ವಿಮಾನ ಪ್ರಯಾಣದ ವೇಳೆ ಮೊಬೈಲ್ ಸೇವೆಗೆ 'ಟ್ರಾಯ್' ಚಿಂತನೆ!..ಜನರ ಅಭಿಪ್ರಾಯಕ್ಕೆ ಆಹ್ವಾನ!!
ವಿಮಾನ ಪ್ರಯಾಣ ವೇಳೆ ಮೊಬೈಲ್ ಸೇವೆ ಒದಗಿಸುವ ಕುರಿತು ಬೇಡಿಕೆ ಹೆಚ್ಚಾಗುತ್ತಿರುವುದರಿಂದ ಟ್ರಾಯ್ ಹಾರಾಟ ನಡೆಸುವ ವಿಮಾನಗಳಲ್ಲಿ ಕರೆ ಮತ್ತು ಡೇಟಾ ಸೇವೆಗಳನ್ನು ಒದಗಿಸುವ ಕುರಿತು ಚಿಂತಿಸಿದೆ.!!
ವಿಮಾನಗಳಲ್ಲಿ ನೆಟ್‌ವರ್ಕ್ ಸಂಪರ್ಕವನ್ನು ನೀಡುವ ಕುರಿತು ನಿಯಮಗಳನ್ನು ರೂಪಿಸಲು ಭಾರತೀಯ ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಮುಂದಾಗಿದೆ. ಹಾಗಾಗಿ, ಹಾರಾಟದ ವೇಳೆ ವಿಮಾನದಲ್ಲಿ ಮೊಬೈಲ್ ಸೇವೆ ಕುರಿತು ಸಾರ್ವಜನಿಕರ ಅಭಿಪ್ರಾಯವನ್ನು ಟ್ರಾಯ್ ಕೋರಿದೆ.!!
ಸುರಕ್ಷತಾ ದೃಷ್ಟಿಯಿಂದ ಇಲ್ಲಿಯವರೆಗೂ ವಿಮಾನ ಹಾರಾಟದ ವೇಳೆ ಮೊಬೈಲ್ ಸೇವೆಯನ್ನು ತಡೆಹಿಡಿಯಲಾಗಿದ್ದು, ಆದರೆ, ವಿಮಾನ ಪ್ರಯಾಣ ವೇಳೆ ಮೊಬೈಲ್ ಸೇವೆ ಒದಗಿಸುವ ಕುರಿತು ಬೇಡಿಕೆ ಹೆಚ್ಚಾಗುತ್ತಿರುವುದರಿಂದ ಟ್ರಾಯ್ ಹಾರಾಟ ನಡೆಸುವ ವಿಮಾನಗಳಲ್ಲಿ ಕರೆ ಮತ್ತು ಡೇಟಾ ಸೇವೆಗಳನ್ನು ಒದಗಿಸುವ ಕುರಿತು ಚಿಂತಿಸಿದೆ.!!

ತಂತ್ರಜ್ಞಾನ ಅಭಿವೃದ್ಧಿಯಿಂದಾಗಿ ವಿಮಾನ ಹಾರಾಟ ನಡೆಸುವಾಗ ಪ್ರಯಾಣಿಕರಿಗೆ ಉಪಗ್ರಹ ಆಧಾರಿತ ಮೊಬೈಲ್ ಸೇವೆ ಒದಗಿಸಬಹುದಾಗಿದ್ದು, ಪ್ರತಿ ಗಂಟೆಗೆ 800 ಕಿ.ಮೀ ವೇಗದಲ್ಲಿ ಮತ್ತು 10,000 ಮೀಟರ್ ಎತ್ತರದಲ್ಲಿ ಹಾರುವ ವಿಮಾನದಲ್ಲಿಯೂ ಮೊಬೈಲ್ ಸೇವೆ ನೀಡಬಹುದು ಎಂದು ಟ್ರಾಯ್ ಅಭಿಪ್ರಾಯಪಟ್ಟಿದೆ.!

ಶೇ 80ರಷ್ಟು ಪ್ರಯಾಣಿಕರು ವಿಮಾನದಲ್ಲಿ ವೈ-ಫೈ ಬಳಸಲು ಇಚ್ಚಿಸುವುದಾಗಿ ಅಂತರರಾಷ್ಟ್ರೀಯ ವಿಮಾನ ಪ್ರಯಾಣಿಕರ ಸಂಘ ನಡೆಸಿದ್ದ ಸಮೀಕ್ಷೆಯಲ್ಲಿ ಹೇಳಲಾಗಿದ್ದುತ್ತು, ಇದೀಗ ಟ್ರಾಯ್ ಜನರು ತಮ್ಮ ಅಭಿಪ್ರಾಯ ತಿಳಿಸಲು ಕೋರಿದ್ದು, ಅಕ್ಟೋಬರ್ 27 ರಂದು ಮತ್ತು ನವೆಂಬರ್ 3 ರಂದು www.trai.gov.in ಮೂಲಕ ನೀವು ಸಹ ಭಾಗಿಯಾಗಬಹುದು.!!
ಓದಿರಿ: 2018ರಿಂದ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಬಯೋಮೆಟ್ರಿಕ್ ವ್ಯವಸ್ಥೆ!!..ಕಾರ್ಯನಿರ್ವಹಣೆ ಹೇಗೆ?


Click it and Unblock the Notifications