Home
ಸುದ್ದಿಜಾಲ

ಟ್ವಿಟ್ಟರ್‌ನಲ್ಲಿ ಬಳಕೆದಾರರಿಗೆ ಹೊಸ ಸೌಲಭ್ಯ; ಇನ್ಮುಂದೆ ಅಕ್ಷರಗಳ ಮಿತಿ 25,000 ಕ್ಕೆ!

ಟ್ವಿಟ್ಟರ್‌ನಲ್ಲಿ ಹೊಸ ಹೊಸ ಬದಲಾವಣೆಗಳು ವರದಿ ಆಗುತ್ತಲೇ ಇದ್ದು, ಈ ಮೂಲಕ ಬಳಕೆದಾರರಿಗೆ ಈ ಪ್ಲಾಟ್‌ಫಾರ್ಮ್‌ನಲ್ಲಿ ಭಿನ್ನ ಅನುಭವ ಸಿಗುತ್ತಿದೆ. ಈ ನಡುವೆ ಟ್ವಿಟ್ಟರ್‌ನಲ್ಲಿ ಮತ್ತೊಂದು ಮಹತ್ವದ ಬದಲಾವಣೆ ಆಗಿದ್ದು, ಇದು ಈ ಬಳಕೆದಾರರಿಗೆ ಅಕ್ಷರ ಮಿತಿಯನ್ನು ಹೆಚ್ಚಿಗೆ ಮಾಡಲಾಗಿದೆ.

ಹೌದು, ಟ್ವಿಟ್ಟರ್‌ ಇತ್ತೀಚಿನ ದಿನಗಳಲ್ಲಿ ಅಕ್ಷರಗಳ ಮೇಲೆ ಅಭಿವೃದ್ಧಿ ಕೆಲಸ ಮಾಡಿಕೊಂಡು ಬರುತ್ತಿದೆ. ಅಂದರೆ ಈ ವರ್ಷದ ಫೆಬ್ರವರಿಯಲ್ಲಿ 4,000 ಅಕ್ಷರಗಳಿಗೆ ಮತ್ತು ನಂತರ ಏಪ್ರಿಲ್‌ನಲ್ಲಿ 10,000 ಅಕ್ಷರಗಳಿಗೆ ಮಿತಿಯನ್ನು ಹೆಚ್ಚಿಸಿತ್ತು. ಅಷ್ಟು ಮಾತ್ರವಲ್ಲದೆ ದಪ್ಪ ಅಕ್ಷರ, ಇಟಾಲಿಕ್‌ನಂತಹ ಪಠ್ಯ ಫಾರ್ಮ್ಯಾಟಿಂಗ್ ಫೀಚರ್ಸ್‌ ಅನ್ನೂ ಸಹ ಪರಿಚಯಿಸಿತ್ತು. ಇದೀಗ ಮತ್ತೇ ಇದರಲ್ಲಿ ಬದಲಾವಣೆ ಮಾಡಲಾಗಿದೆ. ಹಾಗಿದ್ರೆ, ಈ ಪ್ಲಾಟ್‌ಫಾರ್ಮ್‌ನಲ್ಲಿ ಲಭ್ಯ ಇರುವ ಹೊಸ ಸೌಲಭ್ಯ ಏನು?, ಇದರಿಂದ ಯಾರಿಗೆ ಲಾಭ ಎಂಬ ಮಾಹಿತಿ ಇಲ್ಲಿದೆ ನೋಡಿ.

ಟ್ವಿಟ್ಟರ್‌ನಲ್ಲಿ ಬಳಕೆದಾರರಿಗೆ ಹೊಸ ಸೌಲಭ್ಯ; ಅಕ್ಷರಗಳ ಮಿತಿ 25,000 ಕ್ಕೆ!

25,000 ಕ್ಕೆ ಹೆಚ್ಚಾದ ಅಕ್ಷರಗಳ ಮಿತಿ: ಟ್ವಿಟರ್‌ನಲ್ಲಿ ಇಂಜಿನಿಯರ್ ಆಗಿರುವ ಪ್ರಾಚಿ ಪೊದ್ದಾರ್ ಅವರು ಕಳೆದ ವಾರ ಸುದೀರ್ಘ ಟ್ವೀಟ್ ಅನ್ನು ಪೋಸ್ಟ್ ಮಾಡುವ ಮೂಲಕ ಈ ಘೋಷಣೆ ಮಾಡಿದ್ದಾರೆ. ಅಂದರೆ ದೀರ್ಘಾವಧಿಯ ಟ್ವೀಟ್ ಮಿತಿಯನ್ನು 10,000 ರಿಂದ 25,000 ಕ್ಕೆ ಹೆಚ್ಚಿಸಲಾಗಿದೆ ಎಂದು ಈ ಮೂಲಕ ತಿಳಿಸಿದ್ದಾರೆ. ಇದರಿಂದಾಗಿ ಇನ್ಮುಂದೆ ಬಳಕೆದಾರರು ತಮ್ಮ ಅಭಿಪ್ರಾಯವನ್ನು ಯಾವುದೇ ಅಕ್ಷರಗಳ ಮಿತಿ ಇಲ್ಲದೆ ಬರೆಯಬಹುದಾಗಿದೆ.

ನಾವು ನೋಟ್‌ಟ್ವೀಟ್ ಅಕ್ಷರಗಳ ಮಿತಿಯನ್ನು 10 ಸಾವಿರದಿಂದ 25 ಸಾವಿರಕ್ಕೆ ಹೆಚ್ಚಿಸಿದ್ದೇವೆ. ದೀರ್ಘವಾದ ನೋಟ್‌ಟ್ವೀಟ್ ಮಾಡುವುದನ್ನು ಆನಂದಿಸಿ ಎಂದು ಪ್ರಾಚಿ ತಮ್ಮ ಟ್ವೀಟ್‌ನಲ್ಲಿ ಉಲ್ಲೇಖ ಮಾಡಿದ್ದಾರೆ. ಈ ಕಾರಣಕ್ಕಾಗಿಯೇ ಟ್ವಿಟ್ಟರ್‌ನ ಪೇಜ್‌ ಅನ್ನು ನವೀಕರಿಸಿದ್ದು, ಈ ಮೂಲಕ ಎಲ್ಲರೂ ಹೆಚ್ಚಿನ ಮಾಹಿತಿ ಪಡೆದುಕೊಳ್ಳಲು ಅನುವು ಮಾಡಿಕೊಡಲಾಗಿದೆ.

ಈ ಸೌಲಭ್ಯ ಯಾರಿಗೆ ಲಭ್ಯ?: ಈ ವಿಶೇಷ ಸೌಲಭ್ಯ ಸದ್ಯಕ್ಕೆ ಟ್ವಿಟ್ಟರ್‌ ಬ್ಲೂ ಟಿಕ್‌ ಚಂದಾದಾರರಿಗೆ ಮಾತ್ರ ಲಭ್ಯ ಆಗಲಿದೆ. ಅಂದರೆ ಈ ಬಳಕೆದಾರರು 25,000 ಅಕ್ಷರಗಳವರೆಗೆ ಟ್ವೀಟ್ ಮಾಡಬಹುದು ಹಾಗೂ ಇವರು ಮಾಡಿದ ಟ್ವೀಟ್‌ ಅನ್ನು ಪ್ರತಿಯೊಬ್ಬರೂ ಓದಲು ಸಾಧ್ಯವಾಗುತ್ತದೆ. ಈ ಮೊದಲು ಟ್ವಿಟ್ಟರ್‌ನಲ್ಲಿ 140 ರಿಂದ 280 ಅಕ್ಷರಗಳನ್ನು ಬರೆಯಲು ಮಾತ್ರ ಅವಕಾಶ ನೀಡಲಾಗಿತ್ತು. ಇದರಿಂದ ಸಾಕಷ್ಟು ಬಳಕೆದಾರರು ತೀವ್ರ ವಿರೋಧ ಹೊರಹಾಕಿದ್ದರು.

ಇದಿಷ್ಟು ಮಾತ್ರವಲ್ಲದೆ ಬ್ಲೂ ಟಿಕ್‌ ಚಂದಾದಾರರು ದೀರ್ಘ ವಿಡಿಯೋಗಳನ್ನೂ ಸಹ ಅಪ್‌ಲೋಡ್ ಮಾಡಬಹುದಾಗಿದೆ. ಕಳೆದ ವರ್ಷ ಡಿಸೆಂಬರ್‌ನಿಂದ, ಬಳಕೆದಾರರು 1080p ನಲ್ಲಿ 60 ನಿಮಿಷಗಳ ವಿಡಿಯೋವನ್ನು ಅಪ್‌ಲೋಡ್ ಮಾಡಲು ಅವಕಾಶ ಪಡೆದಿದ್ದರು.ಇದಾದ ನಂತರದಲ್ಲಿ ಪಾವತಿಸಿದ ಚಂದಾದಾರರು ಕಳೆದ ತಿಂಗಳಿನಿಂದ ಎರಡು ಗಂಟೆಗಳ ವಿಡಿಯೋಗಳನ್ನು ಅಪ್‌ಲೋಡ್‌ ಮಾಡಲು ಅವಕಾಶ ಪಡೆದುಕೊಂಡಿದ್ದಾರೆ.

ಈ ನಡುವೆ ಟ್ವಿಟ್ಟರ್‌ ವಿರುದ್ಧ ಗಂಭೀರ ಆರೋಪ ಸಹ ಕೇಳಿಬರುತ್ತಿವೆ. ಯಾಕೆಂದರೆ ಕೆಲವು ಬಳಕೆದಾರರು ಸಿನಿಮಾಗಳನ್ನೂ ಸಹ ಅಪ್‌ಲೋಡ್‌ ಮಾಡಿದ್ದು, ಈ ಸಂಬಂಧ ಸಂಬಂಧಪಟ್ಟವರು ಮೊಖದ್ದಮೆ ಸಹ ದಾಖಲು ಮಾಡಿದ್ದರು. ಅದರಲ್ಲೂ ಶ್ರೆಕ್ ಮತ್ತು ಇವಿಲ್ ಡೆಡ್‌ನಂತಹ ಚಲನಚಿತ್ರಗಳು ಇದರಲ್ಲಿ ಭಾರೀ ಸದ್ದು ಮಾಡುತ್ತಿವೆ. ಕೀನು ರೀವ್ಸ್‌ನ ಜಾನ್ ವಿಕ್ ಚಾಪ್ಟರ್‌ 4 ಮತ್ತು ದಿ ಸೂಪರ್ ಮಾರಿಯೋ ಬ್ರದರ್ಸ್ ಚಲನಚಿತ್ರವು ಬಿಡುಗಡೆಯಾದ ಕೂಡಲೇ ಈ ಪ್ಲಾಟ್‌ಫಾರ್ಮ್‌ನಲ್ಲಿ ಲೀಕ್‌ ಆಗಿದೆ.

ಸರಿಸುಮಾರು 11 ದಿನಗಳ ಹಿಂದೆ ಅಂದರೆ ಜೂನ್ 15 ರಂದು ಥಿಯೇಟರ್‌ಗಳಲ್ಲಿ ಫ್ಲ್ಯಾಶ್ ಬಿಡುಗಡೆಯಾಗಿತ್ತು. ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಚಿತ್ರವು ಟ್ವಿಟರ್‌ನಲ್ಲಿ ಸೋರಿಕೆಯಾಗಿದೆ. ಈ ಟ್ವೀಟ್ ಅನ್ನು ತೆಗೆದುಹಾಕುವ ವೇಳೆಗೆ 1.7 ಮಿಲಿಯನ್ ವೀಕ್ಷಣೆಗಳನ್ನು ಹೊಂದಿತ್ತು ಎಂದು ವರದಿಗಳಿಂದ ತಿಳಿದುಬಂದಿದೆ. ಇನ್ನು ಕ್ಯಾಮೆರಾದಲ್ಲಿ ಚಿತ್ರೀಕರಿಸಲಾಗಿದ್ದರೂ, ಡೌನ್‌ಲೋಡ್ ಮತ್ತು ಸ್ಟ್ರೀಮಿಂಗ್‌ಗೆ ಉತ್ತಮ ಗುಣಮಟ್ಟದಲ್ಲಿ ಚಲನಚಿತ್ರವು ಲಭ್ಯವಿದೆ ಎಂದು ವರದಿಗಳು ಹೇಳಿವೆ.

Best Mobiles in India

English summary
Twitter has been working on developing characters lately. Henceforth the character limit has been increased to 25,000 for blue tick subscribed customers.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+