Home
ಸುದ್ದಿಜಾಲ

ಸ್ಪ್ಯಾಮ್ ವಿರುದ್ಧ ಹೋರಾಡಲು ಮುಂದಾದ ವಾಟ್ಸಾಪ್‌: ಟ್ರೂಕಾಲರ್‌ನೊಂದಿಗೆ ಪಾಲುದಾರಿಕೆ!

ವಾಟ್ಸಾಪ್‌ ಹಾಗೂ ಟ್ರೂಕಾಲರ್‌ ಆಪ್‌ಗಳು ಬಳಕೆದಾರರಿಗೆ ತಮ್ಮದೇ ಆದ ವಿಭಿನ್ನ ಸೇವೆಗಳನ್ನು ನೀಡುತ್ತಿವೆ. ಈ ನಡುವೆ ಇವೆರಡೂ ಒಂದಾಗಿ ಬಳಕೆದಾರರಿಗೆ ಹೊಸ ಸೇವೆ ನೀಡಲು ಸಜ್ಜಾಗಿವೆ. ಈ ಮೂಲಕ ವಾಟ್ಸಾಪ್‌ ಬಳಕೆದಾರರು ಈಗ ಪಡೆಯುತ್ತಿರುವ ಹಲವಾರು ಸೌಲಭ್ಯಗಳ ಜೊತೆಗೆ ಈ ಸೌಲಭ್ಯವನ್ನೂ ಸಹ ಪಡೆದುಕೊಳ್ಳಬಹುದಾಗಿದೆ.

ಹೌದು, ಟ್ರೂಕಾಲರ್‌(Truecaller) ಮತ್ತು ವಾಟ್ಸಾಪ್‌(WhatsApp) ಜಾಗತಿಕ ಪಾಲುದಾರಿಕೆಯನ್ನು ಘೋಷಿಸಿದ್ದು, ಈ ಮೂಲಕ ಬಳಕೆದಾರರು ಮೋಸ ಹಾಗೂ ವಂಚನೆಯಿಂದ ಪಾರಾಗಲು ಅನುವು ಮಾಡಿಕೊಡಲಾಗುತ್ತಿದೆ. ಅಂದರೆ ಟ್ರೂಕಾಲರ್‌ನ ಕಾಲರ್ ಐಡೆಂಟಿಫಿಕೇಶನ್ ಫೀಚರ್ಸ್‌ ಇನ್ಮುಂದೆ ವಾಟ್ಸಾಪ್‌ ಹಾಗೂ ಇತರ ಮೆಸೇಜಿಂಗ್ ಆಪ್‌ಗಳಲ್ಲೂ ಲಭ್ಯವಾಗಲಿದೆ. ಹಾಗಿದ್ರೆ, ವಾಟ್ಸಾಪ್‌ನಲ್ಲಿ ಟ್ರೂಕಾಲರ್‌ ಹೇಗೆ ಕೆಲಸ ಮಾಡಲಿದೆ ಎಂದು ತಿಳಿಯೋಣ ಬನ್ನಿ.

ಸ್ಪ್ಯಾಮ್ ವಿರುದ್ಧ ಹೋರಾಡಲು ಮುಂದಾದ ವಾಟ್ಸಾಪ್‌:ಟ್ರೂಕಾಲರ್‌ನೊಂದಿಗೆ ಪಾಲುದಾರಿಕೆ

ಒಂದಾಗಿ ಸೇವೆ ನೀಡಲು ಮುಂದಾದ ಟ್ರೂಕಾಲರ್, ವಾಟ್ಸಾಪ್‌: ಸ್ವೀಡನ್ ಮೂಲದ ಕಂಪೆನಿಯಾಗಿರುವ ಟ್ರೂಕಾಲರ್ ತನ್ನ ಕಾಲರ್ ಗುರುತಿನ ಸೇವೆಯನ್ನು ವಾಟ್ಸಾಪ್‌ ಮತ್ತು ಇತರ ಸಂದೇಶ ಕಳುಹಿಸುವ ಆಪ್‌ಗಳಿಗೆ ಪರಿಚಯಿಸಲು ಮುಂದಾಗಿದೆ. ಈಗ ಹೇಗೆ ಸಾಮಾನ್ಯ ಕರೆಗಳಲ್ಲಿ ನಕಲಿ ಕರೆ ಹಾಗೂ ಸ್ಪ್ಯಾಮ್ ಕರೆಗಳನ್ನು ಗುರುತಿಸಲು ಬಳಕೆ ಸಹಾಯ ಮಾಡುತ್ತಿದೆಯೋ ಅದೇ ರೀತಿ ವಾಟ್ಸಾಪ್‌ನಲ್ಲಿ ಈ ಕಾರ್ಯ ಜರುಗಲಿದೆ.

ವಾಟ್ಸಾಪ್‌ನಲ್ಲಿ ಈ ಸೇವೆ ಸ್ವಲ್ಪ ಭಿನ್ನ: ಈ ಹೊಸ ಫೀಚರ್ಸ್‌ ವಾಟ್ಸಾಪ್‌ ಬಳಕೆದಾರರಿಗೆ ಸಂಭಾವ್ಯ ಸ್ಪ್ಯಾಮ್ ಕರೆಗಳನ್ನು ಗುರುತಿಸಲು ಸಹಾಯ ಮಾಡುತ್ತದೆ. ಅಂದರೆ ವಾಟ್ಸಾಪ್‌ ಬಳಕೆದಾರರಿಗೆ ಬರುವ ವಿಡಿಯೋ ಮತ್ತು ಆಡಿಯೊ ಕರೆಗಳಿಗೆ ಈ ಸೇವೆ ಲಭ್ಯವಿರುತ್ತದೆ. ಈ ಮೂಲಕ ಇಂಟರ್ನೆಟ್‌ ಕಾಲ್‌ನಲ್ಲಿಯೂ ಸ್ಪ್ಯಾಮ್ ಕರೆಗಳನ್ನು ಗುರುತಿಸಲು ಟ್ರೂಕಾಲರ್‌ ಸಜ್ಜಾಗಿರುವುದು ಬಹುಪಾಲು ಮಂದಿಗೆ ಸಂತಸದ ವಿಷಯವಾಗಿದೆ.

ಸ್ಪ್ಯಾಮ್ ವಿರುದ್ಧ ಹೋರಾಡಲು ಮುಂದಾದ ವಾಟ್ಸಾಪ್‌:ಟ್ರೂಕಾಲರ್‌ನೊಂದಿಗೆ ಪಾಲುದಾರಿಕೆ

ಯಾವ ಉದ್ದೇಶಕ್ಕಾಗಿ ಈ ನಿರ್ಧಾರ?: ಇತ್ತೀಚೆಗೆ ಸಾಮಾನ್ಯ ಕರೆಗಳಿಂದ ಮಾತ್ರವಲ್ಲದೇ ವಾಟ್ಸಾಪ್‌ ಹಾಗೂ ಸಿಗ್ನಲ್‌ ಮೂಲಕವೇ ಬಹಳಷ್ಟು ಮಂದಿ ಮೋಸ ಹೋಗುತ್ತಿದ್ದಾರೆ. ಈ ಪ್ಲಾಟ್‌ಫಾರ್ಮ್‌ನಲ್ಲಿ ಬರುವ ಕರೆಗಳನ್ನು ರೆಕಾರ್ಡ್‌ ಮಾಡಲು ಅಥವಾ ನಂತರದಲ್ಲಿ ಎಲ್ಲಿಂದ ಕರೆ ಮಾಡಿದ್ದರು ಎಂದು ತಿಳಿದುಕೊಳ್ಳಲು ಸಾಧ್ಯವಾಗದ ಪರಿಣಾಮ ಈ ಪ್ಲಾಟ್‌ಫಾರ್ಮ್‌ಗಳನ್ನು ಹೆಚ್ಚಾಗಿ ಬಳಕೆ ಮಾಡಲಾಗುತ್ತಿದೆ. ಈ ಕಾರಣಕ್ಕಾಗಿಯೇ ಟ್ರೂಕಾಲರ್‌ ಈ ನಿರ್ಧಾರ ಮಾಡಿದೆ.

ಅದರಲ್ಲೂ ಟೆಲಿಮಾರ್ಕೆಟರ್‌ಗಳು ಮತ್ತು ಹ್ಯಾಕರ್‌ಗಳು ಸಾಮಾನ್ಯವಾಗಿ ವಾಟ್ಸಾಪ್‌ನಲ್ಲಿ ಬಳಕೆದಾರರನ್ನು ವಂಚಿಸಲು ಮುಂದಾಗಿದ್ದು, ಭಾರತ ಸೇರಿದಂತೆ ಜಾಗತಿಕವಾಗಿ ಈ ರೀತಿಯ ಕರೆಗಳು ಹೆಚ್ಚಾಗುತ್ತಿವೆ. ಕಳೆದ ಒಂದು ತಿಂಗಳಲ್ಲಿ ಅಂತಾರಾಷ್ಟ್ರೀಯ ಸಂಖ್ಯೆಗಳ ಮೂಲಕ ಸ್ವೀಕರಿಸಿದ ಸ್ಪ್ಯಾಮ್ ಕರೆಗಳಲ್ಲಿ ಹಠಾತ್ ಏರಿಕೆ ಕಂಡುಬಂದಿದ್ದು, ಟ್ರೂಕಾಲರ್‌ನ 2021 ರ ವರದಿಯ ಪ್ರಕಾರ ಭಾರತದಲ್ಲಿ ಬಳಕೆದಾರರು ತಿಂಗಳಿಗೆ ಸರಾಸರಿ 17 ಸ್ಪ್ಯಾಮ್ ಕರೆಗಳನ್ನು ಸ್ವೀಕಾರ ಮಾಡುತ್ತಾರೆ ಎಂದು ತಿಳಿದುಬಂದಿದೆ.

ಅದರಂತೆ ಕಳೆದ ಎರಡು ವಾರಗಳಲ್ಲಿ ವಾಟ್ಸಾಪ್ ಮೂಲಕ ಸ್ಪ್ಯಾಮ್ ಕರೆಗಳ ಕುರಿತು ಭಾರತದಿಂದ ಬಳಕೆದಾರರ ವರದಿಗಳಲ್ಲಿ ಸ್ಪೈಕ್ ಅನ್ನು ನಾವು ನೋಡಿದ್ದೇವೆ ಎಂದಿರುವ ಮಾಮೆಡಿ ಅವರು, ಟೆಲಿಮಾರ್ಕೆಟರ್‌ಗಳು ಇಂಟರ್ನೆಟ್ ಕರೆಗೆ ಬದಲಾಯಿಸುವುದು ಮಾರುಕಟ್ಟೆಗೆ ಸಾಕಷ್ಟು ಹೊಸದು ಎಂದೂ ಸಹ ತಿಳಿಸಿದ್ದಾರೆ. ಆದರೆ, ಇನ್ಮುಂದೆ ಇವರ ಆಟ ನಡೆಯುವುದಿಲ್ಲ ಎನ್ನುವ ಸ್ಪಷ್ಟ ಮುನ್ಸೂಚನೆಯನ್ನೂ ಸಹ ನೀಡಲಾಗಿದೆ.

ವಾಟ್ಸಾಪ್‌ನಲ್ಲಿ ಎಂದಿನಿಂದ ಲಭ್ಯ?: ಪ್ರಸ್ತುತ ಬೀಟಾ ಹಂತದಲ್ಲಿರುವ ಈ ಫೀಚರ್ಸ್‌ ಅನ್ನು ಈ ತಿಂಗಳ (ಮೇ) ನಂತರ ಜಾಗತಿಕವಾಗಿ ಬಳಕೆದಾರರಿಗೆ ಬಿಡುಗಡೆ ಮಾಡಲಾಗುವುದು ಎಂದು ಟ್ರೂಕಾಲರ್ ಮುಖ್ಯ ಕಾರ್ಯನಿರ್ವಾಹಕ ಅಲನ್ ಮಮೆಡಿ ಮಾಹಿತಿ ನೀಡಿದ್ದಾರೆ. ಈ ಸೇವೆ ಬಳಕೆದಾರರಿಗೆ ಲಭ್ಯವಾದ ನಂತರ ಮೋಸದ ಕರೆಗಳಿಂದ ಮೋಸ ಹೋಗುವ ಅಪಾಯ ತಪ್ಪಿದಂತೆ ಆಗಲಿದೆ.

ಸ್ಪ್ಯಾಮ್ ವಿರುದ್ಧ ಹೋರಾಡಲು ಮುಂದಾದ ವಾಟ್ಸಾಪ್‌:ಟ್ರೂಕಾಲರ್‌ನೊಂದಿಗೆ ಪಾಲುದಾರಿಕೆ

ಇದು ಹೇಗೆ ಕೆಲಸ ಮಾಡುತ್ತದೆ?: ಭಾರತದಲ್ಲಿ ಹೆಚ್ಚು ಬಳಕೆ ಮಾಡುವ ಮೆಸೇಜಿಂಗ್ ಪ್ಲಾಟ್‌ಫಾರ್ಮ್ ಆಗಿರುವ ವಾಟ್ಸಾಪ್‌ನಲ್ಲಿ ಈ ಸೌಲಭ್ಯ ಸಿಗುತ್ತಿರುವುದು ಬಹಳ ಪ್ರಯೋಜನಕಾರಿಯಾಗಿದೆ. ಅಸಹಜ ನಡವಳಿಕೆಯಲ್ಲಿ ತೊಡಗಿರುವ ಖಾತೆಗಳನ್ನು ಗುರುತಿಸಲು ಮತ್ತು ಕ್ರಮ ತೆಗೆದುಕೊಳ್ಳಲು ಸ್ಪ್ಯಾಮ್ ಪತ್ತೆ ತಂತ್ರಜ್ಞಾನವನ್ನು ಬಳಕೆ ಮಾಡಲಾಗುತ್ತದೆ ಮತ್ತು ಬಳಕೆದಾರರಿಗೆ ಸಮಸ್ಯಾತ್ಮಕ ಖಾತೆಗಳನ್ನು ನಿರ್ಬಂಧಿಸಲು ಮತ್ತು ವರದಿ ಮಾಡಲು ಅನುಮತಿಸುತ್ತದೆ ಎಂದು ಕಂಪನಿ ಹೇಳಿದೆ.

ಇನ್ನು ಟ್ರೂಕಾಲರ್‌ಗೆ ಆಪ್‌ ಅನ್ನು ಸಹ ಭಾರತದಲ್ಲಿ ಬಹು ಜನರು ಬಳಕೆ ಮಾಡುತ್ತಿದ್ದಾರೆ. ಈ ಮೂಲಕ ಕಂಪೆನಿಯು 250 ಮಿಲಿಯನ್ ಬಳಕೆದಾರರನ್ನು ಹೊದಿದ್ದು, ಜಾಗತಿಕವಾಗಿ 350 ಮಿಲಿಯನ್ ಬಳಕೆದಾರರನ್ನು ಪಡೆದುಕೊಂಡಿದೆ. ಇದು ಜಾಹೀರಾತು, ಚಂದಾದಾರಿಕೆ ಸೇವೆಗಳು ಮತ್ತು ಇತರೆ ವ್ಯಾಪಾರಗಳಿಂದ ಆದಾಯ ಗಳಿಕೆ ಮಾಡುತ್ತಾ ಬರುತ್ತಿದೆ. ಇದೀಗ ಇವೆರಡೂ ಒಂದಾಗಿ ತಮ್ಮ ಸೇವೆ ನೀಡುತ್ತಿರುವುದು ಬಹಳ ಪ್ರಯೋಜನಕಾರಿಯಾಗಿದೆ.

ಈ ವರ್ಷದ ಆರಂಭದಲ್ಲಿ ಭಾರತದ ಟೆಲಿಕಾಂ ನಿಯಂತ್ರಕವು ರಿಲಯನ್ಸ್ ಜಿಯೋ, ಏರ್‌ಟೆಲ್, ವೊಡಾಫೋನ್‌ಗೆ ಸಲಹೆ ನೀಡಲಾಗಿದ್ದು, ಕೃತಕ ಬುದ್ಧಿಮತ್ತೆ ಫಿಲ್ಟರ್‌ಗಳನ್ನು ಬಳಸಿಕೊಂಡು ತಮ್ಮ ನೆಟ್‌ವರ್ಕ್‌ಗಳಲ್ಲಿ ಟೆಲಿಮಾರ್ಕೆಟಿಂಗ್ ಕರೆಗಳನ್ನು ನಿರ್ಬಂಧಿಸಲು ಸೂಚನೆ ನೀಡಲಾಗಿದೆ. ಜೊತೆಗೆ ಸರ್ಕಾರವೇ ಟ್ರೂಕಾಲರ್‌ ಶೈಲಿಯಲ್ಲಿ ಹೊಸ ಫೀಚರ್ಸ್‌ ಅನ್ನು ಬಳಕೆದಾರರಿಗೆ ನೀಡಲು ಎಲ್ಲಾ ಸಿದ್ಧತೆ ಮಾಡಿಕೊಂಡಿದೆ.

Best Mobiles in India

English summary
Truecaller and WhatsApp have announced a global partnership to bring Truecaller's caller identification features to WhatsApp and other messaging apps.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+