ಟ್ರಾಯ್ ಹೊಸ ನಿಯಮ : ಡಿಟಿಎಚ್‌ ಸೇವೆಗೂ ಕೆವೈಸಿ ಕಡ್ಡಾಯ!

|

ಪ್ರಸಕ್ತ ವರ್ಷದಲ್ಲಿ ಭಾರತೀಯ ಟಿವಿ ಮತ್ತು ಕೇಬಲ ವಲಯದಲ್ಲಿ ಸಾಕಷ್ಟು ಬದಲಾವಣೆಗಳು ಆಗಿದ್ದು, ಇತ್ತೀಚಿಗೆ ಟ್ರಾಯ್ ಹೊಸ ನಿಯಮದ ಪ್ರಕಾರ ಚಾನೆಲ್‌ಗಳ ದರ ಪಟ್ಟಿಯಲ್ಲಿ ಏರಿಳಿತಗಳು ಕಂಡಿವೆ. ಈ ಬದಲಾವಣೆಗೆ ಇನ್ನು ಅನೇಕ ಗ್ರಾಹಕರು ಸರಿಯಾಗಿ ಒಗ್ಗಿಕೊಂಡಿಲ್ಲ. ಅದಾಗಲೇ ಟ್ರಾಯ್ ಮತ್ತೊಂದು ನಿಯಮ ಹೊರಡಿಸಿದೆ. ಈ ನಿಯಮವು ಗ್ರಾಹಕರಿಗೆ ಮತ್ತು ಡಿಟಿಎಚ್‌ ಸೇವೆಯನ್ನು ಪೂರೈಸುವವರಿಗೂ ಅನ್ವಯವಾಗುತ್ತದೆ.

ಡಿಟಿಎಚ್‌ ಸೇವೆ

ಹೌದು, ಟ್ರಾಯ್ ಇದೀಗ ಡಿಟಿಎಚ್‌ ಸೇವೆ ಪಡೆಯಲು ಗ್ರಾಹಕರ ಕೆವೈಸಿ ದಾಖಲಾತಿ ದೃಢಿಕರಣ ಕಡ್ಡಾಯ ಮಾಡಿದೆ. ಈ ನಿಯಮದಂತೆ ಇನ್ನು ಡಿಟಿಎಚ್‌ ಪೂರೈಕೆದಾರರು ಹೊಸದಾಗಿ ಡಿಟಿಎಚ್‌ ಸೇವೆ ಪಡೆಯುವ ಗ್ರಾಹಕರ ಹಾಗೂ ಈಗಾಗಲೇ ಡಿಟಿಎಚ್‌ ಸೇವೆ ಪಡೆಯುತ್ತಿರುವ ಗ್ರಾಹಕರ ಕೆವೈಸಿ ದಾಖಲಾತಿ ಪಡೆಯಲು ಸೂಚಿಸಿದೆ. ಡಿಟಿಎಚ್‌ ಪೂರೈಕೆದಾರರೊಂದಿಗೆ ಸಮಾಲೋಚನೆ ಮಾಡಿಯೇ ಟ್ರಾಯ್ ಈ ನಿಯಮ ಜಾರಿಮಾಡಿದೆ.

ಕೆವೈಸಿ

ಟೆಲಿಕಾಂ ವಲಯದಲ್ಲಿರುವಂತೆ ಡಿಟಿಎಚ್‌ ಪೂರೈಕೆದಾರರು ಇನ್ನು ಗ್ರಾಹಕರ ಕೆವೈಸಿ ದಾಖಲೆ ಪಡೆದುಕೊಳ್ಳಲು ಆದೇಶಿಸಿದೆ. ಹೀಗಾಗಿ ಡಿಟಿಎಚ್‌ ಕನೆಕ್ಷನ್ ಪಡೆಯುವ ಹೊಸ ಗ್ರಾಹಕರು ಆರಂಭದಲ್ಲಿಯೇ ಕೆವೈಸಿ ನೀಡಬೇಕಾಗುತ್ತದೆ. ಹಾಗೆಯೇ ಡಿಟಿಎಚ್‌ ಪೂರೈಕೆದಾರರು ಈಗಾಗಲೇ ಡಿಟಿಎಚ್‌ ಕನೆಕ್ಷನ್ ಪಡೆದುಕೊಂಡಿರುವ ಗ್ರಾಹಕರ ಕೆವೈಸಿ ಪಡೆಯಲು ಎರಡು ವರ್ಷಗಳ ಕಾಲಮಿತಿಯನ್ನು ನಿಗದಿ ಮಾಡಿದೆ.

ವಿಳಾಸ

ಗ್ರಾಹಕರು ಅರ್ಜಿಯಲ್ಲಿ ನಮೂದಿಸಿದ ವಿಳಾಸವನ್ನು ಪೂರೈಕೆದಾರರು ಡಿಟಿಎಚ್‌ ಇನ್‌ಸ್ಟಾಲ್‌ ಮೊದಲೇ ಗ್ರಾಹಕರ ವಿಳಾಸ ದೃಢಿಕರಿಸಬೇಕು. ಹಾಗೆಯೇ ಸೆಟ್‌ಟಾಪ್‌ ಬಾಕ್ಸ್‌ನೊಂದಿಗೆ ಮೊಬೈಲ್ ನಂಬರ್ ಲಿಂಕ್ ಮಾಡುವ ಮೂಲಕ ಈಗಾಗಲೇ ಡಿಟಿಎಚ್‌ ಸೇವೆ ಪಡೆಯುತ್ತಿರುವ ಗ್ರಾಹಕರ ಕೆವೈಸಿ ದಾಖಲೆಯನ್ನು ದೃಢಿಕರಣ ಮಾಡಲು ಸೂಚಿಸಿದೆ. ಇದಕ್ಕಾಗಿ ಎರಡು ವರ್ಷಗಳ ಕಾಲಾವಧಿಯನ್ನು ನೀಡಿದೆ.

ಪೂರೈಕೆದಾರರು

ಡಿಟಿಎಚ್‌ ಪೂರೈಕೆದಾರರು ಲೋಕೆಶನ್ ಆಧಾರಿತ ಸೆಟ್‌ಟಾಪ್‌ ಬಾಕ್ಸ್‌ಗಳನ್ನು ಗ್ರಾಹಕರಿಗೆ ನೀಡಬಹುದಾಗಿದೆ. ಕೆವೈಸಿ ದಾಖಲೆ ದೃಢಿಕರಣ ಕುರಿತು ಡಿಟಿಎಚ್‌ ಪೂರೈಕೆದಾರರು ಗ್ರಾಹಕರ ಬಳಿ ಮೇಲಿಂದ ಮೇಲೆ ಕೇಳುವಂತಿಲ್ಲ ಇದರಿಂದ ಗ್ರಾಹಕರಿಗೆ ಕಿರಿ ಕಿರಿ ಎನಿಸಲಿದೆ ಎಂದು ಟ್ರಾಯ್ ಸ್ಪಷ್ಟವಾಗಿ ತಿಳಿಸಿದೆ. ಟ್ರಾಯ್ ನೀಡಿರುವ ನಿಯಮಾವಳಿಗಳ ವ್ಯಾಪ್ತಿಯನ್ನು ಡಿಟಿಎಚ್ ಪೂರೈಕೆದಾರರು ಮೀರುವಂತಿಲ್ಲ.

Best Mobiles in India

English summary
The TRAI has now made it mandatory for DTH operators to perform a KYC for all new and existing customers. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X