Subscribe to Gizbot

ಜಿಯೋ ಎಫೆಕ್ಟ್..ಭಾರತದಲ್ಲಿ ಯಾವಾಗಲೂ ಆನ್‌ಲೈನ್‌ನಲ್ಲಿ ಇರೋರು ಎಷ್ಟು ಜನ?!!

Written By:

ಭಾರತದಲ್ಲಿ ಕಳೆದ 8 ತಿಂಗಳಿನಿಂದ ಮೊಬೈಲ್ ಡೇಟಾ ಬಳಕೆ ಅತ್ಯಧಿಕವಾಗಿ ಬೆಳವಣಿಗೆಯಾಗಿದೆ. ಆದರೆ, ಶೇ.56 ರಷ್ಟು ಜನರು ದಿನಕ್ಕೆ ಒಮ್ಮೆಯಾದರೂ ಇಂಟರ್‌ನೆಟ್ ಕನೆಕ್ಷನ್ ಸಮಸ್ಯೆ ಎದುರಿಸುತ್ತಾರೆ ಎಂದು ಟ್ರೂ ಬ್ಯಾಲೆನ್ಸ್ ವರದಿಯೊಂದನ್ನು ಬಿಡುಗಡೆಮಾಡಿದೆ.!

ಹಾಗಾದರೆ, ಭಾರತದಲ್ಲಿ ಇಂಟರ್‌ನೆಟ್ ಬಳಕೆ ಬಗ್ಗೆ ಟ್ರೂ ಬ್ಯಾಲೆನ್ಸ್ ವರದಿಯಲ್ಲಿ ಏನಿದೆ.? ಭಾರತೀಯರು ಹೇಗೆ ಇಂಟರ್‌ನೆಟ್ ಬಳಕೆ ಮಾಡುತ್ತಾರೆ? ಯಾವಾಗಲೂ ಆನ್‌ಲೈನ್‌ನಲ್ಲಿರುವವರು ಎಷ್ಟು? ಎಂಬೆಲ್ಲಾ ಪ್ರಶ್ನೆಗಳಿಗೆ ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಯಾವಾಗಲೂ ಆನ್‌ಲೈನ್‌ನಲ್ಲಿ ಇರೋರು ಎಷ್ಟು ಜನ?

ಯಾವಾಗಲೂ ಆನ್‌ಲೈನ್‌ನಲ್ಲಿ ಇರೋರು ಎಷ್ಟು ಜನ?

ಜಿಯೋ ಟೆಲಿಕಾಂಗೆ ಕಾಲಿಟ್ಟ ನಂತರ ಯಾವಾಗಲೂ ಆನ್‌ಲೈನ್‌ನಲ್ಲಿ ಇರುವವರ ಪ್ರಮಾಣ 44 ಪರ್ಸೆಂಟ್‌ನಷ್ಟು ಹೆಚ್ಚಿದೆ.!! ಅಂದರೆ, ಒಟ್ಟು ಇಂಟರ್‌ನೆಟ್ ಬಳಕೆದಾರರಲ್ಲಿ ಶೇ. 7 ಪರ್ಸೆಂಟ್ ಜನರು ಯಾವಾಗಲೂ ಆನ್‌ಲೈನ್‌ನಲ್ಲಿಯೇ ಇರುತ್ತಾರೆ.!!

ಶೇ.170ರಷ್ಟು ಹೆಚ್ಚಾದ ಇಂಟರ್‌ನೆಟ್ ಬಳಕೆ!!

ಶೇ.170ರಷ್ಟು ಹೆಚ್ಚಾದ ಇಂಟರ್‌ನೆಟ್ ಬಳಕೆ!!

ಜಿಯೋ ಬಂದನಂತರ ಕೇವಲ ಒಂದು ವರ್ಷದ ಅವಧಿಯಲ್ಲಿ ಭಾರತದಲ್ಲಿ ಇಂಟರ್‌ನೆಟ್ ಬಳಕೆ ಪ್ರಮಾಣ ಶೇ.170ರಷ್ಟು ಹೆಚ್ಚಾಗಿದೆ.!! ಕಡಿಮೆ ಬೆಲೆಗೆ ಹೆಚ್ಚು ಡೇಟಾ ಸಿಗುತ್ತಿದ್ದು, ಇದರಿಂದ ಜನರು ಹೆಚ್ಚು ಡೇಟಾ ಬಳಕೆ ಮಾಡುತ್ತಿದ್ದಾರೆ.!!

24 ಗಂಟೆಗೂ ಹೆಚ್ಚು ಆಫ್‌ಲೈನ್‌ನಲ್ಲಿರುವವರು!!

24 ಗಂಟೆಗೂ ಹೆಚ್ಚು ಆಫ್‌ಲೈನ್‌ನಲ್ಲಿರುವವರು!!

ಆನ್‌ಲೈನ್‌ನಲ್ಲಿ ಕಾಲಕಳೆಯುವವರ ಬಗ್ಗೆ ತಿಳಿದರೆ ಸಾಕಾಗುವುದಿಲ್ಲ.! ಒಂದು ದಿವಸದಲ್ಲಿ ಒಮ್ಮೆಯೂ ಇಂಟರ್‌ನೆಟ್ ಬಳಕೆ ಮಾಡದವರ ಪ್ರಮಾಣ ಎಷ್ಟು ಎಂಬುದು ನಿಮಗೆ ಗೊತ್ತಾ? ಇಂಟರ್‌ನೆಟ್ ಬಳಕೆದಾರರ ಶೇ.11 ರಷ್ಟು ಜನರು 24 ಗಂಟೆಗಳಿಗಿಂತಲೂ ಹೆಚ್ಚು ಕಾಲ ಆಫ್‌ಲೈನ್ ನಲ್ಲಿಯೇ ಇರುತ್ತಾರೆ.

Jio Free Phones !! ಜಿಯೋ ಫೋನ್ ಫುಲ್ ಪ್ರೀ: ಇಲ್ಲಿದೆ ಕಂಪ್ಲೀಟ್ ಮಾಹಿತಿ !!
ಡೇಟಾ ಕನೆಕ್ಟಿವಿಟಿ ಗುಣಮಟ್ಟ ಕಳಪೆ!!

ಡೇಟಾ ಕನೆಕ್ಟಿವಿಟಿ ಗುಣಮಟ್ಟ ಕಳಪೆ!!

ಟ್ರೂ ಬ್ಯಾಲೆನ್ಸ್ ವರದಿಯ ಪ್ರಕಾರ, ಭಾರತದಲ್ಲಿ ಡೇಟಾ ಕನೆಕ್ಟಿವಿಟಿ ಗುಣಮಟ್ಟ ಇನ್ನೂ ಕಳಪೆಯಾಗಿಯೇ ಉಳಿದಿದೆ ಎಂದು ಟ್ರೂ ಬ್ಯಾಲೆನ್ಸ್ ಡೇಟಾ ಅನಾಲಿಸಿಸ್ ವಿಭಾಗದ ನಿರ್ದೇಶಕ ಅಲೆಕ್ಸ್ ಸುಹ್ ಹೇಳಿದ್ದಾರೆ. ಹಾಗಾಗಿಯೇ, ಭಾರತೀಯರು ಇಂಟರ್‌ನೆಟ್ ಕನೆಕ್ಟಿವಿಟಿ ಸಮಸ್ಯೆ ಎದುರಿಸಲು ಕಾರಣವಾಗುತ್ತಿದೆ ಎಂದು ಹೇಳಿದೆ.!!

ಓದಿರಿ:ಜಿಯೋ ದೇವರು ಅಂಬಾನಿ ಈಗ ಏಷ್ಯಾದ ಎರಡನೇ ಶ್ರೀಮಂತ!!..ಒಟ್ಟು ಆಸ್ತಿ ಎಷ್ಟು ಗೊತ್ತಾ?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
In a recent report, over 56 percent of Indian mobile internet users from smartphones have found offline at least once a day.to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot