ದುರ್ಬಲ ಗುಣಮಟ್ಟದ ಸೇವೆ. ಆದರೂ ಸಹ ಓಪನ್‌ಸಿಗ್ನಲ್ ವರದಿಯಂತೆ, ಲಭ್ಯತೆ ಮತ್ತು ವ್ಯಾಪ್ತಿ ವಿಚಾರಕ್ಕೆ ಬಂದರೆ ಜಿಯೋ ನ 4G ನೆಟ್‌ವರ್ಕ್‌ಗಳು ಭಾರತದಲ್ಲಿ ಅತ್ಯುತ್ತಮವಾಗಿವೆ. ಅದರಲ್ಲೂ ಜಿಯೋ ತನ್ನ 5G ಅನ್ನು 4G ಬಳಕೆದಾರರಿಗೆ ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ನೀಡುತ್ತಿರುವುದು ಸಹ ಪ್ರಮುಖವಾದ ವಿಷಯ. ಆದರೆ, ಜಿಯೋ ನ 5G ಅನ್ನು ಪಡೆಯಬೇಕು ಎಂದರೆ ಮೊದಲನೆಯದಾಗಿ 5G SA ಬೆಂಬಲಿಸುವ ಸ್ಮಾರ್ಟ್‌ಫೋನ್‌ಗಳ ಅಗತ್ಯ ಇದೆ. ಇದಾದ ನಂತರ ಕಂಪೆನಿಯಿಂದ ಆಹ್ವಾನವನ್ನು ಪಡೆಯಬೇಕಿದೆ.
ಇನ್ನು ಯಾವುದೇ ಸಂಸ್ಥೆಯ ಕಡಿಮೆ ಸಕ್ರಿಯ ಚಂದಾದಾರರ ಮೂಲವು ತಿಂಗಳಲ್ಲಿ ದುರ್ಬಲ ಬೆಳವಣಿಗೆಯನ್ನು ಅರ್ಥೈಸುತ್ತದೆ. ಅಂದರೆ ಟೆಲ್ಕೊದ ARPU 178.2 ರೂ. ರಷ್ಟಿದ್ದು, ಕೇವಲ 1 ರೂ. QoQ ಹೆಚ್ಚಾಗಿದೆ. ಇದರ ಅರ್ಥ ಟೆಲ್ಕೊಗೆ ಲಾಭ ಮತ್ತು ಆದಾಯ ಹೆಚ್ಚಾಗಬೇಕು ಎಂದರೆ ಅನಿವಾರ್ಯವಾಗಿ ಸುಂಕವನ್ನು ಹೆಚ್ಚಳ ಮಾಡಬೇಕಿದೆ. ಈ ಸುಂಕ ಹೆಚ್ಚಳ ಮಾಡಲಿಲ್ಲ ಎಂದರೆ ಜಿಯೋದ ಆದಾಯವು ಅದೇ ಮಟ್ಟದಲ್ಲಿರುತ್ತದೆ ಎಂದು ವರದಿಗಳಿಂದ ತಿಳಿದುಬಂದಿದೆ.

ಇನ್ನು 239 ರೂ. ಗಳ ಪ್ಲ್ಯಾನ್ ಅಥವಾ ಅದಕ್ಕಿಂತ ಹೆಚ್ಚಿನ ರೀಚಾರ್ಜ್ ಮಾಡಿದ ಗ್ರಾಹಕರಿಗೆ 5G ವೆಲ್ಕಮ್ ಆಫರ್ ಆಹ್ವಾನವನ್ನು ನೀಡುವ ಮೂಲಕ ಕನಿಷ್ಠ 239 ರೂ. ಗಳ ಪ್ಲ್ಯಾನ್‌ಗೆ ಚಂದಾದಾರರನ್ನಾಗಿಸಲು ಜಿಯೋ ಪ್ರಯತ್ನಿಸುತ್ತಿದೆ.
ಇದರ ನಡುವೆ ಕೆಲವು ದಿನಗಳ ಹಿಂದೆ 899ರೂ. ಮತ್ತು 349ರೂ. ಪ್ಲ್ಯಾನ್‌ಗಳನ್ನು ತನ್ನ ರೀಚಾರ್ಜ್ ಪಟ್ಟಿಗೆ ಸೇರ್ಪಡೆ ಮಾಡಿದೆ. ಈ ಎರಡು ಹೊಸ ಪ್ರಿಪೇಯ್ಡ್ ಯೋಜನೆಗಳು ಆಕರ್ಷಕ ದೈನಂದಿನ ಡೇಟಾ ಪ್ರಯೋಜನ ಪಡೆದಿದ್ದು, ಜೊತೆಗೆ ಆಕರ್ಷಕ ವ್ಯಾಲಿಡಿಟಿ ಪ್ರಯೋಜನ ಪಡೆದಿರುವುದು ವಿಶೇಷ. ಅಂತೆಯೇಅಧಿಕ ಡೇಟಾ ಪ್ರಯೋಜನ ಜೊತೆಗೆ ದೀರ್ಘ ವ್ಯಾಲಿಡಿಟಿ ಬೇಕು ಎನ್ನುವವರಿಗೆ ಈ ಪ್ಲ್ಯಾನ್‌ಗಳು ಸೂಕ್ತವಾಗಲಿವೆ.


Click it and Unblock the Notifications








