ಇಂದು ಟ್ರೂಕ್ ಬಡ್ಸ್ A1 ಇಯರ್‌ಬಡ್ಸ್ ಫಸ್ಟ್ ಸೇಲ್; ಅಗ್ಗದ ಬೆಲೆಗೆ ಲಭ್ಯ!
ದೇಶದ ಆಡಿಯೋ ಸಾಧನಗಳ ಮಾರುಕಟ್ಟೆಯಲ್ಲಿ ಟ್ರೂಕ್ ಬ್ರ್ಯಾಂಡ್ ಗ್ರಾಹಕರ ಗಮನ ಸೆಳೆಯುತ್ತಿದ್ದು, ಅಗ್ಗದ ಬೆಲೆಯಲ್ಲಿ ಹಲವು ಉತ್ಪನ್ನಗಳನ್ನು ಪರಿಚಯಿಸಿದೆ. ಸಂಸ್ಥೆಯು ಇತ್ತೀಚಿಗಷ್ಟೆ ಬಿಡುಗಡೆ ಮಾಡಿರುವ ಟ್ರೂಕ್ ಬಡ್ಸ್ A1 ವೈರ್‌ಲೆಸ್ ಇಯರ್‌ಬಡ್ ಇಂದಿನಿಂದ ಮಾರಾಟ ಪ್ರಾರಂಭಿಸಲಿದೆ. ಅಂದಹಾಗೆ ಅಗ್ಗದ ಬೆಲೆಯಲ್ಲಿ ಈ ಡಿವೈಸ್ ಲಭ್ಯ.
ಹೌದು, ಜನಪ್ರಿಯ ಇ ಕಾಮರ್ಸ್ ತಾಣ ಅಮೆಜಾನ್‌ನಲ್ಲಿ ಟ್ರೂಕ್ ಬಡ್ಸ್ A1 (Truke Buds A1) ಇಯರ್‌ಬಡ್ಸ್ ಮೊದಲ ಸೇಲ್ ಇಂದು (ಮಾರ್ಚ್ 3 ರಂದು) ಶುರುವಾಗಲಿದೆ. ಇನ್ನು ಅಮೆಜಾನ್ ವೆಬ್‌ಸೈಟ್‌ನಲ್ಲಿ ಈ ಡಿವೈಸ್ ಬೆಲೆಯು 1,499ರೂ. ಆಗಿದೆ. ಆದರೆ ಆರಂಭಿಕ ಕೊಡುಗೆಯಾಗಿ 1299ರೂ. ಗಳಿಗೆ ಲಭ್ಯವಾಗಲಿದೆ.

ಈ ಇಯರ್‌ಬಡ್ 300mAh ಬ್ಯಾಟರಿ ಬ್ಯಾಕ್‌ಅಪ್ ಅನ್ನು ಪಡೆದಿದ್ದು, ಒಂದು ಪೂರ್ಣ ಚಾರ್ಜಿನಲ್ಲಿ ಸುಮಾರು 10 ಗಂಟೆಗಳ ಪ್ಲೇ ಬ್ಯಾಕ್ ಒದಗಿಸುತ್ತದೆ. ಹಾಗೆಯೇ ಡೈನಾಮಿಕ್ ಆಡಿಯೋ, ಬಾಸ್ ಬೂಸ್ಟ್ ಮೋಡ್ ಮತ್ತು ಮೂವೀ ಮೋಡ್ ಆಯ್ಕೆ ಪಡೆದಿದೆ. ಇನ್ನು ಈ ಡಿವೈಸ್ ಬ್ಲ್ಯಾಕ್ ಹಾಗೂ ಬ್ಲೂ ಬಣ್ಣಗಳ ಆಯ್ಕೆಗಳಲ್ಲಿ ಖರೀದಿಗೆ ಲಭ್ಯವಾಗಲಿದೆ. ಫೀಚರ್ಸ್ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.
ಟ್ರೂಕ್ ಬಡ್ಸ್ A1 : ಫೀಚರ್ಸ್
ನೂತನ ಟ್ರೂಕ್ ಬಡ್ಸ್ A1 ಡಿವೈಸ್ ಇನ್-ಇಯರ್ ಶೈಲಿಯ ಟ್ರೂ ವೈರ್‌ಲೆಸ್ ಇಯರ್‌ಬಡ್‌ಗಳು ಆಗಿವೆ. ಇದು ಅಂಡಾಕಾರದ-ಆಕಾರದ ವಿನ್ಯಾಸದ ಕ್ಲಾಸಿಕ್ ಕೇಸ್ ವಿನ್ಯಾಸದೊಂದಿಗೆ ಬರುತ್ತದೆ. ಜೊತೆಗೆ 30dB ವರೆಗಿನ ಹೈಬ್ರಿಡ್ ಸಕ್ರಿಯ ಶಬ್ದ ರದ್ದತಿಗೆ (ANC) ಬೆಂಬಲವು ಮುಖ್ಯ ಹೈಲೈಟ್ ಆಗಿದೆ.
ಹಾಗೆಯೇ ಈ ಆಡಿಯೋ ಟ್ರೂಕ್ ಬಡ್ಸ್ A1 ಡಿವೈಸ್ ಆಂಬಿಯೆಂಟ್ ಟ್ರಾನ್ಸ್ಪರೆನ್ಸಿ ಮೋಡ್ ಅಗತ್ಯ ಇದ್ದಾಗ ಶಬ್ದಗಳನ್ನು ಅನುಮತಿಸಲು ಸಹಾಯ ಮಾಡುತ್ತದೆ. ಇದರೊಂದಿಗೆ ಕ್ವಾಡ್-ಮೈಕ್ ಸೆಟ್‌ಅಪ್ ಸಹ ಇದ್ದು, ಸ್ಪಷ್ಟವಾದ ಕರೆಗಳಿಗಾಗಿ ENC (ಪರಿಸರದ ಶಬ್ದ ರದ್ದತಿ) ಸೌಲಭ್ಯ ಅನ್ನು ಬೆಂಬಲಿಸುತ್ತದೆ.

ಟ್ರೂಕ್ ಬಡ್ಸ್ A1 ಡಿವೈಸ್ ಇಯರ್‌ಬಡ್‌ಗಳು 10mm ರಿಯಲ್ ಟೈಟಾನಿಯಂ ಸ್ಪೀಕರ್ ಡ್ರೈವರ್‌ಗಳನ್ನು ಒಳಗೊಂಡಿದೆ. ಈ ಸಾಧನವು ಡೈನಾಮಿಕ್ ಆಡಿಯೊ, ಬಾಸ್ ಬೂಸ್ಟ್ ಮೋಡ್, ಮೂವೀ ಮೋಡ್ ಇದರೊಂದಿಗೆ ಡೀಫಾಲ್ಟ್ ಬ್ಯಾಲೆನ್ಸ್‌ಡ್ ಮೋಡ್ ಅಂತಹ ನಾಲ್ಕು EQ ಮೋಡ್‌ಗಳಿಗೆ ಬೆಂಬಲವನ್ನು ಹೊಂದಿವೆ.
ಟ್ರೂಕ್ ಬಡ್ಸ್ A1 ಡಿವೈಸ್ ಬ್ಲೂಟೂತ್ ಆವೃತ್ತಿ 5.3 ನೊಂದಿಗೆ ಹೊಂದಿಕೊಳ್ಳುತ್ತದೆ. ಅಲ್ಲದೇ ಪೇರಿಂಗ್ ಅನ್ನು ಮತ್ತಷ್ಟು ತ್ವರಿತವಾಗಿ ಮಾಡಲು, ಒಂದು ಹಂತದ ತತ್‌ಕ್ಷಣ ಪ್ಯಾರಿಂಗ್ ತಂತ್ರಜ್ಞಾನವನ್ನು ಒಳಗೊಂಡಿದೆ. ಕಡಿಮೆ ಲ್ಯಾಗ್‌ಗಳಿಗಾಗಿ 50ms ಕಡಿಮೆ ಲೇಟೆನ್ಸಿ ಗೇಮಿಂಗ್ ಮೋಡ್ ಕೂಡ ಇದೆ. ಇಯರ್‌ಬಡ್‌ಗಳು 48 ಗಂಟೆಗಳವರೆಗೆ ಒಟ್ಟು ಪ್ಲೇಬ್ಯಾಕ್ ಸಮಯವನ್ನು ಒದಗಿಸುತ್ತದೆ.

ಹಾಗೆಯೇ ಟ್ರೂಕ್ ಬಡ್ಸ್ A1 ಡಿವೈಸ್ USB-C ಆಧಾರಿತ ಫಾಸ್ಟ್ ಚಾರ್ಜಿಂಗ್ ಸೌಲಭ್ಯವನ್ನು ಪಡೆದಿದ್ದು, ಕೇವಲ ಇದು 10 ನಿಮಿಷಗಳ ಚಾರ್ಜಿಂಗ್ ಸಮಯದಲ್ಲಿ ಈ ಸಾಧನವು ಸುಮಾರು 10 ಗಂಟೆಗಳವರೆಗೆ ಪ್ಲೇ ಬ್ಯಾಕ್ ಸಮಯವನ್ನು ಪಡೆದುಕೊಳ್ಳಲಿದೆ. ಹೆಚ್ಚುವರಿಯಾಗಿ IPX4 ರೇಟಿಂಗ್, ಟಚ್ ಕಂಟ್ರೋಲ್, SBC ಮತ್ತು AAC ಆಡಿಯೊ ಕೊಡೆಕ್‌ಗಳಿಗೆ ಬೆಂಬಲವನ್ನು ಒಳಗೊಂಡಿವೆ.
ಟ್ರೂಕ್ ಬಡ್ಸ್ A1 : ಬೆಲೆ ಮತ್ತು ಲಭ್ಯತೆ
ಟ್ರೂಕ್ ಬಡ್ಸ್ A1 ಡಿವೈಸ್ ರಿಟೇಲ್ ಸ್ಟೋರ್ ಬೆಲೆಯು 1,499 ರೂ. ಆಗಿದೆ. ಆದರೆ ಗ್ರಾಹಕರಿಗೆ ಆರಂಭಿಕವಾಗಿ 1,299 ರೂ. ಪರಿಚಯಾತ್ಮಕ ಬೆಲೆಯಲ್ಲಿ ಲಭ್ಯವಿರುತ್ತದೆ. ಇದೇ ಮಾರ್ಚ್ 3 ರಿಂದ ಖರೀದಿಗೆ ಲಭ್ಯವಾಗಲಿದೆ.


Click it and Unblock the Notifications