Home
ಸುದ್ದಿಜಾಲ

ಟ್ವಿಟ್ಟರ್‌ ನಿಷೇಧಕ್ಕೆ ಮುಂದಾಯ್ತು ಪಾಕಿಸ್ತಾನ ಸರ್ಕಾರ!!

By Bhaskar N J

ಆಕ್ಷೇಪಾರ್ಹ, ಹಾನಿಕಾರಕ ಮತ್ತು ಸಾರ್ವಜನಿಕ ಸ್ವಾಸ್ಥ್ಯ ಕೆಡಿಸುವ ಸಂದೇಶಗಳನ್ನು ತೆಗೆಯದೇ ಹೋದರೆ ದೇಶದಲ್ಲಿ ಟ್ವಿಟರ್​ನ್ನು ನಿಷೇಧಿಸಲಾಗುವುದು ಎಂದು ಪಾಕಿಸ್ತಾನದ ಟೆಲಿಕಾಂ ಪ್ರಾಧಿಕಾರ ಮೈಕ್ರೋ ಬ್ಲಾಗಿಂಗ್ ವೆಬ್‌ಸೈಟ್‌ ಟ್ವಿಟರ್​ಗೆ ಎಚ್ಚರಿಕೆ ನೀಡಿದೆ. ಪಾಕ್‌ ಸರಕಾರ ಟ್ವಿಟ್ಟರ್‌ಗೆ ಕಟ್ಟುನಿಟ್ಟಿನ ಸೂಚನೆ ನೀಡಿರುವ ಬಗ್ಗೆ ಡಾನ್ ದೈನಿಕ ವರದಿ ಮಾಡಿದೆ.

ಫೇಸ್​ಬುಕ್​, ಯೂಟ್ಯೂಬ್​ ಮತ್ತು ಇತರ ಸಾಮಾಜಿಕ ತಾಣಗಳು ದೇಶದ ನಿಯಮಗಳನ್ನು ಪಾಲಿಸುತ್ತಿವೆ. ಆದರೆ, ಸಾರ್ವಜನಿಕರಿಗೆ ಅತ್ಯಂತ ಹಾನಿಕಾರವಾಗಿರುವ ಹೂರಣವನ್ನು ತಡೆಯುವಲ್ಲಿ ಟ್ವಿಟರ್ ವಿಫಲವಾಗಿದೆ ಎಂದು ಹೇಳಿರುವ ಪಾಕ್‌ ಸರಕಾರ, ಆ ಕಾರಣಕ್ಕೆ ಈ ಮೈಕ್ರೋ ಬ್ಲಾಗಿಂಗ್ ಸೈಟಿನ ಮೇಲೆ ತೀವ್ರ ನಿಗಾ ಇರಿಸಿದೆ ಎಂದು ತಿಳಿದುಬಂದಿದೆ.

ಟ್ವಿಟ್ಟರ್‌ ನಿಷೇಧಕ್ಕೆ ಮುಂದಾಯ್ತು ಪಾಕಿಸ್ತಾನ ಸರ್ಕಾರ!!

ಸರಕಾರ ಪದೇ ಪದೇ ಎಚ್ಚರಿಕೆ ನೀಡಿದ ಹೊರತಾಗಿಯೂ ಆಕ್ಷೇಪಾರ್ಹ ಮತ್ತು ಹಾನಿಕಾರಕ ಹೂರಣಗಳನ್ನು ತಡೆಯುವಲ್ಲಿ ಟ್ವಿಟ್ಟರ್ ವಿಫಲವಾಗಿದೆ. ಸುಮಾರು 100ಕ್ಕೂ ಹೆಚ್ಚು ಆಕ್ಷೇಪಾರ್ಹ ಸಂಗತಿಗಳು ಟ್ವಿಟರ್​ನಲ್ಲಿದ್ದು, ಅವುಗಳನ್ನು ತೆಗೆದು ಹಾಕುವಂತೆ ನಾವು ನೀಡಿದ ಪ್ರಸ್ತಾಪವನ್ನು ಟ್ವಿಟರ್​ ಸೂಕ್ತ ರೀತಿಯಲ್ಲಿ ಪರಿಗಣಿಸಿಲ್ಲ ಎಂದು ಪ್ರಾಧಿಕಾರ ಸ್ಥಾಯೀ ಸಮಿತಿಗೆ ಹೇಳಿದೆ.

ಆಕ್ಷೇಪಾರ್ಹ ಮತ್ತು ಹಾನಿಕಾರಕ ಹೂರಣಗಳ ಬಗ್ಗೆ ನಾವು ನೀಡಿದ ದೂರಿನಲ್ಲಿ ಶೇ.5ರಷ್ಟು ಪ್ರಕರಣಗಳನ್ನು ಮಾತ್ರ ಇತ್ಯರ್ಥ ಮಾಡಿರುವ ಟ್ವಿಟರ್​ ಇನ್ನುಳಿದಿರುವ ಪ್ರಕರಣಗಳನ್ನು ಹಾಗೆಯೇ ಉಳಿಸಿಕೊಂಡಿದೆ ಎಂದು ಪಾಕಿಸ್ತಾನದ ಟೆಲಿಕಾಂ ಪ್ರಾಧಿಕಾರ (ಪಿಟಿಎ) ಗುರುವಾರ ಪಾಕಿಸ್ತಾನದ ಸಂಪುಟದ ಸೆನೆಟ್‌ ಸ್ಥಾಯಿ ಸಮಿತಿಗೆ ಈ ವಿಚಾರವನ್ನು ತಿಳಿಸಿದೆ ಎಂದು ವರದಿಯಾಗಿದೆ.

ಟ್ವಿಟ್ಟರ್‌ ನಿಷೇಧಕ್ಕೆ ಮುಂದಾಯ್ತು ಪಾಕಿಸ್ತಾನ ಸರ್ಕಾರ!!

ಫೇಸ್‌ಬುಕ್‌ ಮತ್ತು ಯೂಟ್ಯೂಬ್ ಸೇರಿದಂತೆ ಇತರ ಸಾಮಾಜಿಕ ಮಾಧ್ಯಮಗಳಿಗೆ ಮೊದಲೇ ಮೂಗುದಾರ ಹಾಕಿರುವ ಪಾಕಿಸ್ತಾನದಲ್ಲಿ ಈಗ ಟ್ವಿಟ್ಟರ್ ನಿಷೇಧಕ್ಕೆ ಗುರಿಯಾಗುವ ಸರದಿಯಲ್ಲಿದೆ. 2008 ಮತ್ತು 2010ರಲ್ಲಿ ಫೇಸ್​ಬುಕ್​ ಎರಡು ಬಾರಿ ನಿಷೇಧಗೊಂಡಿದ್ದರೆ, 2012ರಲ್ಲಿ ಯೂಟ್ಯೂಬ್​ ಎರಡು ವರ್ಷಗಳ ಕಾಲ ನಿಷೇಧಕ್ಕೆ ಗುರಿಯಾಗಿದ್ದನ್ನು ನಾವು ನೋಡಬಹುದು.

ಓದಿರಿ: ನಿಮ್ಮ ಮೊಬೈಲ್ 'ಸಿಮ್' ಜೋಪಾನ!..ಈ ಒಂದು ತಪ್ಪಿನಿಂದ ನೀವು ಮನೆ ಮಠ ಕಳೆದುಕೊಳ್ಳಬಹುದು!!

Best Mobiles in India

English summary
Block 'offensive content' or face shutdown: Twitter warned in Pakistan. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+