ಸ್ಮಾರ್ಟ್‌ಫೋನ್‌ನಿಂದ ಮನೆತುಂಬ ಬೆಳಕು ನೀಡುವ ಟ್ರಾವೆಲ್ಯಾಂಪ್‌

By Suneel
|

ಟೆಕ್‌ ಜಗತ್ತಿನಲ್ಲಿ ಇಂದು ಏನೆಲ್ಲಾ ಬದಲಾವಣೆ ಅಭಿವೃದ್ದಿಗಳಾಗುತ್ತಿವೆ. ಕೆಲ ತಿಂಗಳುಗಳ ಹಿಂದೆ ಬ್ಯಾಂಕ್ ವ್ಯವಹಾರಕ್ಕೆ ಅಂತ ಜನ ಹೋದ್ರೆ ಹೆಚ್ಚು ಸಮಯ ಅಥವಾ ದಿನವಿಡಿ ಅಲ್ಲೇ ಸಮಯ ಹೋಗಿಬಿಡುತ್ತಿತ್ತು. ಆದರೆ ಇಂದು ತಂತ್ರಜ್ಞಾನ ಮತ್ತು ಸ್ಮಾರ್ಟ್‌ ಯುಗದ ಸ್ಮಾರ್ಟ್‌ಫೋನ್‌ಗಳಿಂದ ಬ್ಯಾಂಕ್‌ ಕೆಲಸಗಳನ್ನು ಇಂದು ನಾವು ಕುಳಿತಲ್ಲಿಯೇ ವ್ಯವಹರಿಸುತ್ತಿದ್ದೇವೆ. ಹೋಟೆಲ್‌ಗಳಿಂದ ಬೇಕಾದ ತಿಂಡಿತಿನಿಸುಗಳನ್ನು ಮನೆಗೆ ತರಿಸುತ್ತೀದ್ದೇವೆ. ಶಾಪಿಂಗ್‌ ಅನ್ನು ಮನೆಯಲ್ಲೇ ಕುಳಿತು ಮಾಡುತ್ತಿದ್ದೇವೆ. ಹಾಗಾದ್ರೆ ಉಳಿದಿರುವ ಅನುಕೂಲಗಳೇನು ಅಂತೀರಾ.

ಓದಿರಿ: ಕೂಲರ್‌ಕ್ಯಾನ್‌ನಿಂದಲೂ ಸ್ಮಾರ್ಟ್‌ಪೋನ್‌ ಚಾರ್ಚ್‌ ಮಾಡಿ

ಸ್ಮಾರ್ಟ್‌ಫೋನ್‌ಗಳಿಂದ ನಾವು ಇನ್ನು ಪಡೆಯ ಬೇಕಾಗಿರುವ ಹಲವು ಅನುಕೂಲಗಳಿವೆ. ಮನೆಯಲ್ಲಿ ಕರೆಂಟ್‌ ಹೋದಾಗ ಸೋಲಾರ್‌ ಲೈಟ್‌ ಆನ್‌ ಮಾಡಬಹುದು. ಸೋಲಾರ್‌ ಲೈಟ್ ಇಲ್ಲದಿದ್ರೆ ಬೆಳಕಿಗಾಗಿ ಏನು ಮಾಡುತ್ತೀರಾ. ಅಥವಾ ಪ್ರವಾಸಕ್ಕೆ ಹೋದಾಗ ರಾತ್ರಿ ವೇಳೆ ಬೆಳಕು ಬೇಕಾದಲ್ಲಿ ಏನು ಮಾಡುತ್ತಿರಾ. ಈಗಂತು ಬಿಡಿ ಸ್ಮಾರ್ಟ್‌ಫೋನ್‌ನಲ್ಲಿನ ಫ್ಲ್ಯಾಸ್ ಲೈಟ್‌ ಆನ್‌ ಮಾಡಿದರಾಯಿತು ಅಂತೀರಾ. ಖಂಡಿತಾವಾಗಿಯೂ ಉತ್ತಮವಾದ ಮಾರ್ಗವಿದು. ಆದರೆ ಇದನ್ನೇ ವಿಭಿನ್ನವಾಗಿ ಲ್ಯಾಂಪ್‌ ರೀತಿಯಲ್ಲಿ ಮನೆ ಅಥವಾ ಪ್ರವಾಸದಲ್ಲಿ ಬಳಸುವುದು ಹೇಗೆ.

ಗಿಜ್‌ಬಾಟ್ ಇಂದಿನ ಲೇಖನದಲ್ಲಿ ಸ್ಮಾರ್ಟ್‌ಫೋನ್‌ ಸಹಾಯದಿಂದ ಬೆಳಕಿಗಾಗಿ ಲ್ಯಾಂಪ್‌ ರೀತಿಯ ಬೆಳಕು ಪಡೆಯುವುದು ಹೇಗೆ ಎಂಬುದನ್ನು ತಿಳಿಸಲಿದೆ.

 ಫ್ಲ್ಯಾಸ್‌ ಲೈಟ್‌

ಫ್ಲ್ಯಾಸ್‌ ಲೈಟ್‌

ಸ್ಮಾರ್ಟ್‌ಫೋನ್‌ ಪ್ಲ್ಯಾಸ್‌ಲೈಟ್‌ನಿಂದ ಈಗ ಸುಲಭವಾಗಿ ಮನೆತುಂಬ ಬೆಳಕು ಪಡೆಯಬಹುದಾಗಿದೆ.

ಟ್ರಾವೆಲ್‌ ಲ್ಯಾಂಪ್‌

ಟ್ರಾವೆಲ್‌ ಲ್ಯಾಂಪ್‌

ಇತ್ತಿಚಿನ ಟ್ರಾವೆಲ್‌ ಲ್ಯಾಂಪ್‌ ಗ್ಯಾಜೆಟ್‌ ಸ್ಮಾರ್ಟ್‌ಫೋನ್‌ ಕ್ಯಾಮೆರಾ ಫ್ಲ್ಯಾಸ್‌ ಲೈಟ್‌ನಿಂದ ಮನೆತುಂಬ ಲ್ಯಾಂಪ್‌ ರೀತಿಯಲ್ಲಿ ಬೆಳಕು ನೀಡುತ್ತದೆ. ಬೆಳಕು ಸಹ ಹೆಚ್ಚು ಪ್ರಕರವಾಗಿದೆ.

ಟ್ರಾವೆಲ್‌ ಲ್ಯಾಂಪ್‌ ವಿನ್ಸಾಸಕಾರರು

ಟ್ರಾವೆಲ್‌ ಲ್ಯಾಂಪ್‌ ವಿನ್ಸಾಸಕಾರರು

ಟ್ರಾವೆಲ್‌ ಲ್ಯಾಂಪ್‌ ಅನ್ನು ಸೆಬಾಸ್ಟಿಯಾನೊ ತೋಸಿ ಮತ್ತು ಮಟ್ಟಿಯಾ ಫೊಸ್ಸಾತಿ ವಿನ್ಯಾಸ ಗೊಳಿಸಿದ್ದಾರೆ.

ಟ್ರಾವೆಲ್‌ ಲ್ಯಾಂಪ್‌

ಟ್ರಾವೆಲ್‌ ಲ್ಯಾಂಪ್‌

ಇದು ಲ್ಯಾಂಪ್‌ನ ಪ್ರತಿರೂಪದಲ್ಲಿದ್ದು, ಹೆಚ್ಚು ಬಾಳಿಕೆ ಬರುವ ಸಿಲಿಕಾನ್‌ನಿಂದ ತಯಾರಿಸಲಾಗಿದೆ.

 ಬೆಳಕು ಹೇಗೆ ?

ಬೆಳಕು ಹೇಗೆ ?

ಈ ಟ್ರಾವೆಲ್‌ ಲ್ಯಾಂಪನ್ನು ಸ್ಮಾರ್ಟ್‌ಫೋನ್‌ ಕ್ಯಾಮೆರಾ ಪ್ಲ್ಯಾಸ್‌ ನೇರಕ್ಕೆ ಸರಿಯಾಗಿ ಅಳವಡಿಸಬೇಕು. ಅಳವಡಿಸಿ ಪ್ಲ್ಯಾಸ್‌ ಲೈಟ್‌ ಆನ್‌ ಮಾಡಿದಾಗ ಮನೆಯ ಬಲ್ಪ್‌ಗಳ ರೀತಿಯಲ್ಲೇ ಬೆಳಕು ಪ್ರವಹಿಸುತ್ತದೆ.

 ಪರಿಮಾಣ

ಪರಿಮಾಣ

2.1*2.3*3.7 ಇಂಚಿನ ಪರಿಮಾಣದಲ್ಲಿ ಸಣ್ಣ ಮತ್ತು ಮಧ್ಯಮ ಸೈಜಿನ ಸ್ಮಾರ್ಟ್‌ಫೋನ್‌ಗಳಿಗೆ ಫಿಕ್ಸ್‌ ಮಾಡಬಹುದಾಗಿದೆ.

ಪ್ರವಾಸಿಗರಿಗೆ ಹೆಚ್ಚು ಉಪಯೋಗ

ಪ್ರವಾಸಿಗರಿಗೆ ಹೆಚ್ಚು ಉಪಯೋಗ

ಪ್ರವಾಸಿಗರು ಚಾರಣ ಹೋಗುವವೇಳೇ ಅಥವಾ ಕ್ಯಾಂಪ್‌ ಹಾಕಿದ ವೇಳೆ ಸುಲಭವಾಗಿ ಟ್ರಾವೆಲ್‌ ಲ್ಯಾಂಪನ್ನು ಬಳಸಬಹುದಾಗಿದೆ.

ಮನೆಯಲ್ಲೂ ಬೆಳಕು ಪಡೆಯಿರಿ

ಮನೆಯಲ್ಲೂ ಬೆಳಕು ಪಡೆಯಿರಿ

ಮನೆಯಲ್ಲೂ ಇದನ್ನು ವಿದ್ಯುತ್‌ ಕರೆಂಟ್‌ ಇಲ್ಲದ ಸಮಯದಲ್ಲಿ ವಿದ್ಯುತ್‌ ಕರೆಂಟ್‌ ರೀತಿಯಲ್ಲಿ ಬೆಳಕು ಪಡೆಯಬಹುದಾಗಿದೆ.

Best Mobiles in India

English summary
We have been using the camera flash of our smartphones as flashlight for quite some time now. This latest gadget, known as Travelamp, transforms it into a bright light that acts as an impromptu bedside lamp or nightlight.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X