Home
ಸುದ್ದಿಜಾಲ

ನಾನು ತೃತೀಯ ಲಿಂಗಿ, ತಂದೆಗೆ ಹೇಳಬೇಡ... ಮಸ್ಕ್‌ ಬಳಿ ಕೋಟಿ ಕೋಟಿ ಇದ್ರೆ ಏನಂತೆ?

ಎಲಾನ್ ಮಸ್ಕ್‌ (Elon Musk) ಅಂದಾಕ್ಷಣ ನಮ್ಮೆಲ್ಲರಿಗೂ ನೆನಪಾಗುವುದು ಟೆಕ್ನಾಲಜಿ (Technology) ವಲಯದಲ್ಲಿನ ಹೊಸ ಅನ್ವೇಷಕ ಎಂದು. ಜೊತೆಗೆ ಮಸ್ಕ್‌ ಕೂಡ ಇದನ್ನು ಅಕ್ಷರಶಃ ನಿಜ ಮಾಡುತ್ತಾ ಬರುತ್ತಿದ್ದಾರೆ. ಅದರಲ್ಲೂ ಟ್ವಿಟ್ಟರ್‌ ಅನ್ನು ಖರೀದಿ ಮಾಡಿದ ನಂತರ ಇವರ ಬಗ್ಗೆ ನಿತ್ಯವೂ ವರದಿಗಳು ಆಗುತ್ತಲೇ ಇರುತ್ತವೆ. ಈ ನಡುವೆ ಇವರ ಜೀವನದ ಮತ್ತೊಂದು ಚರಿತ್ರೆ ಈಗ ಮತ್ತೆ ಮುನ್ನೆಲೆಗೆ ಬಂದಿದೆ.

ಹೌದು, ಪ್ರಸಿದ್ಧ ಉದ್ಯಮಿ ಮತ್ತು ಟೆಸ್ಲಾ ಸಿಇಒ ಎಲಾನ್ ಮಸ್ಕ್‌ (Tesla CEO Elon Musk) ಬಗ್ಗೆ ಎಲ್ಲರಿಗೂ ತಿಳಿದಿದೆ. ಆದರೆ, ಕೆಲವೇ ಜನರಿಗೆ ಮಾತ್ರ ಅವರ ಕುಟುಂಬದ ಬಗ್ಗೆ ತಿಳಿದಿದೆ ಎಂದರೆ ತಪ್ಪಾಗಲಾರದು. ಎಲಾನ್ ಮಸ್ಕ್‌ ಟ್ರಾನ್ಸ್‌ಜೆಂಡರ್ ಮಗಳಿದ್ದಾಳೆ ಎಂಬುದು ನಿಮಗೆ ಗೊತ್ತಾ?. ಅಷ್ಟೇ ಅಲ್ಲ ಆಕೆ ತನ್ನ ತಂದೆಯೊಂದಿಗೆ ಸಂಬಂಧವನ್ನು ನಿಷ್ಟುರವಾಗಿ ಕಡಿದುಕೊಂಡಿದ್ದಾಳೆ. ಹಾಗಿದ್ರೆ, ಏನಿದು ಹೊಸ ವಿಷಯ?, ಯಾರು ಆಕೆ? ಎಂಬಿತ್ಯಾದಿ ಮಾಹಿತಿ ಇಲ್ಲಿದೆ ನೋಡಿ.

ನಾನು ತೃತೀಯ ಲಿಂಗಿ, ತಂದೆಗೆ ಹೇಳಬೇಡ... ಮಸ್ಕ್‌ ಬಳಿ ಕೋಟಿ ಕೋಟಿ ಇದ್ರೆ ಏನಂತೆ?

ಎಲಾನ್ ಮಸ್ಕ್‌ ಮಗಳು ತೃತೀಯ ಲಿಂಗಿ: ಜಗತ್ತಿನಲ್ಲಿ ಈಗ ಲಿಂಗ ಸಮಾನತೆ ಹೆಚ್ಚಾಗಿದ್ದು, ಈ ನಡುವೆ ತೃತೀಯಲಿಂಗಿಗಳು ಇಂದು ಸ್ವತಂತ್ರ್ಯವಾಗಿ ಬದುಕುವ ವ್ಯವಸ್ಥೆ ನಿರ್ಮಾಣ ಆಗಿದೆ. ಈ ಕಾರಣಕ್ಕೆ ಹುಟ್ಟುತ್ತ ಗಂಡಾಗಿದ್ದರೆ ಬೆಳೆಯುತ್ತಾ ಹೆಣ್ಣಾಗುವ ಅದೆಷ್ಟೋ ಮಂದಿ ನಮ್ಮ ನಡುವೆ ಇದ್ದಾರೆ. ಇದೇ ರೀತಿಯ ಘಟನೆ ಎಲಾನ್‌ ಮಸ್ಕ್‌ ರ ಜೀವನದಲ್ಲೂ ಆಗಿದೆ. ಕ್ಸೇವಿಯರ್ ಅಲೆಕ್ಸಾಂಡರ್ ಮಸ್ಕ್‌ನಿಂದ ವಿವಿಯನ್ ಜೆನ್ನಾ ವಿಲ್ಸನ್‌ ಆಗಿ ಬದಲಾಗಿದ್ದಾರೆ ಮಸ್ಕ್‌ರ ಮಗ.

ಇನ್ನು ಲಿಂಗವನ್ನು ಬದಲಾಯಿಸುವ ಮೂಲಕ ಮಸ್ಕ್‌ ಅವರ ಮಗ ಕಸ್ತೂರಿ ಉಪನಾಮವನ್ನು ಸಹ ಕೈಬಿಟ್ಟಿದ್ದಾರೆ. ಈ ಮೂಲಕ ಮಸ್ಕ್‌ ಹಾಗೂ ಅವರ ಮಗನ (ಈಗ ತೃತೀಯ ಲಿಂಗಿ) ನಡುವೆ ಸಂಬಂಧ ಸರಿ ಇಲ್ಲ ಎಂಬುದು ಎಲ್ಲರಿಗೂ ತಿಳಿದ ವಿಚಾರವಾಗಿದೆ. ಜೊತೆಗೆ ಮಸ್ಕ್ ವಿವಿಯನ್ ಬಗ್ಗೆ ತಮ್ಮ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಿದ್ದು, ಹೆಚ್ಚಿನ ಶುಲ್ಕ ವಿಧಿಸುವ ಶಾಲೆಗಳು ಆಕೆಯನ್ನು ಹಾಳು ಮಾಡುವಲ್ಲಿ ಮತ್ತು ಬ್ರೈನ್ ವಾಶ್ ಮಾಡುವಲ್ಲಿ ತೊಡಗಿವೆ ಎಂದು ಆರೋಪಿಸಿದ್ದಾರೆ. ಆ ಶಾಲೆಯು ಕ್ಸೇವಿಯರ್ ಅನ್ನು ಸಂಪೂರ್ಣ ಕಮ್ಯುನಿಸ್ಟ್ ಮಾಡಿತು. ಈ ಮೂಲಕ ಪ್ರತಿಯೊಬ್ಬ ಶ್ರೀಮಂತನು ದುಷ್ಟನೆಂದು ಆಕೆ ಯೋಚಿಸಲು ಪ್ರಾರಂಭಿಸಿದಳು ಎಂದಿದ್ದಾರೆ.

ಮಸ್ಕ್‌ ಅವರ ಜೀವನ ಚರಿತ್ರೆ ಯ ದಿ ವಾಲ್ ಸ್ಟ್ರೀಟ್ ಜರ್ನಲ್‌ನಲ್ಲಿ ಪ್ರಕಟವಾದ ಎಲೋನ್ ಮಸ್ಕ್ ಎಂಬ ಪುಸ್ತಕದ ಆಯ್ದ ಭಾಗಗಳಲ್ಲಿ, ಈ ಬಗ್ಗೆ ಉಲ್ಲೇಖ ಮಾಡಲಾಗಿದೆ. ವಿಷಯ ಏನೆಂದರೆ ಮಸ್ಕ್‌ನ ಮಗಳು ತನ್ನ ಲಿಂಗ ಪರಿವರ್ತನೆಯ ಬಗ್ಗೆ ತಂದೆಗೆ ಹೇಳದೆ ನೇರವಾಗಿ ತನ್ನ ಚಿಕ್ಕಮ್ಮನಿಗೆ ತಿಳಿಸಿದ್ದಾಳಂತೆ. ಆದರೂ ಈ ವಿಷಯವನ್ನು ತಂದೆಯಿಂದ ಮರೆಮಾಡಲಾಗಿಲ್ಲ ಎಂದು ಇಲ್ಲಿ ಉಲ್ಲೇಖಿಸಲಾಗಿದೆ.

'ನಾನು ಟ್ರಾನ್ಸ್ಜೆಂಡರ್, ನನ್ನ ಹೆಸರು ಈಗ ಜೆನ್ನಾ'...: ಪುಸ್ತಕದ ಆಯ್ದ ಭಾಗಗಳಲ್ಲಿ ಮಸ್ಕ್ ಅವರ ಆಗಿನ 16 ವರ್ಷದ ಮಗಳು ವಿವಿಯನ್ ಜೆನ್ನಾ ವಿಲ್ಸನ್ ಲಿಂಗ ಪರಿವರ್ತನೆಯ ಬಗ್ಗೆ ತನ್ನ ಚಿಕ್ಕಮ್ಮನಿಗೆ ಮೊದಲು ತಿಳಿಸಿದ್ದ ಬಗ್ಗೆ ಮಾಹಿತಿ ನೀಡಿದ್ದು, ಆಕೆ ತನ್ನ ಚಿಕ್ಕಮ್ಮನಿಗೆ ಕಳುಹಿಸಿದ ಮೆಸೆಜ್‌ನಲ್ಲಿ 'ಹೇ, ನಾನು ಟ್ರಾನ್ಸ್ಜೆಂಡರ್ ಆಗಿದ್ದೇನೆ ಮತ್ತು ನನ್ನ ಹೆಸರು ಈಗ ಜೆನ್ನಾ. ಅಪ್ಪನಿಗೆ ಹೇಳಬೇಡ'. ಎಂದು ಉಲ್ಲೇಖ ಮಾಡಿದ್ದಾಳೆ.

ಇನ್ನು ವಾಲ್ ಸ್ಟ್ರೀಟ್ ಜರ್ನಲ್‌ನಲ್ಲಿ ಪ್ರಕಟವಾದ ಲೇಖನದ ಪ್ರಕಾರ, ವಿವಿಯನ್ ಜೆನ್ನಾ ವಿಲ್ಸನ್ ಕ್ಯಾಲಿಫೋರ್ನಿಯಾದ ಸಾಂಟಾ ಮೋನಿಕಾದಲ್ಲಿರುವ ಕ್ರಾಸ್‌ರೋಡ್ಸ್ ಸ್ಕೂಲ್ ಫಾರ್ ಆರ್ಟ್ಸ್ ಅಂಡ್ ಸೈನ್ಸಸ್‌ನಲ್ಲಿ ಅಧ್ಯಯನ ಮಾಡಿದ್ದಾರೆ. ಈ ಶಾಲೆಯ ಬೋಧನಾ ಶುಲ್ಕವು ವರ್ಷಕ್ಕೆ $ 50,000 ವರೆಗೆ ಇದೆ. ಈಕೆ ವಿವಿಯನ್ ಮಸ್ಕ್ ಅವರ ಕೆನಡಾದ ಪತ್ನಿ ಜಸ್ಟಿನ್ ವಿಲ್ಸನ್ ಅವರಿಗೆ ಜನಿಸಿದ ಮಗಳು. ಆಕೆಗೆ ಗ್ರಿಫಿನ್ ಎಂಬ ಅವಳಿ ಸಹೋದರನೂ ಇದ್ದಾನೆ. ವಿವಿಯನ್ 2004 ರಲ್ಲಿ ಜನಿಸಿದ್ದು, ಜಸ್ಟಿನ್ ಮತ್ತು ಎಲೋನ್ ಮಸ್ಕ್ 2008 ರಲ್ಲಿ ವಿಚ್ಛೇದನ ಪಡೆದಿದ್ದಾರೆ.

ಸಂಬಂಧಗಳನ್ನು ಸುಧಾರಿಸಲು ನಾನು ತುಂಬಾ ಪ್ರಯತ್ನಿಸಿದೆ: ಮಗನನ್ನು(ಈಗ ತೃತೀಯ ಲಿಂಗಿ) ಸುಧಾರಿಸಲು ಎಲಾನ್‌ ಮಸ್ಕ್ ಸಾಕಷ್ಟು ಪ್ರಯತ್ನ ಪಟ್ಟಿರುವ ಬಗ್ಗೆಯೂ ವರದಿ ಹೇಳಿದೆ. ಮಸ್ಕ್, 'ಸಂಬಂಧವನ್ನು ಸುಧಾರಿಸಲು ನಾನು ಸಾಕಷ್ಟು ರಾಜಿ ಮಾಡಿಕೊಂಡಿದ್ದೇನೆ ಆದರೆ ಆಕೆ ನನ್ನೊಂದಿಗೆ ಸಮಯ ಕಳೆಯಲು ಸಿದ್ಧಳಾಗಿರಲಿಲ್ಲ. ಅವಳು ಪೂರ್ಣ ಪ್ರಮಾಣದ ಕಮ್ಯುನಿಸ್ಟ್ ಆಗಲು ಸಮಾಜವಾದವನ್ನು ಮೀರಿ ಹೋಗಿದ್ದಳು. ಜೊತೆಗೆ ಪ್ರತಿಯೊಬ್ಬ ಶ್ರೀಮಂತ ವ್ಯಕ್ತಿ ಕೆಟ್ಟವ ಎಂದು ಯೋಚಿಸಲು ಪ್ರಾರಂಭಿಸಿದ್ದಳು ಎಂದು ಹೇಳಿದ್ದಾರೆ.

ನಾನು ತೃತೀಯ ಲಿಂಗಿ, ತಂದೆಗೆ ಹೇಳಬೇಡ... ಮಸ್ಕ್‌ ಬಳಿ ಕೋಟಿ ಕೋಟಿ ಇದ್ರೆ ಏನಂತೆ?

ಹಾಗೆಯೇ ಕ್ಸೇವಿಯರ್ ಏಪ್ರಿಲ್ 18, 2023 ರಂದು ಲಿಂಗ ಬದಲಿಸಿ ಹುಡುಗಿಯಾದ ನಂತರ ತನ್ನ ಹೆಸರನ್ನು ಬದಲಾಯಿಸಲು ಯುಎಸ್‌ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.. ಕ್ಸೇವಿಯರ್ ತಮ್ಮ ಹೆಸರನ್ನು ವಿವಿಯನ್ ಜೆನ್ನಾ ವಿಲ್ಸನ್ ಎಂದು ಬದಲಾಯಿಸಲು ಮತ್ತು ಹೊಸ ಜನನ ಪ್ರಮಾಣಪತ್ರವನ್ನು ನೀಡುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದ್ದು, ಸಲ್ಲಿಸಿದ ಮೇಲ್ಮನವಿಯಲ್ಲಿ, ಕ್ಸೇವಿಯರ್ ತನ್ನ ತಂದೆ ಮಸ್ಕ್ ಅವರೊಂದಿಗಿನ ಎಲ್ಲಾ ಸಂಬಂಧಗಳನ್ನು ಮುರಿಯುವ ಬಯಕೆಯನ್ನೂ ವ್ಯಕ್ತಪಡಿಸಿದ್ದಾರೆ.

Best Mobiles in India

English summary
Everyone knows about famous businessman and Tesla CEO Elon Musk. However, it cannot be wrong that only a few people know about his family. Did you know that Elon Musk has a transgender daughter?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+