India

ಟ್ರಾಯ್ ನಿಯಮದಲ್ಲಿ ಬದಲಾವಣೆ : ಗ್ರಾಹಕರಿಗೆ ಸಿಗಲಿವೆ ಅಧಿಕ ಚಾನೆಲ್‌ಗಳು!

|

ಭಾರತೀಯ ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರ -ಟ್ರಾಯ್(Trai) ಕಳೆದ 2019ರ ಆರಂಭದಲ್ಲಿ ಚಾನೆಲ್ ಆಯ್ಕೆ ಮತ್ತು ಶುಲ್ಕದಲ್ಲಿ ಹೊಸ ನಿಯಮ ಜಾರಿ ಮಾಡಿತ್ತು. ಆ ನಂತರ ಬಂದ ಹೊಸ ದರಗಳ ಬಗ್ಗೆ ಗ್ರಾಹಕರು ಭಿನ್ನ ನಿಲುವನ್ನು ಹೊಂದಿದ್ದಾರೆ. ಆದ್ರೆ ಟ್ರಾಯ್ ಇದೀಗ ಕೇಬಲ್ ಟಿವಿ ಗ್ರಾಹಕರಿಗೆ ಭಾರಿ ಸಿಹಿಸುದ್ದಿ ನೀಡಿದ್ದು, ಕಡಿಮೆ ದರದಲ್ಲಿ ಅಧಿಕ ಚಾನೆಲ್‌ಗಳು ಲಭ್ಯವಾಗುವ ನಿಯಮ ಜಾರಿ ಮಾಡಲಿದೆ.

ಟ್ರಾಯ್ ಸಂಸ್ಥೆ

ಹೌದು, ಟ್ರಾಯ್ ಸಂಸ್ಥೆಯು ಇದೇ ಮಾರ್ಚ್ 1, 2020ಕ್ಕೆ ಅನ್ವಯವಾಗುವಂತೆ ಹೊಸ ನಿಯಮ ಜಾರಿ ಮಾಡಲಿದ್ದು, ಕೇಬಲ್ ಟಿವಿ NCF ಶುಲ್ಕವನ್ನು 130ರೂ.ಗೆ (ಟ್ಯಾಕ್ಸ್ ಹೊರತುಪಡಿಸಿ) ಇಳಿಕೆ ಮಾಡಲಿದೆ. ಸದ್ಯ NCF ಶುಲ್ಕವು 153ರೂ. ಆಗಿದೆ. ಟ್ರಾಯ್ 2019ರ ಆರಂಭದಲ್ಲಿ ಜಾರಿ ಮಾಡಿದ್ದ ನಿಯಮದ ಟಿವಿ ಕೇಬಲ್‌ ತಿಂಗಳ ಶುಲ್ಕದ ಬಗ್ಗೆ ಗ್ರಾಹಕರಲ್ಲಿ ಗೊಂದಲಗಳಿದ್ದವು ಆ ನಿಟ್ಟಿನಲ್ಲಿ ಟ್ರಾಯ್ ಈಗ ನಿಯಮದಲ್ಲಿ ಬದಲಾವಣೆ ತರಲು ಮುಂದಾಗಿದೆ.

ಹೊಸ ನಿಯಮ

ಟ್ರಾಯ್‌ನ ಹೊಸ ನಿಯಮದಂತೆ NFC ಶುಲ್ಕ 130ರೂ.ಗೆ (ಟ್ಯಾಕ್ಸ್ ಹೊರತು ಪಡಿಸಿ) 200 ಚಾನೆಲ್ ನೀಡುವುದು ಕಡ್ಡಾಯ ಆಗಲಿದೆ. ಉಚಿತವಾಗಿ FTA ಲಭ್ಯ ಇರುವ ಎಲ್ಲ ಚಾನೆಲ್‌ಗಳು ಇದರಲ್ಲಿ ಸೇರಿರಲಿವೆ. ಹಾಗಾದರೇ ಟ್ರಾಯ್‌ನ ಹೊಸ ನಿಯಮದ ಅಂಶಗಳೆನು? ತಿಂಗಳ ಶುಲ್ಕ ಎಷ್ಟಾಗಲಿದೆ ಎನ್ನುವ ಬಗ್ಗೆ ತಿಳಿಯಲು ಮುಂದೆ ಓದಿರಿ.

ತಿಂಗಳ ಶುಲ್ಕ 160ರೂ.

ತಿಂಗಳ ಶುಲ್ಕ 160ರೂ.

ಕೇಬಲ್ ಟಿವಿ ನಿಯಮದಲ್ಲಿ ಟ್ರಾಯ್ ಬದಲಾವಣೆ ಘೋಷಿಸಿದ್ದು, ಈ ಬದಲಾವಣೆಯ ನಂತರ ಕಡಿಮೆ ದರದಲ್ಲಿ ಹೆಚ್ಚು ಚಾನೆಲ್ ಸಿಗಲಿವೆ. ಗ್ರಾಹಕರು NCF ಶುಲ್ಕ 130ರೂ. ಮತ್ತು ತೆರಿಗೆ ಸೇರಿ ತಿಂಗಳಿಗೆ ಒಟ್ಟು 160ರೂ. ಪಾವತಿಸಿ 200 ಚಾನೆಲ್ ವೀಕ್ಷಿಸಬಹುದು.

200 ಚಾನೆಲ್ ಕಡ್ಡಾಯ

200 ಚಾನೆಲ್ ಕಡ್ಡಾಯ

ಟ್ರಾಯ್‌ನ ಹೊಸ ನಿಯಮದ ಪ್ರಕಾರ 160ರೂ. ಶುಲ್ಕದಲ್ಲಿ ಕನಿಷ್ಠ 200 ಚಾನೆಲ್ ನೀಡುವುದು ಕಡ್ಡಾಯವಾಗಿದೆ. ಕೇಂದ್ರ ಸರ್ಕಾರ ತಿಳಿಸಿದ್ದ ಕಡ್ಡಾಯ ಪ್ರಸಾರದ ಚಾನೆಲ್‌ಗಳನ್ನು ಹೊರತುಪಡಿಸಿ, 200 ಚಾನೆಲ್‌ಗಳನ್ನು ಒದಗಿಸಬೇಕು.

ಮಲ್ಟಿಟಿವಿ ಕನೆಕ್ಷನ್ NFC ಶುಲ್ಕ

ಮಲ್ಟಿಟಿವಿ ಕನೆಕ್ಷನ್ NFC ಶುಲ್ಕ

ಗ್ರಾಹಕರು ಮಲ್ಟಿಟಿವಿ ಕನೆಕ್ಷನ್ ಪಡೆದರೇ ಅಥವಾ ಇನ್ನೊಂದು ಕನೆಕ್ಷನ್ ಪಡೆದರೇ ಮೊದಲಿದ್ದ ಎನ್‌ಎಫ್‌ಸಿ ಶುಲ್ಕವನ್ನೇ ಸದ್ಯ ವಿಧಿಸಲಾಗುತ್ತಿದೆ. ಆದರೆ ಹೊಸ ನಿಯಮದ ಪ್ರಕಾರ ಮಲ್ಟಿಟಿವಿ ಅಥವಾ ಇನ್ನೊಂದು ಕನೆಕ್ಷನ್ ಪಡೆದರೇ ಅದಕ್ಕೆ NFC ಶುಲ್ಕ ಗರಿಷ್ಠ 40% ಪರ್ಸೆಂಟ್ ಮೀರಬಾರದು ಎಂದು ಹೇಳಿದೆ.

ನಿಯಮ ಯಾವಾಗ ಜಾರಿ

ನಿಯಮ ಯಾವಾಗ ಜಾರಿ

ಟ್ರಾಯ್ ಘೋಷಿಸಿರುವ ಕೇಬಲ್ ಟಿವಿ ಬದಲಾದ ಹೊಸ ನಿಯಮಗಳು ಇದೇ ಮಾರ್ಚ್ 1, 2020ರಂದು ಜಾರಿಯಾಗಲಿವೆ. ಆದರೆ ಇದೇ ಜನವರಿ 15ಕ್ಕೆ ಪ್ರಸಾರಕರು/ಪೂರೈಕೆದಾರರು ಚಾನೆಲ್‌ಗಳ ಹೊಸ ದರ ಪಟ್ಟಿಯನ್ನು ತಮ್ಮ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಲು ಟ್ರಾಯ್ ಹೇಳಿದೆ.

Most Read Articles
Best Mobiles in India

English summary
Trai has decided that the operators will charge a maximum 40% of declared NCF for second and additional TV connections. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X