Home
ಸುದ್ದಿಜಾಲ

Apple + Android: ಐಫೋನ್‌ಗೂ ಆಂಡ್ರಾಯ್ಡ್‌ ಫೋನ್‌ಗೂ ಸುಲಭ ಬೆಸುಗೆ... ಏನಿದು ಹೊಸ ಸೌಲಭ್ಯ?

ಆಪಲ್‌ ಐಫೋನ್‌ಗಳ (Apple iPhone) ಬಳಕೆ ಹೆಚ್ಚಾದಂತೆ ಅದರಲ್ಲಿ ಬಳಕೆದಾರರಿಗೆ ಹೊಸ ಹೊಸ ಅನುಭವ ನೀಡಲು ವಿಶೇಷ ಫೀಚರ್ಸ್‌ ಅನ್ನು ನೀಡಲಾಗುತ್ತಿದೆ. ಅದರಂತೆ ಈಗ ಆಂಡ್ರಾಯ್ಡ್‌ ಫೋನ್‌ ಹಾಗೂ ಐಫೋನ್‌ ನಡುವಿನ ಅಂತರವನ್ನು ಕಡಿಮೆ ಮಾಡಲು ಆಪಲ್‌ ಕೆಲಸ ಮಾಡುತ್ತಿದೆ.

ಹೌದು, ಆಪಲ್‌ನ ಐಫೋನ್‌ ಹಾಗೂ ಆಂಡ್ರಾಯ್ಡ್ ಫೋನ್‌ಗಳು ಸಾಕಷ್ಟು ವಿಚಾರದಲ್ಲಿ ಭಿನ್ನತೆ ಇವೆ. ಈ ನಡುವೆ ಆಪಲ್‌ ಆಂಡ್ರಾಯ್ಡ್‌ ಜೊತೆ ಸುಲಭ ಸಂಪರ್ಕಕ್ಕಾಗಿ ಹೊಸ ಸೌಲಭ್ಯಗಳನ್ನು ನೀಡಲು ಆಪಲ್ ಮುಂದಾಗಿದೆ ಎಂದು ತಿಳಿದುಬಂದಿದೆ. ಈವರೆಗೂ ಪರಸ್ಪರ ಡೇಟಾ ವರ್ಗಾವಣೆಯಲ್ಲಿ ಸಾಕಷ್ಟು ಕಠಿಣ ವ್ಯವಸ್ಥೆ ಇತ್ತು. ಆದರೆ, ಈ ಕಾರ್ಯ ಇನ್ಮುಂದೆ ಸುಲಭವಾಗಲಿದೆ. ಹಾಗಿದ್ರೆ, ಆಪಲ್‌ನ ಮುಂದಿನ ನಿರ್ಧಾರ ಏನು?, ಇದರಿಂದ ಏನೆಲ್ಲಾ ಪ್ರಯೋಜನ ಅನ್ನೋ ವಿವರ ಇಲ್ಲಿದೆ ನೋಡಿ.

ಐಫೋನ್‌ಗೂ ಆಂಡ್ರಾಯ್ಡ್‌  ಫೋನ್‌ಗೂ ಸುಲಭ ಬೆಸುಗೆ...  ಏನಿದು ಹೊಸ ಸೌಲಭ್ಯ?

ಆಪಲ್‌ಗೂ ಆಂಡ್ರಾಯ್ಡ್‌ಗೂ ಸುಲಭ ಬೆಸುಗೆ: ಐಫೋನ್‌ನಿಂದ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗೆ ಯಾವುದೇ ಡೇಟಾವನ್ನು ಸುಲಭ ರೀತಿಯಲ್ಲಿ ಸೆಂಡ್‌ ಮಾಡುವ ಕೆಲಸದಲ್ಲಿ ಆಪಲ್ ತಲ್ಲೀನವಾಗಿದೆ ಎಂದು ತಿಳಿದುಬಂದಿದೆ. ಕಂಪನಿಯು ಈ ಸಂಬಂಧ ಮಾಡಿದ ಬದಲಾವಣೆಗಳ ಪಟ್ಟಿಯನ್ನು ವಿವರಿಸುವ ಹೊಸ ಡಾಕ್ಯುಮೆಂಟ್ ಅನ್ನು ಪ್ರಕಟ ಮಾಡಿದೆ.

ಯುರೋಪಿಯನ್ ಯೂನಿಯನ್ (EU) ಡಿಜಿಟಲ್ ಮಾರ್ಕೆಟಿಂಗ್ ಆಕ್ಟ್ (DMA) ಅನ್ನು ಅನುಸರಿಸಲು ಆಪಲ್ ಮುಂದಾಗಿದ್ದು, ಅದರಂತೆ ಬಳಕೆದಾರರು ತಮ್ಮಿಷ್ಟದ ಬ್ರೌಸರ್‌ ಆಯ್ಕೆ ಪಡೆಯಲಿದ್ದಾರೆ ಎಂದು ತಿಳಿದುಬಂದಿದೆ. ಈ ಆದೇಶದ ಪ್ರಕಾರ ಸಫಾರಿ ಬ್ರೌಸರ್ ಅನ್ನು ಅನ್‌ಇನ್‌ಸ್ಟಾಲ್ ಮಾಡುವುದು, ವಿಭಿನ್ನ ಬ್ರೌಸರ್‌ಗಳ ನಡುವೆ ಡೇಟಾವನ್ನು ವರ್ಗಾಯಿಸುವುದು ಸೇರಿದಂತೆ ಅನೇಕ ಕೆಲಸಗಳು ಬಳಕೆದಾರರಿಗೆ ಸುಗಮವಾಗಲಿದೆ.

ಅದರಂತೆ ಇನ್ಮುಂದೆ ಬಳಕೆದಾರರು ಐಫೋನ್‌ನಿಂದ ಆಪಲ್ ಅಲ್ಲದ ಫೋನ್‌ಗೆ ಅಂದರೆ ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ಗೆ ಯಾವುದೇ ಡೇಟಾವನ್ನು ವರ್ಗಾಯಿಸಲು ಹೊಸ ಮಾರ್ಗ ಪರಿಚಯಿಸುತ್ತಿದೆ ಎಂದು ಪ್ರಕಟವಾದ ಡಾಕ್ಯೂಮೆಂಟ್‌ನಲ್ಲಿ ಉಲ್ಲೇಖ ಮಾಡಲಾಗಿದೆ. ಈ ವಿಶೇಷ ಸೌಲಭ್ಯಗಳು ಮುಂದಿನ ವರ್ಷದ ದ್ವಿತೀಯಾರ್ಧದಲ್ಲಿ ಲಭ್ಯವಿರುತ್ತದೆ ಎನ್ನಲಾಗಿದೆ.

ಐಫೋನ್‌ಗೂ ಆಂಡ್ರಾಯ್ಡ್‌  ಫೋನ್‌ಗೂ ಸುಲಭ ಬೆಸುಗೆ...  ಏನಿದು ಹೊಸ ಸೌಲಭ್ಯ?

ಮೊದಲೇ ತಿಳಿಸಿದಂತೆ ಈ ಪ್ರಕಟಣೆಯ ಪ್ರಕಾರ ಐಫೋನ್ ಬಳಕೆದಾರರು ಶೀಘ್ರದಲ್ಲೇ ಸಫಾರಿ ಬ್ರೌಸರ್ ಅನ್ನು ಅನ್‌ಇನ್‌ಸ್ಟಾಲ್ ಮಾಡುವ ಆಯ್ಕೆ ಪಡೆದಿರುತ್ತಾರೆ. ಟೆಕ್ ದೈತ್ಯ ಈಗಾಗಲೇ ಬಳಕೆದಾರರಿಗೆ ಹೋಮ್ ಸ್ಕ್ರೀನ್‌ನಿಂದ ಮೊದಲೇ ಇನ್‌ಸ್ಟಾಲ್‌ ಮಾಡಲಾದ ಆಪ್‌ಗಳನ್ನು ತೆಗೆದುಹಾಕಲು ಅನುಮತಿ ನೀಡಿದೆ. ಅದರಂತೆ ಇನ್ಮುಂದೆ ಸಫಾರಿ ಬ್ರೌಸರ್ ಅನ್ನೂ ಸಹ ಅನ್‌ಇನ್‌ಸ್ಟಾಲ್‌ ಮಾಡಬಹುದಾಗಿದೆ. ಆದರೆ, ಈ ಸೌಲಭ್ಯ ಬಳಕೆದಾರರಿಗೆ ಬೇಗನೇ ಲಭ್ಯವಾಗಲಿದೆ. ಅಂದರೆ ಈ ವರ್ಷದ ಅಂತ್ಯದಲ್ಲಿ ಸಿಗಲಿದೆ.

ಗಮನಿಬೇಕಾದ ವಿಷಯ ಏನೆಂದರೆ ಪ್ರಸ್ತುತ ಯುರೋಪಿಯನ್ ಯೂನಿಯನ್‌ನಲ್ಲಿರುವ ಐಫೋನ್ ಬಳಕೆದಾರರು ತಮ್ಮ ಡೀಫಾಲ್ಟ್ ನ್ಯಾವಿಗೇಶನ್ ಅನ್ನು ಬದಲಾಯಿಸುವ ಆಯ್ಕೆಯನ್ನು ಹೊಂದಿದ್ದಾರೆ. ಅಂದರೆ ಬಳಕೆದಾರರು ಆಪಲ್ ಒದಗಿಸಿದ ಡೀಫಾಲ್ಟ್ ಆಪ್‌ಗಳ ಬದಲಿಗೆ ತಮ್ಮ ಆಯ್ಕೆಯ ನ್ಯಾವಿಗೇಷನ್ ಆಪ್‌ಗಳನ್ನು ಆಯ್ಕೆ ಮಾಡಬಹುದಾಗಿದೆ.

ಇದರೊಂದಿಗೆ ಆಪಲ್ ಬ್ರೌಸರ್ ಸ್ವಿಚಿಂಗ್ ಪರಿಹಾರದಲ್ಲಿಯೂ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿದುಬಂದಿದೆ. ಅಂದರೆ ಆಪಲ್ ಅದೇ ಡಿವೈಸ್‌ನಲ್ಲಿ ಮತ್ತೊಂದು ಬ್ರೌಸರ್‌ಗೆ ಸಂಬಂಧಿತ ಬ್ರೌಸರ್ ಡೇಟಾವನ್ನು ರಫ್ತು ಮಾಡಲು ಮತ್ತು ಆಮದು ಮಾಡಲು ಸುಲಭ ಪರಿಹಾರವನ್ನು ನೀಡಲಿದೆ. ಈ ಫೀಚರ್ಸ್‌ ಬಳಕೆದಾರರಿಗೆ 2024 ರ ಅಂತ್ಯದ ವೇಳೆಗೆ ಅಥವಾ 2025 ರ ಆರಂಭದಲ್ಲಿ ಲಭ್ಯವಿರುತ್ತದೆ.

ಐಫೋನ್‌ಗೂ ಆಂಡ್ರಾಯ್ಡ್‌  ಫೋನ್‌ಗೂ ಸುಲಭ ಬೆಸುಗೆ...  ಏನಿದು ಹೊಸ ಸೌಲಭ್ಯ?

ಆಪಲ್‌ ಯಾಕೆ ಈ ರೀತಿ ಮಾಡುತ್ತಿದೆ?: ಈ ಮೇಲೆ ತಿಳಿಸಿದ ವಿಷಯಗಳನ್ನು ಗಮನಿಸಿದ್ರೆ ಬಳಕೆದಾರರಿಗೆ ಐಫೋನ್‌ ಹಾಗೂ ಆಂಡ್ರಾಯ್ಡ್‌ ನಡುವೆ ಮುಕ್ತ ಸಂವಹನವನ್ನು ಪ್ರೋತ್ಸಾಹಿಸುವ ಗುರಿ ಹೊಂದಿದೆ ಎಂದು ಹೇಳಬಹುದು. ಈ ಮೂಲಕ ವಿಭಿನ್ನ ಸ್ಮಾರ್ಟ್‌ಫೋನ್‌ಗಳ ನಡುವಿನ ಸಮಸ್ಯೆಗಳನ್ನು ಗಣನೆಗೆ ತೆಗೆದುಕೊಂಡು ಡೇಟಾ ವರ್ಗಾವಣೆ ಪ್ರಕ್ರಿಯೆಯಲ್ಲಿ ಬಳಕೆದಾರರ ಅನುಭವವನ್ನು ಸುಧಾರಿಸುವ ಕೆಲಸ ಮಾಡಲಿದೆ. ಪರಿಣಾಮ ಇನ್ಮುಂದೆ ಇನ್ನಷ್ಟು ಬಳಕೆದಾರ ಸ್ನೇಹಿ ಡಿವೈಸ್‌ಗಳಾಗಿ ಐಫೋನ್‌ಗಳು ಕಾಣಿಸಿಕೊಳ್ಳಲಿವೆ.

Best Mobiles in India

English summary
Apple's iPhone and Android phones differ in many ways. But Apple is ready to introducing an easier way of data transfer.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+