Home
ಸುದ್ದಿಜಾಲ

Train Accident: 35 ಪೈಸೆಯ ರೈಲು ಪ್ರಯಾಣ ವಿಮೆಯಲ್ಲಿ 10 ಲಕ್ಷದವರೆಗೆ ಪರಿಹಾರ ಪಡೆಯಬಹುದು!

ಒಡಿಶಾ ರೈಲು ಅಪಘಾತ ಎಲ್ಲಾ ರೈಲು ಪ್ರಯಾಣಿಕರಲ್ಲಿ ಭಾರೀ ಭಯ ಉಂಟು ಮಾಡಿದೆ. ರೈಲ್ವೇ ಇಲಾಖೆ ಈ ರೀತಿಯ ಘಟನೆಗಳು ಜರುಗದಂತೆ ಅದೆಷ್ಟೋ ಸುಧಾರಿತ ತಂತ್ರಜ್ಞಾನ ಅಳವಡಿಕೆ ಮಾಡಿಕೊಂಡರು ಈ ದುರಂತ ನಡೆದು ಹೋಗಿದೆ. ಈ ನಡುವೆ ಸರ್ಕಾರ ಮೃತರ ಕುಟುಂಬಕ್ಕೆ ಪರಿಹಾರವನ್ನೂ ಘೋಷಣೆ ಮಾಡಿದೆ. ಅದಾಗ್ಯೂ ಮೃತರ ಸಂಬಂಧಿಕರು 10 ಲಕ್ಷದವರೆಗೆ ವಿಮಾ ರಕ್ಷಣೆಯನ್ನು ಪಡೆದುಕೊಳ್ಳಬಹುದಾಗಿದೆ.

ಹೌದು, ಒಡಿಶಾದ ಬಾಲಸೋರ್ ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ರೈಲು ಅಪಘಾತ ಎಲ್ಲರನ್ನೂ ಬೆಚ್ಚಿ ಬೀಳಿಸಿದೆ. ಶುಕ್ರವಾರ (ಜೂನ್ 2) ನಡೆದ ಈ ಘಟನೆಯಲ್ಲಿ ಇನ್ನೂರ ಐವತ್ತಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಇನ್ನು ಬಾಲಸೋರ್ ರೈಲು ಅಪಘಾತದ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ಕೊನೆಗೊಂಡಿದೆ. ಹಾಗೆಯೇ ರೈಲ್ವೇ ಹಳಿ ಪುನಃಸ್ಥಾಪನೆ ಕಾರ್ಯ ಭರದಿಂದ ಸಾಗುತ್ತಿದ್ದು, ಇತರೆ ರೈಲುಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಗುತ್ತಿದೆ.

35 ಪೈಸೆಯ ರೈಲು ಪ್ರಯಾಣ ವಿಮೆಯಲ್ಲಿ 10 ಲಕ್ಷದವರೆಗೆ ಪರಿಹಾರ ಪಡೆಯಬಹುದು!

ಈ ದುರ್ಘಟನೆ ನಡೆದ ನಂತರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರು ಸಾವಿಗೀಡಾದ ವ್ಯಕ್ತಿಗಳ ಕುಟುಂಬದವರಿಗೆ 10 ಲಕ್ಷ ರೂಪಾಯಿ, ಗಂಭೀರವಾಗಿ ಗಾಯಗೊಂಡವರಿಗೆ 2 ಲಕ್ಷ ರೂಪಾಯಿ ಮತ್ತು ಸಣ್ಣಪುಟ್ಟ ಗಾಯಗಳಾದವರಿಗೆ 50,000 ರೂಪಾಯಿಗಳನ್ನು ನೀಡುವುದಾಗಿ ಘೋಷಣೆ ಮಾಡಿದ್ದಾರೆ. ಇದರೊಂದಿಗೆ ಐಆರ್‌ಸಿಟಿವಿನಲ್ಲಿ ಟಿಕೆಟ್ ಬುಕ್ ಮಾಡುವಾಗ ಪ್ರಯಾಣಿಕರು ತೆಗೆದುಕೊಳ್ಳುವ ಪ್ರಯಾಣ ವಿಮೆಯ ಬಗ್ಗೆ ಗೊತ್ತಾ?, ಇದರಿಂದ ಅವರ ಕುಟುಂಬದವರಿಗೆ ಎಷ್ಟು ಲಕ್ಷ ಹಣ ದೊರೆಯಲಿದೆ ಎಂಬುದು ಗೊತ್ತಾ?.

ರೈಲ್ವೇ ಟ್ರಾವೆಲ್ ಇನ್ಶೂರೆನ್ಸ್: ಬಸ್‌ ಅಥವಾ ಇನ್ನಿತರೆ ಸಾರಿಗೆಯಲ್ಲಿ ಪ್ರಯಾಣ ಮಾಡುವಾಗ ಇನ್ಶೂರೆನ್ಸ್ ಆಯ್ಕೆ ನೀಡಲಾಗುತ್ತದೆ. ಇದು ಪ್ರಯಾಣಿಕರ ಇಚ್ಚೆಗೆ ಬಿಟ್ಟಿದ್ದು, ಅದರಂತೆ ರೈಲು ಪ್ರಯಾಣದಲ್ಲೂ ಇದು ಪ್ರಮುಖ ಪಾತ್ರ ವಹಿಸುತ್ತದೆ. ಅಂದರೆ ಪ್ರಯಾಣಿಕರು ಟಿಕೆಟ್ ಬುಕ್ ಮಾಡುವಾಗ ಕೇವಲ 35 ಪೈಸೆಯಲ್ಲಿ ಇನ್ಶೂರೆನ್ಸ್ ಪಡೆದುಕೊಳ್ಳಬಹುದು. ದುರಾದೃಷ್ಟವಶಾತ್‌ ರೈಲು ಅಪಘಾತದಲ್ಲಿ ದುರಂತ ಏನಾದರೂ ಸಂಭವಿಸಿದರೆ 10 ಲಕ್ಷದವರೆಗೆ ವಿಮಾ ರಕ್ಷಣೆಯನ್ನು ಪಡೆದುಕೊಳ್ಳಬಹುದಾಗಿದೆ.

ನೀವು ಬುಕಿಂಕ್‌ ಸಮಯದಲ್ಲಿ ಈ ಟ್ರಾವೆಲ್ ಇನ್ಶೂರೆನ್ಸ್ ಆಯ್ಕೆ ಮಾಡಿದ ನಂತರ ನಿಮ್ಮ ಮೊಬೈಲ್‌ಗೆ ಹಾಗೂ ಇ-ಮೇಲ್‌ಗೆ ವಿಮಾ ಕಂಪೆನಿಯು ಲಿಂಕ್ ಕಳುಹಿಸುತ್ತದೆ. ಈ ಲಿಂಕ್ ಅನ್ನು ಕ್ಲಿಕ್ ಮಾಡಿದಾಗ ಮತ್ತೊಂದು ಪುಟ ತೆರೆದುಕೊಳ್ಳಲಿದ್ದು, ಅದರಲ್ಲಿ ಕಡ್ಡಾಯವಾಗಿ ನಾಮಿನಿ ವಿವರಗಳನ್ನು ಅಲ್ಲಿ ಭರ್ತಿ ಮಾಡಬೇಕು. ಈ ವಿಭಾಗದಲ್ಲಿ ನಾಮಿನಿಯ ಹೆಸರಿದ್ದರೆ ಮಾತ್ರ ವಿಮಾ ಕ್ಲೈಮ್ ಪಡೆಯಲು ಸರಳವಾಗುತ್ತದೆ.

35 ಪೈಸೆಯ ರೈಲು ಪ್ರಯಾಣ ವಿಮೆಯಲ್ಲಿ 10 ಲಕ್ಷದವರೆಗೆ ಪರಿಹಾರ ಪಡೆಯಬಹುದು!

ಈ ವಿಮೆಯಲ್ಲಿ ರೈಲು ಪ್ರಯಾಣಿಕರು ರೈಲು ಪ್ರಯಾಣದ ಸಮಯದಲ್ಲಿ ಬೆಲೆಬಾಳುವ ವಸ್ತುಗಳು ಮತ್ತು ಸಾಮಾನುಗಳನ್ನು ಕಳೆದುಕೊಂಡರೆ ಇದನ್ನು ಪರಿಹಾರ ಪಡೆದುಕೊಳ್ಳಬಹುದು. ಅಷ್ಟೇ ಅಲ್ಲದೆ, ರೈಲುಗಳು ಅಪಘಾತವಾದ ಸಂದರ್ಭದಲ್ಲಿ ಸಾವಿಗೀಡಾದರೆ ಅಥವಾ ಗಂಭೀರವಾಗಿ ಗಾಯಗೊಂಡರೆ ಚಿಕಿತ್ಸೆಯ ವೆಚ್ಚಗಳು ಮತ್ತು ಮರಣದ ಸಂದರ್ಭದಲ್ಲಿ ವಿಮಾದಾರನ ನಾಮಿನಿಗೆ ಪರಿಹಾರವನ್ನು ನೀಡಲಾಗುತ್ತದೆ. ಇದರಿಂದ ಸಾವಿಗೀಡಾದ ವ್ಯಕ್ತಿಯ ಕುಟುಂಬಕ್ಕೆ ಜೀವನ ನಡೆಸಲು ಕೊಂಚ ಊರುಗೋಲು ಸಿಕ್ಕಿದಂತೆ ಆಗುತ್ತದೆ.

ರೈಲ್ವೇ ಟ್ರಾವೆಲ್ ಇನ್ಶೂರೆನ್ಸ್ ಹೇಗೆಲ್ಲಾ ಲಾಭ?: ಇನ್ನು ಟಿಕೆಟ್ ಬುಕಿಂಗ್‌ ಮಾಡುವಾಗ ಈ 35 ಪೈಸೆಯ ಇನ್ಶೂರೆನ್ಸ್ ಆಯ್ಕೆ ಮಾಡುವ ಪ್ರಯಾಣಿಕರು ಅಪಘಾತದಲ್ಲಿಅಕಸ್ಮಾತ್‌ ಮರಣಹೊಂದಿದರೆ ಅಥವಾ ಶಾಸಶ್ವತವಾಗಿ ಅಂಗವಿಕಲರಾಗಿದ್ದರೆ 10 ಲಕ್ಷದವರೆಗೆ ವಿಮಾ ಮೊತ್ತವನ್ನು ಪಾವತಿಸಲಾಗುತ್ತದೆ. ಭಾಗಶಃ ಅಂಗವಿಕಲರಾದರೆ ಪರಿಹಾರವಾಗಿ 7.5 ಲಕ್ಷ ರೂ. ಗಳನ್ನು ನೀಡಲಾಗುತ್ತದೆ. ಹಾಗೂ ಗಂಭೀರ ಗಾಯಗಳಾದರೆ 2 ಲಕ್ಷ ರೂ.ಗಳನ್ನು ನೀಡಲಾಗುತ್ತಿದ್ದು, ಸಣ್ಣಪುಟ್ಟ ಗಾಯಗಳಾದರೆ 10,000 ರೂ.ವರೆಗೆ ನೆರವು ನೀಡಲಾಗುತ್ತದೆ.

ರೈಲ್ವೇ ಟ್ರಾವೆಲ್ ಇನ್ಶೂರೆನ್ಸ್ ಕ್ಲೈಮ್ ಮಾಡುವುದು ಹೇಗೆ?: ತಮ್ಮನ್ನೇ ನಂಬಿಕೊಂಡ ಕುಟುಂಬದ ಸದಸ್ಯರಿಗೆ ಮುಂದೆ ಏನೂ ತೊಂದರೆ ಆಗಬಾರದು ಎಂದು ಬಹುಪಾಲು ಜನರು ಸಾಮಾನ್ಯವಾಗಿ ಇನ್ಶೂರೆನ್ಸ್ ಮಾಡಿಸಿರುತ್ತಾರೆ. ಅದರಲ್ಲಿ ಎಲ್‌ಐಸಿ ಇನ್ಶೂರೆನ್ಸ್ ಸಹ ಪ್ರಮುಖವಾದುದು. ಅದೇ ರೀತಿ ಈ ರೈಲ್ವೇ ಟ್ರಾವೆಲ್ ಇನ್ಶೂರೆನ್ಸ್ ಸಹ ಕೆಲಸ ಮಾಡಲಿದ್ದು, ಭಾರತೀಯ ರೈಲ್ವೆ ಪ್ರಯಾಣಿಕರು ರೈಲು ಅಪಘಾತಕ್ಕೊಳಗಾದ 4 ತಿಂಗಳೊಳಗೆ ವಿಮೆಯನ್ನು ಪಡೆಯಬಹುದು. ಇದಕ್ಕಾಗಿ ಸಂಬಂಧಿಸಿದ ಕಚೇರಿಗೆ ತೆರಳಬೇಕು.

35 ಪೈಸೆಯ ರೈಲು ಪ್ರಯಾಣ ವಿಮೆಯಲ್ಲಿ 10 ಲಕ್ಷದವರೆಗೆ ಪರಿಹಾರ ಪಡೆಯಬಹುದು!

ಇನ್ನು ಒಡಿಶಾದ ಬಾಲಸೋರ್ ಜಿಲ್ಲೆಯಲ್ಲಿ ನಡೆದ ಘಟನೆಗೆ ಎಲ್‌ಐಸಿ ಸಹ ಸಂತಾಪ ಸೂಚಿಸಿದ್ದು, ಘಟನೆಯಲ್ಲಿ ತೊಂದರೆಗೆ ಒಳಗಾದ ಎಲ್‌ಐಸಿ ಬಾಂಡ್‌ ಹೊಂದಿರುವ ಎಲ್ಲಾ ಪ್ರಯಾಣಿಕರಿಗೂ ಯಾವುದೇ ವಿಳಂಬ ಇಲ್ಲದೆ ತ್ವರಿತವಾಗಿ ಅವರಿಗೆ ಕ್ಲೈಮ್‌ ಮಾಡಿಕೊಡಲಾಗುತ್ತದೆ ಎಂದು ತಿಳಿಸಿದೆ.

Best Mobiles in India

English summary
A terrible train accident in Odisha's Balasore district has shocked everyone. Meanwhile, railway travel insurance holders can avail insurance coverage up to 10 lakhs.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+