ಟ್ರಾಯ್‌ನ ಹೊಸ MNP ನಿಯಮ ಜಾರಿ : 'ಸಿಮ್ ಪೋರ್ಟ್' ಈಗ ಅತೀ ಸುಲಭ!

|

ಟ್ರಾಯ್‌ (ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ) ಸಂಸ್ಥೆಯು ಘೋಷಿಸಿದ್ದ, ಸಿಮ್‌ ಪೋರ್ಟೆಬಲ್‌ (MNP ) ಹೊಸ ನಿಯಮವು ಇಂದಿನಿಂದ ಜಾರಿಯಾಗಿದೆ. ಈ ನಿಯಮದ ಪ್ರಕಾರ ಒಂದು ಟೆಲಿಕಾಂ ಸಂಸ್ಥೆಯಿಂದ ಇನ್ನೊಂದು ಟೆಲಿಕಾಂ ಸಂಸ್ಥೆಗೆ ಸಿಮ್‌ ಪೋರ್ಟೆಬಲ್‌ ಮಾಡಲು ಇನ್ನು ಹದಿನೈದು ದಿನಗಳು ಬೇಕಾಗುವುದಿಲ್ಲ. ಕೇವಲ ಎರಡುರಿಂದ ಐದು ದಿನಗಳ ಒಳಗಾಗಿ ಸಿಮ್ ಪೋರ್ಟ್ ಸಾಧ್ಯವಾಗಲಿದೆ.

MNP-ಸಿಮ್ ಪೋರ್ಟ್‌ಗೆ

ಹೌದು, ಟ್ರಾಯ್ ಸಂಸ್ಥೆಯು ಇದೇ ಡಿ.16ರಂದು MNP-ಸಿಮ್ ಪೋರ್ಟ್‌ಗೆ ಹೊಸ ನಿಯಮ ಜಾರಿ ಮಾಡುವುದಾಗಿ ತಿಳಿಸಿತ್ತು. ಅದರಂತೆ ಟ್ರಾಯ್ ಇಂದು (ಡಿ.16) ಇದೀಗ ಹೊಸ ನಿಯಮ ಜಾರಿ ಮಾಡಿದ್ದು, ಕೇವಲ ಐದು ದಿನಗಳಲ್ಲಿ ಸಿಮ್ ಪೋರ್ಟ್ ಆಗಲಿದೆ. ಈ ಮೊದಲ ಒಂದು ಟೆಲಿಕಾಂ ಸಂಸ್ಥೆಯಿಂದ ಇನ್ನೊಂದು ಟೆಲಿಕಾಂ ಸಂಸ್ಥೆಗೆ ಸಿಮ್‌ ಪೋರ್ಟ್ ಮಾಡಲು ಕನಿಷ್ಠ ಏಳುದಿನಗಳ ಕಾಲಾವಧಿ ಅಗತ್ಯವಾಗಿದೆ. ಹಾಗಾದರೇ ಸಿಮ್‌ ಪೋರ್ಟ್ ಮಾಡುವುದು ಹೇಗೆ ಮತ್ತು ಹೊಸ ನಿಯಮದ ಪ್ರಯೋಜನಗಳೆನು ಎಂಬುದನ್ನು ಮುಂದೆ ತಿಳಿಯೋಣ.

ಸಿಮ್‌ ಪೋರ್ಟ್ ಹೇಗೆ

ಸಿಮ್‌ ಪೋರ್ಟ್ ಹೇಗೆ

* ಸಿಮ್ ಪೋರ್ಟ್‌ ಮಾಡಲು UPC (ಯೂನಿಕ್ ಪೋರ್ಟಿಂಗ್ ಕೋಡ್) ಅಗತ್ಯ.
* ಅದಕ್ಕಾಗಿ ಮೊದಲು UPC (ಯೂನಿಕ್ ಪೋರ್ಟಿಂಗ್ ಕೋಡ್) ಜನರೇಟ್ ಮಾಡುವುದು.
* ಕ್ಯಾಪಿಟಲ್ ಅಕ್ಷರಗಳಲ್ಲಿ PORT-ಸ್ಪೇಸ್‌-ನಿಮ್ಮ ನೊಬೈಲ್ ಸಂಖ್ಯೆ ನಮೂದಿಸಿ. 1900 ನಂಬರ್‌ಗೆ ಎಸ್‌ಎಮ್‌ಎಸ್‌ ಮಾಡುವುದು.
* ಆ ಬಳಿಕ UPC ಎಸ್‌ಎಮ್‌ಎಸ್‌ ಲಭ್ಯವಾಗುತ್ತದೆ.
* ಪೋರ್ಟ್ ಆಗ ಬಯಸುವ ಟೆಲಿಕಾಂ ಸಂಸ್ಥೆಯ ಸರ್ವೀಸ್ ಸೆಂಟರ್‌ಗೆ ಭೇಟಿ ನೀಡುವುದು.
* Customer Acquisition Form (CAF) ತುಂಬುವುದು ಮತ್ತು ಕೆವೈಸಿ ದಾಖಲಾತಿ ನೀಡುವುದು.
* 5 ದಿನಗಳ ಒಳಗಾಗಿ ಸಿಮ್ ಪೋರ್ಟ್ ಆಗುವುದು

ಪೋರ್ಟ್ ಶುಲ್ಕ

ಪೋರ್ಟ್ ಶುಲ್ಕ

TRAI-ಟ್ರಾಯ್ ಪ್ರತಿ ಪೋರ್ಟಿಂಗ್ ವಿನಂತಿಯ ಶುಲ್ಕವನ್ನು 6.46 ರೂ.ಗಳಿಗೆ ನಿಗದಿಗೊಳಿಸಿದೆ. ಸಿಮ್ ಪೋರ್ಟ್ ಆಗುವ ದಿನಾಂಕದಂದು ರಾತ್ರಿ ಸಮಯದಲ್ಲಿ ಸುಮಾರು ನಾಲ್ಕು ಗಂಟೆಗಳ ಸೇವೆಯಲ್ಲಿ ಅಡ್ಡಿ ಉಂಟಾಗುವ ಸಾಧ್ಯತೆಗಳಿರುತ್ತವೆ ಎಂದು ಹೇಳಿದೆ.

ಹೊಸ ನಿಯಮದ ಪ್ರಯೋಜನಗಳೆನು

ಹೊಸ ನಿಯಮದ ಪ್ರಯೋಜನಗಳೆನು

ಟೆಲಿಕಾಂ ವಲಯದಲ್ಲಿ ಎಮ್‌ಎನ್‌ಪಿ ಸೌಲಭ್ಯವು ಚಂದಾದಾರರಿಗೆ ಉಪಯುಕ್ತವಾಗಿದ್ದು, ಒಂದು ಆಪರೇಟರ್‌ನಿಂದ ಇನ್ನೊಂದು ಟೆಲಿಕಾಂ ಆಪರೇಟರ್‌ಗೆ ಬದಲಾಯಿಸಬಹುದಾಗಿದೆ. ಈ ಎಮ್‌ಎನ್‌ಪಿ ಬದಲಾವಣೆಯು ಯಶಸ್ವಿಯಾಗಲು ಸುಮಾರು ಒಂದು ವಾರ ಆಗುತ್ತದೆ. ಆದ್ರೆ ಇದೀಗ ಹೊಸ ನಿಯಮ ಜಾರಿ ಆಗಿದ್ದು, ಎಮ್‌ಎನ್‌ಪಿ- ಸಿಮ್‌ ಫೋರ್ಟ್ ಕೇವಲ ಎರಡುರಿಂದ ಐದು ದಿನಗಳಲ್ಲಿ ಆಗಲಿದೆ. ಇಂಟರ್ ಸರ್ಕಲ್ ಎಂಎನ್‌ಪಿಗೆ, ಅಂದರೆ ನಿಮ್ಮ ಸಿಮ್ ಅನ್ನು ಎರಡು ವಲಯಗಳ ನಡುವೆ ಪೋರ್ಟ್ ಮಾಡಲು, ಚಂದಾದಾರರು ಸುಮಾರು 5 ದಿನಗಳು ಕಾಯಬೇಕಾಗುತ್ತದೆ.

Best Mobiles in India

English summary
TRAI has said that the Mobile Number Portability process will be completed within up to five working days under the new rules. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X