2018ರಿಂದ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಬಯೋಮೆಟ್ರಿಕ್ ವ್ಯವಸ್ಥೆ!!..ಕಾರ್ಯನಿರ್ವಹಣೆ ಹೇಗೆ?

ಏನಿದು ಬಯೋಮೆಟ್ರಿಕ್ ಬೋರ್ಡಿಂಗ್? ಇದರ ಉಪಯೋಗಗಳೇನು?

|

ಡಿಜಿಟಲ್‌ ಇಂಡಿಯಾದ 'ಡಿಜಿ ಯಾತ್ರ' ಹೆಸರಿನಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಆಧಾರ್‌ ಕಾರ್ಡ್‌ ಆಧಾರಿತ ಬಯೋಮೆಟ್ರಿಕ್ ಬೋರ್ಡಿಂಗ್ ವ್ಯವಸ್ಥೆಯನ್ನು ತರಲಾಗುತ್ತಿದ್ದು, 2018ರಿಂದ ಬಯೋಮೆಟ್ರಿಕ್ ಬೋರ್ಡಿಂಗ್ ವ್ಯವಸ್ಥೆ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಕಾಣಿಸಲಿದೆ.!!

ನಾಗರಿಕ ವಿಮಾನಯಾನ ಇಲಾಖೆ ಸಹಯೋಗದಲ್ಲಿ ಈ ಬಯೋಮೆಟ್ರಿಕ್ ಬೋರ್ಡಿಂಗ್ ವ್ಯವಸ್ಥೆಯನ್ನು ಜಾರಿಗೊಳಿಸಲಾಗುತ್ತಿದ್ದು, ಪ್ರಯಾಣಿಸಲು ಇಚ್ಚಿಸುವವರು ಟಿಕೆಟ್ ಬುಕ್ಕಿಂಗ್ ವೇಳೆ ಆಧಾರ್ ಸಂಖ್ಯೆ ನಮೂದು ಮಾಡಬೇಕಿದೆ.!! ಹಾಗಾದರೆ, ಏನಿದು ಬಯೋಮೆಟ್ರಿಕ್ ಬೋರ್ಡಿಂಗ್? ಇದರ ಉಪಯೋಗಗಳೇನು? ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ಬಯೋಮೆಟ್ರಿಕ್ ಬೋರ್ಡಿಂಗ್!!

ಬಯೋಮೆಟ್ರಿಕ್ ಬೋರ್ಡಿಂಗ್!!

ಕಣ್ಣು ಹಾಗೂ ಬೆರಳಚ್ಚು ಮೂಲಕ ಆಧಾರ್ ಸಂಖ್ಯೆ ಜೋಡಿಸಿ ಪ್ರಯಾಣಿಕರನ್ನು ಬಹಳ ಸುಲಭವಾಗಿ ಪರೀಕ್ಷಿಸುವ ಮತ್ತು ಸೌಲಭ್ಯಗಳನ್ನು ಒದಗಿಸುವ ಯೋಜನೆ ಬಯೋಮೆಟ್ರಿಕ್.! ಬೋರ್ಡಿಂಗ್ ಗೇಟ್‌ ಬಳಿ ತೆರಳಿ ಬಯೋಮೆಟ್ರಿಕ್ ಹಾಗೂ ಕ್ಯೂಆರ್ ಸ್ಕಾನ್ ಮಾಡಿಸಿ ಇ-ಗೇಟ್‌ ಮೂಲಕ ವಿಮಾನದೊಳಗೆ ಪ್ರಯಾಣಿಸುವ ಆಯ್ಕೆ ಇದು.!!

ಸ್ವಯಂಚಾಲಿತ ವ್ಯವಸ್ಥೆ!!

ಸ್ವಯಂಚಾಲಿತ ವ್ಯವಸ್ಥೆ!!

ಕಣ್ಣು ಹಾಗೂ ಬೆರಳಚ್ಚನ್ನು ಆಧಾರ್ ಸಂಖ್ಯೆಗೆ ಜೋಡಿಸಲಾಗಿದ್ದು, ಬೋರ್ಡಿಂಗ್ ಪಾಸ್‌ ಕ್ಯೂ ಆರ್‌ ಕೋಡ್‌ ಸ್ಕ್ಯಾನ್ ಮಾಡಿದ ನಂತರ ನಿಮ್ಮ ವಿವರ ಸರಿಯಾಗಿದ್ದರೆ, ಹಸಿರು ಲೈಟ್‌ ಮೂಡಿ, ಬಯೊಮೆಟ್ರಿಕ್ ಗೇಟ್‌ ಸ್ವಯಂಚಾಲಿತವಾಗಿ ತೆರೆದುಕೊಳ್ಳುತ್ತದೆ. ನಂತರ ಹ್ಯಾಂಡ್ ಬ್ಯಾಗ್‌ ಹಾಗೂ ಲಗೇಜಿನ ತೂಕ ಪರಿಶೀಲನೆ ಮಾಡಿಸಬೇಕಾಗುತ್ತದೆ.!!

ಗುರುತಿನ ಚೀಟಿ ಮತ್ತು ಟಿಕೆಟ್ ಪ್ರಿಂಟ್ ಬೇಕಿಲ್ಲ.!!

ಗುರುತಿನ ಚೀಟಿ ಮತ್ತು ಟಿಕೆಟ್ ಪ್ರಿಂಟ್ ಬೇಕಿಲ್ಲ.!!

ಬಯೊಮೆಟ್ರಿಕ್ ಬೋರ್ಡಿಂಗ್ ವ್ಯವಸ್ತೆ ಜಾರಿಯಾದ ನಂತರ ವಿಮಾನ ಟಿಕೆಟ್‌ನ ಪ್ರಿಂಟ್‌ ಔಟ್‌ ಪಡೆಯುವ ಅಗತ್ಯವಿರುವುದಿಲ್ಲ ಮತ್ತು ಗುರುತಿನ ಚೀಟಿ ತೋರಿಸುವ ಅಗತ್ಯವೂ ಇಲ್ಲ. ಇನ್ನು ನೀವು ಪ್ರಯಾಣಿಸಿದ ದಾಖಲೆ ಕೂಡ ಸೃಷ್ಟಿಯಾಗಲಿದೆ.!!

ಬೇರೆ ಏನೆಲ್ಲಾ ಅನುಕೂಲಗಳು?

ಬೇರೆ ಏನೆಲ್ಲಾ ಅನುಕೂಲಗಳು?

ಗುರುತಿನ ಚೀಟಿ ಹೊಂದಿರದೇ ಇದ್ದರೂ ವಿಮಾನಯಾನದಲ್ಲಿ ಯಾವುದೇ ಅಡಚಣೆ ಇಲ್ಲದೆ ಪ್ರಯಾಣಿಸುವುದರ ಜೊತೆಗೆ ತಡೆರಹಿತ ಸುಧಾರಿತ ಭದ್ರತಾ ತಪಾಸಣೆ, ಸಮಯ ಉಳಿತಾಯದಂತಹ ಹಲವು ಉಪಯೋಗಗಳು ಬಯೋಮೆಟ್ರಿಕ್ ಬೋರ್ಡಿಂಗ್ ವ್ಯವಸ್ಥೆಯಿಂದ ಸಿಗುತ್ತವೆ.!!

<strong>ಇನ್ಮುಂದೆ ಮೇಕಪ್ ಮಾಡಿದ ಮುಖ ತೋರಿಸಿದರೂ ತೆರೆಯುತ್ತದೆ ಫೇಸ್‌ಲಾಕ್!!</strong>ಇನ್ಮುಂದೆ ಮೇಕಪ್ ಮಾಡಿದ ಮುಖ ತೋರಿಸಿದರೂ ತೆರೆಯುತ್ತದೆ ಫೇಸ್‌ಲಾಕ್!!

Best Mobiles in India

English summary
Fingerprint Physical Access Control in bangalore airport.to know more visit to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X