Home
ಸುದ್ದಿಜಾಲ

ಟ್ರೂಕ್ BTG ಸ್ಟಾರ್ಮ್ TWS ಅನಾವರಣ: ನಾಳೆಯೊಳಗೆ ಖರೀದಿಸಿದ್ರೆ 899ರೂ.ನಲ್ಲಿ ಲಭ್ಯ!

ಮಾರುಕಟ್ಟೆಯಲ್ಲಿ ಆಗಾಗ್ಗೆ ಹೊಸ ಹೊಸ ಸ್ಮಾರ್ಟ್‌ಡಿವೈಸ್‌ಗಳು ಸದ್ದು ಮಾಡುತ್ತಲೇ ಇರುತ್ತವೆ. ಅದರಲ್ಲೂ ವಿವಿಧ ಫೀಚರ್ಸ್‌ ಇರುವ ಇಯರ್‌ಬಡ್ಸ್‌ಗಳಿಗೆ ಭಾರೀ ಬೇಡಿಕೆಯೇ ಇದ್ದು, ವಿವಿಧ ಆಫರ್‌ ಬೆಲೆಗಳ ಮೂಲಕ ಮಾರಾಟ ಆಗುತ್ತಿವೆ. ಈ ನಡುವೆ ಟ್ರೂಕ್ ಕಂಪೆನಿಯು ಹೊಸ ಗೇಮಿಂಗ್‌ ಇಯರ್‌ಬಡ್ಸ್‌ಅನ್ನು ಅನಾವರಣ ಮಾಡಿದ್ದು, ಅತ್ಯಾಕರ್ಷಕ ಶೈಲಿ ಪಡೆದುಕೊಂಡಿದೆ.

ಹೌದು, ಟ್ರೂಕ್ BTG ಸ್ಟಾರ್ಮ್ TWS (Truke BTG Storm TWS) ಇಯರ್‌ಬಡ್ಸ್‌ ಅನ್ನು ಅನಾವರಣ ಮಾಡಲಾಗಿದ್ದು, ಇದನ್ನು ನೀವು ನಾಳೆಯೊಳಗೆ ಖರೀದಿ ಮಾಡಿದರೆ ಕೇವಲ 899ರೂ.ಗಳಿಗೆ ಲಭ್ಯ ಇರಲಿದೆ. ಜೊತೆಗೆ ಈ ಬಡ್ಸ್‌, ಆರ್‌ಜಿಬಿ ಲೈಟ್‌ ಆಯ್ಕೆ ಮೂಲಕ ಪ್ರೀಮಿಯಂ ನೋಟ ಪಡೆದುಕೊಂಡಿದೆ. ಹಾಗಿದ್ರೆ, ಬನ್ನಿ ಇದರ ಪ್ರಮುಖ ಫೀಚರ್ಸ್‌ ಹಾಗೂ ಭಾರತದಲ್ಲಿ ಇದರ ಮೂಲ ಬೆಲೆ ಎಷ್ಟು ಎಂಬ ಮಾಹಿತಿಯನ್ನು ತಿಳಿದುಕೊಳ್ಳೋಣ.

ಟ್ರೂಕ್ BTG ಸ್ಟಾರ್ಮ್ TWS ಅನಾವರಣ: ನಾಳೆಯೊಳಗೆ ಖರೀದಿಸಿದ್ರೆ 899ರೂ.ನಲ್ಲಿ ಲಭ್ಯ

ಟ್ರೂಕ್ BTG ಸ್ಟಾರ್ಮ್ ವಿನ್ಯಾಸ: ಈ ಇಯರ್‌ಬಡ್ಸ್‌ ಚಾರ್ಜಿಂಗ್‌ ಕೇಸ್‌ ಅನ್ನು ನಿಮ್ಮ ಪಾಕೆಟ್‌ನಲ್ಲಿ ಆರಾಮವಾಗಿ ಇಟ್ಟುಕೊಳ್ಳಬಹುದಾಗಿದ್ದು, ಇದರಲ್ಲಿನ ಬಡ್ಸ್‌ಗಳು ಇನ್‌ ಇಯರ್‌ ವಿನ್ಯಾಸ ಪಡೆದುಕೊಂಡಿವೆ. ಈ ಮೂಲಕ ಇತರೆ ಶಬ್ಧದ ಅಡಚಣೆ ಇಲ್ಲದೆ ನಿಮ್ಮ ಕಿವಿಯಲ್ಲಿ ಇಂಪಾದ ಶಬ್ಧವನ್ನು ಆಲಿಸಲು ಅನುಕೂಲ ಆಗಿದೆ. ಅದರಲ್ಲೂ ಹೆಚ್ಚಿನ ಸಮಯ ಬಳಕೆ ಮಾಡುವಾಗ ಕಿವಿಗೆ ಯಾವುದೇ ತೊಂದರೆ ಆಗಬಾರದು ಎಂದು ಲಿಕೋನ್ ಬಡ್ಸ್‌ಗಳನ್ನು ಬಳಕೆ ಮಾಡಲಾಗಿದೆ.

ಟ್ರೂಕ್ BTG ಸ್ಟಾರ್ಮ್ ಫೀಚರ್ಸ್‌: ಟ್ರೂಕ್ ಹಿಂದಿನ BTG ಸರಣಿ TWS ಇಯರ್‌ಬಡ್ಸ್‌ಗಳಂತೆಯೇ ಈ ಇಯರ್‌ಬಡ್ ಸಹ ಆರ್‌ಜಿಬಿ ಲೈಟ್‌ ಆಯ್ಕೆ ಪಡೆದುಕೊಂಡಿದ್ದು, ಚಾರ್ಜಿಂಗ್ ಕೇಸ್‌ನ ಬದಿಗಳಲ್ಲಿ ಮತ್ತು ಇಯರ್‌ಬಡ್‌ಗಳಲ್ಲಿ ಇವುಗಳನ್ನು ಕಾಣಬಹುದು. ವಿಷಯ ಏನೆಂದರೆ ಇವುಗಳನ್ನು ನೀವು ನಿಮ್ಮ ಅಗತ್ಯಕ್ಕೆ ತಕ್ಕಂತೆ ಕಸ್ಟಮೈಸ್ ಮಾಡಲು ಸಾಧ್ಯವಿಲ್ಲ.

ಇನ್ನುಳಿದಂತೆ ಈ ಟ್ರೂಕ್ BTG ಸ್ಟಾರ್ಮ್ TWS ಇಯರ್‌ಬಡ್‌ಗಳು 13mm ಆಡಿಯೊ ಡ್ರೈವರ್‌ಗಳನ್ನು ಹೊಂದಿದ್ದು, ಸಂಪರ್ಕಕ್ಕಾಗಿ ಬ್ಲೂಟೂತ್ ಆವೃತ್ತಿ 5.3 ನೊಂದಿಗೆ ಪ್ಯಾಕ್‌ ಆಗಿವೆ. ಜೊತೆಗೆ ಎಸ್‌ಬಿಸಿ ಮತ್ತು ಎಎಸಿ ಆಡಿಯೊ ಕೊಡೆಕ್‌ಗಳನ್ನು ಬೆಂಬಲಿಸಲಿದ್ದು, ಎನ್ವಿರಾನ್ಮೆಂಟಲ್ ನಾಯ್ಸ್‌ ಕ್ಯಾನ್ಸಲಿಂಗ್‌ ಫೀಚರ್ಸ್‌ ಮೂಲಕ ಬಳಕೆದಾರರಿಗೆ ಬಳಕೆ ಸಮಯದಲ್ಲಿ ಸಾಕಷ್ಟು ಅನುಕೂಲ ನೀಡಲಿದೆ. ಹಾಗೆಯೇ ಟಚ್‌ ಕಂಟ್ರೋಲ್‌ ಆಯ್ಕೆ ಇದ್ದು, ಕರೆಗಳನ್ನು ಸ್ವೀಕಾರ ಮಾಡಲು, ತಿರಸ್ಕರಿಸಲು, ಸಂಗೀತ ಆಲಿಸಲು ಬಳಕೆ ಮಾಡಬಹುದು.

ಟ್ರೂಕ್ BTG ಸ್ಟಾರ್ಮ್ TWS ಅನಾವರಣ: ನಾಳೆಯೊಳಗೆ ಖರೀದಿಸಿದ್ರೆ 899ರೂ.ನಲ್ಲಿ ಲಭ್ಯ

ಇದಿಷ್ಟು ಮಾತ್ರವಲ್ಲದೆ ಇಯರ್‌ಬಡ್ಸ್ IPX4 ರೇಟಿಂಗ್‌ ಹೊಂದಿದ್ದು, ಗೇಮಿಂಗ್‌ಗಾಗಿ ಕಡಿಮೆ ಲೇಟೆನ್ಸಿ ಮೋಡ್‌ನೊಂದಿಗೆ ಬರುತ್ತದೆ. ಈ ಲೇಟೆನ್ಸಿ ಮೋಡ್‌ 40ms ಗೆ ಇಳಿಯುತ್ತದೆ. ಇದರೊಂದಿಗೆ ಪ್ರತಿ ಇಯರ್‌ಬಡ್‌ ಇನ್‌ಬಿಲ್ಟ್‌ ಮೈಕ್ರೊಫೋನ್ ಆಯ್ಕೆ ಹೊಂದಿದ್ದು, ಕರೆ ಹಾಗೂ ಮೀಟಿಂಗ್ ಸಮಯದಲ್ಲಿ ನೀವು ಉತ್ತಮವಾಗಿ ತೊಡಗಿಸಿಕೊಳ್ಳಬಹುದು. ಹಾಗೆಯೇ ತ್ವರಿತ ಜೋಡಣೆ ಆಯ್ಕೆ ಹೊಂದಿದ್ದು, ವಿಶೇಷ ಎನಿಸಿದೆ.

ಟ್ರೂಕ್ BTG ಸ್ಟಾರ್ಮ್ TWS ಬ್ಯಾಟರಿ ಸಾಮರ್ಥ್ಯ: ಇನ್ನು ಪ್ರತಿ ಇಯರ್‌ಬಡ್ 40mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, ಚಾರ್ಜಿಂಗ್ ಕೇಸ್ 300mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ ಪ್ಯಾಕ್‌ ಆಗಿದೆ. ಈ ಇಯರ್‌ಬಡ್‌ಗಳು ಪೂರ್ಣ ಚಾರ್ಜ್‌ನಲ್ಲಿ ಸುಮಾರು 8-10 ಗಂಟೆಗಳ ಕಾಲ ಬ್ಯಾಕಪ್‌ ನೀಡಲಿದ್ದು, ಯುಎಸ್‌ಬಿ ಟೈಪ್-ಸಿ ಪೋರ್ಟ್ ಮೂಲಕ ಚಾರ್ಜಿಂಗ್ ಮಾಡಬಹುದು, ಹಾಗೆಯೇ ಚಾರ್ಜಿಂಗ್ ಕೇಸ್‌ನೊಂದಿಗೆ 48 ಗಂಟೆಗಳವರೆಗೆ ಬ್ಯಾಕಪ್‌ ಪಡೆದುಕೊಳ್ಳಬಹುದಾಗಿದೆ.

ಟ್ರೂಕ್ BTG ಸ್ಟಾರ್ಮ್ TWS ಅನಾವರಣ: ನಾಳೆಯೊಳಗೆ ಖರೀದಿಸಿದ್ರೆ 899ರೂ.ನಲ್ಲಿ ಲಭ್ಯ

ಟ್ರೂಕ್ BTG ಸ್ಟಾರ್ಮ್ TWS ಬೆಲೆ ಹಾಗೂ ಲಭ್ಯತೆ: ಈ ವಿಶೇಷ ಇಯರ್‌ಬಡ್ಸ್‌ನ ಸಾಮಾನ್ಯ ಬೆಲೆ 1,099ರೂ. ಆಗಿದ್ದು. ಇಂದಿನಿಂದ ಅಂದರೆ ಮೇ 17 ಮತ್ತು ನಾಳೆ ಮೇ 18 ರ ಒಳಗೆ ಖರೀದಿ ಮಾಡಿದರೆ ಪರಿಚಯಾತ್ಮಕ ಕೊಡುಗೆ ಮತ್ತು ರಿಯಾಯಿತಿಗಳ ಲಾಭವನ್ನು ನೀವು ಪಡೆದುಕೊಂಡು ಈ ಮೂಲಕ ಕೇವಲ 899 ರೂ.ಗಳಿಗೆ ಇದನ್ನು ಖರೀದಿ ಮಾಡಬಹುದಾಗಿದೆ. ಈ ಇಯರ್‌ಬಡ್ಸ್‌ ಅಮೆಜಾನ್, ಫ್ಲಿಪ್‌ಕಾರ್ಟ್ ಹಾಗೂ ಟ್ರೂಕ್‌ ವೆಬ್‌ಸೈಟ್‌ನಲ್ಲಿ ಲಭ್ಯ.

Best Mobiles in India

English summary
Truke BTG Storm TWS earbuds have been unveiled in India and will be available for just Rs 899 if purchased by tomorrow.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+