ಅಗ್ಗದ ಬೆಲೆಯಲ್ಲಿ ಸದ್ದು ಮಾಡಲಿದೆ ಈ ವೈರ್‌ಲೆಸ್ ಇಯರ್‌ಬಡ್ಸ್!..200ರೂ. ಡಿಸ್ಕೌಂಟ್!
ಆಡಿಯೋ ಡಿವೈಸ್ ಮಾರುಕಟ್ಟೆಯಲ್ಲಿ ಟ್ರೂಕ್ ಬ್ರ್ಯಾಂಡ್ ಭಾರತದಲ್ಲಿ ಈಗಾಗಲೇ ಅಗ್ಗದ ಬೆಲೆಯ ಉಪಕರಣಗಳ ಮೂಲಕ ಗ್ರಾಹಕರನ್ನು ಸೆಳೆದಿದೆ. ಟ್ರೂಕ್ ಸಂಸ್ಥೆಯು ಭಾರತದಲ್ಲಿ ಈಗ ಹೊಸದಾಗಿ ಬಡ್ಸ್ A1 TWS ಡಿವೈಸ್ ಅನ್ನು ಪರಿಚಯಿಸಿದ್ದು, ಬಜೆಟ್ ಬೆಲೆಯ ಬೋಟ್, ಬೌಲ್ಟ್ ಹಾಗೂ ನಾಯಿಸ್ ಡಿವೈಸ್‌ಗಳಿಗೆ ಸ್ಪರ್ಧೆ ನೀಡಲು ಮುಂದಾಗಿದೆ.
ಹೌದು, ಅಗ್ಗದ ದರದಲ್ಲಿ ಟ್ರೂಕ್ (Truke) ಬ್ರ್ಯಾಂಡ್ ಹೆಚ್ಚಿನ ಸದ್ದು ಮಾಡುತ್ತಿದೆ. ಟ್ರೂಕ್ ಸಂಸ್ಥೆಯು ನೂತನವಾಗಿ ಪರಿಚಯಿಸಿರುವ ಬಡ್ಸ್ A1 TWS ಡಿವೈಸ್ ಸುಮಾರು 2,000ರೂ. ಬೆಲೆಯ ಒಳಗಿನ ಇತರ ಬ್ರ್ಯಾಂಡ್ ಡಿವೈಸ್‌ಗಳಿಗೆ ನೇರ ಪೈಪೋಟಿ ನೀಡುವ ಲಕ್ಷಣ ಗಳನ್ನು ಸೂಚಿಸಿದೆ.

ಟ್ರೂಕ್ ಬಡ್ಸ್ A1 : ಫೀಚರ್ಸ್
ನೂತನ ಟ್ರೂಕ್ ಬಡ್ಸ್ A1 ಡಿವೈಸ್ ಇನ್-ಇಯರ್ ಶೈಲಿಯ ಟ್ರೂ ವೈರ್‌ಲೆಸ್ ಇಯರ್‌ಬಡ್‌ಗಳು ಆಗಿವೆ. ಇದು ಅಂಡಾಕಾರದ-ಆಕಾರದ ವಿನ್ಯಾಸದ ಕ್ಲಾಸಿಕ್ ಕೇಸ್ ವಿನ್ಯಾಸದೊಂದಿಗೆ ಬರುತ್ತದೆ. ಜೊತೆಗೆ 30dB ವರೆಗಿನ ಹೈಬ್ರಿಡ್ ಸಕ್ರಿಯ ಶಬ್ದ ರದ್ದತಿಗೆ (ANC) ಬೆಂಬಲವು ಮುಖ್ಯ ಹೈಲೈಟ್ ಆಗಿದೆ.
ಹಾಗೆಯೇ ಈ ಆಡಿಯೋ ಟ್ರೂಕ್ ಬಡ್ಸ್ A1 ಡಿವೈಸ್ ಆಂಬಿಯೆಂಟ್ ಟ್ರಾನ್ಸ್ಪರೆನ್ಸಿ ಮೋಡ್ ಅಗತ್ಯ ಇದ್ದಾಗ ಶಬ್ದಗಳನ್ನು ಅನುಮತಿಸಲು ಸಹಾಯ ಮಾಡುತ್ತದೆ. ಇದರೊಂದಿಗೆ ಕ್ವಾಡ್-ಮೈಕ್ ಸೆಟ್‌ಅಪ್ ಸಹ ಇದ್ದು, ಸ್ಪಷ್ಟವಾದ ಕರೆಗಳಿಗಾಗಿ ENC (ಪರಿಸರದ ಶಬ್ದ ರದ್ದತಿ) ಸೌಲಭ್ಯ ಅನ್ನು ಬೆಂಬಲಿಸುತ್ತದೆ.

ಟ್ರೂಕ್ ಬಡ್ಸ್ A1 ಡಿವೈಸ್ ಇಯರ್‌ಬಡ್‌ಗಳು 10mm ರಿಯಲ್ ಟೈಟಾನಿಯಂ ಸ್ಪೀಕರ್ ಡ್ರೈವರ್‌ಗಳನ್ನು ಒಳಗೊಂಡಿದೆ. ಈ ಸಾಧನವು ಡೈನಾಮಿಕ್ ಆಡಿಯೊ, ಬಾಸ್ ಬೂಸ್ಟ್ ಮೋಡ್, ಮೂವೀ ಮೋಡ್ ಇದರೊಂದಿಗೆ ಡೀಫಾಲ್ಟ್ ಬ್ಯಾಲೆನ್ಸ್‌ಡ್ ಮೋಡ್ ಅಂತಹ ನಾಲ್ಕು EQ ಮೋಡ್‌ಗಳಿಗೆ ಬೆಂಬಲವನ್ನು ಹೊಂದಿವೆ.
ಟ್ರೂಕ್ ಬಡ್ಸ್ A1 ಡಿವೈಸ್ ಬ್ಲೂಟೂತ್ ಆವೃತ್ತಿ 5.3 ನೊಂದಿಗೆ ಹೊಂದಿಕೊಳ್ಳುತ್ತದೆ. ಅಲ್ಲದೇ ಪೇರಿಂಗ್ ಅನ್ನು ಮತ್ತಷ್ಟು ತ್ವರಿತವಾಗಿ ಮಾಡಲು, ಒಂದು ಹಂತದ ತತ್‌ಕ್ಷಣ ಪ್ಯಾರಿಂಗ್ ತಂತ್ರಜ್ಞಾನವನ್ನು ಒಳಗೊಂಡಿದೆ. ಕಡಿಮೆ ಲ್ಯಾಗ್‌ಗಳಿಗಾಗಿ 50ms ಕಡಿಮೆ ಲೇಟೆನ್ಸಿ ಗೇಮಿಂಗ್ ಮೋಡ್ ಕೂಡ ಇದೆ. ಇಯರ್‌ಬಡ್‌ಗಳು 48 ಗಂಟೆಗಳವರೆಗೆ ಒಟ್ಟು ಪ್ಲೇಬ್ಯಾಕ್ ಸಮಯವನ್ನು ಒದಗಿಸುತ್ತದೆ.
ಹಾಗೆಯೇ ಟ್ರೂಕ್ ಬಡ್ಸ್ A1 ಡಿವೈಸ್ USB-C ಆಧಾರಿತ ಫಾಸ್ಟ್ ಚಾರ್ಜಿಂಗ್ ಸೌಲಭ್ಯವನ್ನು ಪಡೆದಿದ್ದು, ಕೇವಲ ಇದು 10 ನಿಮಿಷಗಳ ಚಾರ್ಜಿಂಗ್ ಸಮಯದಲ್ಲಿ ಈ ಸಾಧನವು ಸುಮಾರು 10 ಗಂಟೆಗಳವರೆಗೆ ಪ್ಲೇ ಬ್ಯಾಕ್ ಸಮಯವನ್ನು ಪಡೆದುಕೊಳ್ಳಲಿದೆ. ಹೆಚ್ಚುವರಿಯಾಗಿ IPX4 ರೇಟಿಂಗ್, ಟಚ್ ಕಂಟ್ರೋಲ್, SBC ಮತ್ತು AAC ಆಡಿಯೊ ಕೊಡೆಕ್‌ಗಳಿಗೆ ಬೆಂಬಲವನ್ನು ಒಳಗೊಂಡಿವೆ.

ಟ್ರೂಕ್ ಬಡ್ಸ್ A1 : ಬೆಲೆ ಮತ್ತು ಲಭ್ಯತೆ
ಟ್ರೂಕ್ ಬಡ್ಸ್ A1 ಡಿವೈಸ್ ರಿಟೇಲ್ ಸ್ಟೋರ್ ಬೆಲೆಯು 1,499 ರೂ. ಆಗಿದೆ. ಆದರೆ ಗ್ರಾಹಕರಿಗೆ ಆರಂಭಿಕವಾಗಿ 1,299 ರೂ. ಪರಿಚಯಾತ್ಮಕ ಬೆಲೆಯಲ್ಲಿ ಲಭ್ಯವಿರುತ್ತದೆ. ಇದೇ ಮಾರ್ಚ್ 3 ರಿಂದ ಖರೀದಿಗೆ ಲಭ್ಯವಾಗಲಿದೆ. ಖರೀದಿದಾರರು ಅಮೆಜಾನ್ ಇಂಡಿಯಾ ಮೂಲಕ ಮುಂಗಡವಾಗಿ ಆರ್ಡರ್ ಮಾಡಬಹುದಾಗಿದ್ದು, ಕಪ್ಪು ಮತ್ತು ನೀಲಿ ಬಣ್ಣಗಳ ಆಯ್ಕೆ ಪಡೆದಿದೆ.
ಟ್ರೂಕ್ ಬಿಟಿಜಿ ಬೀಟಾ ಇಯರ್‌ಬಡ್
ಭಾರತದಲ್ಲಿ ಟ್ರೂಕ್ ಸಂಸ್ಥೆಯು ಇತ್ತೀಚಿಗೆ ಟ್ರೂಕ್ ಬಿಟಿಜಿ ಬೀಟಾ ಇಯರ್‌ಬಡ್‌ಗಳನ್ನು ಅನಾವರಣ ಮಾಡಿದ್ದು, ಈ ಇಯರ್‌ಬಡ್‌ಗಳನ್ನು ದೀರ್ಘ ಸಮಯದ ವರೆಗೆ ಪ್ಲೇಟೈಮ್ ನೀಡುವ ಸೌಲಭ್ಯ ಪಡೆದಿವೆ. ಇನ್ನು ಟ್ರೂಕ್ ಬಿಟಿಜಿ ಬೀಟಾ ಗೇಮರುಗಳಿಗಾಗಿ ಮತ್ತು ಸಂಗೀತ ಪ್ರಿಯರಿಗಾಗಿ ತಯಾರಿ ಮಾಡಲಾಗಿದೆ ಎಂದು ಹೇಳಲಾಗುತ್ತದೆ.


Click it and Unblock the Notifications








