ಪ್ರತಿ ತಿಂಗಳು ಕೇವಲ 153 ರೂ.ಕೇಬಲ್‌ ಬಿಲ್ ಬರುವಂತೆ ಮಾಡಿಕೊಳ್ಳಿ!..ಹೇಗೆ ಗೊತ್ತಾ?!

|

ಕೇಬಲ್‌ ಮತ್ತು ಡಿಟಿಎಚ್ ದರ ನಿಯಂತ್ರಣಕ್ಕೆ ಭಾರತೀಯ ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್‌) ತರುತ್ತಿರುವ ನಿಯಮಗಳ ಬಗ್ಗೆ ಸಾರ್ವಜನಿಕರ ಗೊಂದಲ ಎಂದರೆ ಅದನ್ನೇಗೆ ನಾವು ಅಳವಡಿಸಿಕೊಳ್ಳಬೇಕು ಎಂಬುದು. ಏಕೆಂದರೆ, ಕೇಬಲ್‌ ಮತ್ತು ಡಿಟಿಎಚ್ ದರ ನಿಯಂತ್ರಿಸಿ ಅದನ್ನು ಏಕರೂಪಗೊಳಿಸುವ ನಿಯಮ ಫೆ.1ರಿಂದ ಜಾರಿಗೆ ಬರಲಿದೆಯಾದರೂ, ಅದರ ಲಾಭವನ್ನು ಪಡೆಯುವುದು ಹೇಗೆ ಎಂಬುದು ಈಗಲೂ ಹಲವರಿಗೆ ಯಕ್ಷ ಪ್ರಶ್ನೆಯಾಗಿಯೇ ಉಳಿದುಕೊಂಡಿದೆ.

 ಪ್ರತಿ ತಿಂಗಳು ಕೇವಲ 153 ರೂ.ಕೇಬಲ್‌ ಬಿಲ್ ಬರುವಂತೆ ಮಾಡಿಕೊಳ್ಳಿ!..ಹೇಗೆ ಗೊತ್ತಾ

ಫೆ.1ರ ಬಳಿಕ ಕೇಬಲ್‌ ಅಥವಾ ಡಿಟಿಹೆಚ್ ಬಿಲ್‌ಗ‌ಳಲ್ಲಿ ಗ್ರಾಹಕರು ಆಯ್ಕೆ ಮಾಡಿಕೊಂಡಿರುವ ಚಾನೆಲ್‌ಗ‌ಳ ಪಟ್ಟಿಯ ಪೈಕಿ ಹೆಚ್ಚುವರಿಯಾಗಿ ಖರೀದಿಸಿರುವ ಚಾನೆಲ್‌ ಮತ್ತು ಅದಕ್ಕೆ ಸಂಬಂಧಿಸಿದ ಶುಲ್ಕದ ವಿವರಗಳು ಇರುತ್ತವೆ. ಡಿಟಿಹೆಚ್‌ನಲ್ಲಿ ಗ್ರಾಹಕರೇ ನೇರವಾಗಿ ಬೇಕಾದ ಚಾನಲ್ ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ಯವಿದೆ. ಆದರೆ, ಕೇಬಲ್ ಸೇವೆಯಲ್ಲಿ ಗ್ರಾಹಕರು ಕೇಬಲ್ ಸೇವಾದಾರನಿಗೆ ಹಣವನ್ನು ಪಾವತಿಸಬೇಕಾಗಿರುವುದರಿಂದ ಇದು ಸ್ವಲ್ಪ ಗೊಂದಲ ಮೂಡಿಸಿದೆ.

 ಪ್ರತಿ ತಿಂಗಳು ಕೇವಲ 153 ರೂ.ಕೇಬಲ್‌ ಬಿಲ್ ಬರುವಂತೆ ಮಾಡಿಕೊಳ್ಳಿ!..ಹೇಗೆ ಗೊತ್ತಾ

ಜ.31ರ ಒಳಗೆ ಮನೆಯ ಮುಖ್ಯಸ್ಥ ಅಥವಾ ಗ್ರಾಹಕ ಯಾವ ಚಾನೆಲ್‌ ಬೇಕು ಎಂಬುದನ್ನು ನಿರ್ಧರಿಸಬೇಕು. ಇದಕ್ಕಾಗಿ ಕೇಬಲ್ ಸೇವಾದಾರನ ಬಳಿ ನಾವು ಸ್ಪಷ್ಟ ಮಾಹಿತಿಯನ್ನು ನೀಡಬೇಕು. ಈಗಾಗಲೇ ನೀವು ಯಾವ ಚಾನಲ್‌ಗಳು ಬೇಕು ಎಂಬುದನ್ನು ನಿರ್ಧರಿಸಿದ್ದರೆ ಫೆ.1 ರಿಂದ ಜಾರಿಯಾಗಲಿರುವ ನಿಯಮದ ಬಗ್ಗೆ ಯಾರೂ ಗೊಂದಲ ಎದುರಿಸಬೇಕಾದ ಅಗತ್ಯವಿಲ್ಲ. ಹಾಗಾಗಿ, ಇಂದಿನ ಲೇಖನದಲ್ಲಿ ನೂತನ ಕೇಬಲ್ ನಿಯಮದ ಲಾಭವನ್ನು ಗ್ರಾಹಕರು ಪಡೆಯುವುದು ಹೇಗೆ ಎಂಬುದನ್ನು ಓದಿ ತಿಳಿಯೋಣ.

ಮೊದಲು ನಿಯಮ ಏನು ಎಂಬುದನ್ನು ತಿಳಿಯಿರಿ!

ಮೊದಲು ನಿಯಮ ಏನು ಎಂಬುದನ್ನು ತಿಳಿಯಿರಿ!

ಇನ್ಮುಂದೆ ಪ್ರತಿ ತಿಂಗಳು ಕೇಬಲ್‌ ಅಥವಾ ಡಿಟಿಎಚ್ ಬಿಲ್‌ ಮೊತ್ತ 153 ರೂ.ಗೆ ಮಿತಿಗೊಳ್ಳಲಿದೆ. ಅದೂ ಜಿಎಸ್‌ಟಿ ಸೇರಿಕೊಂಡು ಎಂಬುದನ್ನು ತಿಳಿದಿರಿ. ಇದೇ ಹಣದಲ್ಲಿ ನೀವು 100 ಉಚಿತ ಅಥವಾ ಪಾವತಿ ಚಾನಲ್‌ಗಳನ್ನು ಪಡೆಯಬಹುದು. ಪ್ರತಿ ತಿಂಗಳು ನೀವು 153 ರೂಪಾಯಿಗಳನ್ನು ಕಡ್ಡಾಯವಾಗಿ ಕೇಬಲ್‌ ಅಥವಾ ಡಿಟಿಎಚ್ ಸೇವಾದಾರರಿಗೆ ಪಾವತಿಸಲೇಬೇಕು. ಈ ಹಣದಲ್ಲೇ ನೀವು ನಿಮ್ಮ ಯಾವುದೇ ಆಯ್ಕೆಯ ಟಿವಿ ಚಾನಲ್‌ಗಳನ್ನು ಪಡೆಯಲು ಅವಕಾಶವನ್ನು ಕಲ್ಪಿಸಲಾಗಿದೆ.

ಆಯ್ಕೆ ಮಾಡಿಕೊಳ್ಳುವಾಗ ಇದನ್ನು ತಿಳಿಯಿರಿ!

ಆಯ್ಕೆ ಮಾಡಿಕೊಳ್ಳುವಾಗ ಇದನ್ನು ತಿಳಿಯಿರಿ!

ಮಾಸಿಕ 153 ರೂ.ಗೆ ನೀವು 100 ಚಾನೆಲ್‌ಗ‌ಳನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಈ 100 ಚಾನೆಲ್‌ಗ‌ಳಲ್ಲಿ ಪಾವತಿ ಚಾನೆಲ್‌ಗ‌ಳೂ ಇರಬಹುದು. ಆದರೆ ಆಯ್ಕೆ ಮಾಡಿದ ಚಾನೆಲ್‌ಗ‌ಳ ದರವು 130 ರೂ. ಅನ್ನು ಮೀರುವಂತಿಲ್ಲ. ಅಂದರೆ 13 ರೂ. ಬೆಲೆಯ 10 ಪಾವತಿ ಚಾನೆಲ್‌ಗ‌ಳನ್ನು ಗ್ರಾಹಕರು ಉಚಿತವಾಗಿ ಆಯ್ಕೆ ಮಾಡಿಕೊಂಡರೆ, ಇನ್ನುಳಿದ 90 ಉಚಿತವಾಗಿ ಲಭ್ಯವಿರುವ ಚಾನಲ್‌ಗಳು ಮಾತ್ರ ನಿಮಗೆ ಉಚಿತವಾಗಿ ಸಿಗುತ್ತವೆ. ಆ ನಂತರ ಪಾವತಿ ಚಾನಲ್‌ಗಳನ್ನು ಆಯ್ಕೆ ಮಾಡಿಕೊಳ್ಳಲು ಹೆಚ್ಚು ಹಣ ತೆರಬೇಕು.

ಉದಾಹರಣೆ ಹೀಗಿದೆ!

ಉದಾಹರಣೆ ಹೀಗಿದೆ!

ಸದ್ಯ ಕನ್ನಡದ ಎಲ್ಲ 15 ಚಾನೆಲ್‌ಗ‌ಳು ಪಾವತಿ ಚಾನೆಲ್‌ಗ‌ಳನ್ನು ಲೆಕ್ಕ ಹಾಕಿದರೆ ಒಟ್ಟು ಕೇವಲ 137 ರೂ. ಆಗಲಿದೆ. 15 ಚಾನೆಲ್‌ಗ‌ಳು ಲಭ್ಯವಾಗಲಿವೆ. ಉಳಿದ 85 ಉಚಿತ ಚಾನೆಲ್‌ಗ‌ಳನ್ನು ಗ್ರಾಹಕರು ಉಚಿತವಾಗಿ ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಎಲ್ಲಾ ನ್ಯೂಸ್ ಚಾನಲ್‌ಗಳು ಉಚಿತವಾಗಿ ಸಿಗುತ್ತಿರುವುದರಿಂದ 85 ಉಚಿತ ಚಾನೆಲ್‌ಗ‌ಳ ಜೊತೆ ಇವುಗಳನ್ನು ಸೇರಿಸಿಕೊಳ್ಳಬಹುದಾಗಿದೆ. (ಟೈಮ್ಸ್ ಆಫ್ ಇಂಡಿಯಾ, ಫಿನಾನ್ಸಿಯಲ್ ಎಕ್ಸ್‌ಪ್ರೆಸ್ ಮತ್ತು ಪ್ರಜಾವಾಣಿ) ಇದನ್ನು ನೀವು ಕೇಬಲ್ ಸೇವಾದಾರನಿಗೆ ತಿಳಿಸಿ ಆಯ್ದುಕೊಂಡರೆ ನಿಮ್ಮ ಕೇಬಲ್ ಬಿಲ್ ಮಾಸಿಕ 153 ರೂ. ಮೀರುವುದಿಲ್ಲ.

ಬಿಡಿಬಿಡಿಯಾಗಿ ಆಯ್ಕೆ ಮಾಡಿಕೊಳ್ಳಿ!

ಬಿಡಿಬಿಡಿಯಾಗಿ ಆಯ್ಕೆ ಮಾಡಿಕೊಳ್ಳಿ!

ನಾನು ಪಾವತಿಸಬೇಕಾದ ಉದಯ ಟಿವಿ, ಉದಯ ಮೂವಿಸ್, ಕಲರ್ಸ್ ಕನ್ನಡ, ಜ್ಹೀಟಿವಿ ಮಾತ್ರ ನೋಡುತ್ತೇನೆ ಎಂದರೆ ಇವು ನಾಲ್ಕನ್ನು ಆಯ್ಕೆ ಮಾಡಿಕೊಳ್ಳಿ. ಕ್ರೀಡೆಯ ಎರಡು ಚಾನಲ್‌ಗಳು ಹಾಗೂ ನಿಮ್ಮ ಆಯ್ಕೆಯ ಇನ್ನುತರ ವರ್ಗದ ಯಾವುದೇ ಪಾವತಿ ಚಾಲನ್‌ಗಳನ್ನು ಆಯ್ದುಕೊಳ್ಳಿ. ಹೀಗೆ ನಿಮ್ಮ ಹಣ 130 ರೂ. ವರೆಗೂ ತಲುಪುವವರೆಗೂ ಮಾತ್ರ ಆಯ್ಕೆ ಇರಲಿ. ಇದಾದ ನಂತರ ನಿಮ್ಮ ಉಚಿತ ಆಯ್ಕೆ ನಿಲ್ಲುತ್ತದೆ. 130 ರೂ. ಆದ ನಂತರವೂ ನೀವು ಹಣ ಪಾವತಿ ಚಾನಲ್ ಬೇಕು ಎಂದಾದರೆ ನೀವು ಅದಕ್ಕೆ ಪಾವತಿ ಮಾಡಬೇಕಿದೆ.

ಗುಂಪು ಗುಚ್ಛವನ್ನು ನೀವೇ ತಯಾರಿಸಿ!

ಗುಂಪು ಗುಚ್ಛವನ್ನು ನೀವೇ ತಯಾರಿಸಿ!

ಮೊದಲೆಲ್ಲಾ ಸೌತ್‌ ಪ್ಯಾಕ್‌, ಕನ್ನಡ ಅಥವಾ ಇನ್ನು ಯಾವುದೇ ಭಾಷೆ ಮುಖ್ಯವಾಗಿ ಒಳಗೊಂಡ ಚಾನೆಲ್‌ಗ‌ಳ ಗುಚ್ಛವನ್ನು ನೀವು ಆಯ್ದುಕೊಳ್ಳಬೇಕಾಗಿತ್ತು. ಆದರೆ, ಹೊಸ ಪಾವತಿ ವ್ಯವಸ್ಥೆಯಲ್ಲಿ ಈ ರೀತಿಯ ಚಾನೆಲ್‌ಗ‌ಳ ಗುಚ್ಛಗಳನ್ನು ನೀವೇ ತಯಾರಿಸಿಕೊಳ್ಳಬಹುದು. ಈ ಗುಚ್ಛವನ್ನು 130 ರೂ. ಒಳಗೆ ತಯಾರಿಸುವ ಕಲೆ ನಿಮಗಿದ್ದರೆ ನಿಮ್ಮ ಪ್ರತಿ ತಿಂಗಳು ಕೇಬಲ್ ಬಿಲ್ ಮಾಸಿಕ 153 ರೂ. ಆಗದಂತೆ ನೋಡಿಕೊಳ್ಳಬಹುದು. ಇದಕ್ಕೆ ಪ್ರತ್ಯೇಕವಾಗಿ ಹಣವನ್ನು ಪೋಲು ಮಾಡಬೇಕಾದ ಅವಶ್ಯಕತೆ ನಿಮಗಿರುವುದಿಲ್ಲ.

 ಸೆಟ್‌ ಟಾಪ್‌ ಬಾಕ್ಸ್‌ ಖರೀದಿಸಲೇಬೇಕಿಲ್ಲ!

ಸೆಟ್‌ ಟಾಪ್‌ ಬಾಕ್ಸ್‌ ಖರೀದಿಸಲೇಬೇಕಿಲ್ಲ!

ಹೊಸ ನಿಯಮಗಳ ಪ್ರಕಾರ ಡಿಟಿಎಚ್ ಸಂಪರ್ಕ ಹೊಂದಿರುವ ಗ್ರಾಹಕರು ಸೆಟ್‌ ಟಾಪ್‌ ಬಾಕ್ಸ್‌ ಅನ್ನು ಖರೀದಿಯೇ ಮಾಡಬೇಕು ಎಂದೇನಿಲ್ಲ. ಅದನ್ನು ತಮ್ಮ ಡಿಟಿಎಟ್ ಸೇವಾದಾರರ ಮೂಲಕ ಅಥವಾ ಕೇಬಲ್‌ನವರ ಮೂಲಕ ಬಾಡಿಗೆಗೂ ಪಡೆಯಬಹುದು. ಟ್ರಾಯ್‌ನ ಹೊಸ ಸೇವೆಯ ಬಗ್ಗೆ ಕೆಲ ಸ್ಥಳಗಳಲ್ಲಿ ಗೊಂದಲ ಕೂಡ ಉಂಟಾಗಿದೆ. ಈ ಅದಕ್ಕೆ ಟ್ರಾಯ್‌ ಕೂಡ ಸ್ಪಷ್ಟನೆ ನೀಡಿದ್ದು, ಹೊಸ ಮಾದರಿಯ ದರ ವ್ಯವಸ್ಥೆ ಜಾರಿಯ ಬಗ್ಗೆ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್‌ ಮಾಡಿರುವ ಆದೇಶದ ಪ್ರತಿ ನಿಜವಾದದ್ದೇ ಎಂದೂ ತಿಳಿಸಿದೆ.

ಈ ನಿಯಮವನ್ನು ತಂದಿದ್ದು ಏಕೆ?

ಈ ನಿಯಮವನ್ನು ತಂದಿದ್ದು ಏಕೆ?

ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರವೇ ನೀಡಿದ ಮಾಹಿತಿ ಪ್ರಕಾರ 100ಕ್ಕಿಂತ ಹೆಚ್ಚು ಚಾನೆಲ್‌ಗ‌ಳನ್ನು ಆಯ್ಕೆ ಮಾಡಿಕೊಳ್ಳುವವರ ಸಂಖ್ಯೆ ಕಡಿಮೆಯೇ. ಒಟ್ಟಾರೆ ಮಾರುಕಟ್ಟೆ ವ್ಯವಸ್ಥೆಯ ಶೇ.10-15 ಇರಬಹುದು. ಬ್ರಾಡ್‌ಕಾಸ್ಟ್‌ ಆಡಿಯನ್ಸ್‌ ರಿಸರ್ಚ್‌ ಕೌನ್ಸಿಲ್‌ ಇಂಡಿಯಾ (ಬಿಎಆರ್‌ಸಿ) ಪ್ರಕಾರ ಕೂಡ ದೇಶದ ಜನರು 40ಕ್ಕಿಂತ ಹೆಚ್ಚು ಚಾನೆಲ್‌ಗ‌ಳನ್ನು ಬದಲಿಸುವುದೂ ಇಲ್ಲ ಎಂದು ಹೇಳುತ್ತದೆ. ಹಾಗಾಗಿ, ಈ ನೂತನ ನಿಯಮವನ್ನು ಗ್ರಾಹಕರ ಹಿತರಕ್ಷಣೆಗಾಗಿ ತರಲಾಗಿದೆ.

ಜಿಯೋ ಬರುವುದಕ್ಕಿಂತ ಮುಂಚೆ ಭಾರತೀಯರ ರಕ್ತ ಹೀರುತ್ತಿದ್ದ ಟೆಲಿಕಾಂ ಹೇಗಿತ್ತು?

ಜಿಯೋ ಬರುವುದಕ್ಕಿಂತ ಮುಂಚೆ ಭಾರತೀಯರ ರಕ್ತ ಹೀರುತ್ತಿದ್ದ ಟೆಲಿಕಾಂ ಹೇಗಿತ್ತು?

ಪ್ರತಿದಿನ ಎರಡಕ್ಕಿಂತ ಹೆಚ್ಚು ಜಿಬಿ ಡೇಟಾ ಬಳಸುತ್ತಿರುವ ನಮಗೆ ಕಳೆದ ಎರಡು ವರ್ಷಗಳ ಹಿಂದೆ ದೇಶದ ಟೆಲಿಕಾಂ ಹೇಗಿತ್ತು ಎಂಬುದೇ ಈಗ ಮರೆತುಹೋಗಿದೆ. ಅಂಬಾನಿ ಒಡೆತನದ ರಿಲಾಯನ್ಸ್ ಜಿಯೋ ದೇಶದ ಟೆಲಿಕಾಂಗೆ ಕಾಲಿಡುವ ಮುನ್ನ ದೇಶದಲ್ಲಿ ಇದ್ದ ಟೆಲಿಕಾಂ ವ್ಯವಸ್ಥೆಗೂ ಹಾಗೂ ಜಿಯೋ ಬಂದ ನಂತರ ಬದಲಾದ ಈಗಿನ ಟೆಲಿಕಾಂ ವ್ಯವಸ್ಥೆಗೂ ಅಜಗಜಾಂತರ ವ್ಯತ್ಯಾಸವಿದೆ. ಕೇವಲ ಈ ಎರಡು ವರ್ಷಗಳಲ್ಲಿ ಆದಂತಹ ಈ ದೊಡ್ಡ ಬದಲಾವಣೆ ನಿಜವಾಗಿಯೂ ಎಲ್ಲರಿಗೂ ಕೋಪ ತರಿಸುವಂತಿದೆ.

ಹೌದು, ಮೊಬೈಲ್ ಸೇವೆಯ ಹೆಸರಿನಲ್ಲಿ ದೇಶದ ಜನರನ್ನು ಬಹುತೇಕ ಸುಲಿಗೆ ಮಾಡುತ್ತಿದ್ದ ಟೆಲಿಕಾಂ ಕಂಪೆನಿಗಳು ಈಗ ಭಾರತೀಯರ ಕಾಲ್ಕೆಳಗೆ ಬಿದ್ದಿವೆ. ಒಂದು ಜಿಬಿಗೆ 300 ರೂ. ಪೀಕುತ್ತಿದ್ದ ಕೆಲವು ಟೆಲಿಕಾಂ ಕಂಪೆನಿಗಳು ಈಗ 300 ರೂ.ಗೆ ಒಂದು ತಿಂಗಳೆಲ್ಲಾ ಡೇಟಾವನ್ನು ನೀಡುತ್ತಿವೆ. ನಿಜಕ್ಕೂ ಇಂತಹದೊಂದು ಬೆಳವಣಿಗೆ ಭಾರತದಲ್ಲಿ ನಡೆದದ್ದು ಸಾಮಾನ್ಯ ಮಾತೇನಲ್ಲ. ಹಾಗಾಗಿ, ಇಂದಿನ ಲೇಖನದಲ್ಲಿ ಗ್ರಾಹಕರ ರಕ್ತ ಹೀರುತ್ತಿದ್ದ ಟೆಲಿಕಾಂ ಪ್ರಪಂಚದ ಬಗ್ಗೆ ಒಮ್ಮೆ ಮತ್ತೊಮ್ಮೆ ತಿಳಿಸುವ ಕೆಲಸವನ್ನು ನಾವು ಮಾಡುತ್ತಿದ್ದೇವೆ.

ಒಂದು ಜಿಬಿ ಡೇಟಾ ಬೆಲೆ 300 ರೂ.!

ಒಂದು ಜಿಬಿ ಡೇಟಾ ಬೆಲೆ 300 ರೂ.!

ಕೇವಲ ಎರಡು ವರ್ಷಗಳ ಹಿಂದೆ ಭಾರತದಲ್ಲಿ ಒಂದು ಜಿಬಿ ಹೈಸ್ಪೀಡ್ ಡೇಟಾ ಪಡೆಯಲು ಪಾವತಿಸಬೇಕಿದ್ದ ಸರಾಸರಿ ಬೆಲೆ 300 ರೂ.ಗಳು ಎಂದರೆ ಈಗ ಆಶ್ಚರ್ಯವಾಗಬಹುದು. ಈಗ ಒಂದು ಜಿಬಿ ಹೈಸ್ಪೀಡ್ ಡೇಟಾ ಕೇವಲ ಮೂರರಿಂದ ನಾಲ್ಕು ರೂಪಾಯಿಗಳಲ್ಲಿ ಜನರಿಗೆ ಸಿಗುತ್ತಿದೆ. ಕೇವಲ ಡೇಟಾ ಮಾತ್ರವಲ್ಲದೆ, ಉಚಿತ ಕರೆ ಹಾಗೂ ಎಸ್‌ಎಮ್‌ಎಸ್‌ಗಳು ಕೂಡ ಇದೇ ಡೇಟಾದ ಜೊತೆಗೆ ಉಚಿತವಾಗಿದೆ. ಹಾಗಾಗಿಯೇ, ಒಂದು ಬಾಟಲಿ ತಂಪು ಪಾನೀಯಕ್ಕಿಂತ 1ಜಿಬಿ ಡೇಟಾ ಅಗ್ಗವೆಂದು 'ಮೋದಿ' ಹೇಳಿದ್ದು ನಿಜವೆನ್ನಲೇಬೇಕು.

ಆಗ ಟೆಲಿಕಾಂ ಆದಾಯ ಎಷ್ಟು ಗೊತ್ತಾ?

ಆಗ ಟೆಲಿಕಾಂ ಆದಾಯ ಎಷ್ಟು ಗೊತ್ತಾ?

ಕಳೆದ ಎರಡು ವರ್ಷಗಳ ಹಿಂದೆ ಒಂದು ವರ್ಷಕ್ಕೆ ಭಾರತದ ಒಟ್ಟು ಟೆಲಿಕಾಂಗಳ ಆದಾಯ ಎಷ್ಟು ಎಂಬುದನ್ನು ನೀವು ಊಹೆ ಮಾಡಲು ಸಾಧ್ಯವಿಲ್ಲಾ. ನಂಬಿದರೆ ನಂಬಿ ಬಿಟ್ಟರೆ ಬಿಡಿ. ಒಂದು ವರದಿಯ ಪ್ರಕಾರ, ಎರಡು ವರ್ಷಗಳ ಹಿಂದೆ ಭಾರತದ ಎಲ್ಲಾ ಟೆಲಿಕಾಂ ಕಂಪೆನಿಗಳ ಒಂದು ವರ್ಷದ ಆದಾಯ ಮೂರು ಲಕ್ಷಕೋಟಿಗೂ (3,00,000cR) ಹೆಚ್ಚು. ಭಾರತೀಯ ಟೆಲಿಕಾಂ ಪ್ರಪಂಚವನ್ನು ಏಕಸ್ವಾಮ್ಯ ಮಾಡಿಕೊಂಡಿದ್ದರ ಪರಿಣಾಮ ಇದು ಎಂದು ಆ ವರದಿ ಹೇಳಿದೆ.

ದಿಕ್ಕುತಪ್ಪಿಸುತ್ತಿದ್ದವು ಟೆಲಿಕಾಂ ಕಂಪೆನಿಗಳು

ದಿಕ್ಕುತಪ್ಪಿಸುತ್ತಿದ್ದವು ಟೆಲಿಕಾಂ ಕಂಪೆನಿಗಳು

ಇಂದು ಟ್ರಾಯ್ ಕೇವಲ ಒಂದು ಟೆಲಿಕಾಂ ಕಂಪೆನಿಗೆ ಸಹಾಯ ಮಾಡುತ್ತಿದೆ ಎಂಬ ಆರೋಪವಿದೆ. ಆದರೆ, ಎರಡು ವರ್ಷಗಳ ಹಿಂದೆ ಟೆಲಿಕಾಂ ಕಂಪೆನಿಗಳು ಟ್ರಾಯ್ ಅನ್ನು ಸಹ ಮೀರಿ ಬೆಳೆದಿದ್ದವು. ಟೆಲಿಕಾಂ ಕಂಪೆನಿಗಳ ಮೇಲೆ ಟ್ರಾಯ್ ನಿಯಂತ್ರಣವಿದ್ದರೂ ಸಹ ಎಲ್ಲಾ ಟೆಲಿಕಾಂಗಳು ಟ್ರಾಯ್ ಅನ್ನು ದಿಕ್ಕುತಪ್ಪಿಸುತ್ತಿದ್ದವು. ತನ್ನ ಗ್ರಾಹಕರಿಗೆ ಇತರ ಉತ್ತಮ ಸೇವೆಗಳನ್ನು ನೀಡುವುದಾಗಿ ಹೇಳಿ ಅವರಿಂದ ಟೆಲಿಕಾಂ ಕಂಪೆನಿಗಳು ಹೆಚ್ಚು ಹಣ ಪೀಕುತ್ತಿದ್ದವು ಎಂದು ಸ್ವತಃ ಟ್ರಾಯ್ ಹೇಳಿಕೊಂಡಿದ್ದು ನಿಮಗೆ ತಿಳಿದಿರಬಹುದು.

ಗ್ರಾಹಕರ ಜೇಬಿಗೆ ಕನ್ನ

ಗ್ರಾಹಕರ ಜೇಬಿಗೆ ಕನ್ನ

ಮೊಬೈಲ್‌ ಬಳಕೆದಾರರ ರೀಚಾರ್ಜ್ ಮಾಡಿಸುವಾಗ ತೆರಬೇಕಿದ್ದ ಹಣ ಒಂದೆಡೆಯಾದರೆ, ಮೊಬೈಲ್‌ನಲ್ಲಿ ಮಾತನಾಡುವಾಗ ಕರೆಕಡಿತದಂತಹ ಲೋಪಗಳಿಂದಲೂ ಟೆಲಿಕಾಂ ಕಂಪೆನಿಗಳು ದುಡ್ಡು ಮಾಡಿಕೊಳ್ಳುತ್ತಿದ್ದವು. ಆಗಿದ್ದ ರೇಡಿಯೋ ಲಿಂಕ್ ತಂತ್ರಜ್ಞಾನವನ್ನು ತಮಗೆ ಬೇಕಾದಂತೆ ಮಾರ್ಪಡಿಸಿಕೊಂಡ ಟೆಲಿಕಾಂ ಕಂಪೆನಿಗಳು ಕರೆ ಕಡಿತವಾಗಿದ್ದರೂ ಅದು ಚಾಲನೆಯಲ್ಲೇ ಇರುವಂತೆ ತೋರಿಸಿ ಗ್ರಾಹಕರ ಜೇಬಿಗೆ ಕನ್ನ ಹಾಕುತದತಿದ್ದವು. ಒಂದು ಮಾಹಿತಿಯಂತೆ ಇದರಿಂದ ಅವುಗಳಿಗೆ ಸಿಗುತ್ತಿದ್ದ ಆದಾಯವೇ ಪ್ರತಿದಿನ 50 ಕೋಟಿಗೂ ಹೆಚ್ಚಿತ್ತಂತೆ.

ದಿನವೊಂದರ ಗಳಿಕೆ 250 ಕೋಟಿ ರೂ.

ದಿನವೊಂದರ ಗಳಿಕೆ 250 ಕೋಟಿ ರೂ.

ಇಂದು ನಿವ್ವಳ ಲಾಭದಲ್ಲಿ ಸಾವಿರಾರು ಕೋಟಿ ಇಳಿಕೆ ಕಂಡಿರುವ ಟೆಲಿಕಾಂ ಕಂಪೆನಿಗಳು ಅಂದು ಒಂದು ದಿನಕ್ಕೆ ಗಳಿಸುತ್ತಿದ್ದ ಆದಾಯ ಎಷ್ಟು ಎಂಬುದನ್ನು ಕೇಳಿದರೆ ನೀವು ದಂಗಾಗಬಹುದು. ಏಕೆಂದರೆ, ಕರೆ ಕಡಿತದ ಕ್ರಮಕ್ಕೆ ಟೆಲಿಕಾಂ ಕಂಪೆನಿಗಳಿಗೆ ಟ್ರಾಯ್ ದಂಡ ವಿಧಿಸುವ ಪ್ರಸ್ತಾಪಕ್ಕೆ ಸಂಬಂಧಿಸಿದ ಮೊಕದ್ದಮೆಯಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ಮುಕುಲ್ ರೋಹಟಗಿ ಅವರು ನೀಡಿದ ಮಾಹಿತಿಯಂತೆ, ಟೆಲಿಕಾಂ ಕಂಪೆನಿಗಳ ದಿನವೊಂದರ ಸರಾಸರಿ ಗಳಿಕೆ 250 ಕೋಟಿ ರೂಪಾಯಿಗಳಿಗೂ ಹೆಚ್ಚು.!

ಟೆಲಿಕಾಂ ಏಕಸ್ವಾಮ್ಯವಾಗಿತ್ತು.!

ಟೆಲಿಕಾಂ ಏಕಸ್ವಾಮ್ಯವಾಗಿತ್ತು.!

ಇಂದು ಜಿಯೋ ಭಾರತದ ಟೆಲಿಕಾಂ ಅನ್ನು ಏಕಸ್ವಾಮ್ಯ ಮಾಡಿಕೊಂಡಿದೆ ಎಂದು ಹೇಳಲಾಗುತ್ತಿದೆ. ಆದರೆ, ಎರಡು ವರ್ಷಗಳ ಹಿಂದೆ ಒಂದೇ ಒಂದು ಟೆಲಿಕಾಂ ಕಂಪೆನಿ ತನ್ನ ತೆಕ್ಕೆಯಲ್ಲಿ ಭಾರತದ ಟೆಲಿಕಾಂ ಅನ್ನು ಹಿಡಿದಿಟ್ಟುಕೊಂಡಿತ್ತು. ಈ ಒಂದು ಕಂಪೆನಿಯನ್ನೇ ಹಹಿಂಬಾಲಿಸುತ್ತಿದ್ದ ಇತರೆ ಟೆಲಿಕಾಂ ಕಂಪೆನಿಗಳು ಸಹ ಸೇವೆಯ ಹೆಸರಿನಲ್ಲಿ ಒಂದೇ ಬಗೆಯಲ್ಲಿ ಕಾರ್ಯನಿರ್ವಹಣೆ ನೀಡುತ್ತಿದ್ದವು. ಇದರಿಂದ ಗ್ರಾಹಕನಿಗೆ ಆಯ್ಕೆಗಳೇ ಇಲ್ಲದ ಸ್ಥಿತಿ ಎದುರಾಗಿತ್ತು ಎಂದರೆ ತಪ್ಪಾಗುವುದಿಲ್ಲ ಎನ್ನುವುದು ನನ್ನ ಅಭಿಪ್ರಾಯ.

ಮೂಲ ಸೌಕರ್ಯಕ್ಕೆ ಹೂಡಿಕೆ ಮಾಡಿರಲಿಲ್ಲ!

ಮೂಲ ಸೌಕರ್ಯಕ್ಕೆ ಹೂಡಿಕೆ ಮಾಡಿರಲಿಲ್ಲ!

ಎರಡು ವರ್ಷಗಳ ಹಿಂದೆಯೇ ಭಾರತದಲ್ಲಿದ್ದ ಮೊಬೈಲ್ ಸಂಪರ್ಕಗಳ ಸಂಖ್ಯೆ 96.2 ಕೋಟಿಯಾಗಿತ್ತು. ಆದರೆ, ಇಷ್ಟು ದೊಡ್ಡದ ಟೆಲಿಕಾಂ ಇದ್ದರೂ ಕೂಡ ಯಾವುದೇ ಟೆಲಿಕಾಂ ಕಂಪೆನಿ ಕೂಡಾ ಕರೆಗಳ ಗುಣಮಟ್ಟವನ್ನು ಉತ್ತಮ ಪಡಿಸುವ ಹೂಡಿಕೆಗೆ ಸಿದ್ಧವಿಲ್ಲ ಎಂದು ವರದಿಯೊಂದು ಹೇಳಿತ್ತು. 300ರಿಂದ 900 ಮೆಗಾಹರ್ಟ್ಸ್ ಕಂಪನಾಂಕದ ತರಂಗಗಳಲ್ಲಿ ಕರೆಯಗುಣಮಟ್ಟ ಚೆನ್ನಾಗಿರುತ್ತದೆ ಎಂದು ತಿಳಿದಿದ್ದರೂ ಆ ತರಂಗಗಳ ಖರೀದಿಗೆ ಯಾವ ಟೆಲಿಕಾಂ ಕಂಪೆನಿಯೂ ಮುಂದೆ ಬರಲಿಲ್ಲ. ಏಕೆಂದರೆ, ಗ್ರಾಹಕರಿಂದ ಹಣ ಪೀಕಲು ಹೆಚ್ಚು ವೆಚ್ಚ ಮಾಡಲು ಯಾವ ಟೆಲಿಕಾಂ ಕಂಪೆನಿಗಳಿಗೂ ಇಷ್ಟವಿರಲಿಲ್ಲ.

ಶೇ. 80% ರಷ್ಟು ಬೆಲೆ ಇಳಿಕೆ

ಶೇ. 80% ರಷ್ಟು ಬೆಲೆ ಇಳಿಕೆ

ಎರಡು ವರ್ಷಗಳ ಹಿಂದೆ ಜಿಯೋ ಭಾರತದ ಟೆಲಿಕಾಂ ಮಾರುಕಟ್ಟೆಗೆ ಕಾಲಿಟ್ಟಿತು. ಟೆಲಿಕಾಂಗೆ ಜಿಯೋ ಪ್ರವೇಶ ಮಾಡಿದ ನಂತರ ಜನರ ದುಡ್ಡನ್ನು ನುಂಗಿ ನೀರುಕುಡಿಯುತ್ತಿದ್ದ ಉಳಿದ ಟೆಲಿಕಾಂ ಕಂಪೆನಿಗಳ ಸೇವೆಗಳ ಬೆಲೆಗಳು ಶೇ 80% ರಷ್ಟು ಇಳಿಕೆಯಾಯಿತು. ಒಂದು GB ಡೇಟಾಗೆ 300 ರಿಂದ 400ರೂಪಾಯಿಗಳನ್ನು ಪೀಕುತ್ತಿದ್ದ ಕಂಪೆನಿಗಳು ಇದೀಗ 2 ರಿಂದ 3 ರೂಪಾಯಿಗೆ ಒಂದು GB ಡೇಟಾ ನೀಡುತ್ತಿವೆ.ಈಗ ಏನಿದ್ದರೂ ಅನ್‌ಲಿಮಿಟೆಡ್ ಸೇವೆಗಳದ್ದೇ ಜಮಾನವಾಗಿದ್ದು, ಗ್ರಾಹಕರು ಅತ್ಯುತ್ತಮ ದರದಲ್ಲಿ ಹೆಚ್ಚು ಸೇವೆಯನ್ನು ಪಡೆಯುತ್ತಿರುವುದನ್ನು ನೀವು ನೋಡಬಹುದು.

ಓದಿರಿ: ಟ್ರಾಯ್‌ ಹೊಸ ನಿಯಮದ 'ಕೇಬಲ್​ ಬಿಲ್' ನೋಡಿ ಬೆಚ್ಚಿಬಿದ್ದ ಜನ!

Best Mobiles in India

English summary
TRAI new DTH rules from Feb 1: Base pricing, will TV bill go up, a la carte channels, other details explained. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X