Home
ಸುದ್ದಿಜಾಲ

ಟ್ರೂಕಾಲರ್‌ನಲ್ಲಿ ಹೊಸ ಸೌಲಭ್ಯ! ಸ್ಕ್ಯಾಮರ್‌ಗಳ SMS ನಿಂದ ಮೋಸ ಹೋಗೋ ಚಾನ್ಸೇ ಇಲ್ಲ!

ಟ್ರೂಕಾಲರ್‌ ಆಪ್‌ ಬಳಕೆದಾರಿಗೆ ತುಂಬಾ ಅನಿವಾರ್ಯ ಆಗಿರುವ ಸೌಲಭ್ಯವನ್ನು ನೀಡುತ್ತಾ ಬರುತ್ತಿದೆ. ಈ ನಡುವೆ ಭಾರತ ಸರ್ಕಾರ ಸಹ ಟ್ರೂಕಾಲರ್‌ ಶೈಲಿಯಲ್ಲಿಯೇ ಹೆಸರನ್ನು ಡಿಸ್‌ಪ್ಲೇ ಮಾಡುವ ಕ್ರಮಕ್ಕೆ ಎಲ್ಲಾ ತಯಾರಿ ನಡೆಸುತ್ತಿದೆ. ಇದರೊಂದಿಗೆ ಟ್ರೂಕಾಲರ್‌ ಬಳಕೆದಾರರಿಗೆ ಮಹತ್ವದ ಸೌಲಭ್ಯವನ್ನು ನೀಡಲು ಮುಂದಾಗಿದೆ. ಈ ಸೌಲಭ್ಯದ ಮೂಲಕ ನೀವು ಇನ್ಮುಂದೆ ಮೋಸದ ಎಸ್ಎಮ್‌ಎಸ್‌ಗಳಿಂದ ಮುಕ್ತಿ ಪಡೆದುಕೊಳ್ಳಬಹುದು.

ಹೌದು, ಈಗಾಗಲೇ ಮೋಸದ ಕರೆಗಳು ಹಾಗೂ ಇನ್ನಿತರೆ ಅನವಶ್ಯಕ ಕರೆಗಳ ಬಗ್ಗೆ ಮಾಹಿತಿ ನೀಡುತ್ತಿರುವ ಟ್ರೂಕಾಲರ್‌ ಇದೀಗ ಒಂದು ಹೆಜ್ಜೆ ಮುಂದೆ ಹೋಗಿದ್ದು, ಸಂಭವನೀಯ ಎಸ್‌ಎಮ್‌ಎಸ್‌ ವಂಚನೆಯಿಂದ ಬಳಕೆದಾರರನ್ನು ರಕ್ಷಿಸಲು ಹೊಸ ಎಐ ಉಪಕರಣವನ್ನು ಪರಿಚಯಿಸುತ್ತಿದೆ. ಇದರಿಂದ ಎಸ್ಎಮ್‌ಎಸ್‌ ಮೂಲಕ ಬಂದ ಲಿಂಕ್‌ ಗಳನ್ನು ಕ್ಲಿಕ್‌ ಮಾಡಿ ಹಣ ಅಥವಾ ಖಾಸಗಿ ಡೇಟಾ ಕಳೆದುಕೊಳ್ಳುವುದು ತಪ್ಪುತ್ತದೆ. ಹಾಗಿದ್ರೆ, ಈ ಎಐ ಟೂಲ್ಸ್‌ ಹೇಗೆಲ್ಲಾ ಕೆಲಸ ಮಾಡಲಿದೆ ಅನ್ನೋದನ್ನು ತಿಳಿದುಕೊಳ್ಳೋಣ ಬನ್ನಿ.

ಟ್ರೂಕಾಲರ್‌ನಲ್ಲಿ ಹೊಸ ಸೌಲಭ್ಯ! ಸ್ಕ್ಯಾಮರ್‌ಗಳ SMS ನಿಂದ ಮೋಸ ಹೋಗೋ ಚಾನ್ಸೇ ಇಲ್ಲ

ಎಸ್‌ಎಮ್‌ಎಸ್ ಮೂಲಕ ಹೆಚ್ಚಿನ ವಂಚನೆ: ಇತ್ತೀಚಿನ ದಿನಗಳಲ್ಲಿ ದೇಶಾದ್ಯಂತ ಎಸ್‌ಎಮ್‌ಎಸ್‌ ವಂಚನೆ ಪ್ರಕರಣಗಳ ಸಂಖ್ಯೆ ಏರಿಕೆ ಆಗುತ್ತಿದೆ. ಸ್ಕ್ಯಾಮರ್‌ಗಳು ವ್ಯಕ್ತಿಗಳಿಗೆ ಎಸ್‌ಎಮ್‌ಎಸ್ ಕಳುಹಿಸು ಮೂಲಕ ಕಣ ಹಾಗೂ ಇನ್ನಿತರೆ ಮಾಹಿತಿಯನ್ನು ಕದಿಯುತ್ತಿದ್ದಾರೆ. ಅದರಲ್ಲೂ ಬ್ಯಾಂಕ್ ಖಾತೆ, ಪ್ಯಾನ್, ಆಧಾರ್ ಅಥವಾ ಇತರ ಸಂಬಂಧಿತ ದಾಖಲೆಗಳನ್ನು ನವೀಕರಿಸಲು ಈ ಮೂಲಕ ವಿನಂತಿ ಮಾಡುತ್ತಿದ್ದಾರೆ.

ಈ ರೀತಿಯ ಘಟನೆಗಳ ಸಂಬಂಧ ಪೋಲಿಸ್ ಮತ್ತು ಸೈಬರ್ ಸೆಲ್‌ಗಳು ನಿರಂತರವಾಗಿ ಜನರಿಗೆ ಮನವರಿಕೆ ಮಾಡಿಕೊಂಡು ಬರುತ್ತಿವೆಯಾದರೂ ಸಹ ಈ ಮೋಸದ ಪ್ರಕರಣಗಳಿಗೆ ಬ್ರೇಕ್‌ ಹಾಕಲು ಸಾಧ್ಯವಾಗುತ್ತಿಲ್ಲ. ಆದರೆ, ಈ ಟ್ರೂಕಾಲರ್‌ನ ಹೊಸ ಫೀಚರ್ಸ್‌ ಮೂಲಕ ಇದನ್ನು ತಡೆಗಟ್ಟಬಹುದಾಗಿದೆ. ಯಾಕೆಂದರೆ ಇದು ಎಐ ಚಾಲಿತ ಸಾಧನಗಳನ್ನು ಬಳಸಿಕೊಂಡು ಸಂಭವನೀಯ ಮೋಸದ ಸಂಖ್ಯೆಗಳ ಬಗ್ಗೆ ಎಚ್ಚರಿಕೆ ನೀಡುವುದರಿಂದ ಈ ಬಗ್ಗೆ ಜನರು ಮೊದಲೇ ಎಚ್ಚೆತ್ತುಕೊಳ್ಳುತ್ತಾರೆ.

ಇದರಲ್ಲಿ ಗಮನಿಸಬೇಕಾದ ವಿಷಯ ಏನೆಂದರೆ ಟ್ರೂಕಾಲರ್ ಅನ್ನು ಬಳಸುವ 100 ಮಿಲಿಯನ್ ಜನರು ಕಳೆದ ಮೂರು ತಿಂಗಳುಗಳಲ್ಲಿ ಕನಿಷ್ಠ ಒಂದು ಮೋಸದ ಎಸ್‌ಎಮ್‌ಎಸ್ ಅನ್ನಾದರೂ ಸ್ವೀಕರಿಸಿದ್ದಾರೆ ಎಂದು ತಿಳಿದುಬಂದಿದೆ. ಈ ವಂಚನೆಗಳು ವಿದ್ಯುತ್ ಬಿಲ್ ಪಾವತಿಗಳು, ಬ್ಯಾಂಕ್‌ಗಳು, ಉದ್ಯೋಗ ಕೊಡುಗೆಗಳು, KYC ಯಿಂದ ಹಿಡಿದು ಸಂಬಂಧಿತ, ಸಾಲಗಳು, ಚಾರಿಟಿ, ಲಾಟರಿ ಮತ್ತು ಇತರ ಹಲವು ಪ್ರಕಾರಗಳು ಸೇರಿವೆ ಎಂದು ಟ್ರೂಕಾಲರ್‌ ಶಾಕಿಂಗ್ ಮಾಹಿತಿ ನೀಡಿದೆ.

ಟ್ರೂಕಾಲರ್‌ನಲ್ಲಿ ಹೊಸ ಸೌಲಭ್ಯ! ಸ್ಕ್ಯಾಮರ್‌ಗಳ SMS ನಿಂದ ಮೋಸ ಹೋಗೋ ಚಾನ್ಸೇ ಇಲ್ಲ

ಈ ಹೊಸ ಎಐ ಹೇಗೆ ಸಹಾಯಕ?: ಟ್ರೂಕಾಲರ್‌ನಲ್ಲಿನ ಈ ಹೊಸ ಎಐ ಚಾಲಿತ ಟೂಲ್ಸ್ ಬಳಕೆದಾರರ ಪ್ರತಿಕ್ರಿಯೆ ಮತ್ತು ಯಂತ್ರ ಕಲಿಕೆಯನ್ನು ಬಳಸುತ್ತದೆ. ವಂಚನೆಯನ್ನು ಗುರುತಿಸಲು ಸಾಧ್ಯವಾಗದ ಜನರಿಗೆ ಅದರಲ್ಲೂ ಕಾನೂನುಬದ್ಧ ವ್ಯವಹಾರಗಳೊಂದಿಗೆ ವ್ಯವಹಾರ ನಡೆಸುತ್ತಿದ್ದೇವೆ ಎಂದು ತಪ್ಪಾಗಿ ನಂಬುವ ಜನರಿಗೆ ವಂಚನೆ ಸಂರಕ್ಷಣಾ ಟೂಲ್ಸ್‌ ವಿಶೇಷವಾಗಿ ಸಹಾಯಕವಾಗಿದೆ.

ಹಾಗೆಯೇ ಬಳಕೆದಾರರು ವರದಿ ಮಾಡದೆ ಇದ್ದರೂ ಸಹ ವಂಚನೆಯ ಹೊಸ ರೂಪಗಳನ್ನು ಆಟೋಮ್ಯಾಟಿಕ್‌ ಆಗಿ ಪತ್ತೆಹಚ್ಚಲು ಇದು ಕೆಲಸ ಮಾಡುತ್ತದೆ. ಅಂದರೆ ಮೋಸದ ಸಂದೇಶಗಳನ್ನು ಬುದ್ಧಿವಂತಿಕೆಯಿಂದ ಗುರುತಿಸುವಲ್ಲಿ ಈ ಉಪಕರಣವು ಪರಿಣಾಮಕಾರಿಯಾಗಿದೆ ಎಂದು ಹೇಳಲಾಗುತ್ತದೆ. ಈ ವಂಚನೆ ಸಂರಕ್ಷಣಾ ಟೂಲ್ಸ್‌ ಎಲ್ಲಾ ಆಂಡ್ರಾಯ್ಡ್ ಬಳಕೆದಾರರಿಗೆ ಲಭ್ಯವಿದ್ದು, ಮುಂದಿನ ದಿನಗಳಲ್ಲಿ ಐಫೋನ್ ಬಳಕೆದಾರರಿಗೂ ಲಭ್ಯವಾಗುವ ನಿರೀಕ್ಷೆಯಿದೆ.

ಇದು ಹೇಗೆ ಕೆಲಸ ಮಾಡುತ್ತದೆ?: ಈ ಎಐ ಟೂಲ್ ಪ್ರಸ್ತುತ ಉಚಿತವಾಗಿದ್ದು, ಭಾರತದಾದ್ಯಂತ ಇದನ್ನು ಬಳಕೆ ಮಾಡಬಹುದು. ಅದರಂತೆ ಇದು ಯಾವುದೇ ಮೋಸದ ಎಸ್‌ಎಮ್‌ಎಸ್ ಅನ್ನು ನೀವು ಸ್ವೀಕಾರ ಮಾಡಿದಾಗ ಅದರಲ್ಲಿ ಸ್ಪಷ್ಟವಾಗಿ ಗುರುತಿಸಲಾದ ಕೆಂಪು ನೋಟಿಫೀಕೇಶನ್‌ ಅನ್ನು ನೀವು ಕಾಣಬಹುದಾಗಿದೆ. ಈ ಮೂಲಕ ಬಳಕೆದಾರರಿಗೆ ಕ್ರಮ ತೆಗೆದುಕೊಳ್ಳುವಂತೆ ಎಚ್ಚರಿಕೆ ನೀಡುತ್ತದೆ.

ಅದರಲ್ಲೂ ನೋಟಿಫೀಕೇಶನ್‌ ಹಸ್ತಚಾಲಿತವಾಗಿ ರದ್ದು ಮಾಡುವವರೆಗೂ ಸಹ ಡಿಸ್‌ಪ್ಲೇ ಮೇಲೆಯೇ ಇರುತ್ತದೆ. ಇದರಿಂದಾಗಿ ನೀವು ಯಾವುದೇ ಕಾರಣಕ್ಕೂ ಈ ರೀತಿಯ ಮೋಸದ ಜಾಲಕ್ಕೆ ಬೀಳುವುದನ್ನು ಸಂಪೂರ್ಣವಾಗಿ ತಡೆಯುವ ಕೆಲಸ ಮಾಡುತ್ತದೆ. ಹಾಗೆಯೇ ಎಐ ಫಿಲ್ಟರ್‌ಗಳ ಸಹಾಯದಿಂದ ಡಿವೈಸ್‌ನಲ್ಲಿ ಸ್ಥಳೀಯವಾಗಿ ಈ ಎಲ್ಲಾ ಪ್ರಕ್ರಿಯೆಗಳು ನಡೆಯುತ್ತವೆ.

ಮೋಸದ ಎಸ್‌ಎಮ್‌ಎಸ್‌ಗಳನ್ನು ಸುಮ್ಮನೆ ಬಿಡುವುದಿಲ್ಲ: ನೀವು ಏನಾದರೂ ಆಗಲಿ ಬಿಡು ಅಂತಾ ಸುಮ್ಮನಾದರೂ ಟ್ರೂಕಾಲರ್‌ನ ಈ ವಿಶೇಷ ಫೀಚರ್ಸ್‌ ಮಾತ್ರ ಈ ಮೋಸದ ಎಸ್‌ಎಮ್‌ಎಸ್‌ಗಳನ್ನು ಸುಮ್ಮನೆ ಬಿಡುವುದಿಲ್ಲ. ಬದಲಾಗಿ ಟ್ರೂಕಾಲರ್‌ ಎಐ ಉಪಕರಣವು ಆ ಎಸ್‌ಎಮ್‌ಎಸ್‌ಗೆ ಲಿಂಕ್ ಮಾಡಲಾದ ಎಲ್ಲಾ ಲಿಂಕ್‌ಗಳನ್ನು ಆಟೋಮ್ಯಾಟಿಕ್‌ ಆಗಿ ನಿಷ್ಕ್ರಿಯಗೊಳಿಸುತ್ತದೆ.

ಟ್ರೂಕಾಲರ್‌ನಲ್ಲಿ ಹೊಸ ಸೌಲಭ್ಯ! ಸ್ಕ್ಯಾಮರ್‌ಗಳ SMS ನಿಂದ ಮೋಸ ಹೋಗೋ ಚಾನ್ಸೇ ಇಲ್ಲ

ಇದರಿಂದಾಗಿ ಬಳಕೆದಾರರು ದುರುದ್ದೇಶಪೂರಿತ ಲಿಂಕ್‌ಗಳಿಂದ ಸುರಕ್ಷಿತವಾಗಿರುವುದಲ್ಲೇ ಹಣ ಹಾಗೂ ಖಾಸಗಿ ಡೇಟಾ ಬೇರೆಯವರ ಪಾಲಾಗುವುದನ್ನು ತಪ್ಪಿಸಿದಂತೆ ಆಗುತ್ತದೆ. ಇದರ ನಡುವೆ ನೀವು ಸ್ವೀಕಾರ ಮಾಡುವ ಎಸ್‌ಎಮ್‌ಎಸ್‌ ಸುರಕ್ಷಿತವಾಗಿದ್ದರೆ, ಎಸ್‌ಎಮ್‌ಎಸ್‌ ನೊಂದಿಗೆ ಲಗತ್ತಿಸಲಾದ ಎಲ್ಲಾ ಲಿಂಕ್‌ಗಳನ್ನು ಪ್ರವೇಶಿಸಲು ಬಳಕೆದಾರರಿಗೆ ಇದು ಅನುವು ಮಾಡಿಕೊಡುತ್ತದೆ.

Best Mobiles in India

English summary
fraud protection tool from Truecaller is currently available for all Android users and is expected to come for iPhone users too.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+