Subscribe to Gizbot

ಶೀಘ್ರವೇ ರಸ್ತೆಗೆ ಇಳಿಯಲಿದೆ ಸೆಲ್ಪ್ ಡ್ರೈವಿಂಗ್ ಟ್ರಕ್‌ಗಳು..!!!

Written By:

ತಂತ್ರಜ್ಞಾನ ಇಂದು ನಮ್ಮ ಜೀವನವನ್ನು ಸಾಕಷ್ಟು ಸರಳ ಮಾಡುತ್ತಿದೆ. ವಿಜ್ಞಾನ ಮತ್ತು ತಂತ್ರಜ್ಙಾನದ ಬೆಳವಣಿಗೆಯಿಂದ ಜೀವನ ವಿಧಾನಗಳು ಬದಲಾಗುತ್ತಿದೆ. ಇದೇ ಮಾದರಿಯಲ್ಲಿ ಇಷ್ಟು ದಿನ ಸೆಲ್ಪ್ ಡ್ರೈವಿಂಗ್ ಕಾರುಗಳ ಬಗ್ಗೆ ತಿಳಿದಿದ್ದ ನಿಮಗೆ ಹೊಸದಾಗಿ ಶುರುವಾಗಿರುವ ಸೆಲ್ಪ್ ಡ್ರೈವಿಂಗ್ ಟ್ರಕ್ ಗಳ ಬಗ್ಗೆ ಮಾಹಿತಿ ಇಲ್ಲಿದೆ.

ಶೀಘ್ರವೇ ರಸ್ತೆಗೆ ಇಳಿಯಲಿದೆ ಸೆಲ್ಪ್ ಡ್ರೈವಿಂಗ್ ಟ್ರಕ್‌ಗಳು..!!!

ಓದಿರಿ: ನಿಮ್ಮ ಕಂಪ್ಯೂಟರ್ ಮೇಲೆ ದಾಳಿ ಮಾಡಲು ಬರುತ್ತಿದೆ ಚೀನಾ ವೈರಸ್ಗಳು..!!!

ಅಲ್ಫಬಿಟ್ ಮಾಲೀಕತ್ವದ ವ್ಯಾಮೊ ಸೆಲ್ಪ ಡ್ರೈವಿಂಗ್ ಟ್ರಕ್ ಗಳನ್ನು ತಯಾರಿಸಲು ಮುಂದಾಗಿದೆ. ಗೂಗಲ್ ಸೆಲ್ಫ್ ಡ್ರೈವಿಂಗ್ ಕಾರ್ ಮಾದರಿಯಲ್ಲಿಯೇ ಈ ಟ್ರಕ್ ಗಳು ಕಾರ್ಯ ನಿರ್ವಹಿಸಲಿದೆ. ಈಗಾಗಲೇ ಪ್ರೈವೆಟ್ ಕಂಪನಿಯೊಂದು ಈ ಟ್ರಕ್ ಗಳನ್ನು ಅಮೆರಿಕಾದ ಕ್ಯಾಲಿಪೋರ್ನಿಯಾದಲ್ಲಿ ಪರೀಕ್ಷೆ ನಡೆಯುತ್ತಿದೆ.

ವ್ಯಾಮೊ ಕಂಪನಿ ಈಗಾಗಲೇ ಸೆಲ್ಪ್ ಡ್ರೈವಿಂಗ್ ಕಾರುಗಳ ಹಾರ್ಡ್ ವೇರ್ ಮತ್ತು ಸಾಫ್ಟ್‌ವೇರ್ ತಯಾರಿಕೆಯಲ್ಲಿ 8 ವರ್ಷಗಳ ಅನುಭವನ್ನು ಹೊಂದಿದ್ದು, ಇದೇ ಸಾಫ್ಟ್‌ವೇರ್ ಮತ್ತು ಟೆಕ್ನಾಲಜಿಯನ್ನು ಬಳಸಿಕೊಂಡು ಸೆಲ್ಫ್ ಡ್ರೈವಿಂಗ್ ಟ್ರಕ್ ಅನ್ನು ಅಭಿವೃದ್ಧಿ ಪಡಿಸುತ್ತಿದ್ದು, ಈ ಟ್ರಕ್ ಯಶಸ್ವಿಯಾದಲ್ಲಿ ಟ್ರಕ್ ಡ್ರೈವರ್ ಜಾಗಕ್ಕೂ ಕತ್ತರಿ ಬಿಳಲಿದೆ.

ಶೀಘ್ರವೇ ರಸ್ತೆಗೆ ಇಳಿಯಲಿದೆ ಸೆಲ್ಪ್ ಡ್ರೈವಿಂಗ್ ಟ್ರಕ್‌ಗಳು..!!!

ಓದಿರಿ: ZTE ನುಬಿಯಾ Z17 ಸ್ಮಾರ್ಟ್ಫೋನಿನಲ್ಲಿದೆ 8GB RAM ಇನ್ನು ಹಲವು..!!!

ವ್ಯಾಮೊ ಕಂಪನಿ ಸೆಲ್ಪ್ ಡ್ರೈವಿಂಗ್ ವಾಹನಗಳ ತಯಾರಿಕೆಯಲ್ಲಿ ಹೆಚ್ಚಿನ ಬಂಡವಾಳವನ್ನು ತೋಡಗಿಸಲು ಮುಂದಾಗಿದೆ. ಭವಿಷ್ಯದಲ್ಲಿ ಸ್ವಯಂ ಚಾಲಿತ ಡ್ರೈವರ್ ಲೇಸ್ ವಾಹನಗಳ ಬೇಡಿಕೆಯೂ ಹೆಚ್ಚಾಗಲಿದೆ. ಇದನ್ನು ಗಮನದಲ್ಲಿಟ್ಟುಕೊಂಡು ದೊಡ್ಡಮಟ್ಟದ ಬಂಡವಾಳವನ್ನು ಈ ವಲಯದಲ್ಲಿ ಹೂಡಿಕೆ ಮಾಡಿದೆ ಎನ್ನಲಾಗಿದೆ.

 

Read more about:
English summary
Alphabet-owned Waymo is putting its autonomous driving expertise to work in trucking, in a new track for the unit formerly known as Google Car. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot