Home
ಸುದ್ದಿಜಾಲ

Panipuri: ಇದು ಪಾನಿಪುರಿ ಪ್ರಿಯರಿಗೆ ಅಚ್ಚರಿ, ಈಗಲೇ ನಿಮ್ಮ ಗೂಗಲ್ ಓಪನ್ ಮಾಡಿ ನೋಡಿ!

ಟೆಕ್‌ ದೈತ್ಯ 'ಗೂಗಲ್‌' (Google) ಸರ್ಚ್‌ ಇಂಜಿನ್‌ ವಿಚಾರದಲ್ಲಿ ಜಾಗತಿಕವಾಗಿ ಪರಿಚಯ. ಅದರಂತೆ ಯಾವುದೇ ವಿಶೇಷ ಸಂದರ್ಭದಲ್ಲಿ ತನ್ನ 'ಡೂಡಲ್‌'(Doodle) ಮೂಲಕ ಜನರಲ್ಲಿನ ಸಂಭ್ರಮವನ್ನು ಇನ್ನಷ್ಟು ಹೆಚ್ಚಿಗೆ ಮಾಡುತ್ತದೆ. ಆದರೆ, ಈ ಬಾರಿಯ ಡೂಡಲ್‌ ವಿಶೇಷವಾಗಿದ್ದು, ಅಲ್ಲಿ ಬರೀ ಪಾನಿಪುರಿಗಳೇ ಕಾಣಿಸಿಕೊಳ್ಳುತ್ತಿವೆ.

ಹೌದು, ಪಾನಿಪುರಿಗೆ ದೇಶದಾದ್ಯಂತ ಅಭಿಮಾನಿಗಳಿದ್ದಾರೆ, ಅದರಲ್ಲೂ ಯುವತಿಯರಿಗೆ ಪಾನಿಪುರಿ (PaniPuri) ಅಂದರೆ ಪಂಚಪ್ರಾಣ. ಈ ಪಾನಿಪುರಿಗೆ ಈಗ ಗೂಗಲ್‌ ವಿಭಿನ್ನವಾಗಿ ಗೌರವ ನೀಡಿದೆ. ಅಷ್ಟಕ್ಕೂ ಗೂಗಲ್‌ ಯಾಕೆ ಈ ರೀತಿ ಮಾಡಿದೆ?. ಈ ಪಾನಿ ಪುರಿ ಗೂಗಲ್‌ಗೆ ಅಷ್ಟೊಂದು ಮುಖ್ಯವೇ ಎಂಬ ಇಂಟ್ರೆಸ್ಟಿಂಗ್‌ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಇದು ಪಾನಿಪುರಿ ಪ್ರಿಯರಿಗೆ ಅಚ್ಚರಿ, ಈಗಲೇ ನಿಮ್ಮ ಗೂಗಲ್ ಓಪನ್ ಮಾಡಿ ನೋಡಿ!

ಇಂದಿಗೆ ಸರಿಯಾಗಿ ಎಂಟು ವರ್ಷಗಳ ಹಿಂದೆ ಮಧ್ಯಪ್ರದೇಶದ ಇಂದೋರ್‌ನಲ್ಲಿ 51 ಬಗೆಯ ರುಚಿಗಳೊಂದಿಗೆ ಪಾನಿ ಪುರಿ ವಿಶ್ವದಾಖಲೆ ಸೃಷ್ಟಿಸಿತ್ತು. ಈ ದಾಖಲೆಯನ್ನು ಜುಲೈ 12, 2015 ರಂದು ನಿರ್ಮಾಣ ಮಾಡಲಾಗಿದೆ. ಈ ವಿಶೇಷ ದಾಖಲೆ ನಿರ್ಮಾಣ ಆಗಿ ಎಂಟು ವರ್ಷಗಳ ತರುವಾಯ ಅಂದರೆ ಇಂದು ಗೂಗಲ್‌ ಅದನ್ನು ಸ್ಮರಿಸಿಕೊಂಡಿದ್ದು, ಪಾನಿಪುರಿ ಪ್ರಿಯರಿಗೆ ಸಂತೋಷ ಹೆಚ್ಚಿಗೆ ಮಾಡಿದೆ.

ವಿಶೇಷ ಸಂದರ್ಭ ಅಥವಾ ಸಾಧಕರ ಜನ್ಮದಿನವನ್ನು ಗುರುತಿಸಲು ಗೂಗಲ್ ಪ್ರತಿದಿನ ವಿಶೇಷ ಡೂಡಲ್ ಅನ್ನು ರಚಿಸುತ್ತಿತ್ತು. ಆದರೆ, ಈಗ ಪಾನಿಪುರಿಯನ್ನು ವರ್ಣರಂಜಿತ ಡೂಡಲ್ ಮೂಲಕ ಗೌರವಿಸಿದೆ. ಈ ಡೂಡಲ್‌ ನೋಡಿ ಗೂಗಲ್ ಬಳಕೆದಾರರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಯಾಕೆಂದರೆ ಗೂಗಲ್ ಓಪನ್‌ ಮಾಡಿದ ತಕ್ಷಣ ಪಾನಿ ಪುರಿ ಡೂಡಲ್ ಕಾಣಿಸಿಕೊಳ್ಳಲಿದ್ದು, ಅದರ ಮೇಲೆ ಕ್ಲಿಕ್‌ ಮಾಡಿದರೆ ಆಟವೊಂದು ತೆರೆದುಕೊಳ್ಳುತ್ತದೆ.

ನೀವು ಈ ಆಟವನ್ನು ಆಡುವುದು ತುಂಬಾ ಸುಲಭ ಅದರಲ್ಲೂ ಪಾನಿಪುರಿಯನ್ನು ತಿನ್ನುವಾಗ ಬರುವ ಸೌಂಡ್‌ ಸಹ ಈ ವೇಳೆ ಬರಲಿದ್ದು, ನಿಜವಾಗಿ ಲ್ಯಾಪ್‌ಟಾಪ್‌ ಅಥವಾ ಸಿಸ್ಟಮ್‌ ಮುಂದೆ ಕೂತು ಪಾನಿಪುರಿ ತಿನ್ನುವ ಅನುಭವ ಭಾಷವಾಗದೆ ಇರದು. ಈ ಆಟದಲ್ಲಿ ಮೇಲೆ ಕಾಣಿಸಿಕೊಳ್ಳುವ ಪಾನಿಪುರಿಯನ್ನು ಕೆಳಗಿನ ಪಾನಿಪುರಿಯೊಂದಿಗೆ ಹೊಂದಿಸಬೇಕು. ಇದನ್ನು ಮಾಡಿದ್ರೆ ಅಂಕ ಹೆಚ್ಚುತ್ತಲೇ ಹೋಗುತ್ತದೆ. ಈ ರೀತಿಯಾಗಿ ನೀವು ಎಷ್ಟು ಸಮಯ ಬೇಕಾದರೂ ಪಾನಿಪುರಿ ಆಟವನ್ನು ಆಡಬಹುದು.

ಇನ್ನು ಪಾನಿಪುರಿಯ ಇತಿಹಾಸಕ್ಕೆ ಬರುವುದಾದರೆ ಮಧ್ಯಪ್ರದೇಶದ ಇಂದೋರ್‌ನಲ್ಲಿರುವ ಇಂದೋರ್ ಜಯಕಾ ರೆಸ್ಟೊರೆಂಟ್‌ನಲ್ಲಿ 51 ಫ್ಲೇವರ್‌ಗಳೊಂದಿಗೆ ಪಾನಿ ಪುರಿಯನ್ನು ತಯಾರಿಸಲಾಗಿತ್ತು. ಜೊತೆಗೆ ಮಾಸ್ಟರ್‌ಶೆಫ್ ನೇಹಾ ಶಾ ನೇತೃತ್ವದಲ್ಲಿ ಈ ದಾಖಲೆಯನ್ನು ಮಾಡಲಾಗಿತ್ತು ಎಂದು ಗೂಗಲ್ ತಿಳಿಸಿದೆ. ಅದರಂತೆ ಈ ಪಾನಿ ಪುರಿ ಭಾರತದಾದ್ಯಂತ ವಿವಿಧ ರುಚಿಗಳಲ್ಲಿ ಲಭ್ಯವಿದೆ.

ಅದರಲ್ಲೂ ಭಾರತದಾದ್ಯಂತ ಹಲವು ಪ್ರಾದೇಶಿಕ ವ್ಯತ್ಯಾಸಗಳು ಇರುವುದರಿಂದಾಗಿ ಪಾನಿ ಪುರಿ ಸಹ ವಿವಿಧ ಹೆಸರುಗಳು ಮತ್ತು ಸುವಾಸನೆಗಳಲ್ಲಿ ಲಭ್ಯವಿದೆ. ಅದರಲ್ಲಿ ಮಹಾರಾಷ್ಟ್ರ, ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಬೇಯಿಸಿದ ಬಟಾಣಿಗಳಿಂದ ಪಾನಿಪುರಿಯನ್ನು ತಯಾರಿಸಲಾಗುತ್ತದೆ. ಭಾರತದ ಉತ್ತರ ರಾಜ್ಯಗಳಲ್ಲಿ ಆಲೂಗಡ್ಡೆ, ಬಟಾಣಿ ಮತ್ತು ಜಲ್ಜೀರಾದಿಂದ ಮಾಡಿದ ಪಾನಿ ಪುರಿಯನ್ನು ಗೋಲ್ ಗಪ್ಪೆ ಅಥವಾ ಗೋಲ್ ಗಪ್ಪಾ ಎಂದು ಕರೆಯಲಾಗುತ್ತದೆ.

ಇದು ಪಾನಿಪುರಿ ಪ್ರಿಯರಿಗೆ ಅಚ್ಚರಿ, ಈಗಲೇ ನಿಮ್ಮ ಗೂಗಲ್ ಓಪನ್ ಮಾಡಿ ನೋಡಿ!

ಇನ್ನು ಹರಿಯಾಣದಲ್ಲಿ ಪಾನಿಪುರಿಯನ್ನು ಪಾನಿ ಪಟಾಶಿ ಎಂದು ಕರೆಯಲಾಗುತ್ತದೆ. ಒಡಿಶಾದಲ್ಲಿ ಗುಪ್ ಚುಪ್ ಎಂದು ಕರೆಯುತ್ತಾರೆ. ಪಶ್ಚಿಮ ಬಂಗಾಳ, ಬಿಹಾರ, ಜಾರ್ಖಂಡ್ ಪ್ರದೇಶಗಳನ್ನು ಪುಚ್ಕಾಸ ಎಂದು ಕರೆಯಲಾಗುತ್ತದೆ. ದೇಶಾದ್ಯಂತ ವಿಭಿನ್ನ ಹೆಸರುಗಳು ಮತ್ತು ವಿಭಿನ್ನ ರುಚಿಗಳೊಂದಿಗೆ ಲಭ್ಯವಿರುವ ಪಾನಿಪುರಿಯನ್ನು ಬಹುತೇಕ ಎಲ್ಲರೂ ಒಂದಲ್ಲಾ ಒಂದು ಬಾರಿ ತಿಂದೇ ಇರುತ್ತಾರೆ. ಈ ಪಾನಿಪುರಿಗೆ 2005 ರಲ್ಲಿ ಆಕ್ಸ್‌ಫರ್ಡ್ ಇಂಗ್ಲಿಷ್ ನಿಘಂಟು ಸಹ ಗೌರವ ನೀಡಿದೆ. ಅಂದರೆ, ಈ ಪಾನಿಪುರಿ ಹೆಸರನ್ನು ಅಧಿಕೃತವಾಗಿ ತನ್ನ ನಿಘಂಟಿನಲ್ಲಿ ಸೇರಿಸಿದೆ.

Best Mobiles in India

English summary
Panipuri has fans across the country and now Google has honored Panipuri in a different way. That means Panipuri has been honored by Google Doodle.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+