ಮಿಲಿಟರಿ ಪಡೆ ಸೇರಲು ಸಜ್ಜಾದ 'ಡ್ರೋಣ್ ಮಿಷನ್ ಗನ್'!

|

ಪ್ರಸ್ತುತ ತಂತ್ರಜ್ಞಾನ ವಿಸ್ತಾರವಾಗಿ ಬೆಳೆಯುತ್ತಿದ್ದು, ಪ್ರತಿಯೊಂದು ಕ್ಷೇತ್ರದಲ್ಲಿಯೂ ಸಹ ಹೊಸ ತಂತ್ರಜ್ಞಾನ ಆಧಾರಿತ ಉಪಕರಣಗಳನ್ನು ಬಳಸಲಾಗುತ್ತಿದೆ. ಹಾಗೇ ಇತ್ತೀಚಿಗೆ ಭಾರಿ ಟ್ರೆಂಡ್‌ನಲ್ಲಿರುವ ಡ್ರೋಣ್ ಕ್ಯಾಮೆರಾ ಕೇವಲ ವಿಡಿಯೊ ಸೆರೆಹಿಡಿಯಲು ಮಾತ್ರ ಬಳಕೆಯಾಗುತ್ತಿಲ್ಲ. ಇತರೆ ಹಲವು ವಲಯಗಳಲ್ಲಿ ಡ್ರೋಣ್ ಬಳಕೆಯಾಗುತ್ತಿದೆ. ಇದಕ್ಕೆ ಮಿಲಿಟರಿ ವಲಯವು ಹೊರತಾಗಿಲ್ಲ ಎನ್ನುವುದು ನಿಮಗೆ ಅಚ್ಚರಿ ಅನಿಸಬಹುದು.

ಆಸಿಸ್ಗಾರ್ಡ್

ಹೌದು, ಅಂಕಾರಾ ಮೂಲದ ಆಸಿಸ್ಗಾರ್ಡ್ (Asisguard) ಎಲೆಕ್ಟ್ರಾನಿಕ್ಸ್ ಸಂಸ್ಥೆ ಮಿಷನ್ ಗನ್ ಆಧಾರಿತ ಡ್ರೋಣ್ ಕ್ಯಾಮೆರಾಗಳನ್ನು ತಯಾರಿಸಿದೆ. ಬಂದೂಕಿನಿಂದ ಸಜ್ಜುಗೊಂಡ ಮತ್ತು ಮಿಲಿಟರಿ ಸೇವೆಗೆ ಸಿದ್ಧವಾಗಿರುವ ಮೊದಲ ಡ್ರೋನ್ ಇದಾಗಿದೆ. ಇನ್ನು ತಯಾರಕ ಕಂಪನಿಯು ಈ ಹೊಸ ಡ್ರೋಣ್ ಕ್ಯಾಮೆರಾವನ್ನು ಸಾಂಗರ್ ಎಂದು ಕರೆದಿದೆ. ಡ್ರೋಣ್‌ಗೆ ಅಳವಡಿಸಲಾದ ಗನ್‌ನಿಂದ ನಿಖರತೆ ಟಾರ್ಗೆಟ್ ಪಡೆಯಬಹುದಾಗಿದೆ.

ದೇಶಗಳು

ಸದ್ಯ ಅನೇಕ ದೇಶಗಳು ತಮ್ಮ ಸೇನೆಯಲ್ಲಿ ಈಗಾಗಲೇ ಸಣ್ಣ ಮಿಲಿಟರಿ ಡ್ರೋನ್‌ಗಳನ್ನು ಬಳಸುತ್ತವೆ, ಅದು ಗ್ರೆನೇಡ್‌ಗಳನ್ನು ಬೀಳಿಸಬಹುದು ಅಥವಾ ಸ್ಫೋಟಕವನ್ನು ಸ್ಫೋಟಿಸುವ ಗುರಿಯತ್ತ ಹಾರಬಲ್ಲವು. ಆದರೆ ಹೊಸ ಡ್ರೋನ್ ಮಿಷನ್ ಗನ್ ಒಳಗೊಂಡಿರುವುದು ವಿಶೇಷವಾಗಿದೆ. ಇನ್ನು ಈ ಡ್ರೋಣ್‌ ಅನ್ನು ಟರ್ಕಿ ದೇಶವು ಖರೀದಿಸಲು ಮುಂದಾಗಿದೆ. ಈ ಹೊಸ ಮಿಷನ್ ಗನ್ ಆಧಾರಿತ ಡ್ರೋಣ್ ಕ್ಯಾಮೆರಾದ ಇನ್ನಷ್ಟು ಕುತೂಹಲಕಾರಿ ಅಂಶಗಳನ್ನು ಮುಂದೆ ತಿಳಿಯೋಣ.

ಟರ್ಕಿ ಮೊದಲ ದೇಶ

ಟರ್ಕಿ ಮೊದಲ ದೇಶ

ಆಸಿಸ್ಗಾರ್ಡ್ (Asisguard) ಎಲೆಕ್ಟ್ರಾನಿಕ್ಸ್ ಸಂಸ್ಥೆ ತಯಾರಿಸಿರುವ ಮಿಷನ್ ಗನ್ಡ್ರೋಣ್‌ ಕ್ಯಾಮೆರಾಗಳನ್ನು ಖರೀದಿಸಲು ಟರ್ಕಿ ದೇಶವು ಮುಂದಾಗಿದೆ. ಇದೇ ವರ್ಷದ ಅಂತ್ಯದೊಳಗೆ ಟರ್ಕಿ ಸೇನಾ ಪಡೆ ಸೇರಿಕೊಳ್ಳಲಿವೆ. ಹೀಗಾಗಿ ಮಿಷನ್ ಗನ್ಡ್ರೋಣ್‌ ಕ್ಯಾಮೆರಾಗಳನ್ನು ಹೊಂದಿದ ದೇಶವಾಗಿ ಟರ್ಕಿ ಗುರುತಿಸಿಕೊಳ್ಳಲಿದೆ.

ಮಶಿನ್ ಗನ್ ಡ್ರೋಣ್‌ ಕ್ಯಾಮೆರಾ ವಿಶೇಷತೆ

ಮಶಿನ್ ಗನ್ ಡ್ರೋಣ್‌ ಕ್ಯಾಮೆರಾ ವಿಶೇಷತೆ

ಡ್ರೋಣ್ ಕ್ಯಾಮೆರಾವು ಒಟ್ಟು 25 ಕಿಲೋ ಗ್ರಾಂ ತೂಕವನ್ನು ಹೊಂದಿರಲಿದೆ. ಗಾಳಿಯಲ್ಲಿ ಎತ್ತರದಲ್ಲಿ ಹಾರಾಡಲು ನೆರವಾಗಲು ಡ್ರೋಣ್ ಏಳು ತಿರುಗುವ ಬ್ಲೇಡ್‌ಗಳನ್ನು ಒಳಗೊಂಡಿದೆ. ಇನ್ನು ಡ್ರೋಣ್ ಒಳಗಿರುವ ಮಶಿನ್ ಗನ್ ಸುಮಾರು 200 ಗುಂಡುಗಳನ್ನು ಹೊತ್ತೊಯ್ಯುವ ಸಾಮರ್ಥ್ಯ ಪಡೆದಿದೆ. ಒಮ್ಮೆಲೇ ಮದ್ದುಗುಂಡುಗಳನ್ನು ಹಾರಿಸಬಹುದಾದ ಅಥವಾ 15 ಸುತ್ತುಗಳಲ್ಲಿ ಫೈರ್ ಮಾಡುವ ಆಯ್ಕೆ ಸಹ ಇದೆ.

400 ಮೀಟರ್ ದೂರದಿಂದ ಫೈರ್ ಸಾಧ್ಯ

400 ಮೀಟರ್ ದೂರದಿಂದ ಫೈರ್ ಸಾಧ್ಯ

ಸಾಂಗರ್ ಡ್ರೋಣ್ ಕ್ಯಾಮೆರಾ ಸುಮಾರು 200 ಮೀಟರ್ ವ್ಯಾಪ್ತಿಯ ದೂರದಿಂದ 15 ಸೆಂಟಿ ಮೀಟರ್ ಪ್ರದೇಶವನ್ನು ಗುರುಯಾಗಿಸುವ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಇನ್ನು ಡ್ರೋಣ್ ಆಪರೇಟ್ ಮಾಡುವ ವ್ಯಕ್ತಿಯು ಡ್ರೋಣ್‌ನ ಸ್ಕ್ರೀನ್ ರಿಮೋಟ್ ಬಳಕೆ ಮೂಲಕ ಫೈರ್‌ ಆಗುವ ಪ್ರತಿ ಬುಲೆಟ್ ಅನ್ನು ಸರಿಯಾದ ಟಾರ್ಗೆಟ್ ತಲುಪುವಂತೆ ಗುರಿಯಾಗಿಸಬಹುದು. ರಾತ್ರಿ ನಮಯದಲ್ಲಿ ಸುಮಾರು 10 ಕಿಲೋ ಮೀಟರ್ ದೂರದಿಂದ ಫೈರ್ ಮಾಡಬಹುದಾಗದ ಸೌಲಭ್ಯ ಸಹ ಇದೆ.

Best Mobiles in India

English summary
Asisguard claims Songar has an accuracy that corresponds to hitting a 15-centimetre area from 200 metres. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X