Home
ಸುದ್ದಿಜಾಲ

ಟ್ವಿಟ್ಟರ್‌ನಲ್ಲಿ ಹೊಸ ಫೀಚರ್ಸ್‌; ಸರ್ಚಿಂಗ್‌ ಇನ್ಮುಂದೆ ಸರಳ!

ಟ್ವಿಟ್ಟರ್‌ನಲ್ಲಿ ಹಲವಾರು ನವೀಕರಣ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಿದ್ದು, ಮೊನ್ನೆಯಷ್ಟೇ ನಿಷೇಧಿಸಲಾಗಿದ್ದ ರಾಜಕೀಯ ಜಾಹಿರಾತು ನೀತಿಯನ್ನು ಹೊಸ ಮಾಲೀಕ ಎಲಾನ್‌ ಮಸ್ಕ್‌ ಸಡಿಲಿಸಿದ್ದಾರೆ. ಇದರ ನಡುವೆ ಬಳಕೆದಾರರಿಗೆ ಕೆಲವು ಹೊಸ ಫೀಚರ್ಸ್‌ಗಳನ್ನೂ ಸಹ ನೀಡಲಾಗುತ್ತಿದ್ದು, ಇದರ ಭಾಗವಾಗಿ ಶೀಘ್ರದಲ್ಲೇ ಮೊಬೈಲ್‌ ಬಳಕೆದಾರರಿಗೆ ಅಡ್ವಾನ್ಸಡ್‌ ಸರ್ಚ್‌ ಫಿಲ್ಟರ್‌ ಸೌಲಭ್ಯ ಲಭ್ಯವಾಗಲಿದೆ.

ಎಲಾನ್

ಹೌದು, ಎಲಾನ್ ಮಸ್ಕ್‌ ಒಡೆತನದ ಮೈಕ್ರೋ-ಬ್ಲಾಗಿಂಗ್ ಸೈಟ್ ಟ್ವಿಟರ್ ಹೊಸ ಫೀಚರ್ಸ್‌ ಅನ್ನು ಅಭಿವೃದ್ಧಿಪಡಿಸುತ್ತಿದೆ ಎಂದು ವರದಿಯಾಗಿದ್ದು, ಅದು ಬಳಕೆದಾರರಿಗೆ ತಮ್ಮ ಮೊಬೈಲ್ ಡಿವೈಸ್‌ನಿಂದ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಅನ್ನು ಪ್ರವೇಶಿಸಲು ಸಹಾಯ ಮಾಡುತ್ತದೆ. ಹಾಗಿದ್ರೆ, ಇದು ಹೇಗೆ ಕೆಲಸ ಮಾಡಲಿದೆ?, ಯಾವಾಗ ಲಭ್ಯ ಎಂಬ ಮಾಹಿತಿಯನ್ನು ವಿವರಿಸಲಾಗಿದೆ ಓದಿರಿ.

ಮಸ್ಕ್‌

ಹೌದು, ಎಲಾನ್ ಮಸ್ಕ್‌ ಒಡೆತನದ ಮೈಕ್ರೋ-ಬ್ಲಾಗಿಂಗ್ ಸೈಟ್ ಟ್ವಿಟರ್ ಹೊಸ ಫೀಚರ್ಸ್‌ ಅನ್ನು ಅಭಿವೃದ್ಧಿಪಡಿಸುತ್ತಿದೆ ಎಂದು ವರದಿಯಾಗಿದ್ದು, ಅದು ಬಳಕೆದಾರರಿಗೆ ತಮ್ಮ ಮೊಬೈಲ್ ಡಿವೈಸ್‌ನಿಂದ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಅನ್ನು ಪ್ರವೇಶಿಸಲು ಸಹಾಯ ಮಾಡುತ್ತದೆ. ಹಾಗಿದ್ರೆ, ಇದು ಹೇಗೆ ಕೆಲಸ ಮಾಡಲಿದೆ?, ಯಾವಾಗ ಲಭ್ಯ ಎಂಬ ಮಾಹಿತಿಯನ್ನು ವಿವರಿಸಲಾಗಿದೆ ಓದಿರಿ.

ಈ ಸಂಬಂಧ ಸಾಮಾಜಿಕ ಮಾಧ್ಯಮ ವಿಶ್ಲೇಷಕ ಮ್ಯಾಟ್ ನವರ್ರಾ ಈ ಹೊಸ ಫೀಚರ್ಸ್‌ ಅನ್ನು ಬಹಿರಂಗಪಡಿಸಲು ಟ್ವಿಟರ್‌ನಲ್ಲಿ ಕೆಲವು ಪೋಸ್ಟ್‌ಗಳನ್ನು ಹಂಚಿಕೊಳ್ಳಲಾಗಿದೆ. ಇವರ ಟ್ವೀಟ್‌ಗಳ ಪ್ರಕಾರ ಟ್ವಿಟ್ಟರ್‌ ಶೀಘ್ರದಲ್ಲೇ ಮೊಬೈಲ್ ಬಳಕೆದಾರರಿಗಾಗಿ ಸುಧಾರಿತ ಅಡ್ವಾನ್ಸಡ್‌ ಸರ್ಚ್‌ ಫಿಲ್ಟರ್‌ಗಳ ಫೀಚರ್ಸ್‌ ಸೇರಿಸಬಹುದು ಎನ್ನಲಾಗಿದೆ. ಈ ಫೀಚರ್ಸ್‌ ನಲ್ಲಿ ದಿನಾಂಕ, ಬಳಕೆದಾರ, ರಿಟ್ವೀಟ್ ಎಣಿಕೆ, ಹ್ಯಾಶ್‌ಟ್ಯಾಗ್‌ಗಳು ಮತ್ತು ಹೆಚ್ಚಿನದನ್ನು ಆಧರಿಸಿ ಫಿಲ್ಟರ್ ಮಾಡುವ ಮೂಲಕ ಬಳಕೆದಾರರು ನಿರ್ದಿಷ್ಟ ಟ್ವೀಟ್‌ಗಳನ್ನು ಹುಡುಕಲು ಈ ಸುಲಭವಾಗುತ್ತದೆ ಎನ್ನಲಾಗಿದೆ.

ಶೇರ್‌

ಹಾಗೆಯೇ ಅವರು ಶೇರ್‌ ಮಾಡಿಕೊಂಡಿರುವ ಟ್ವೀಟ್‌ನಲ್ಲಿ ಈ ಹೊಸ ಫೀಚರ್ಸ್‌ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ತಿಳಿಸುವ ಸ್ಕ್ರೀನ್‌ಶಾಟ್‌ಗಳನ್ನುಸಹ ಹಂಚಿಕೊಳ್ಳಲಾಗಿದೆ. ಆದರೆ ಈ ಫೀಚರ್ಸ್‌ ಬಳಕೆದಾರರಿಗೆ ಎಂದಿನಿಂದ ಲಭ್ಯ ಎನ್ನುವ ವಿವರವನ್ನು ಮಾತ್ರ ಹಂಚಿಕೊಂಡಿಲ್ಲ.

ಸರ್ಚ್‌

ಅಡ್ವಾನ್ಸಡ್‌ ಸರ್ಚ್‌ ಫಿಲ್ಟರ್‌ ಕೆಲವು ಸಮಯದಿಂದ ಟ್ವಿಟ್ಟರ್‌ನಲ್ಲಿ ತಾಂತ್ರಿಕವಾಗಿ ಲಭ್ಯವಿದೆ. ಆದರೆ, ಇದರ ಬಳಕೆ ಮಾತ್ರ ಜಟಿಲವಾಗಿರುವುದಲ್ಲದೇ ಭಾರೀ ಗೊಂದಲಮಯವಾಗಿದೆ. ವೆಬ್ ಬಳಕೆದಾರರು ತಮ್ಮ ಹುಡುಕಾಟ ಪದಗಳನ್ನು ಟೈಪ್ ಮಾಡಬೇಕು. ಹಾಗೆಯೇ ಮುಂದುವರಿದ ಹುಡುಕಾಟ ಫಿಲ್ಟರ್‌ಗಳನ್ನು ತೆರೆಯಲು ಹುಡುಕಾಟ ಪಟ್ಟಿಯ ಬಲಭಾಗದಲ್ಲಿ ಇರುವ ಮೂರು-ಡಾಟ್ ಮೆನುವನ್ನು ಕ್ಲಿಕ್‌ ಮಾಡಬೇಕಿದೆ.

ಫೀಚರ್ಸ್‌

ಸದ್ಯಕ್ಕೆ ಈ ಫೀಚರ್ಸ್‌ ಮೊಬೈಲ್ ಡಿವೈಸ್‌ಗಳಲ್ಲಿ ಲಭ್ಯವಿಲ್ಲವಾದ್ದರಿಂದ ಶೀಘ್ರದಲ್ಲಿಯೇ ಇದನ್ನು ಮೊಬೈಲ್ ಬಳಕೆದಾರರಿಗೆ ಲಭ್ಯವಾಗುವಂತೆ ಮಾಡಲು ಟ್ವಿಟ್ಟರ್‌ ಮುಂದಾಗಿದೆ ಎಂದು ತೋರುತ್ತಿದೆ. ಅದರಲ್ಲೂ ಈ ಪ್ರಮುಖ ಬದಲಾವಣೆಗೆ ಜಾರ್ಜ್ ಹಾಟ್ಜ್ ಎಂಬ ಇಂಟರ್ನ್ ಕಾರಣ ಎಂದು ಹೇಳಲಾಗುತ್ತಿದೆ. ಹಾಟ್ಜ್ ಭದ್ರತಾ ಹ್ಯಾಕರ್ ಆಗಿದ್ದು, ಐಓಎಸ್‌ ಜೈಲ್‌ಬ್ರೇಕ್‌ಗಳನ್ನು ಅಭಿವೃದ್ಧಿಪಡಿಸಲು ಮತ್ತು ಪ್ಲೇಸ್ಟೇಷನ್ 3 ಅನ್ನು ರಿವರ್ಸ್ ಎಂಜಿನಿಯರಿಂಗ್ ಮಾಡಲು ಹೆಸರುವಾಸಿ.

ಟ್ವಿಟ್ಟರ್‌ ಯಾಕೆ ಈ ಫೀಚರ್ಸ್‌ ನೀಡಲಿದೆ?

ಟ್ವಿಟ್ಟರ್‌ ಯಾಕೆ ಈ ಫೀಚರ್ಸ್‌ ನೀಡಲಿದೆ?

ಟ್ವಿಟರ್‌ ಅನ್ನು ತಮ್ಮ ವಶಕ್ಕೆ ಪಡೆದ ಒಂದು ವಾರದ ನಂತರ ಮಸ್ಕ್‌ ಅವರು ಒಂದು ವಾಗ್ದಾನ ಮಾಡಿದ್ದರು. ಅದುವೇ ಸರ್ಚ್‌ ಆಯ್ಕೆಯನ್ನು ಸರಿಪಡಿಸುವುದು ಹೆಚ್ಚಿನ ಆದ್ಯತೆಯಾಗಿದೆ ಎಂದು. ಇದಾದ ಬಳಿಕ ಟ್ವಿಟರ್‌ನ ಕೆಟ್ಟ ಸರ್ಚ್‌ ವ್ಯವಸ್ಥೆಯನ್ನು ಸರಿಪಡಿಸಲು ಹಾಟ್ಜ್ ಅವರನ್ನು ನೇಮಕ ಮಾಡಿಕೊಂಡಿದ್ದರು. ಆದರೆ, ಮಸ್ಕ್‌ ಅವರ ತಂತ್ರಗಳಿಗೆ ಬೇಸತ್ತು ಹಾಟ್ಜ್ ಕಳೆದ ತಿಂಗಳು ಟ್ವಿಟರ್‌ಗೆ ರಾಜೀನಾಮೆ ನೀಡಿದ್ದರು.

ರಾಜಕೀಯ ಜಾಹೀರಾತು

ರಾಜಕೀಯ ಜಾಹೀರಾತು

ಟ್ವಿಟ್ಟರ್‌ನ ಹಿಂದಿನ ಸಿಇಒ ಜಾಕ್ ಡಾರ್ಸೆ ಅವರು 2019 ರಲ್ಲಿ ಹೆಚ್ಚಿನ ರಾಜಕೀಯ ಜಾಹೀರಾತುಗಳನ್ನು ನಿಷೇಧಿಸಿದ್ದರು. ಆದರೆ, ಹೊಸ ಮಾಲೀಕ ಎಲಾನ್‌ ಮಸ್ಕ್‌ ಅವರು ಈ ನಿರ್ಧಾರವನ್ನು ಸಡಿಲಗೊಳಿಸಿದ್ದು ನ್ನ ಪ್ಲಾಟ್‌ಫಾರ್ಮ್‌ನಲ್ಲಿ ರಾಜಕೀಯ ಜಾಹೀರಾತುಗಳ ಸಂಖ್ಯೆಯನ್ನು ವಿಸ್ತರಿಸಲು ಮುಂದಾಗಿದ್ದಾರೆ. ಇದು ಎಲಾನ್‌ ಮಸ್ಕ್ ಅವರ ಪ್ರಮುಖ ನೀತಿಯಲ್ಲಿ ಒಂದಾಗಿದ್ದು, ಈ ಮೂಲಕ ಹೆಚ್ಚಿನ ಆದಾಯ ಪಡೆಯಲು ಕಾತುರರಾಗಿರುವಂತೆ ಕಾಣುತ್ತಿದೆ.

ಯುಎಸ್‌

ಟ್ವಿಟರ್ ಯುಎಸ್‌ನಲ್ಲಿ ತನ್ನ ಕಾರಣ ಆಧಾರಿತ ಜಾಹೀರಾತು ನೀತಿಯನ್ನು ಸಡಿಲ ಮಾಡುತ್ತಿದೆ ಎಂದು ತಿಳಿಸಿದ್ದು, ನಾಗರೀಕರ ಪಾಲ್ಗೊಳ್ಳುವಿಕೆ, ಆರ್ಥಿಕ ಅಭಿವೃದ್ಧಿ, ಪರಿಸರ ಉಸ್ತುವಾರಿ ಮತ್ತು ಸಾಮಾಜಿಕ ಸಮಾನತೆ ಕುರಿತು ಜಾಗೃತಿ ಮೂಡಿಸುವ ಮತ್ತು ಜನರಿಗೆ ಶಿಕ್ಷಣ ನೀಡುವ ಮತ್ತು ಕ್ರಮಕ್ಕೆ ಕರೆ ನೀಡುವ ಜಾಹೀರಾತುಗಳು ಹೊಸ ನೀತಿಯ ಅಡಿಯಲ್ಲಿ ಇರಲಿವೆ ಎಂದು ತಿಳಿದುಬಂದಿದೆ.

Best Mobiles in India

English summary
Twitter may soon introduce advanced search filters for mobile users.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+