ಟೆಲಿಕಾಂ ನಿಯಂತ್ರಕ ಟ್ರಾಯ್ ನಿಂದ ಹೊಸ ಆಪ್: ಯಾಕೆ ಗೊತ್ತಾ..?

Written By:

ಟೆಲಿಕಾಂ ಕಂಪನಿಗಳಿಗೆ ಮೂಗುದಾರ ಹಾಕುವ ಟೆಲಿಕಾಂ ನಿಯಂತ್ರಣ ಮಂಡಲಿ ಮೈ ಕಾಲ್ ಎನ್ನುವ ಹೊಸ ಆಪ್ ವೊಂದನ್ನು ಬಿಡುಗಡೆ ಮಾಡಿದೆ. ಈ ಆಪ್ ನಲ್ಲಿ ಬಳಕೆದಾರರು ತಾವು ಬಳಸುತ್ತಿರುವ ನೆಟ್‌ವರ್ಕ್‌ ನಲ್ಲಿ ಫೋನ್ ಕರೆಗಳ ಕ್ವಾಲಿಟಿಯನ್ನು ರೆಟಿಂಗ್ ಮೂಲಕ ನಿರ್ಧರಿಸಬಹುದಾಗಿದೆ.

ಟೆಲಿಕಾಂ ನಿಯಂತ್ರಕ ಟ್ರಾಯ್ ನಿಂದ ಹೊಸ ಆಪ್: ಯಾಕೆ ಗೊತ್ತಾ..?

ಓದಿರಿ: ಗೂಗಲ್ ನಿಂದ ಬಂಪರ್ ಆಫರ್: ಆಂಡ್ರಾಯ್ಡ್ ನಲ್ಲಿ ಬಗ್ ಕಂಡುಹಿಡಿಯಿರಿ 1.5 ಕೋಟಿ ಬಹುಮಾನ ಪಡೆಯಿರಿ

ಇದು ಮೊಬೈಲ್ ಬಳಕೆದಾರರಿಗಾಗಿಯೇ ವಿಶೇಷವಾಗಿ ನಿರ್ಮಿಸಲಾಗಿರುವ ಆಪ್ ಆಗಿದೆ. ಇದು ವಿವಿಧ ಟೆಲಿಕಾಂ ಕಂಪನಿಗಳ ವಾಯ್ಸ್ ಕರೆಯ ಕ್ವಾಲಿಟಿಯನ್ನು ರಿಯಲ್ ಟೈಮಿನಲ್ಲಿ ರೇಟಿಂಗ್ ನೀಡಲು ಸಹಾಯಕಾರಿಯಾಗಲಿದೆ.

ಈ ಆಪ್ ಹಾಕಿಕೊಂಡರೆ ನೀವು ಮಾಡುವ ಪ್ರತಿ ಕಾಲಿನ ಕೊನೆಯಲ್ಲಿ ಪಾಪ್ ಆಪ್ ಒಂದು ಕಾಣಿಸಿಕೊಳ್ಳಲಿದ್ದು, ಅಲ್ಲಿ ನೀವು ಮಾಡಿದ ಕರೆಯ ಅನುಭವನ್ನು ಮತ್ತು ಕ್ವಾಲಿಟಿಯನ್ನು ನಿರ್ಧರಿಸಿ ರೇಟಿಂಗ್ ನೀಡಬಹುದಾಗಿದೆ. ಅಲ್ಲದೇ ನೀವು ಮಾಡಿದ ಕರೆ ಇನ್‌ಡೋರ್ ಇಲ್ಲವೇ ಔಟ್ ಡೋರ್ ಹಾಗೂ ಟ್ರಾವಲಿಂಗ್ ಸಮಯದಲ್ಲಿ ಮಾಡಿದರೆ ಎಂಬುದನ್ನು ತಿಳಿಸಬೇಕಾಗಿದೆ.

ಟೆಲಿಕಾಂ ನಿಯಂತ್ರಕ ಟ್ರಾಯ್ ನಿಂದ ಹೊಸ ಆಪ್: ಯಾಕೆ ಗೊತ್ತಾ..?

ಓದಿರಿ: ಶೀಘ್ರವೇ ರಸ್ತೆಗೆ ಇಳಿಯಲಿದೆ ಸೆಲ್ಪ್ ಡ್ರೈವಿಂಗ್ ಟ್ರಕ್ಗಳು..!!!

ಸರಕಾರ ಈಗಾಗಲೇ ಖಾಸಗಿ ಟೆಲಿಕಾಂ ಕಂಪನಿಗಳಿಗೆ ಉತ್ತಮ ದರ್ಜೆಯ ಸೇವೆಯನ್ನು ನೀಡಲು ತಿಳಿಸಿದ್ದು, ಈ ಹಿನ್ನಲೆಯಲ್ಲಿ ಯಾವ ಕಂಪನಿಗಳು ಯಾವ ರೀತಿಯಲ್ಲಿ ನೀಡುತ್ತಿವೆ ಎಂಬುದನ್ನು ತಿಳಿದುಕೊಳ್ಳಲು ಮುಂದಾಗಿದೆ.

ಇದಲ್ಲದೇ ಇದಲ್ಲದೇ 3G ಮತ್ತು 4G ಸೇವೆಯ ಸ್ಪೀಡ್ ಟೆಸ್ಟ್ ಮಾಡಲು ಬಿಡುಗಡೆ ಮಾಡಿದ್ದ ಮೈ ಸ್ಪೀಡ್ ಆಪ್ ಗೆ ಹೊಸ ಆಪ್‌ಡೇಟ್ ಸಹ ಬಿಡುಗಡೆ ಮಾಡಿದೆ.Read more about:
English summary
Sector regulator TRAI on Monday launched a new app - MyCall - that enables subscribers to rate the quality of a phone call. to know more visit kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot